kn_ta/translate/figs-synecdoche/01.md

5.2 KiB

ವಿವರಣೆ

ಉಪಲಕ್ಷಣಾಲಂಕಾರ ಎಂಬುದು ಅಲಂಕಾರವಾಗಿದೆ, ಮಾತನಾಡುವವನು ಈ ಅಲಂಕಾರದಲ್ಲಿ ಪೂರ್ಣ ವಸ್ತುವಿಗೆ ಬದಲು ಭಾಗವನ್ನು ಅಥವಾ ಭಾಗಕ್ಕೆ ಬದಲು ಪೂರ್ಣ ವಸ್ತವನ್ನು ಸೂಚಿಸುತ್ತಾನೆ.

ನನ್ನ ಆತ್ಮವು ಕರ್ತನನ್ನು ಕೊಂಡಾಡುತ್ತದೆ. (ಲೂಕ 1:46 ULT)

ಮರಿಯಳು ಕರ್ತನು ಮಾಡುತ್ತಿರುವ ಕಾರ್ಯಕ್ಕಾಗಿ ತುಂಬಾ ಸಂತೋಷಭರಿತಳಾಗಿದ್ದಳು, ಆದ್ದರಿಂದ "ನನ್ನ ಆತ್ಮವು/ ಪ್ರಾಣವು" ಎಂದರೆ ಅವಳ ಭಾವನಾತ್ಮಕ ಅಂಗವಾದ ಅಂತರಂಗವು, ಪೂರ್ಣವಾಗಿ ಅವಳನ್ನೇ ಸೂಚಿಸುತ್ತದೆ.

ಫರಿಸಾಯರು ಆತನಿಗೆ, "ನೋಡು ಇವರು ಧರ್ಮಸಮ್ಮತವಲ್ಲದ ಕೆಲಸವನ್ನು ಏಕೆ ಮಾಡುತ್ತಾರೆ..?" ಎಂದು ಕೇಳಿದರು. (ಮಾರ್ಕ 2:24 ULT)

ಅಲ್ಲಿ ನಿಂತಿದ್ದ ಎಲ್ಲಾ ಫರಿಸಾಯರು ಒಂದೇ ಸಮಯದಲ್ಲಿ ಅದೇ ಮಾತುಗಳನ್ನು ಹೇಳಲಿಲ್ಲ. ಅದರ ಬದಲು, ಆ ಗುಂಪಿನಿಂದ ಒಬ್ಬ ಪ್ರತಿನಿಧಿಸಿ ಈ ಮಾತುಗಳನ್ನು ಆಡಿದನು.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

  • ಕೆಲವು ಓದುಗರು ಉಪಲಕ್ಷಣಾಲಂಕಾರವನ್ನು ಗುರುತಿಸುವುದಿಲ್ಲ ಆದ್ದರಿಂದ ಇದನ್ನು ವಾಚ್ಯಾರ್ಥಯುಳ್ಳ ವಾಕ್ಯವೆಂದು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ.
  • ಕೆಲವು ಓದುಗರು ತಾವು ಪದಗಳನ್ನು ವಾಚ್ಯಾರ್ಥವಾಗಿ ಅರ್ಥಮಾಡಿಕೊಳ್ಳಬಾರದು ಎಂದು ತಿಳಿದುಕೊಳ್ಳುವರು, ಆದರೂ ಇದರ ಅರ್ಥವೇನೆಂದು ಅವರು ತಿಳಿದುಕೊಳ್ಳದಿರಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು

ನನ್ನ ಕೈಗಳು ಮಾಡಿ ಮುಗಿಸಿದಂಥ ಎಲ್ಲಾ ಕಾರ್ಯಗಳನ್ನು ನಾನು ನೋಡಿದೆನು (ಪ್ರಸಂಗಿ 2:11 ULT)

"ನನ್ನ ಕೈಗಳು" ಎಂಬುದು ಇಡೀ ವ್ಯಕ್ತಿಯನ್ನು ಪ್ರತಿನಿಧಿಸುವ ಉಪಲಕ್ಷಣಾಲಂಕಾರವಾಗಿದೆ. ಏಕೆಂದರೆ ಒಬ್ಬ ವ್ಯಕ್ತಿಯು ಮಾಡಿ ಮುಗಿಸುವ ಕಾರ್ಯಗಳಲ್ಲಿ ಅವನ ತೋಳುಗಳು ಮತ್ತು ದೇಹದ ಎಲ್ಲಾ ಅಂಗಾಂಗಗಳು, ಮನಸ್ಸು ಎಲ್ಲವೂ ಒಳಗೊಂಡಿರುತ್ತವೆ. ವ್ಯಕ್ತಿಯನ್ನು ಪ್ರತಿನಿಧಿಸಲು ಕೈಗಳನ್ನು ಆರಿಸಿಕೊಳ್ಳಲಾಗಿದೆ ಏಕೆಂದರೆ ಅವುಗಳು ಕೆಲಸದಲ್ಲಿ ನೇರವಾಗಿ ಭಾಗಿಯಾಗಿರುವ ದೇಹದ ಭಾಗಗಳಾಗಿವೆ.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯಲ್ಲಿ ಉಪಲಕ್ಷಣಾಲಂಕಾರ ಪ್ರಯೋಗವು ಸಹಜವಾಗಿರುವುದಾದರೆ ಮತ್ತು ಸರಿಯಾದ ಅರ್ಥ ಕೊಡುವುದಾದರೆ ಅದನ್ನು ಬಳಸಿಕೊಳ್ಳಿರಿ. ಇಲ್ಲದಿದ್ದರೆ ಇಲ್ಲಿ ಇನ್ನೊಂದು ಆಯ್ಕೆಯಿದೆ:

  1. ಉಪಲಕ್ಷಣಾಲಂಕಾರವು ಯಾವುದನ್ನು ಸೂಚಿಸುತ್ತದೋ ಅದನ್ನು ನಿರ್ದಿಷ್ಟವಾಗಿ ತಿಳಿಸಿರಿ.

ಭಾಷಾಂತರ ತಂತ್ರಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು.

(1) ಉಪಲಕ್ಷಣಾಲಂಕಾರವು ಯಾವುದನ್ನು ಸೂಚಿಸುತ್ತದೋ ಅದನ್ನು ನಿರ್ದಿಷ್ಟವಾಗಿ ತಿಳಿಸಿರಿ.

"ನನ್ನ ಆತ್ಮವು ಕರ್ತನನ್ನು ಕೊಂಡಾಡುತ್ತದೆ." (ಲೂಕ 1:46 ULT)

"ನಾನು ಕರ್ತನನ್ನು ಕೊಂಡಾಡುತ್ತೇನೆ.

...ಫರಿಸಾಯರು ಆತನಿಗೆ ಹೇಳಿದರು (ಮಾರ್ಕ 2:24 ULT)

...ಫರಿಸಾಯರ ಒಬ್ಬ ಪ್ರತಿನಿಧಿಯು ಆತನಿಗೆ ಹೇಳಿದರು...

....ನನ್ನ ಕೈಗಳು ಮಾಡಿ ಮುಗಿಸಿದಂಥ ಎಲ್ಲಾ ಕಾರ್ಯಗಳನ್ನು ನಾನು ನೋಡಿದೆನು (ಪ್ರಸಂಗಿ 2:11 ULT)

ನಾನು ಮಾಡಿ ಮುಗಿಸಿದಂಥ ಎಲ್ಲಾ ಕಾರ್ಯಗಳನ್ನು ನಾನು ನೋಡಿದೆನು