kn_ta/translate/figs-irony/01.md

18 KiB

ವಿವರಣೆ

ವ್ಯಂಗ್ಯ ಎಂಬುದು ಒಂದು ಅಲಂಕಾರ, ಇದರಲ್ಲಿ ವಿಷಯವನ್ನು ತಿಳಿಸುವ ವ್ಯಕ್ತಿಯು ಪದಗಳ ಅಕ್ಷರಷಃ ಅರ್ಥವನ್ನು ಹೇಳುವ ಬದಲು ಅದರ ವಿರುದ್ಧ ಪದವನ್ನು ಬಳಸಿ ತಿಳಿಸುತ್ತಾನೆ. ಕೆಲವೊಮ್ಮೆ ಇಂತಹ ಪದಗಳನ್ನು ಬಳಸುವಾಗ ಇತರರು ಬಳಸಿದ ಪದಗಳನ್ನು ಬಳಸಿರುತ್ತಾರೆ. ಇನ್ನೊಂದು ಅರ್ಥದಲ್ಲಿ ಅವರಿಗೆ ತಾವು ತಿಳಿಸಿದ ಪದಗಳ ಬಗ್ಗೆ ಒಪ್ಪಿತ ಅಭಿಪ್ರಾಯವಿರುವುದಿಲ್ಲ. ಜನರು ಇಂತಹ ಪದಗಳನ್ನು ಇರಬೇಕಾದ ಪದಗಳಿಗಿಂತ ವಿಭಿನ್ನ ಅರ್ಥ ಕೊಡುವ ಪದಗಳ ಬಗ್ಗೆ ಒತ್ತು ನೀಡಲು ಬಳಸುತ್ತಾರೆ ಅಥವಾ ಇತರರ ಅಭಿಪ್ರಾಯ ತಪ್ಪು ಅಥವಾ ಮೂರ್ಖತನ ಎಂದು ಸೂಚಿಸಲು ಬಳಸುತ್ತಾರೆ. ಕೆಲವೊಮ್ಮೆ ಇಂತಹ ಪದಗಳು ಹಾಸ್ಯಮಯವಾಗಿರುತ್ತದೆ.

ಯೇಸು ಅವರಿಗೆ -,"ಕ್ಷೇಮದಿಂದ ಇರುವವರಿಗೆ ವೈದ್ಯರು ಬೇಕಾಗಿಲ್ಲ ಎಂದು ಹೇಳಿದನು ಕ್ಷೇಮವಿಲ್ಲ ಆದವರಿಗೆ ವೈದ್ಯರು ಬೇಕು ಎಂದು ಹೇಳಿದನು." "ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನೀತಿವಂತರನ್ನು ಕರೆಯುವುದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವುದಕ್ಕೆ ಬಂದವನು ಎಂದು ಅವರಿಗೆ ಉತ್ತರ ಕೊಟ್ಟನು." (ಲೂಕ5:31-32 ULB)

"ನೀತಿವಂತರ" ಬಗ್ಗೆ ಯೇಸು ಮಾತನಾಡುವಾಗ ಯೇಸು ನಿಜವಾದ ನೀತಿವಂತರನ್ನು ಉದ್ದೇಶಿಸಿ ಮಾತನಾಡುತ್ತಿಲ್ಲ, ಆದರೆ ನೀತಿವಂತರಂತೆ ನಟಿಸುವ ಜನರ ಬಗ್ಗೆ ಹೇಳುತ್ತಿದ್ದಾನೆ. ಹೀಗೆ ಯೇಸು ತಾವು ನೀತಿವಂತರೆಂದು ತಿಳಿದು, ತಮ್ಮನ್ನು ಇತರರಿಗಿಂತ ಉತ್ತಮರೆಂದು ಭಾವಿಸಿ ಪಶ್ಚಾತ್ತಾಪ ಪಡುವ ಅವಶ್ಯಕತೆ ಇಲ್ಲ ಎಂದು ಯೋಚಿಸುವ ಜನರ ಬಗ್ಗೆ ಹೇಳಲು ಈ ವ್ಯಂಗ್ಯಾರ್ಥ ಪದಗಳನ್ನು ಬಳಸಿದ್ದಾನೆ

ಕಾರಣ ಇದೊಂದು ಭಾಷಾಂತರ ವಿಷಯ.

  • ಕೆಲವರು ತಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ವ್ಯಂಗ್ಯೋಕ್ತಿ ಬಳಸಿ ಮಾತನಾಡುತ್ತಿದ್ದಾನೆ ಎಂದು ತಿಳಿದುಕೊಳ್ಳಲಾರದೆ ಮಾತನಾಡುವ ವ್ಯಕ್ತಿ ನಿಜವಾದುದನ್ನೇ ಮಾತನಾಡುತ್ತಿದ್ದಾನೆ ಎಂದು ತಿಳಿದುಕೊಳ್ಳಬಹುದು. ವಾಕ್ಯಭಾಗದ ನಿಜವಾದ ಅರ್ಥವನ್ನು ತಿಳಿಯದೆ ವಿರುದ್ಧವಾದ ಅರ್ಥವನ್ನು ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ.

ಸತ್ಯವೇದದಲ್ಲಿನ ಉದಾಹರಣೆಗಳು

ನೀವು ನಿಮ್ಮ ಸಂಪ್ರದಾಯವನ್ನು ಅನುಸರಿಸಿ ನಡೆಯುವುದಕ್ಕಾಗಿ ದೇವರ ಆಜ್ಞೆಯನ್ನು ತಿರಸ್ಕರಿಸಿ ನಡೆಯುತ್ತಿದ್ದೀರಿ. (ಮಾರ್ಕ 7:9 ULB)

ಇಲ್ಲಿ ಫರಿಸಾಯರು ಮಾಡಿದ ತಪ್ಪುಗಳನ್ನು ತೋರಿಸಲು ಅವರನ್ನು ಹೊಗಳಿಕೆಯ ಮಾತುಗಳಿಂದ ಎಚ್ಚರಿಸುತ್ತಿದ್ದಾನೆ. ವ್ಯಂಗ್ಯೋಕ್ತಿ ಮೂಲಕ ಹೊಗಳಿಕೆಯ ವಿರುದ್ಧ ಪದವನ್ನು ಯೇಸು ಇಲ್ಲಿ ತಿಳಿಸುತ್ತಿದ್ದಾನೆ. ಸಂಪ್ರದಾಯಗಳನ್ನು ಅನುಸರಿಸುವುದಕ್ಕಾಗಿ ದೇವರ ಆಜ್ಞೆಗಳನ್ನು ಗುರುತಿಸಲು ಅಸಮರ್ಥರಾಗಿದ್ದೀರಿ ಎಂದು ಪರಿಸಾಯರನ್ನು ಕುರಿತು ಯೇಸು ಹೇಳಿದನು. ಈ ವ್ಯಂಗ್ಯೋಕ್ತಿಗಳು ಪರಿಸಾಯರ ಪಾಪಗಳು ಎದ್ದು ಕಾಣುತ್ತವೆ ಮತ್ತು ಹೆದರಿಕೆಯನ್ನು ಹುಟ್ಟಿಸುವಂತಾದ್ದು ಎಂಬುದನ್ನು ಸೂಚಿಸುತ್ತದೆ.

" ಯಾಕೋಬ್ಯರ ಅರಸನಾದ ಯೆಹೋವನು ಹೀಗೆನ್ನುತ್ತಾನೆ " ನಿಮ್ಮ ವ್ಯಾಜ್ಯವು ಈಚೆಗೆ ಬರಲಿ, ನಿಮ್ಮ ಬಲವಾದ ನ್ಯಾಯಗಳನ್ನು ತೋರ್ಪಡಿಸಿರಿ. ನಿಮ್ಮ ನ್ಯಾಯಗಳನ್ನು ಮುಂದಕ್ಕೆ ತನ್ನಿರಿ ; " ನಮಗೆ ಅರಿವು ಉಂಟಾಗುವಂತೆ ಮುಂದಾಗತಕ್ಕವುಗಳನ್ನು ತಿಳಿಸಿರಿ. ಭವಿಷ್ಯತ್ತನ್ನು ನಮಗೆ ತಿಳಿಸಲಿ ನಡೆದ ಸಂಗತಿಗಳ ವಿಶೇಷವನ್ನು ಸೂಚಿಸಿರಿ. ನಾವು ಅವುಗಳನ್ನು ಮನಸ್ಸಿಗೆ ತಂದು ಅವುಗಳ ಪರಿಣಾಮವನ್ನು ಗ್ರಹಿಸುವೆವು.." (ಯೆಶಾಯ 41:21-22 ULB) ತಂದು ಅವುಗಳ

ಜನರು ಮೂರ್ತಿ ಪೂಜೆ ಮಾಡುತ್ತಿದ್ದರು, ಅವರ ವಿಗ್ರಹಗಳಿಗೆ ಜ್ಞಾನವೂ, ಶಕ್ತಿಯೂ ಇರುತ್ತದೆ ಎಂದು ನಂಬಿದ್ದಾರೆ ಆದರೆ ಯೆಹೋವನು ಅವರ ಬಗ್ಗೆ ಮತ್ತು ಅವರ ಕಾರ್ಯದ ಬಗ್ಗೆ ಉಗ್ರನಾಗಿದ್ದಾನೆ. ಆದುದರಿಂದ ಆತನು ಅವರನ್ನು ಕುರಿತು ಭವಿಷ್ಯದಲ್ಲಿ ಏನಾಗುತ್ತದೆ ಎಂದು ಅವರ ವಿಗ್ರಹಗಳು ಹೇಳಲಿ ಎಂದು ಪಂಥಾಹ್ವಾನ ನೀಡುತ್ತಾನೆ. ಆ ವಿಗ್ರಹಗಳು ಇದನ್ನು ಮಾಡಲಾರವೆಂದು ಆತನಿಗೆ ತಿಳಿದಿತ್ತು, ಆದರೆ ಅವುಗಳು ಮಾತನಾಡುತ್ತಿರುವಂತೆ ಹೇಳಿ ಅವುಗಳ ಬಗ್ಗೆ ಹಾಸ್ಯ ಮಾಡುತ್ತಿದ್ದಾನೆ. ಅವರ ಅಸಮರ್ಥತೆಯನ್ನು ಬೆಳಕಿಗೆ ಬರುವಂತೆ ಮಾಡಿದ್ದಾನೆ ಮತ್ತು ಜನರು ಮಾಡುತ್ತಿರುವ ಕಾರ್ಯದ ಬಗ್ಗೆ, ಅವುಗಳನ್ನು ಪೂಜಿಸುತ್ತಿರುವ ಬಗ್ಗೆ ಎಚ್ಚರಿಸಿ ಗದರಿಸುತ್ತಿದ್ದಾನೆ.

ಬೆಳಕಿನ ನಿವಾಸಕ್ಕೆ ಹೋಗುವ ದಾರಿ ಎಲ್ಲಿ ? ನೀನು ಆ ಒಂದೊಂದನ್ನು ಅದರದರ ಪ್ರಾಂತ್ಯಕ್ಕೆ ಕರಕೊಂಡುಹೋಗಿ ಅವುಗಳ ಮನೆಯ ಹಾದಿಗಳನ್ನು ಕಂಡುಕೊಳ್ಳಬಲ್ಲೆಯಾ ? ನಿನಗೆ ಇದು ಗೊತ್ತಿರಲೇ ಬೇಕು ಆಗಲೇ ಹುಟ್ಟಿದೆಯಲ್ಲವೇ ?; ನಿನ್ನ ದಿನಗಳ ಸಂಖ್ಯೆ ಬಹಳ ದೊಡ್ಡದು !;" (ಯೋಬ 38:20, 21 ULB)

ಯೋಬನು ತಾನು ಬುದ್ಧಿವಂತತನೆಂದು ತಿಳಿದಿದ್ದನು. ಯೆಹೋವನು ಯೋಬನು ಬುದ್ಧಿವಂತನಲ್ಲ ಎಂದು ಹೇಳಲು ವ್ಯಂಗ್ಯೋಕ್ತಿ ಬಳಸಿದ್ದಾನೆ. ಮೇಲೆ ಅಡ್ಡಗೆರೆ ಹಾಕಿ ಗುರುತಿಸಿರುವ ಎರಡು ವಾಕ್ಯಗಳು ವ್ಯಂಗ್ಯೋಕ್ತಿಗಳಾಗಿವೆ. ಅವು ಹೇಳಿರುವ ವಾಕ್ಯಗಳಿಗೆ ವಿರುದ್ಧವಾದ ಅರ್ಥವನ್ನು ಹೊಂದಿವೆ ಏಕೆಂದರೆ ಅವು ನಿಶ್ಚಯವಾಗಿ ತಪ್ಪು ಹೇಳಿಕೆಗಳು. ಬೆಳಕಿನ ಸೃಷ್ಟಿಯ ಬಗ್ಗೆ ದೇವರು ಕೇಳಿದ ಪ್ರಶ್ನೆಗಳಿಗೆ ಯೋಬನಿಂದ ಉತ್ತರಿಸಲು ಆಗಲಿಲ್ಲ ಎಂಬುದನ್ನು ಒತ್ತಿ ಹೇಳಿದರು. ಏಕೆಂದರೆ ಯೋಬನು ಸೃಷ್ಟಿ ಆದ ಅನೇಕ ವರ್ಷಗಳ ನಂತರ ಹುಟ್ಟಿದವನು.

ಈಗಾಗಲೇ ನಿಮಗೆ ಬೇಕಾದುದೆಲ್ಲ ದೊರೆತು ತೃಪ್ತರಾಗಿದ್ದೀರಿ! ಈಗಾಗಲೇ ಐಶ್ವರ್ಯವಂತರೂ ಆಗಿದ್ದೀರಿ. ನಮ್ಮ ಸಹಾಯವಿಲ್ಲದೆ ಅರಸರಾದಿರಿ! (1 ಕೊರಿಂಥ 4:8 ULB)

ಕೊರಿಂಥದವರು ತಮ್ಮನ್ನು ತಾವೇ ಬುದ್ಧಿವಂತರೆಂದೂ, ಸ್ವಪರಿಪೂರ್ಣರೆಂದೂ ಪರಿಗಣಿಸಿಕೊಂಡಿದ್ದರು. ಆದುದರಿಂದ ಅಪೋಸ್ತಲನಾದ ಪೌಲನ ಯಾವ ಸಲಹೆಗಳು, ಸೂಚನೆಗಳು ತಮಗೆ ಅವಶ್ಯವಿಲ್ಲವೆಂದು ತಿಳಿದಿದ್ದರು. ಆದುದರಿಂದಲೇ ಪೌಲನು ಈ ಮೇಲಿನ ವಾಕ್ಯಗಳನ್ನು ವ್ಯಂಗ್ಯೋಕ್ತಿಯನ್ನಾಗಿ ಬಳಸಿ ಅವರು ತಮ್ಮ ಬಗ್ಗೆ ಎಷ್ಟು ಗರ್ವದಿಂದ ಇದ್ದಾರೆ, ನೈಜತೆಯಿಂದ ಎಷ್ಟುದೂರ ಇದ್ದಾರೆ ಮತ್ತು ಅವರ ಬುದ್ಧಿವಂತಿಕೆ ಅವರನ್ನು ಯಾವ ಸ್ಥಿತಿಯಲ್ಲಿ ಇಳಿಸಿದೆ ಎಂದು ತಿಳಿಸುತ್ತಾನೆ.

ಭಾಷಾಂತರ ಕೌಶಲ್ಯಗಳು.

ವ್ಯಂಗ್ಯೋಕ್ತಿಯಗಳು ನಿಮ್ಮ ಭಾಷೆಯಲ್ಲಿ ಸರಿಯಾಗಿ ಅರ್ಥವಾಗುವಂತಿದ್ದರೆ ಅದು ಹೇಗಿದೆಯೋ ಹಾಗೆ ಭಾಷಾಂತರಿಸಿ. ಇಲ್ಲದಿದ್ದರೆ ಇಲ್ಲಿ ಕೊಟ್ಟಿರುವ ತಂತ್ರಗಳನ್ನು ಬಳಸಿಕೊಳ್ಳಿ.

  1. ಮಾತನಾಡುವ ವ್ಯಕ್ತಿ ಏನು ಹೇಳುತ್ತಿದ್ದಾನೆ ಎಂಬುದನ್ನು ಸರಿಯಾಗಿ ತಿಳಿದು ನಂಬುವಂತೆ ಭಾಷಾಂತರ ಮಾಡಬೇಕು
  2. ವ್ಯಂಗ್ಯೋಕ್ತಿಯನ್ನುಇದ್ದಂತೆಯೇ, ಉದ್ದೇಶಿತ ಅರ್ಥದೊಂದಿಗೆ ಭಾಷಾಂತರಿಸಬೇಕು.

ವ್ಯಂಗ್ಯೋಕ್ತಿಯ ನಿಜವಾದ ಅರ್ಥವು ಮಾತನಾಡುತ್ತಿರುವವನ ಅಕ್ಷರಷಃ ಮಾತುಗಳಲ್ಲಿ ಕಂಡುಬರುವು ದಿಲ್ಲ . ಆದರೆ ನಿಜವಾದ ಅರ್ಥ ಅಕ್ಷರಷಃ ಅರ್ಥಕೊಡುವ ಪದಗಳ ವಿರುದ್ಧ ಅರ್ಥ ಪದಗಳಲ್ಲಿ ಇರುತ್ತದೆ.

ಭಾಷಾಂತರ ಕೌಶಲ್ಯ ಅಳವಡಿಸಿಕೊಂಡಿರುವ ಬಗ್ಗೆ ಉದಾಹರಣೆಗಳು

  1. ಮಾತನಾಡುವ ವ್ಯಕ್ತಿ ಏನು ಹೇಳುತ್ತಿದ್ದಾನೆ ಎಂಬುದನ್ನು ಸರಿಯಾಗಿ ತಿಳಿದು ನಂಬುವಂತೆ ಭಾಷಾಂತರ ಮಾಡಬೇಕು
  • ನೀವು ನಿಮ್ಮ ಸಂಪ್ರದಾಯಗಳನ್ನು ಹಿಡಿದು ನಡೆಸುವುದಕ್ಕಾಗಿ ದೇವರ ಆಜ್ಞೆಗಳನ್ನು ತಿರಸ್ಕರಿಸುವುದು ಸರಿಯೇ ! (ಮಾರ್ಕ 7:9 ULB)
  • ನೀವು ದೇವರ ಆಜ್ಞೆಗಳನ್ನು ತಿರಸ್ಕರಿಸುವುದು ಒಳ್ಳೆಯದು ಎಂದು ತಿಳಿದಿದ್ದೀರಿ ಇದರಿಂದ ನೀವು ನಿಮ್ಮ ಸಂಪ್ರದಾಯಗಳ ಆಚರಣೆ ಮುಂದುವರೆಸುತ್ತಿದ್ದೀರಿ.
  • ನೀವು ದೇವರ ಆಜ್ಞೆಗಳನ್ನು ತಿರಸ್ಕರಿಸುವುದು ಒಳ್ಳೆಯದು ಎನ್ನುವ ರೀತಿಯಲ್ಲಿ ವರ್ತಿಸುತ್ತೀರಿ.ಇದರಿಂದ ನೀವು ನಿಮ್ಮ ಸಂಪ್ರದಾಯವನ್ನು ಮುಂದುವರೆಸಬಹುದೆಂದು ತಿಳಿದಿರಬಹುದು.
  • ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನೀತಿವಂತರನ್ನು ಕರೆಯಲು ಬರಲಿಲ್ಲ ಆದರೆ ಪಾಪಿಗಳನ್ನು ಪಶ್ಚಾತ್ತಾಪಕ್ಕೆ ಕರೆಯಲು ಬಂದವನು. (ಲೂಕ5:32 ULB)
  • ಜನರು ತಮ್ಮನ್ನು ನೀತಿವಂತರೆಂದು ತಿಳಿದುಕೊಂಡಿರುವವರನ್ನು ಕರೆಯಲು ನಾನು ಬಂದಿಲ್ಲ, ಆದರೆ ಪಾಪಿಗಳು ಪಶ್ಚಾತ್ತಾಪಕ್ಕೆ ತಿರುಗಿಕೊಳ್ಳಲು ಕರೆಯಲು ಬಂದವನು.
  1. ವ್ಯಂಗ್ಯೋಕ್ತಿಯನ್ನುಇದ್ದಂತೆಯೇ, ಉದ್ದೇಶಿತ ಅರ್ಥದೊಂದಿಗೆ ಭಾಷಾಂತರಿಸಬೇಕು.
  • ನೀವು ದೇವರ ಆಜ್ಞೆಗಳನ್ನು ತಿರಸ್ಕರಿಸಿ ನಿಮ್ಮ ಸಂಪ್ರದಾಯವನ್ನು ಅನುಸರಿಸಲು ಆಲೋಚಿಸುವಿರಿ ! (ಮಾರ್ಕ 7:9 ULB)
  • ನೀವು ದೇವರ ಆಜ್ಞೆಗಳನ್ನು ತಿರಸ್ಕರಿಸುವ ಮೂಲಕ ಕೆಟ್ಟ ಸಂಗತಿಯನ್ನು ಮಾಡಿದ್ದೀರಿ. ಇದರಿಂದ ನಿಮ್ಮ ಸಂಪ್ರದಾಯವನ್ನು ಮುಂದುವರೆಸಬಹುದು ಎಂದು ತಿಳಿದಿದ್ದೀರಿ.
  • " ಯಾಕೋಬ್ಯರ ಅರಸನಾದ ಯಹೋವನು ಹೀಗೆನ್ನುತ್ತಾನೆ,"ನಿಮ್ಮ ವ್ಯಾಜ್ಯವು ಹೊರಗೆಬರಲಿ, ನಿಮ್ಮ ಬಲವಾದ ನ್ಯಾಯಗಳನ್ನು ತೋರಿಸಿರಿ, ತಮ್ಮ ನ್ಯಾಯಾಲಯಗಳನ್ನು ಮುಂದಕ್ಕೆ ತರಲಿ , ಭವಿಷ್ಯತ್ತನ್ನು ನಮಗೆ ತಿಳಿಸಲಿ, ನಡೆದ ಸಂಗತಿಗಳ ವಿಶೇಷತೆಯನ್ನು ಸೂಚಿಸಿರಿ, ನಾವು ಅವುಗಳನ್ನು ಮನಸ್ಸಿಗೆ ತಂದು ಅವುಗಳ ಪರಿಣಾಮವನ್ನು ಗ್ರಹಿಸುವೆವು ಅಥವಾ ಭವಿಷ್ಯವನ್ನು ತಿಳಿಸಿರಿ ." (ಯೆಶಾಯ 41:21-22 ULB)
  • 'ನಿಮ್ಮ ವ್ಯಾಜ್ಯವನ್ನುನನ್ನ ಮುಂದೆ ಇಡಿರಿ, ನಿಮ್ಮ ಬಲವಾದ ಸ್ನಾಯುಗಳನ್ನು ತೋರ್ಪಡಿಸಿರಿ ನಿಮ್ಮ ಮೂರ್ತಿಗಳ ಪರವಾಗಿ ವ್ಯಾಜ್ಯಮಾಡಿ ಎಂದು ಯಾಕೋಬ್ಯರ ಅರಸನಾದ ಯಹೋವನು ಹೇಳಿದನು. ನಿಮ್ಮ ವಿಗ್ರಹ, ಮೂರ್ತಿಗಳು ಅವುಗಳ ನ್ಯಾಯವನ್ನು, ವ್ಯಾಜ್ಯವನ್ನು ತರಲು ಸಾಧ್ಯವಿಲ್ಲ ಮತ್ತು ಭವಿಷ್ಯದಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿಸಲು ಆಗುವುದಿಲ್ಲ ಈ ವಿಷಯಗಳು ನಿಮಗೆ ಚೆನ್ನಾಗಿ ತಿಳಿದ ವಿಷಯ. ಅವುಗಳು ಮಾತನಾಡುವುದನ್ನು ನಾವು ಕೇಳಲು ಸಾಧ್ಯವಿಲ್ಲ ಏಕೆಂದರೆಅವು ಮಾತನಾಡಲಾರವು ಅವು ತಮ್ಮ ಹಿಂದಿನ ವಿಚಾರಗಳನ್ನು, ಭವಿಷ್ಯವನ್ನು ಕುರಿತು ಏನೂ ಹೇಳಲಾರವು ಆದುದರಿಂದ ಅವುಗಳ ಬಗ್ಗೆ ಮಾತನಾಡುವುದಾಗಲೀ, ಅವುಗಳ ವಿಚಾರಗಳು ನೆರೆವೇರುತ್ತದೆ ಎಂಬುದಾಗಿ ನಡೆಯುವುದಿಲ್ಲ.
  • ಕತ್ತಲಿನ ಸ್ವಸ್ಥಳವನ್ನು ಮೀರಿ ಬೆಳಕಿನ ನಿವಾಸಕ್ಕೆ ಹೋಗುವ ದಾರಿ ಎಲ್ಲಿ ಎಂದು ಕಂಡುಕೊಂಡು ನೀನು ಮನ್ನಡೆಸುವೆಯೋ ?

** ನೀನು ಒಂದಂದನ್ನು ಅದರದರ ಪ್ರಾಂತ್ಯಕ್ಕೆ ಕರೆದುಕೊಂಡುಹೋಗಿ ಅವುಗಳ ಮನೆಯ ಹಾದಿಗಳನ್ನು ಕಂಡುಕೊಳ್ಳಬಲ್ಲೆಯಾ ?** ನೀನು ಆಗ ಹುಟ್ಟಿದೆ ಎಂಬುದು ಖಚಿತವಾದುದು ; ನಿನ್ನ ದಿನಗಳ ಸಂಖ್ಯೆ ಬಹಳ ದೊಡ್ಡದು !" (ಯೋಬ 38:20, 21 ULB)

  • ಅವರನ್ನು ಕೆಲಸಮಾಡುವ ಸ್ಥಳಗಳಲ್ಲಿ ಇರುವ ಕತ್ತಲು ಬೆಳಕುಗಳೆರಡನ್ನು ಮೀರಿನಡೆಸಬಲ್ಲೆಯಾ? ಅವುಗಳ ಮನೆಯ ಹಾದಿಯನ್ನು ಕಂಡುಕೊಳ್ಳಬಲ್ಲೆಯಾ ? ನಿನಗೆ ಬೆಳಕು ಮತ್ತು ಕತ್ತಲೆಗಳು ಹೇಗೆ ಸೃಷ್ಟಿಯಾಯಿತು ಎಂಬುದನ್ನು ತಿಳಿದಂತೆ ನಟಿಸುತ್ತಿರುವೆ. ನೀನು ಸೃಷ್ಟಿಗಿಂತ ಮೊದಲೇ ಹುಟ್ಟಿದಂತೆ ವರ್ತಿಸುತ್ತಿರುವೆ. ಆದರೆ ಅದು ಹಾಗಲ್ಲ !