kn_ta/translate/figs-hendiadys/01.md

12 KiB

ವಿವರಣೆ

ಒಂದು ಕಲ್ಪನೆಯನ್ನು ವ್ಯಕ್ತಪಡಿಸುವ ಸಲುವಾಗಿ ಎರಡು ಪದಗಳನ್ನು "ಮತ್ತು" ಎಂಬ ಪದದೊಂದಿಗೆ ಕೂಡಿಸಿ ಉಪಯೋಗಿಸುವುದನ್ನೇ "ದ್ವಿಪದಾಲಂಕಾರ" ಎಂದು ಕರೆಯುತ್ತಾರೆ. ದ್ವಿಪದಾಲಂಕಾರದಲ್ಲಿ ಎರಡು ಪದಗಳು ಒಟ್ಟಿಗೆ ಸೇರಿ ಕಾರ್ಯಮಾಡುತ್ತವೆ. ಸಾಮಾನ್ಯವಾಗಿ ಒಂದು ಪದ ಪ್ರಾಥಮಿಕ ಕಲ್ಪನೆಯಾಗಿರುತ್ತದೆ ಮತ್ತು ಇನ್ನೊಂದು ಪದ ಮುಂದುವರಿದು ಪಾಥಮಿಕ ಪದವನ್ನು ವಿವರಿಸುತ್ತದೆ.

ಆತನ ಸ್ವಂತ ರಾಜ್ಯ ಮತ್ತು ಮಹಿಮೆ. (1 ಥೆಸಲೋನಿಕ 2:12 ULT)

"ರಾಜ್ಯ" ಮತ್ತು "ಮಹಿಮೆ" ಎಂಬವುಗಳು ನಾಮಪದಗಳು ಆಗಿದ್ದರೂ, "ಮಹಿಮೆ" ಎಂಬುದು ಯಾವ ರೀತಿಯ ರಾಜ್ಯ ಎಂಬುದನ್ನು ತಿಳಿಸುತ್ತದೆ, ಮಹಿಮೆಯ ರಾಜ್ಯ. ಅಥವಾ "ಮಹಿಮಾನ್ವಿತ ರಾಜ್ಯ"

ಒಬ್ಬ ವ್ಯಕ್ತಿ, ವಸ್ತು ಅಥವಾ ಘಟನೆಯನ್ನು ಸೂಚಿಸುವಾಗ “ಮತ್ತು” ಎಂಬ ಪದದಿಂದ ಸಂಯೋಜಿಸಿರುವ ಎರಡು ನುಡಿಗಟ್ಟುಗಳು ಸಹ ದ್ವಿಪದಾಲಂಕಾರ ಆಗಿರಬಹುದು.

ಭಾಗ್ಯಕರವಾದ ನಿರೀಕ್ಷೆಯನ್ನು ಮತ್ತು ನಮ್ಮ ಮಹೋನ್ನತನಾದ ದೇವರ ಮತ್ತು ರಕ್ಷಕನಾದ ಯೇಸು ಕ್ರಿಸ್ತನ ಮಹಿಮೆಯ ಪ್ರತ್ಯಕ್ಷತೆಯನ್ನು ಪಡೆದುಕೊಳ್ಳಲು ನಾವು ಎದುರುನೋಡುವವರಾಗಿರುವಲ್ಲಿ. (ತೀತ 2:13 ULT)

ತೀತ 2:13 ರಲ್ಲಿ ಎರಡು ದ್ವಿಪದಾಲಂಕಾರಗಳು ಇವೆ. “ಭಾಗ್ಯಕರವಾದ ನಿರೀಕ್ಷೆ” ಮತ್ತು “ಮಹಿಮೆಯ ಪ್ರತ್ಯಕ್ಷತೆ” ಎಂಬವುಗಳು ಒಂದೇ ವಿಷಯವನ್ನು ಸೂಚಿಸುತ್ತವೆ ಮತ್ತು ಯೇಸುಕ್ರಿಸ್ತನ ಪುನರಾಗಮನವು ಬಹಳ ನಿರೀಕ್ಷಿತವಾದದ್ದು ಮತ್ತು ಅದ್ಭುತಕರವಾದದ್ದು ಆಗಿದೆ ಎಂಬ ಕಲ್ಪನೆಯನ್ನು ದೃಢಪಡಿಸಲು ಸಹಾಯ ಮಾಡುತ್ತವೆ. ಇದಲ್ಲದೆ, “ನಮ್ಮ ಮಹೋನ್ನತನಾದ ದೇವರ" ಮತ್ತು "ರಕ್ಷಕನಾದ ಯೇಸು ಕ್ರಿಸ್ತ” ಎಂಬುದು ಇಬ್ಬರನ್ನಲ್ಲ ಆದರೆ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

  • ದ್ವಿಪದಾಲಂಕಾರವು ಸಾಮಾನ್ಯವಾಗಿ ಭಾವಸೂಚಕ ನಾಮಪದವನ್ನು ಒಳಗೊಂಡಿರುತ್ತದೆ. ಕೆಲವು ಭಾಷೆಗಳಲ್ಲಿ ಒಂದೇ ರೀತಿಯ ಅರ್ಥವಿರುವ ನಾಮಪದಗಳು ಇರುವುದಿಲ್ಲ.
  • ಅನೇಕ ಭಾಷೆಯಲ್ಲಿ ದ್ವಿಪದಾಲಂಕಾರಗಳನ್ನು ಬಳಸುವುದಿಲ್ಲ, ಇದರಿಂದ ಎರಡನೆಯ ಪದವು ಮೊದಲನೆಯ ಪದವನ್ನು ವಿವರಿಸುತ್ತಿದೆ ಎಂದು ಜನರಿಗೆ ಅರ್ಥವಾಗುವುದಿಲ್ಲ.
  • ಅನೇಕ ಭಾಷೆಯಲ್ಲಿ ದ್ವಿಪದಾಲಂಕಾರಗಳನ್ನು ಬಳಸುವುದಿಲ್ಲ, ಇದರಿಂದ ಎರಡು ವ್ಯಕ್ತಿಗಳನ್ನಲ್ಲ ಅಥವಾ ವಸ್ತುಗಳನ್ನಲ್ಲ ಆದರೆ ಒಬ್ಬ ವ್ಯಕ್ತಿಯನ್ನು ಅಥವಾ ವಸ್ತುವನ್ನು ಸೂಚಿಸುತ್ತದೆ ಎಂಬುದು ಜನರಿಗೆ ಅರ್ಥವಾಗುವುದಿಲ್ಲ.

ಸತ್ಯವೇದದಲ್ಲಿನ ಉದಾಹರಣೆಗಳು

.. ನಾನೇ ನಿಮಗೆ ಮಾತುಗಳನ್ನು ಮತ್ತು ಜ್ಞಾನವನ್ನು ಕೊಡುತ್ತೇನೆ.. (ಲೂಕ 21:15 ULT)

"ಮಾತುಗಳು" ಮತ್ತು "ಜ್ಞಾನ" ಎಂಬ ಪದಗಳು ನಾಮಪದಗಳಾಗಿವೆ, ಆದರೆ ಈ ಅಲಂಕಾರಿಕ ಭಾಷೆಯಲ್ಲಿ "ಜ್ಞಾನ" "ಮಾತುಗಳನ್ನು" ವಿವರಿಸುತ್ತದೆ.

.. ನೀವು ಒಪ್ಪಿ ವಿಧೇಯರಾದರೆ... (ಯೆಶಾಯ 1:19 ULT)

"ಒಪ್ಪುವಿಕೆ" ಮತ್ತು "ವಿಧೇಯತೆ" ಎರಡೂ ಗುಣವಾಚಕಗಳಾಗಿವೆ ಆದರೂ "ಒಪ್ಪುವಿಕೆ" "ವಿಧೇಯತೆಯನ್ನು" ವಿವರಿಸುತ್ತದೆ.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯಲ್ಲಿ ದ್ವಿಪದಾಲಂಕಾರ ಸರಿಯಾದ ಅರ್ಥವನ್ನು ಸಹಜವಾದ ರೀತಿಯಲ್ಲಿ ಬಳಸಲು ಸಾಧ್ಯವಾದರೆ ಬಳಸಬಹುದು. ಇಲ್ಲದಿದ್ದರೆ ಇಲ್ಲಿ ಕೆಲವು ಆಯ್ಕೆಗಳಿವೆ:

  1. ವಾಕ್ಯದಲ್ಲಿರುವ ನಾಮಪದಕ್ಕೆ ಬದಲಾಗಿ ಅದೇ ಅರ್ಥಕೊಡುವ ಗುಣವಾಚಕ ಪದವನ್ನು ಬಳಸಬಹುದು.
  2. ವಾಕ್ಯದಲ್ಲಿರುವ ನಾಮಪದಕ್ಕೆ ಬದಲಾಗಿ ಅದೇ ಅರ್ಥಕೊಡುವ ನುಡಿಗಟ್ಟನ್ನು ಬಳಸಬಹುದು.
  3. ವಾಕ್ಯದಲ್ಲಿರುವ ಗುಣವಾಚಕಕ್ಕೆ ಬದಲಾಗಿ ಅದೇ ಅರ್ಥಕೊಡುವ ಕ್ರಿಯಾವಿಶೇಷಣವನ್ನು ಬಳಸಬಹುದು.
  4. ಇತರ ಅಲಂಕಾರ ಪದಗಳಿಗೆ ಬದಲಾಗಿ ಅದೇ ಅರ್ಥಕೊಡುವ ಪದಗಳನ್ನು ಬಳಸಬಹುದು ಮತ್ತು ಒಂದು ಪದ ಅಥವಾ ನುಡಿಗಟ್ಟು ಇನ್ನೊಂದನ್ನು ವಿವರಿಸುತ್ತದೆ ಎಂಬುದನ್ನು ತೋರಿಸಿಕೊಡಿರಿ.
  5. ಕೇವಲ ಒಂದು ವಿಷಯವನ್ನು ಮಾತ್ರವೇ ಸೂಚಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲದಿದ್ದರೆ, ಅದನ್ನು ಸ್ಪಷ್ಟಪಡಿಸುವಂಥ ನುಡಿಗಟ್ಟು ಬದಲಾಯಿಸಿ ಬಳಸಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ವಾಕ್ಯದಲ್ಲಿರುವ ನಾಮಪದಕ್ಕೆ ಬದಲಾಗಿ ಅದೇ ಅರ್ಥಕೊಡುವ ಗುಣವಾಚಕ ಪದವನ್ನು ಬಳಸಬಹುದು.

ನಾನು ನಿಮಗೆ ಮಾತುಗಳನ್ನು ಮತ್ತು ಜ್ಞಾನವನ್ನು ಕೊಡುತ್ತೇನೆ (ಲೂಕ 21:15 ULT)

ನಾನು ನಿಮಗೆ ಜ್ಞಾನವುಳ್ಳ ಮಾತುಗಳನ್ನು ಕೊಡುತ್ತೇನೆ

ತನ್ನ ರಾಜ್ಯಕ್ಕೆ ಮತ್ತು ಮಹಿಮೆಗೆ ಕರೆಯುವ ದೇವರಿಗೆ ನೀವು ಯೋಗ್ಯರಾದ ರೀತಿಯಲ್ಲಿ ನಡೆಯಬೇಕು. (1 ಥೆಸಲೋನಿಕ 2:12 ULT)

ತನ್ನ ಮಹಿಮಾನ್ವಿತ ರಾಜ್ಯಕ್ಕೆ ಕರೆಯುವ ದೇವರಿಗೆ ನೀವು ಯೋಗ್ಯರಾದ ರೀತಿಯಲ್ಲಿ ನಡೆಯಬೇಕು.

(2) ವಾಕ್ಯದಲ್ಲಿರುವ ನಾಮಪದಕ್ಕೆ ಬದಲಾಗಿ ಅದೇ ಅರ್ಥಕೊಡುವ ನುಡಿಗಟ್ಟನ್ನು ಬಳಸಬಹುದು.

ನಾನು ನಿಮಗೆ ಮಾತುಗಳನ್ನು ಮತ್ತು ಜ್ಞಾನವನ್ನು ಕೊಡುತ್ತೇನೆ (ಲೂಕ 21:15 ULT)

ನಾನು ನಿಮಗೆ ಜ್ಞಾನದ ಮಾತುಗಳನ್ನು ಕೊಡುತ್ತೇನೆ.

ತನ್ನ ರಾಜ್ಯಕ್ಕೆ ಮತ್ತು ಮಹಿಮೆಗೆ ಕರೆಯುವ ದೇವರಿಗೆ ನೀವು ಯೋಗ್ಯರಾದ ರೀತಿಯಲ್ಲಿ ನಡೆಯಬೇಕು. (1 ಥೆಸಲೋನಿಕ 2:12 ULT)

ತನ್ನ ಮಹಿಮೆಯ ರಾಜ್ಯಕ್ಕೆ ಕರೆಯುವ ದೇವರಿಗೆ ನೀವು ಯೋಗ್ಯರಾದ ರೀತಿಯಲ್ಲಿ ನಡೆಯಬೇಕು.

(3) ವಾಕ್ಯದಲ್ಲಿರುವ ಗುಣವಾಚಕಕ್ಕೆ ಬದಲಾಗಿ ಅದೇ ಅರ್ಥಕೊಡುವ ಕ್ರಿಯಾವಿಶೇಷಣವನ್ನು ಬಳಸಬಹುದು.

ನೀವು ಒಪ್ಪಿ ಮತ್ತು ವಿಧೇಯರಾದರೆ... (ಯೆಶಾಯ 1:19 ULT)

ನೀವು ಮನಃಪೂರ್ವಕವಾಗಿ ಒಪ್ಪಿ ವಿಧೇಯರಾದರೆ.

  1. ಇತರ ಅಲಂಕಾರ ಪದಗಳಿಗೆ ಬದಲಾಗಿ ಅದೇ ಅರ್ಥಕೊಡುವ ಪದಗಳನ್ನು ಬಳಸಬಹುದು ಮತ್ತು ಒಂದು ಪದ ಅಥವಾ ನುಡಿಗಟ್ಟು ಇನ್ನೊಂದನ್ನು ವಿವರಿಸುತ್ತದೆ ಎಂಬುದನ್ನು ತೋರಿಸಿಕೊಡಿರಿ.

ನೀವು ಒಪ್ಪಿ ಮತ್ತು ವಿಧೇಯರಾದರೆ... (ಯೆಶಾಯ 1:19 ULT)

ವಿಧೇಯತೆ ಎಂಬ ಗುಣವಾಚಕಕ್ಕೆ ಬದಲಾಗಿ "ವಿಧೇಯರಾಗಿ" ಎಂಬ ಕ್ರಿಯಾಪದವನ್ನು ಬಳಸಬಹುದು

ನೀವು ಮನಃಪೂರ್ವಕವಾಗಿ ವಿಧೇಯರಾದರೆ

(4) ಮತ್ತು (5) ಕೇವಲ ಒಂದು ವಿಷಯವನ್ನು ಮಾತ್ರವೇ ಸೂಚಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲದಿದ್ದರೆ, ಅದನ್ನು ಸ್ಪಷ್ಟಪಡಿಸುವಂಥ ನುಡಿಗಟ್ಟು ಬದಲಾಯಿಸಿ ಬಳಸಿರಿ.

ಭಾಗ್ಯಕರವಾದ ನಿರೀಕ್ಷೆಯನ್ನು ಮತ್ತು ನಮ್ಮ ಮಹೋನ್ನತನಾದ ದೇವರ ಮತ್ತು ರಕ್ಷಕನಾದ ಯೇಸು ಕ್ರಿಸ್ತನ ಮಹಿಮೆಯ ಪ್ರತ್ಯಕ್ಷತೆಯನ್ನು ಪಡೆದುಕೊಳ್ಳಲು ನಾವು ಎದುರುನೋಡುವವರಾಗಿರುವಲ್ಲಿ. (ತೀತ 2:13 ULT)

ಯೇಸುವಿನ ಪ್ರತ್ಯಕ್ಷತೆಯನ್ನೇ ನಾವು ನಿರೀಕ್ಷಿಸುವವರಾಗಿದ್ದೇವೆ ಎಂಬುದನ್ನು ಸ್ಪಷ್ಟಪಡಿಸುವುದಕ್ಕಾಗಿ “ಮಹಿಮೆ” ಎಂಬ ನಾಮಪದವನ್ನು “ಮಹಿಮಾನ್ವಿತ” ಎಂಬ ಗುಣವಾಚವಾಗಿ ಬದಲಾಯಿಸಬಹುದು. ಇದಲ್ಲದೆ, “ಯೇಸು ಕ್ರಿಸ್ತ” ಎಂಬ ಪದಗಳನ್ನು ಪದಗುಚ್ಛದ ಮುಂಭಾಗಕ್ಕೆ ಸರಿಸಬಹುದು ಮತ್ತು “ಮಹೋನ್ನತನಾದ ದೇವರು ಮತ್ತು ರಕ್ಷಕ” ಎಂಬ ಪದಗಳನ್ನು ಯೇಸು ಕ್ರಿಸ್ತನೆಂಬ ಒಬ್ಬ ವ್ಯಕ್ತಿಯನ್ನು ವಿವರಿಸುವ ಸಾಪೇಕ್ಷ ಉಪವಾಕ್ಯಕ್ಕೆ ಸೇರಿಸಬಹುದು.

ನಾವು ಹಾತೊರೆಯುತ್ತಿರುವ, ನಮ್ಮ ಮಹೋನ್ನತನಾದ ದೇವರು ಮತ್ತು ರಕ್ಷಕನು ಆದ ಯೇಸು ಕ್ರಿಸ್ತನ ಭಾಗ್ಯಕರವಾದ ಮತ್ತು ಮಹಿಮಾನ್ವಿತ ಪ್ರತ್ಯಕ್ಷತೆಯನ್ನು ಪಡೆದುಕೊಳ್ಳಲು ನಾವು ಎದುರುನೋಡುವವರಾಗಿರುವಲ್ಲಿ.