kn_ta/translate/figs-simile/01.md

15 KiB
Raw Permalink Blame History

ಉಪಮಾಲಂಕಾರ ಎಂದರೆ ಎರಡು ವಸ್ತುಗಳ, ನಡುವೆ ಇರುವ ಹೋಲಿಕೆಯನ್ನು ಕುರಿತು ಹೇಳುವುದು, ಆದರೆ ಸಾಮಾನ್ಯವಾಗಿ ಒಂದೇ ಆಗಿರುವುದಿಲ್ಲ

ಒಂದು ವಸ್ತು ಅಥವಾ ವ್ಯಕ್ತಿ ಇನ್ನೊಂದರಂತೆ ಇದೆ, ಇನ್ನೊಬ್ಬರಂತೆ ಇದ್ದಾರೆ ಎಂದು ಹೇಳಲು ಬಳಸುವಂತದ್ದು. ಎರಡು ವಸ್ತುಗಳ ನಡುವೆ, ಇಬ್ಬರು ವ್ಯಕ್ತಿಗಳ ನಡುವೆ ಹೋಲಿಕೆ ಇರುವ ಲಕ್ಷಣಗಳು/ ಅಂಶಗಳು ಇದ್ದರೆ ಅವುಗಳನ್ನು "ಅಂತೆ," "ಹಾಗೆ" ಎಂಬ ಪದಗಳನ್ನು ಬಳಸಲಾಗುವುದು.

ವಿವರಣೆ

ಉಪಮಾಲಂಕಾರ ಎಂದರೆ ಎರಡು ವಸ್ತು, ಇಬ್ಬರು ವ್ಯಕ್ತಿಗಳ ನಡುವೆ ಇರುವ ಹೋಲಿಕೆಯನ್ನು ಕುರಿತು ಹೇಳುವುದು, ಆದರೆ ಸಾಮಾನ್ಯವಾಗಿ ಒಂದೇ ಆಗಿರುವುದಿಲ್ಲ

ಇದು ಎರಡು ವಸ್ತುಗಳು ಅಥವಾ ಇಬ್ಬರು ವ್ಯಕ್ತಿಗಳು ಸಮಾನ ಗುಣಲಕ್ಷಣಗಳನ್ನು ಹೊಂದಿದ್ದರೆ ಮತ್ತು "ಅಂತೆ," "ಹಾಗೆ " ಎಂಬ ಪದಗಳನ್ನುಹೊಂದಿರುವಂತೆ ಗಮನವಹಿಸಲಾಗುತ್ತದೆ.

ಜನರ ಗುಂಪುಗಳನ್ನು ನೊಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲಾ .ಎಂದು ಅವರ ಮೇಲೆ ಕನಿಕರಪಟ್ಟನು. (ಮತ್ತಾಯ 9:36)

ಯೇಸುವು ಜನರ ಗುಂಪನ್ನು ಕುರುಬನಿಲ್ಲದ ಕುರಿಗಳಿಗೆ ಹೋಲಿಕೆ ಮಾಡಿದ್ದಾನೆ. ತಮ್ಮನ್ನು ಮುನ್ನಡೆಸುವ ಕುರುಬನಿಲ್ಲದಿದ್ದರೆ ಕುರಿಗಳು ಭಯದಿಂದ ಇರುತ್ತವೆ. ಜನರ ಗುಂಪು ಸಹ ಕುರಿಗಳಂತೆ ದಿಕ್ಕಿಲ್ಲದವರಾಗುತ್ತಾರೆ.ಏಕೆಂದರೆ ಅವರನ್ನು ಮುನ್ನಡೆಸಲು ಉತ್ತಮ ಧಾರ್ಮಿಕ ನಾಯಕರು ಇಲ್ಲದೆ ಕಂಗೆಡುತ್ತಾರೆ.

ನೋಡಿರಿ,ತೋಳಗಳ ನಡುವೆ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳಿಸಿಕೊಡುತ್ತೇನೆ.ಆದುದರಿಂದ ಸರ್ಪಗಳಂತೆ ಜಾಣರು . ಪಾರಿವಾಳಗಳಂತೆನಿಷ್ಕಪಟಿಗಳು ಆಗಿರಿ , (ಮತ್ತಾಯ10:16 ULB)

ಯೇಸು ಆತನ ಶಿಷ್ಯರನ್ನು ಕುರಿಗಳಿಗೆ, ಅವರ ಶತೃಗಳನ್ನು ತೋಳಗಳಿಗೆ ಹೋಲಿಸಿದ್ದಾನೆ. ತೋಳಗಳು ಕುರಿಗಳ ಮೇಲೆ ದಾಳಿ ಮಾಡುತ್ತವೆ. ಯೇಸುವಿನ ನಿಂದಕರು ಆತನ ಶಿಷ್ಯರನ್ನು ಎದುರಿಸುತ್ತಾರೆ.

ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು ಯಾವ ಇಬ್ಬಾಯಿ ಕತ್ತಿಗಿಂತಲೂ ಹದವಾದದ್ದು . (ಇಬ್ರಿಯ 4:12 ULB)

ದೇವರ ವಾಕ್ಯವನ್ನು ಇಬ್ಬಾಯಿ ಕತ್ತಿಗೆ ಹೋಲಿಸಿದೆ. ಇಬ್ಬಾಯಿ ಕತ್ತಿಯು ಮನುಷ್ಯನ ಮಾಂಸವನ್ನು ಭೇದಿಸಿ ತೂರಿಹೋಗುವಂತಹ ಆಯುಧ. ದೇವರ ವಾಕ್ಯವು ಅತ್ಯಂತ ಪರಿಣಾಮಕಾರಿಯಾದ ವಾಕ್ಯ, ಪ್ರತಿಯೊಬ್ಬ ವ್ಯಕ್ತಿಯ ಹೃದಯವನ್ನು ಮತ್ತು ಆಲೋಚನೆಗಳನ್ನು ಸ್ಪಷ್ಟವಾಗಿ ತಿಳಿಸುವಂತದ್ದು.

ಉಪಮಾಲಂಕಾರದ ಉದ್ದೇಶ.

  • ಉಪಮಾಲಂಕಾರದ ವಿಶೇಷತೆ ಎಂದರೆ ಅದು ಗೊತ್ತಿಲ್ಲದೆ ಇರುವ ವಿಚಾರಗಳನ್ನು ಗೊತ್ತಿರುವ ವಿಚಾರಗಳೊಂದಿಗೆ ಇರುವ ಸಮಾನ ಅಂಶಗಳನ್ನು ಗುರುತಿಸಿ ಹೇಳುವ ಮೂಲಕ ಉಪಮಾಲಂಕಾರ ತಿಳಿಸುತ್ತದೆ.
  • ಉಪಮಾಲಂಕಾರ ಒಂದು ನಿರ್ದಿಷ್ಟ ವಿಚಾರದ ಬಗ್ಗೆ ವಿಶೇಷ ಒತ್ತು ನೀಡಿ ಹೇಳುತ್ತದೆ. ಕೆಲವೊಮ್ಮೆ ಜನರ ಗಮನವನ್ನು ತನ್ನೆಡೆ ಸೆಳೆದುಕೊಳ್ಳುವ ಉದ್ದೇಶವಿದೆ.
  • ಉಪಮಾಲಂಕಾರ ಓದುಗರ ಮತ್ತು ಅವರ ಮನಸ್ಸಿನಲ್ಲಿ ಮೂಡುವ ಚಿತ್ರಗಳನ್ನು ಮತ್ತು ಅವರು ಓದುವಾಗ ಅನುಭವಕ್ಕೆ ಬರುವ ವಿಚಾರಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ.

ಏಕೆಂದರೆ ಇದೊಂದು ಭಾಷಾಂತರದ ತೊಡಕು.

  • ಓದುವವರಿಗೆ ಈ ಎರಡು ವಿಚಾರಗಳು ಸಮಾನವಾಗಿವೆ ಎಂಬುದು ತಿಳಿಯದೆ ಇರಬಹುದು.
  • ಕೆಲವೊಮ್ಮೆ ಓದುಗರಿಗೆ ಈ ಹೋಲಿಕೆಯ ವಿಚಾರಗಳು ಅಪರಿಚಿತವಾಗಿರಬಹುದು.

ಸತ್ಯವೇದದಿಂದ ಉದಾಹರಣೆಗಳು

ಕ್ರಿಸ್ತ ಯೇಸುವಿನ ಒಳ್ಳೆಸೈನಿಕನಂತೆ ನನ್ನೊಂದಿಗೆ ಶ್ರಮೆಯನ್ನು ಅನುಭವಿಸು . (2 ತಿಮೋಥಿ2:3 ULB)

ಈ ಉಪಮಾಲಂಕಾರದ ವಾಕ್ಯದಲ್ಲಿ ಪೌಲನು ಸೈನಿಕರು ಹೇಗೆ ಶ್ರಮೆಯನ್ನು ಸಹಿಸಿಕೊಳ್ಳುತ್ತಾರೋ ಹಾಗೆ ತಿಮೋಥಿಯೂ ಇರಬೇಕೆಂದು ಉದಾಹರಣೆ ಹೇಳಿ ತಿಳಿಸುತ್ತಾನೆ.

ಮನುಷ್ಯಕುಮಾರನು ಮಿಂಚು ಮಿಂಚುತ್ತಾ ಆಕಾಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಹೇಗೆ ಹೊಳೆಯುವುದೋ .ಹಾಗೆಯೇ ತನ್ನ ದಿನದಲ್ಲಿ ಕಾಣಿಸಿಕೊಳ್ಳುವನು. (ಲೂಕ17:24 ULB)

ಈ ವಾಕ್ಯದ ಮೂಲಕ ದೇವರ ಮಗನು ಮಿಂಚಿನಂತೆ ಎಂದು ನೇರವಾಗಿ ಹೇಳಿಲ್ಲ

ಆದರೆ ವಾಕ್ಯ ಹೇಳಿರುವ ಸಂದರ್ಭದಿಂದ ಮಿಂಚು ಹೇಗೆ ಇದ್ದಕ್ಕಿದ್ದಂತೆ ಆಕಾಸದಲ್ಲಿ ಮೂಡಿ ಬರುತ್ತದೋ ಹಾಗೇ ಮನುಷ್ಯಕುಮಾರನೂ ಸಹ ನಮ್ಮ ಮಧ್ಯೆ ಕಾಣಿಸಿಕೊಳ್ಳುವನು ಮತ್ತು ಆತನನ್ನು ಎಲ್ಲರೂ ನೋಡುವರು. ಯಾರಿಗೂ ಅದನ್ನು ವಿವರಿಸುವ ಅಗತ್ಯವಿಲ್ಲ.

ಭಾಷಾಂತರ ಕೌಶಲ್ಯಗಳು

ಓದುಗರು ಉಪಮಾಲಂಕಾರದ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಾದರೆ ಅದನ್ನೇ ಪರಿಗಣಿಸಿ. ಅವರು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಕೆಳಗೆ ನಮೂದಿಸಿರುವ ತಂತ್ರಗಳನ್ನು ಬಳಸಬಹುದು :

  1. ಎರಡು ವಸ್ತು ಅಥವಾ ಇಬ್ಬರು ವ್ಯಕ್ತಿಗಳು ಸಮಾನವಾಗಿದ್ದಾರೆ ಎಂದು ಓದುಗರು ಅರ್ಥಮಾಡಿಕೊಳ್ಳದಿದ್ದರೆ ಅವು ಹೇಗೆ ಸಮಾನವಾಗಿದೆ ಎಂದು ವಿವರಿಸಬೇಕು. ಮೂಲ ಓದುಗರಿಗೆ ಇದರ ಅರ್ಥ ಸ್ಪಷ್ಟವಾಗದಿದ್ದರೆ ಇದನ್ನು ಉಪಯೋಗಿಸಬಾರದು.
  2. ಓದುಗರಿಗೆ ನೀವು ಹೋಲಿಕೆಗೆ ಬಳಸಿರುವ ವಾಕ್ಯ ಸ್ಪಷ್ಟವಾಗದಿದ್ದರೆ, ಅಪರಿಚಿತವಾಗಿದ್ದರೆ ನೀವು ಭಾಷಾಂತರ ಮಾಡುತ್ತಿರುವ ಭಾಷೆಯ ಸಂಸ್ಕೃತಿಗೆ ಅನುಗುಣವಾಗಿ ಉದಾಹರಣೆ ಬಳಸಿಕೊಳ್ಳಿ. ಆದರೆ ಸತ್ಯವೇದದ ಸಂಸ್ಕೃತಿಗೆ ತಕ್ಕಂತೆ ಬಳಸಿರುವ ಉದಾಹರಣೆಗಳನ್ನು ಮೀರಿ ಬೇರೆಯ ಉದಾಹರಣೆಗಳನ್ನು, ವಾಕ್ಯಗಳನ್ನು ಬಳಸಬಾರದು.
  3. ಇಲ್ಲಿ ಇನ್ನೊಂದರೊಂದಿಗೆ ಹೋಲಿಸದೆ ಸರಳವಾಗಿ ವಿವರಿಸಿದೆ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ಓದುಗರಿಗೆ ಎರಡು ವಸ್ತುಗಳು, ಇಬ್ಬರು ವ್ಯಕ್ತಿಗಳು ಹೇಗೆ ಸಮಾನವಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಆಗದಿದ್ದರೆ ನೀವು ಅವರಿಗೆ ಅರ್ಥವಾಗುವಂತೆ ತಿಳಿಸಿ. ಮೂಲ ಓದುಗರಿಗೆ ಇದರ ಅರ್ಥ ಸ್ಪಷ್ಟವಾಗದಿದ್ದರೆ ಅವರಿಗೆ ಸಮಾನ ಗುಣವನ್ನು ತಿಳಿಸುವ ಅಗತ್ಯವಿಲ್ಲ
  • ನೋಡಿರಿ, ನಾನು ನಿಮ್ಮನ್ನು ತೋಳಗಳ ನಡುವೆ ಕುರಿಗಳನ್ನು ಕಳುಹಿಸುವಂತೆ , ನಿಮ್ಮನ್ನು ಕಳುಹಿಸುವೆನು.! (ಮತ್ತಾಯ 10:16 ULB) ಈ ವಾಕ್ಯದ ಮೂಲಕ ಕುರಿಗಳನ್ನು ತೋಳಗಳ ನಡುವೆ ಕಳುಹಿಸಿ ಅಪಾಯಕ್ಕೆ ಗುರಿಮಾಡಿದಂತೆ ತನ್ನ ಶಿಷ್ಯರನ್ನು ಶತ್ರುಗಳ ಮಧ್ಯದಲ್ಲಿ ಕಳುಹಿಸಿ ಅಪಾಯಕ್ಕೆ ಗುರಿಯಾಗುವ ಬಗ್ಗೆ ಹೋಲಿಸಿ ಹೇಳಿದ್ದಾನೆ.
  • ನೋಡಿ ನಾನು ನಿಮ್ಮನ್ನು ಕಪಟಿಗಳ, ದುಷ್ಟರ ನಡುವೆ ಕಳುಹಿಸುತ್ತೇನೆ ಇದರಿಂದ ನೀವು ಅಪಾಯಕ್ಕೆ ಗುರಿಯಾಗುವಿರಿ ಹೇಗೆಂದರೆ ತೋಳಗಳಿಂದ ಆವರಿಸಲ್ಪಟ್ಟ ಕುರಿಗಳಂತೆ ಆಗುವಿರಿ ಎಂದನು. .
  • ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು ಇಬ್ಬಾಯಿ ಕತ್ತಿಗಿಂತಲೂ ಹರಿತವಾಗಿಯೂ ಹದವಾದದ್ದು , ! (ಇಬ್ರಿಯ 4:12 ULB)
  • ದೇವರ ವಾಕ್ಯವು ಸಜೀವವಾಗಿಯೂ, ಕಾರ್ಯತತ್ಪರವಾಗಿಯೂ ಇರುವುದು ಮತ್ತು ಇಬ್ಬಾಯಿ ಕತ್ತಿಗಿಂತ ಹರಿತವಾಗಿಯೂ ಹದವಾಗಿಯೂ ಇರುವಂತದ್ದು .
  1. ಓದುಗರಿಗೆ ನೀವು ಹೋಲಿಕೆಗೆ ಬಳಸಿರುವ ವಾಕ್ಯ ಸ್ಪಷ್ಟವಾಗದಿದ್ದರೆ, ಅಪರಿಚಿತವಾಗಿದ್ದರೆ ನೀವು ಭಾಷಾಂತರ ಮಾಡುತ್ತಿರುವ ಭಾಷೆಯ ಸಂಸ್ಕೃತಿಗೆ ಅನುಗುಣವಾಗಿ ಉದಾಹರಣೆಯನ್ನು ಬಳಸಿಕೊಳ್ಳಿ. ಆದರೆ ಸತ್ಯವೇದದ ಸಂಸ್ಕೃತಿಗೆ ತಕ್ಕಂತೆ ಬಳಸಿರುವ ಉದಾಹರಣೆಗಳನ್ನು ಮೀರಿ ಬೇರೆಯ ಉದಾಹರಣೆಗಳನ್ನು, ವಾಕ್ಯಗಳನ್ನು ಬಳಸಬಾರದು.
  • ನಿಮ್ಮ ಓದುಗರಿಗೆ ತೋಳಗಳು ಕುರಿಗಳನ್ನು ಕೊಂದು ತಿನ್ನುತ್ತವೆ ಎಂದು ತಿಳಿದುಕೊಳ್ಳಲು ಅಸಮರ್ಥರಾದರೆ ಯಾವ ಪ್ರಾಣಿ ಇನ್ನೊಂದು ಪ್ರಾಣಿಯನ್ನು ಕೊಲ್ಲುತ್ತದೆಯೋ ಅದರ ಉದಾಹರಣೆ ಕೊಡಬಹುದು. ನೋಡಿರಿ, ನಾನು ನಿಮ್ಮನ್ನು ಬೇಟೆನಾಯಿಗಳ ಮಧ್ಯದಲ್ಲಿ ಕೋಳಿಮರಿಗಳನ್ನು ಕಳಿಸಿದಂತೆ ಕಳುಹಿಸುವೆನು. , ! (ಮತ್ತಾಯ 10:16 ULB)
  • ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವುದಕ್ಕೆ , ನನಗೆ ಎಷ್ಟೋಸಲ ಮನಸ್ಸಿತ್ತು, ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು!. (ಮತ್ತಾಯ 23:37 ULB)
  • ತಾಯಿ ತನ್ನ ಮಕ್ಕಳನ್ನು ಹೇಗೆ ರಕ್ಷಿಸುತ್ತಾಳೋ ಹಾಗೆ ನಾನು ನಿಮ್ಮನ್ನು ರಕ್ಷಿಸಬೇಕೆಂದು ಕಾಯುತ್ತಿದ್ದೆ ಆದರೆ ನೀವು ಅದನ್ನು ನಿರಾಕರಿಸಿದಿರಿ.
  • ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ ಸಾಸಿವೆ ಕಾಳಷ್ಟು ನಂಬಿಕೆ ನಿಮಗೆ ಇರುವುವದಾದರೆ , ! (ಮತ್ತಾಯ 17:20ULB)
  • ನಿಮಗೆ ಸಣ್ಣ ಕಾಳಿನಷ್ಟಾದರೂ ನಂಬಿಕೆ ಇದ್ದರೆ .
  1. ಯಾವುದೇ ಹೋಲಿಕೆಗಳಿಲ್ಲದೆ ಇದನ್ನು ಸರಳವಾಗಿ ವಿವರಿಸಿ.
  • ನೋಡಿರಿ ನಾನು ನಿಮ್ಮನ್ನು ತೋಳಗಳ ನಡುವೆಕುರಿಗಳನ್ನು ಕಳುಹಿಸುವಂತೆ ಕಳುಹಿಸುತ್ತೇನೆ , ! (ಮತ್ತಾಯ 10:16 ULB)
  • ನೋಡಿ ನಾನು ನಿಮ್ಮನ್ನು ನಿಮಗೆ ಕೆಟ್ಟದ್ದನ್ನು ಮಾಡುವ ಜನರ ಮಧ್ಯೆ ಕಳುಹಿಸುತ್ತೇನೆ .
  • ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವುದಕ್ಕೆ , ನನಗೆ ಎಷ್ಟೋ ಸಲ ಮನಸ್ಸಿತ್ತು, ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು!. (ಮತ್ತಾಯ 23:37 ULB)
  • ನಾನು ಎಷ್ಟು ಸಲ ನಿಮ್ಮನ್ನು ರಕ್ಷಿಸಲು , ಪ್ರಯತ್ನಿಸಿದರೂ ನೀವು ನಿರಾಕರಿಸಿದಿರಿ.