kn_ta/translate/figs-doublet/01.md

8.2 KiB
Raw Permalink Blame History

ವಿವರಣೆ

ಒಟ್ಟಿಗೆ ಬಳಸುವ ಮತ್ತು ಒಂದೇ ಅರ್ಥಕೊಡುವ ಅಥವಾ ಒಂದೇ ವಿಷಯಕ್ಕೆ ಹತ್ತಿರವಾದ ಅರ್ಥವಿರುವ ಎರಡು ಪದಗಳನ್ನು ಅಥವಾ ಪದಗುಚ್ಛಗಳನ್ನು ಸೂಚಿಸುವುದಕ್ಕಾಗಿ ದ್ವಿರುಕ್ತಿಯನ್ನು ನಾವು ಬಳಸುತ್ತೇವೆ. ಕೆಲವೊಮ್ಮೆ ಈ ಪದಗಳನ್ನು "ಮತ್ತು" ಎಂಬ ಪದದ ಸಹಿತ ಒಂದು ಪದವಾಗಿ ಬಳಸುತ್ತೇವೆ. ಇದು ದ್ವಿಪದಾಲಂಕಾರಗಳ ಹಾಗಲ್ಲ, ದ್ವಿಪದಾಲಂಕಾರದಲ್ಲಿ ಒಂದು ಪದವು ಇನ್ನೊಂದನ್ನು ಮಾರ್ಪಡಿಸುತ್ತದೆ, ದ್ವಿರುಕ್ತಿಯಲ್ಲಿ ಎರಡು ಪದಗಳು ಅಥವಾ ಪದಗುಚ್ಛಗಳು ಸಮಾನವಾಗಿರುತ್ತವೆ ಮತ್ತು ಎರಡು ಪದಗಳು ಅಥವಾ ಪದಗುಚ್ಛಗಳ ಮೂಲಕ ವ್ಯಕ್ತಪಡಿಸಿದ ವಿಚಾರವನ್ನು ಒತ್ತಿಹೇಳಲು ಅಥವಾ ತೀವ್ರಗೊಳಿಸಲು ಬಳಸಲಾಗುತ್ತದೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ಕೆಲವು ಭಾಷೆಗಳಲ್ಲಿ ಜನರು ದ್ವಿರುಕ್ತಿಗಳನ್ನು ಉಪಯೋಗಿಸುವುದಿಲ್ಲ, ಅಥವಾ ಅವರು ದ್ವಿರುಕ್ತಿಗಳನ್ನು ಕೆಲವು ಸನ್ನಿವೇಶಗಳಲ್ಲಿ ಮಾತ್ರ ಬಳಸಬಹುದು, ಆದ್ದರಿಂದ ಅವರ ಭಾಷೆಯಲ್ಲಿ ಕೆಲವೊಂದು ವಚನಗಳಲ್ಲಿ ದ್ವಿರುಕ್ತಿಯು ಅರ್ಥಹೀನವಾಗಿರುತ್ತದೆ. ಈ ವಚನವು ಒಂದೇ ವಿಚಾರವನ್ನು ಅಥವಾ ಕ್ರಿಯೆಯನ್ನು ವಿವರಿಸುತ್ತಿರುವಾಗಲೂ, ಜನರು ಇದುಎರಡು ವಿಚಾರಗಳನ್ನು ಅಥವಾ ಕ್ರಿಯೆಗಳನ್ನು ವಿವರಿಸುತ್ತಿದ್ದೆ ಎಂದು ಭಾವಿಸಬಹುದು. ಈ ಸಂಗತಿಯಲ್ಲಿ, ಭಾಷಾಂತರ ಮಾಡುವವರು ದ್ವಿರುಕ್ತಿಯು ವ್ಯಕ್ತಪಡಿಸಿರುವ ಅರ್ಥವನ್ನು ವ್ಯಕ್ತಪಡಿಸುವುದಕ್ಕೆ ಬೇರೆ ಯಾವುದಾದರೂ ಮಾರ್ಗವಿದೆಯೋ ಎಂದು ಕಂಡುಕೊಳ್ಳಬೇಕು.

ಸತ್ಯವೇದದಲ್ಲಿನ ಉದಾಹರಣೆಗಳು

ಅರಸನಾದ ದಾವೀದನು ದಿನತುಂಬಿದ ಮುದುಕನಾಗಿದ್ದನು. (1 ಅರಸುಗಳು 1:1 ULT)

ದೊಡ್ಡ ಅಕ್ಷರಗಳಲ್ಲಿ ಇರುವ ಪದಗಳು ಒಂದೇ ಅರ್ಥವನ್ನು ಹೊಂದಿವೆ. ಎರಡೂ ಪದಗಳು ಅವನು ತುಂಬಾ ವಯಸ್ಸಾದವನು ಎಂಬುದನ್ನು ಸೂಚಿಸುತ್ತದೆ.

…ಅವನು ತನಗಿಂತ ಉತ್ತಮರೂ ಮತ್ತು ನೀತಿವಂತರು ಆದ ಇಬ್ಬರನ್ನು ಕೊಂದನು (1 ಅರಸುಗಳು 2:32 ULT)

ಇದರ ಅರ್ಥ ಅವರು ಅವನಿಗಿಂತ "ಹೆಚ್ಚು ನೀತಿವಂತರಾಗಿದ್ದರು."

ನೀವು ಸುಳ್ಳು ಮತ್ತು ಮೋಸದ ಮಾತುಗಳನ್ನು ಹೇಳಲು ನಿರ್ಧರಿಸಿ ಸಿದ್ದವಾಗಿದ್ದೀರಿ (ದಾನಿಯೇಲ 2:9 ULT)

ಇದರ ಅರ್ಥವೇನಂದರೆ ಅವರು ಸುಳ್ಳು ಹೇಳುವುದಕ್ಕೆ ನಿರ್ಧರಿಸಿಕೊಂಡಿದ್ದರು, ಇದು ಅವರು ಜನರನ್ನು ಮೋಸಗೊಳಿಸಲು ಬಯಸಿದ್ದರು ಎಂದು ಹೇಳುವುದಕ್ಕಿರುವ ಮತ್ತೊಂದು ರೀತಿಯಾಗಿದೆ.

ಪೂರ್ಣಾಂಗವಾದ ಮತ್ತು ನಿಷ್ಕಳಂಕವಾದ ಕುರಿಯಾಗಿರುವ. (1 ಪೇತ್ರ 1:19 ULT)

ಆತನು ಯಾವುದೇ ಕುಂದುಕೊರತೆ ಇಲ್ಲದ ಕುರಿಯಂತೆ ಇದ್ದಾನೆ ಎಂಬುದು ಇದರ ಅರ್ಥವಾಗಿದೆ.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯಲ್ಲಿ ದ್ವಿರುಕ್ತಿಗಳನ್ನು ಬಳಸುವುದು ಸಹಜವಾಗಿದ್ದರೆ ಮತ್ತು ಅವು ಸರಿಯಾದ ಅರ್ಥಕೊಡುವುದಾದರೆ ಅದನ್ನು ಬಳಸಿರಿ. ಇಲ್ಲದಿದ್ದರೆ ಈ ಕೆಳಗೆ ಸೂಚಿಸಿರುವ ಕಾರ್ಯತಂತ್ರಗಳನ್ನು ಬಳಸಬಹುದು.

  1. ಎರಡರಲ್ಲಿ ಒಂದು ಪದವನ್ನು ಅಥವಾ ಪದಗುಚ್ಛವನ್ನು ಭಾಷಾಂತರ ಮಾಡಿರಿ.
  2. ಅರ್ಥವನ್ನು ತೀವ್ರಗೊಳಿಸಲು ದ್ವಿರುಕ್ತಿಯನ್ನು ಬಳಸಿದ್ದಲ್ಲಿ, ಎರಡರಲ್ಲಿ ಒಂದು ಪದವನ್ನು ಅಥವಾ ಪದಗುಚ್ಛವನ್ನು ಭಾಷಾಂತರ ಮಾಡಿರಿ ಮತ್ತು ಅದಕ್ಕೆ ತೀವ್ರಗೊಳಿಸುವ ಪದಗಳಾದ "ತುಂಬಾ", "ಅಧಿಕ" ಅಥವಾ "ಬಹಳ" ಎಂಬ ಪದಗಳನ್ನು ಸೇರಿಸಿರಿ.
  3. ಅರ್ಥವನ್ನು ತೀವ್ರಗೊಳಿಸಲು ಅಥವಾ ಒತ್ತಿಹೇಳಲು ದ್ವಿರುಕ್ತಿಗಳನ್ನು ಬಳಸಿದ್ದಲ್ಲಿ, ನಿಮ್ಮ ಭಾಷೆಯಲ್ಲಿ ಅದಕ್ಕನುಗುಣವಾಗಿರುವ ಉತ್ತಮ ರೀತಿಯನ್ನು ಬಳಸಿ ಭಾಷಾಂತರ ಮಾಡಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿದೆ

(1) ಎರಡರಲ್ಲಿ ಒಂದು ಪದವನ್ನು ಭಾಷಾಂತರಿಸಿರಿ.

ನೀವು ಸುಳ್ಳು ಮತ್ತು ಮೋಸದ ಮಾತುಗಳನ್ನು ಹೇಳಲು ನಿರ್ಧರಿಸಿ ಸಿದ್ದವಾಗಿದ್ದೀರಿ (ದಾನಿಯೇಲ 2:9 ULT)

"ನೀವು ಸುಳ್ಳು ವಿಚಾರಗಳನ್ನು ಹೇಳಲು ನಿರ್ಧರಿಸಿದ್ದೀರೀ."

(2) ಅರ್ಥವನ್ನು ತೀವ್ರಗೊಳಿಸಲು ದ್ವಿರುಕ್ತಿಯನ್ನು ಬಳಸಿದ್ದಲ್ಲಿ, ಎರಡರಲ್ಲಿ ಒಂದು ಪದವನ್ನು ಅಥವಾ ಪದಗುಚ್ಛವನ್ನು ಭಾಷಾಂತರ ಮಾಡಿರಿ ಮತ್ತು ಅದಕ್ಕೆ ತೀವ್ರಗೊಳಿಸುವ ಪದಗಳಾದ "ತುಂಬಾ", "ಅಧಿಕ" ಅಥವಾ "ಬಹಳ" ಎಂಬ ಪದಗಳನ್ನು ಸೇರಿಸಿರಿ.

ಅರಸನಾದ ದಾವೀದನು ದಿನತುಂಬಿದ ಮುದುಕನಾಗಿದ್ದನು. (1 ಅರಸುಗಳು 1:1 ULT)

"ಅರಸನಾದ ದಾವೀದನು ತುಂಬಾ ವಯಸ್ಸಾದವನಾಗಿದ್ದನು."

(3) ಅರ್ಥವನ್ನು ತೀವ್ರಗೊಳಿಸಲು ಅಥವಾ ಒತ್ತಿಹೇಳಲು ದ್ವಿರುಕ್ತಿಗಳನ್ನು ಬಳಸಿದ್ದಲ್ಲಿ, ನಿಮ್ಮ ಭಾಷೆಯಲ್ಲಿ ಅದಕ್ಕನುಗುಣವಾಗಿರುವ ಉತ್ತಮ ರೀತಿಯನ್ನು ಬಳಸಿ ಭಾಷಾಂತರ ಮಾಡಿರಿ.

ಪೂರ್ಣಾಂಗವಾದ ಮತ್ತು ನಿಷ್ಕಳಂಕವಾದ ಕುರಿ. (1 ಪೇತ್ರ 1:19 ULT) ಆಂಗ್ಲ ಭಾಷೆಯಲ್ಲಿ ಇವುಗಳನ್ನು ಹೆಚ್ಚು ಒತ್ತು ಕೊಟ್ಟು ಹೇಳಲು "ಯಾವುದೇ" ಮತ್ತು "ಇಲ್ಲದ" ಎಂದು ಬಳಸಿದ್ದಾರೆ.

"…ಯಾವುದೇ ಕಳಂಕವಿಲ್ಲದೆ ಕುರಿಮರಿ…"