kn_ta/translate/figs-euphemism/01.md

7.6 KiB

ವಿವರಣೆಗಳು.

ಸಾಹಿತ್ಯದಲ್ಲಿ ಕೆಲವೊಮ್ಮೆ ಅಹಿತಕರ ಘಟನೆಗಳು, ಗಲಿಬಿಲಿಗೊಳಿಸುವ ಮಾತುಗಳು ಸಂಕೋಚಕ್ಕೆ ಗುರಿಮಾಡುವ ಸಂಗತಿಗಳು, ಸಾಮಾಜಿಕವಾಗಿ ಸಮ್ಮತವಲ್ಲದ, ಎಲ್ಲರೆದುರಿಗೆ ಹೇಳಲಾರದಂಥ ಮಾತುಗಳಿದ್ದರೆ ಅವುಗಳನ್ನು ನಯವಾದ ಮಾತುಗಳಲ್ಲಿ ತಿಳಿಸುವುದನ್ನು ಸೌಮ್ಯೋಕ್ತಿಗಳೆಂದು ಕರೆಯುತ್ತೇವೆ. ಉದಾಹರನೆಗೆ ಸಾವಿನ ಬಗ್ಗೆ ಬಹಿರಂಗವಾಗಿ ಹೇಳದೆ ಅಥವಾ ಕೆಲಸಗಳ ಬಗ್ಗೆ ಹೇಳುವಾಗ ಉಪಯೋಗಿಸಬಹುದಾದ ನಯ ನುಡಿಗಳು.

ವ್ಯಾಖ್ಯಾನಗಳು.

.. ಅವರು ಸೌಲನು ಮತ್ತು ಅವನ ಮೂವರು ಗಂಡುಮಕ್ಕಳು ಗಿಲ್ಟೋವಾ ಬೆಟ್ಟದ ಮೇಲೆ ಬಿದ್ದಿರುವುದನ್ನು ಕಂಡರು. (1 ನೇ ಪೂರ್ವಕಾಲ ವೃತ್ತಾಂತ 10:8 ULB)

ಸೌಲ ಮತ್ತು ಅವನ ಗಂಡುಮಕ್ಕಳು "ಸತ್ತುಹೋಗಿದ್ದರು". ಎಂದು ಇದರ ಅರ್ಥ. ಇದೊಂದು ಸೌಮ್ಯೋಕ್ತಿ. ಏಕೆಂದರೆ ಇಲ್ಲಿ ಮುಖ್ಯ ವಿಷಯವೆಂದರೆ ಸೌಲ ಮತ್ತು ಅವನ ಮಕ್ಕಳ ಮರಣಹೊಂದಿರುವುದನ್ನು ಆದರೆ ಅಲ್ಲಿ ಅವರು ಬಿದ್ದಿದ್ದರು ಎಂದು ಹೇಳಲಾಗಿದೆ. ಕೆಲವೊಮ್ಮೆ ಜನರು ಸಾವಿನ ಬಗ್ಗೆ ನೇರವಾಗಿ ಮಾತನಾಡಲು ಹಿಂಜರಿಯುತ್ತಾರೆ. ಏಕೆಂದರೆ ಅದೊಂದು ಅಹಿತಕರವಾದ ಅನುಭವ.

ಕಾರಣ ಇದೊಂದು ಭಾಷಾಂತರ ಸಮಸ್ಯೆ

ಬೇರೆ ಬೇರೆ ಭಾಷೆಗಳಲ್ಲಿ ಬೇರೆಬೇರೆ ರೀತಿಯ ಸೌಮ್ಯೋಕ್ತಿಗಳನ್ನು ಬಳಸುತ್ತಾರೆ. ಮೂಲ ಭಾಷೆಯಲ್ಲಿರುವ ಸೌಮ್ಯೋಕ್ತಿಗಳಂತೆ ಭಾಷಾಂತರಿಸುವ ಭಾಷೆಯಲ್ಲಿ ಸೌಮ್ಯೋಕ್ತಿಗಳನ್ನು ಬಳಸಲು ಸಾಧ್ಯವಾಗದಿದ್ದರೆ ಓದುಗರಿಗೆ ಸರಿಯಾದ ಅರ್ಥ ತಿಳಿಯದೆ ಹೊಗಬಹುದು. ಬರಹಗಾರರು ಬರೆದ ಕೇವಲ ಪದಶಃ ಅರ್ಥ ತಿಳಿಯಲು ಸಾಧ್ಯವಾಗುತ್ತದೆಯೇ ಹೊರತು ಅದರ ಒಳಾರ್ಥ ತಿಳಿಯದೆ ಹೋಗಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು.

..ಅಲ್ಲಿದ್ದ ಗುಹೆಯೊಳಗೆ. ಸೌಲನು ಗುಹೆಯೊಳಗೆ ವಿಶ್ರಾಂತಿ ಪಡೆಯಲು ಹೋದನು. (1 ಸಮುವೇಲ 24:3 ULB)

ಮೂಲ ಓದುಗರು ಸೌಲನು ಆ ಗುಹೆಯೊಳಗೆ ತನ್ನ ಶೌಚಕಾರ್ಯಕ್ಕಾಗಿ ಹೋದನು ಎಂದು ಅರ್ಥಮಾಡಿಕೊಂಡಿದ್ದರು. ಆದರೆ ಇದನ್ನು ಬರೆದ ಲೇಖಕನು ಮುಂದೆ ಸೌಲನು ಗುಹೆಯೊಳಗೆ ಏಕೆ ಪ್ರವೇಶಿಸಿದ, ಅಲ್ಲಿ ಏನು ಮಾಡಿದ ಎಂಬುದನ್ನು ಹೇಳದೆ ನಯವಾಗಿ ಗುಹೆಯನ್ನು ಪ್ರವೇಶಿಸಿದ ಎಂದು ಹೇಳಿದ್ದಾನೆ ಇದನ್ನೇ ಸೌಮ್ಯೋಕ್ತಿ ಎಂದು ಹೇಳುವುದು.

ದೇವದೂತನನ್ನು ಕುರಿತು ಮರಿಯಳು, “ ಇದು ಹೇಗೆ ಸಾಧ್ಯ ನಾನು ಯಾವ ಪುರುಷನೊಂದಿಗೆ ಇದ್ದವಳಲ್ಲ ?” ಎಂದು ಹೇಳಿದಳು ಲೂಕ 1:34 ULB)

** ಇನ್ನು ನಯವಾಗಿ ಹೇಳಲು**, ಮರಿಯಳು ಸೌಮ್ಯೋಕ್ತಿಯನ್ನು ಬಳಸುತ್ತಾಳೆ.ಆಕೆ ಇದುವರೆಗೂ ಯಾವ ಪುರುಷನ ಸಂಪರ್ಕಕ್ಕೂ ಬಂದಿಲ್ಲ ಎಂದು ಹೇಳುತ್ತಾಳೆ

ಭಾಷಾಂತರ ತಂತ್ರಗಳು.

ಸೌಮ್ಯೋಕ್ತಿಗಳು ನಿಮ್ಮ ಭಾಷೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಇದ್ದರೆ ಅವುಗಳನ್ನೇ ಬಳಸಿ. ಇಲ್ಲದಿದ್ದರೆ ಇಲ್ಲಿಕೊಟ್ಟಿರುವ ಕೆಲವು ಅಂಶಗಳನ್ನು ಗಮನಿಸಿ.

  1. ನಿಮ್ಮ ಸಂಸ್ಕೃತಿಗೆ ಹೊಂದುವಂತೆ ಸೌಮ್ಯೋಕ್ತಿ ಪದ ಬಳಸಿ.
  2. ಹೇಳಬೇಕಾದ ವಿಚಾರಗಳು ಸರಳವಾಗಿಯೂ, ನಯವಾಗಿಯೂ ಇದ್ದರೆ ಅದೇ ಪದಗಳನ್ನೇ ಬಳಸಿ, ಇಂತಹ ಕಡೆ ಸೌಮ್ಯೋಕ್ತಿಗಳ ಅಗತ್ಯವಿರುವುದಿಲ್ಲ

ಭಾಷಾಂತರ ತಂತ್ರಗಳ ಅಳವಡಿಕೆಯ ಉದಾಹರಣೆಗಳು.

  1. ನಿಮ್ಮ ಸಂಸ್ಕೃತಿಗೆ ತಕ್ಕಂತೆ ಸೌಮ್ಯೋಕ್ತಿಪದ ಬಳಸಿ.
  • .. ಎಲ್ಲಿ ಗುಹೆ ಇತ್ತೋ ಅಲ್ಲಿ. ಸೌಲನು ಗುಹೆಯೊಳಗೆ ವಿಶ್ರಾಂತಿ ಪಡೆಯಲು.ಹೊದನು. (1 ಸಮುವೇಲ 24:3 ULB) ಕೆಲವು ಭಾಷೆಗಳಲ್ಲಿ ಈ ವಾಕ್ಯಕ್ಕೆ ಕೆಳಗಿನಂತೆ ಸೌಮ್ಯೋಕ್ತಿಗಳನ್ನು ಬಳಸಬಹುದು.
  • ".. ಎಲ್ಲಿ ಗುಹೆ ಇತ್ತೋ ಅಲ್ಲಿ. ಸೌಲನು ಗುಹೆಯೊಳಗೆ ಹೋಗಿ ಅಲ್ಲಿ ಒಂದು ಗುಂಡಿಯನ್ನು ತೋಡಿದನು "
  • ".. ಎಲ್ಲಿ ಗುಹೆ ಇತ್ತೋ ಅಲ್ಲಿ. ಸೌಲನು ಗುಹೆಯೊಳಗೆ ಹೋದನು ಅಲ್ಲಿ ಸ್ವಲ್ಪ ಸಮಯ ಏಕಾಂತದಲ್ಲಿ ಕಳೆಯಲುಹೋದನು"
  • ಮರಿಯಳು ದೇವದೂತನನ್ನು ಕುರಿತು” ಇದು ಹೇಗೆ ನಡೆಯಲು ಸಾಧ್ಯ ?, ನಾನು ಇದುವರೆಗೂ ಪುರುಷನ ಸಂಪರ್ಕವನ್ನು ಮಾಡಿಲ್ಲ ? (ಲೂಕ 1:34 ULB)
  • ಮರಿಯಳು ದೇವದೂತನಿಗೆ “ ಇದು ಹೇಗೆ ನಡೆಯಲು ಸಾಧ್ಯ ?, < u>ನಾನು ಯಾವ ಪುರುಷನನ್ನು ಅರಿತವಳಲ್ಲ ?” - (ಈ ಸೌಮ್ಯೋಕ್ತಿಯು ಮೂಲ ಗ್ರೀಕ್ ಪ್ರತಿಗಳಲ್ಲಿ ಬಳಸಲಾಗಿದೆ)
  1. ಹೇಳಬೇಕಾದ ವಿಚಾರಗಳು ಸರಳವಾಗಿಯೂ, ನಯವಾಗಿಯೂ ಇದ್ದರೆ ಅದೇ ಪದಗಳನ್ನೇ ಬಳಸಿ, ಇಂತಹ ಕಡೆ ಸೌಮ್ಯೋಕ್ತಿಗಳ ಅಗತ್ಯವಿರುವುದಿಲ್ಲ
  • ಅವರು ಸೌಲನು ಮತ್ತು ಅವನ ಮೂವರು ಗಂಡು ಮಕ್ಕಳು ಗಿಲ್ಟೋವಾ ಬೆಟ್ಟದ ಮೇಲೆ ಬಿದ್ದಿರುವುದನ್ನು ಕಂಡರು(1 ನೇ ಪೂರ್ವಕಾಲವೃತ್ತಾಂತ 10:8 ULB)
  • ”ಅವರು ಸೌಲನು ಮತ್ತು ಅವನ ಮೂವರು ಗಂಡುಮಕ್ಕಳು ಗಿಲ್ಟೋವಾ ಬೆಟ್ಟದ ಮೇಲೆ ಬಿದ್ದಿರುವುದನ್ನು ಕಂಡರು.