kn_ta/translate/figs-intro/01.md

13 KiB

ಅಲಂಕಾರಗಳಿಗೆ ವಿಶೇಷ ಅರ್ಥವಿರುತ್ತದೆ. ಪ್ರತಿಯೊಂದು ಪದಗಳಿಗೆ ಇರುವಂತೆ ಇವುಗಳಿಗೆ ಅರ್ಥ ಹೇಳಲು ಬರುವುದಿಲ್ಲ. (ಮನುಷ್ಯರು ಅಲಂಕಾರ ಸಾಧನಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳುವಂತೆ ಸಾಹಿತ್ಯದಲ್ಲೂ ಕೆಲವು ಪದಗಳನ್ನು ಬಳಸಿ ವಾಕ್ಯ ಸೌಂದರ್ಯವನ್ನು, ಕಾವ್ಯ ಸೌಂದರ್ಯವನ್ನು ಹೆಚ್ಚಿಸುತ್ತವೆ).ಇಂತಹ ಪದಗಳನ್ನು ಅಲಂಕಾರಗಳು ಎಂದು ಕರೆಯುತ್ತೇವೆ.

ಅಲಂಕಾರಗಳಲ್ಲಿ ಅನೇಕ ವಿಧಗಳಿವೆ. ಸತ್ಯವೇದದಲ್ಲಿ ಬಳಸಿರುವ ಅಲಂಕಾರಗಳನ್ನು ಈ ಪುಟದಲ್ಲಿ ಪಟ್ಟಿಮಾಡಲಾಗಿದೆ.

ವಿವರಣೆಗಳು

ಅಲಂಕಾರಗಳು ಕಾವ್ಯಗಳಲ್ಲಿ ಬರುವ ವಿವರಗಳನ್ನು ಪದಗಳ ಮೂಲಕ ಹೇಳುವದರೊಂದಿಗೆ ಸಾಹಿತ್ಯಿಕ ಭಾಷೆಯಲ್ಲಿ ಹೇಳುತ್ತದೆ. ಆದುದರಿಂದ ಅಲಂಕಾರಗಳಲ್ಲಿರುವ ಅರ್ಥಗಳು ಪದಶಃ ಅರ್ಥಕ್ಕಿಂತ ಭಿನ್ನವಾಗಿರುತ್ತದೆ.

ವಾಕ್ಯಭಾಗಗಳ ಅರ್ಥವನ್ನು ಭಾಷಾಂತರಿಸಲು ಅಲಂಕಾರಗಳನ್ನು ಗುರುತಿಸಬೇಕು ಮತ್ತು ಮೂಲ ಭಾಷೆಯಲ್ಲಿ ಅಲಂಕಾರಗಳ ಅರ್ಥ, ಬಳಕೆ ಬಗ್ಗೆ ತಿಳಿದುಕೊಳ್ಳಬೇಕು. ಆಗ ನೀವು ಅಲಂಕಾರಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಇಲ್ಲವೇ ಅದೇ ಅರ್ಥ ಬರುವ ಪದಗಳನ್ನು ನಿಮ್ಮ ಭಾಷೆಯಲ್ಲಿ ತಿಳಿಸಲು ಪ್ರಯತ್ನಿಸಬಹುದು.

ವಿಧಗಳು

ಈ ಕೆಳಗೆ ವಿವಿಧರೀತಿಯ ಅಲಂಕಾರಗಳನ್ನು ಪಟ್ಟಿಮಾಡಿ ಹೇಳಿದೆ. ನಿಮಗೆ ಹೆಚ್ಚಿನ ಮಾಹಿತಿ ಬೇಕೆಂದರೆ ಬಣ್ಣದ ಪದವನ್ನು ಒತ್ತಿ. ಅದು ವ್ಯಾಖ್ಯಾನ,ಉದಾಹರಣೆ ಮತ್ತು ವೀಡಿಯೋಗಳನ್ನು ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.

  • ಅಪೋಸ್ಟ್ರಫಿ -ತನ್ನ ಎದುರಿಗೆ ಇಲ್ಲದವರನ್ನು / ಇಲ್ಲದುದನ್ನು ಕಲ್ಪಿಸಿಕೊಂಡು ಮಾತನಾಡುವುದು, ಕೆಲವೊಮ್ಮೆ ಒಂದು ವಸ್ತುವಿನ ಬಗ್ಗೆ ಮಾತನಾಡುವುದು ಇದು ಇಂಗ್ಲೀಷಿನಲ್ಲಿರುವ ಅಲಂಕಾರ.
  • Doublet -ದ್ವಿರುಕ್ತಿ ದ್ವಿರುಕ್ತಿ ಗಳು ಜೋಡಿಪದಗಳು ಅಥವಾ ಚಿಕ್ಕ ಪದಗುಚ್ಛಗಳು ಒಂದೇ ಅರ್ಥಕೊಡುವ ಎರಡು ಪದಗಳನ್ನು ಪದಗುಚ್ಛವಾಗಿ ಬಳಸಲಾಗುವುದು, ಎರಡೆರಡು ಸಾರಿ ಬಳಸಲಾಗುವುದು. ಸತ್ಯವೇದದಲ್ಲಿ ಈ ದ್ವಿರುಕ್ತಿಪದಗಳನ್ನು ಪದ್ಯಭಾಗದಲ್ಲಿ, ಪ್ರವಾದನೆಗಳಲ್ಲಿ, ದೈವಸಂದೇಶಗಳಲ್ಲಿ ಅವುಗಳ ಬಗ್ಗೆ ಹೆಚ್ಚು ಒತ್ತು ಕೊಡಲು ಬಳಸಲಾಗುತ್ತದೆ.
  • ಸೌಮ್ಯೋಕ್ತಿಗಳು - ಅಪ್ರಿಯವಾದ ಅಥವಾ ಅಹಿತಕರವಾದ ವಿಚಾರಗಳನ್ನು ನಯವಾದ ರೀತಿಯಲ್ಲಿ ಹೇಳಲು ಬಳಸುವ ಪದಗಳೇ ಸೌಮ್ಯೋಕ್ತಿಗಳು. ಇದರ ಉದ್ದೇಶ ಇದನ್ನು ಓದುವ / ಕೇಳುವ ಜನರಿಗೆ ಒರಟಾದ ಪದಗಳಾಗಿರದೆ, ಅವರ ಭಾವನೆಗಳಿಗೆ ಧಕ್ಕೆತರದಂತೆ ಸೌಮ್ಯವಾದ ರೀತಿಯಲ್ಲಿ ಹೇಳುವ ಪದಗಳು.
  • Hendiadys -ಸಂಬಂಧಾವ್ಯಯಗಳು ಇದರಲ್ಲಿ ಒಂದೇ ವಿಚಾರವನ್ನು ಎರಡೂ ಪದಗಳಿಂದ ತಿಳಿಸುವಾಗ "ಅಂಡ್ / ಮತ್ತು "ಎಂಬ ಸಂಬಂಧವಾಚಕ ಪದವನ್ನು ಬಳಸುವುದು, ಒಂದು ಪದ ಇನ್ನೊಂದು ಪದವನ್ನು ಮಾರ್ಪಡಿಸಿ ಹೇಳಲು ಬಳಸಲಾಗುತ್ತದೆ.
  • Hyperbole - "ಅತಿಶಯೋಕ್ತಿ" ಅಲಂಕಾರ. ಇದು ಯಾವುದಾದರೂ ಒಂದು ಸನ್ನಿವೇಶವನ್ನು ಅಥವಾ ಒಂದು ವಿಷಯವನ್ನು ಕುರಿತು ಅತಿಯಾಗಿ ಭಾವಿಸಿ ಗೊತ್ತಿದ್ದೂ ಉತ್ಪ್ರೇಕ್ಷಮಾಡಿ ಹೇಳುವುದು.
  • ನುಡಿಗಟ್ಟು - ನುಡಿಗಟ್ಟು. ಇದು ಒಂದು ಪದಗಳ ಬಂಧ. ಇದುಗುಂಪಾಗಿ ವಿಶಿಷ್ಟವಾದ ಅರ್ಥವನ್ನು ಕೊಡುತ್ತದೆ.
  • Irony -ವ್ಯಂಗ್ಯೋಕ್ತಿ ಇದೊಂದು ಅಲಂಕಾರ. ಇದರಲ್ಲಿ ವ್ಯಕ್ತಿಯೊಬ್ಬ ತಾನು ತಿಳಿಸಬೇಕಾದ ವಿಚಾರವನ್ನು ನೇರವಾಗಿ ಹೇಳದೆ ಅದರ ವಿರುದ್ಧವಾದ ಅರ್ಥಬರುವಂತಹ ಪದಗಳನ್ನು ಬಳಸಿ ಹೇಳುವುದು.
  • ವ್ಯಂಗ್ಯಾರ್ಥಸೂಚಕಪದ -ಯಾವುದಾದರೂ ಒಂದು ವಿಷಯವನ್ನು ಹೇಳುವ ಬದಲು ನಕಾರಾತ್ಮಕ, ವಿರುದ್ಧವಾದ ಅರ್ಥಬರುವ ಪದ ಬಳಸುವುದು.
  • ಮೆರಿಸಂ -ಎಂಬುದು ಒಂದು ಅಲಂಕಾರ ಇದರಲ್ಲಿ ಒಬ್ಬ ವ್ಯಕ್ತಿ ತಾನು ಮಾತನಾಡುತ್ತಿರುವ ವಿಷಯದ / ವಸ್ತುವಿನ ವಿವಿಧ ಭಾಗಗಳನ್ನು ಪಟ್ಟಿಮಾಡಿಕೊಡುವುದು ಇಲ್ಲವೇ ಅತಿ ಮುಖ್ಯವಾದ ಎರಡು ಭಾಗಗಳ ಬಗ್ಗೆ ಮಾತನಾಡುವುದು.
  • ರೂಪಕ -ರೂಪಕ ಅಲಂಕಾರ ಒಂದು ವಿಷಯಕ್ಕೂ ಅಥವಾ ಒಂದು ವಸ್ತುವಿಗೂ ವ್ಯಕ್ತಿಗೂ ಇನ್ನೊಂದು ವಿಷಯ, ವಸ್ತು, ವ್ಯಕ್ತಿಗೂ, ಯಾವ ವ್ಯತ್ಯಾಸವಿಲ್ಲ, ಎರಡೂ ಒಂದೇ ಎಂದು ಹೇಳುವುದು.

ಇದು ಓದುಗರನ್ನು ಹೇಗೆ ಬೇರೆ ಬೇರೆ ಸಂಬಂಧವಿಲ್ಲದ ವಿಷಯಗಳನ್ನು ಸಮಾನ ಎಂದು ಹೇಳಲಾಗುತ್ತದೆ. ಎಂದು ಯೋಚಿಸುವಂತೆ ಮಾಡುತ್ತದೆ. ರೂಪಕ ಅಲಂಕಾರ ಸಂಬಂಧವಿಲ್ಲದ ಎರಡು ವಿಷಯ ವಸ್ತುಗಳ ನಡುವೆ ಹೋಲಿಕೆ ಮಾಡಿ ಒಂದೇ ಎಂದು ಹೇಳುವುದು.

  • ಮಿಟೋನಮಿ -ಮಿಟೋನಮಿ ಇದೊಂದು ಅಲಂಕಾರ ಪದ. ಈ ಪದ ಒಂದು ವಸ್ತು ಅಥವಾ ಒಂದು ವಿಷಯವನ್ನು ಹೇಳುವಾಗ ಅದರ ಮೂಲ ಹೆಸರನ್ನು ಬಿಟ್ಟು ಅದಕ್ಕೆ ಸಂಬಂಧಿಸಿದ ಹತ್ತಿರದ ಪದವನ್ನು ಬಳಸಿ ಹೇಳುವುದು.ಹೇಳಬೇಕಾದ ವಿಷಯಕ್ಕೆ ಬದಲಾಗಿ ಅದರ ಲಕ್ಷಣ ಹೇಳುವ ಪದ ಬಳಸುವುದು.

ಮಿಟೋನಮಿ ಒಂದು ಪದ / ಪದಗುಚ್ಛವಾಗಿ ಇನ್ನೊಂದು ಪದದ ಮೂಲಕ ಗುರುತಿಸಿ ಕೊಳ್ಳುವುದು.

  • ಸಾದೃಶ್ಯತೆ - ಸಾದೃಶ್ಯತೆ ಎರಡೂ ವ್ಯಕ್ತಿ, ವಸ್ತು, ವಿಷಯಗಳು ಸಮಾನಾಂತರ ಎಂದು ಹೇಳುವಂತದ್ದು. ಇಲ್ಲಿ ಎರಡು ಪದಗಳು ಅಥವಾ ಎರಡು ವಾಕ್ಯಗಳು ರಚನೆಯಲ್ಲಿ ಮತ್ತು ಕಲ್ಪನೆಯಲ್ಲಿ ಹೋಲುತ್ತವೆ,.

ಇಂತಹ ಪದ / ವಾಕ್ಯ ಪ್ರಯೋಗಗಳು ಹಿಬ್ರೂ ಸತ್ಯವೇದದಲ್ಲಿ ಬಂದಿವೆ.ಕಾವ್ಯಪ್ರಧಾನವಾದ ದಾವೀದ ಕೀರ್ತನೆಗಳಲ್ಲಿ ಮತ್ತು ಜ್ಞಾನೋಕ್ತಿಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ.

  • ವ್ಯಕ್ತೀಕರಣ - “ಪರ್ ಸಾನಿಫಿಕೇಶನ್ “ ಇದೊಂದು ಅಲಂಕಾರ, ನಿರ್ಜೀವ ವಸ್ತುಗಳು,ವಿಷಯಗಳು ಇವುಗಳನ್ನು ಮನುಷ್ಯನಂತೆ ಕಲ್ಪಿಸಿ ಹೇಳುವುದು. ಇವು ಮನುಷ್ಯನಂತೆ ಕಾರ್ಯ ನಿರ್ವಹಿಸುವ ಬಗ್ಗೆ ಮನುಷ್ಯನಲ್ಲದ ವಸ್ತುವಿಗೆ ಮನುಷ್ಯನಿಗೆ ಇರುವ ಗುಣಲಕ್ಷಣಗಳನ್ನು ಕೊಟ್ಟು ಹೇಳುವುದು.
  • Predictive Past -ಇದೊಂದು ಭವಿಷ್ಯತ್ ಕಾಲದಲ್ಲಿ ನಡೆಯುವ ವಿಷಯವನ್ನು ಮೊದಲೇ ಮಾತನಾಡಿ ನಡೆದಂತೆ ಹೇಳುವುದು. ಇಂತಹ ಪ್ರಯೋಗಗಳು ಎಲ್ಲಾ ಭಾಷೆಯಲ್ಲೂ ಇರುವುದಿಲ್ಲ.ಕೆಲವು ಭಾಷೆಗಳಲ್ಲಿ ಮುಂದೆ ನಡೆಯುವ ವಿಷಯಗಳನ್ನು ಮೊದಲೇ ಮುಂದೆ ನಡದೇ ನಡೆಯುತ್ತದೆ ಎಂದು ಖಂಡಿತವಾಗಿ ಹೇಳುವುದು.

ಪ್ರವಾದನೆಗಳು ಇದಕ್ಕೆ ಉತ್ತಮ ಉದಾಹರಣೆಗಳು ಇವುಗಳನ್ನು ಹೇಳುವವರು ಇದು ಖಂಡಿತವಾಗಿ ನಡದೇ ನಡೆಯುತ್ತದೆ ಎಂದು ಖಡಾಖಂಡಿತವಾಗಿ ಹೇಳುತ್ತಾರೆ.

  • ವಾಕ್ಚಾತೂರ್ಯದ ಪ್ರಶ್ನೆಗಳು (ರಿಟೋರಿಕ್ ಪ್ರಶ್ನೆ) ರಿಟೋರಿಕ್ ಪ್ರಶ್ನೆಗಳು ಭಾವೋತ್ತೇಜಕ ಪ್ರಶ್ನೆಗಳು. ಇವು ಮಾಹಿತಿ ಪಡೆಯುವ ಬದಲು ಬೇರೇ ಉದ್ದೇಶದಿಂದ ಕೇಳುವ ಪ್ರಶ್ನೆಗಳು.

ಇದನ್ನು ಪ್ರಶ್ನೆ ಕೇಳುವವನ ಮನೋಭಾವ ವಿಷಯದ ಬಗ್ಗೆ ಮತ್ತು ಶ್ರೋತೃವಿನ ಬಗ್ಗೆ ಹೇಗಿದೆ ಎಂಬುದನ್ನು ಸೂಚಿಸುತ್ತದೆ. ಇಂತಹ ಮಾತುಗಳು ಸಾಮಾನ್ಯವಾಗಿ ಖಂಡಿಸಲು ಅಥವಾ ಬೈಯಲು ಉಪಯೋಗಿಸುತ್ತಾರೆ. ಆದರೆ ಬೇರೆ ಭಾಷೆಗಳಲ್ಲಿ ಇತರ ಉದ್ದೇಶಗಳಿಗೆ ಬಳಸುತ್ತಾರೆ.

  • ಉಪಮೆ -ಉಪಮಾ ಅಲಂಕಾರ. ಇದು ಎರಡು ವಸ್ತುಗಳ, ಇಬ್ಬರು ವ್ಯಕ್ತಿಗಳ ಮತ್ತು ವಿಷಯಗಳ ನಡುವಿನ ಹೋಲಿಕೆಗಳು ಸಮಾನವಾಗಿರುವಂತೆ ಸಮಾನ ಸಂಬಂಧವಾಚಕಗಳನ್ನು ಬಳಸಿ ಹೇಳುವುದು.

ಎರಡೂ ವಾಕ್ಯಗಳಲ್ಲಿ ಸಮಾನತೆಯನ್ನು ಸೂಚಿಸುವ ಸಮಾನವಾಚಕ ಪದಗಳು "ಅಂತೆ," "ಹಾಗೆ," ಮುಂತಾದವು ಹೋಲಿಕೆಯನ್ನು ಹೆಚ್ಚು ಪ್ರಕಟವಾಗಿ ತಿಳಿಸುತ್ತದೆ.

  • Synecdoche -(ಸಿನೆಕ್ ಡೋಕಿ) ಇದೊಂದು ಇಂಗ್ಲೀಷ್ ಸಾಹಿತ್ಯದಲ್ಲಿ ಬರುವ ಅಲಂಕಾರ ಇದರಲ್ಲಿ 1) ಒಂದು ವಿಷಯದ ವಿವರವನ್ನು ಸಂಪೂರ್ಣವಾಗಿ ತಿಳಿಸಲು ಬಳಸಬಹುದು 2) ಸಂಪೂರ್ಣ ಭಾಗವನ್ನಾಗಿ ಕೇವಲ ಒಂದೇ ಭಾಗವನ್ನು ಸೂಚಿಸಲು ಬಳಸಬಹುದು.