kn_ta/translate/figs-metonymy/01.md

8.8 KiB

ವಿವರಣೆ

** ಲಕ್ಷಣಾಲಂಕಾರ** ಎಂಬುದು ಅಲಂಕಾರವಾಗಿದೆ, ಇದರಲ್ಲಿ ಒಂದು ವಸ್ತು ಅಥವಾ ವಿಷಯವನ್ನು ಅದರ ಹೆಸರಿನಿಂದ ಗುರುತಿಸಿ ಹೇಳದೆ ಅದಕ್ಕೆ ಸಂಬಂಧಿಸಿದ, ಹತ್ತಿರವಾದ ಪದದಿಂದ ಗುರುತಿಸಿ ಹೇಳುವುದು. ಅದಕ್ಕೆ ಸಂಬಂಧಿಸಿದ ಯಾವುದಾದರು ಒಂದು ಪದದ ಬದಲಾಗಿ ಉಪಯೋಗಿಸುವ ಪದ ಅಥವಾ ನುಡಿಗುಚ್ಛವೆ ಲಕ್ಷಣಾಲಂಕಾರ.

ಮತ್ತು ಆತನ ಮಗನಾದ ಯೇಸು ಕ್ರಿಸ್ತನ ರಕ್ತವು ಸಕಲ ಪಾಪದಿಂದ ನಮ್ಮನ್ನು ಶುದ್ಧಿಮಾಡುತ್ತದೆ. (1 ಯೊಹಾನ 1:7 ULT)

ಇಲ್ಲಿ ರಕ್ತ ಎಂಬ ಪದವು ಯೇಸುವಿನ ಮರಣವನ್ನು ಪ್ರತಿನಿಧಿಸುತ್ತದೆ.

ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯಾಗಿದೆ ಎಂದು ಹೇಳಿದನು. (ಲೂಕ 22:20 ULT)

ಪಾತ್ರೆ ಅದರಲ್ಲಿರುವ ದ್ರಾಕ್ಷಾರಸವನ್ನು ಪ್ರತಿನಿಧಿಸುತ್ತದೆ.

ಲಕ್ಷಣಾಲಂಕಾರವನ್ನು ಕೆಳಗೆ ಕೊಟ್ಟಿರುವ ರೀತಿಯಲ್ಲಿ ಉಪಯೋಗಿಸಬಹುದು.

  • ಒಂದು ವಿಷಯವನ್ನು ಸಂಕ್ಷೇಪವಾದ ರೀತಿಯಲ್ಲಿ ಸೂಚಿಸಲು
  • ಭಾವವಾಚಕ ಕಲ್ಪನೆಯನ್ನು ಹೆಚ್ಚು ಅರ್ಥಪೂರ್ಣವಾಗಿ ಸೂಚಿಸಲು ಅದಕ್ಕೆ ಹತ್ತಿರವಿರುವ ಭೌತಿಕ ವಸ್ತುವಿನ ಹೆಸರನ್ನು ಬಳಸುವುದು.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ಸತ್ಯವೇದದಲ್ಲಿ ಲಕ್ಷಣಾಲಂಕಾರವನ್ನು ಪದೇಪದೇ ಬಳಸಲಾಗಿದೆ. ಕೆಲವು ಭಾಷೆಯ ಜನರು ಲಕ್ಷಣಾಲಂಕಾರವನ್ನು ಬಳಸುವುದಿಲ್ಲ ಮತ್ತು ಅವರು ಸತ್ಯವೇದವನ್ನು ಓದುವಾಗ ಅದರಲ್ಲಿರುವ ಲಕ್ಷಣಾಲಂಕಾರವನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ಅವರು ಲಕ್ಷಣಾಲಂಕಾರವನ್ನು ಅರ್ಥಮಾಡಿಕೊಳ್ಳದಿದ್ದರೆ ಸತ್ಯವೇದದ ವಾಕ್ಯಭಾಗವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅಸಮರ್ಥರಾಗಿ, ತಪ್ಪಾಗಿ ಅರ್ಥಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಲಕ್ಷಣಾಲಂಕಾರವನ್ನು ಉಪಯೋಗಿಸಿದಾಗಲ್ಲೆಲ್ಲಾ ಜನರು ಅದು ಏನನ್ನ ಪ್ರತಿನಿಧಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಮರ್ಥರಾಗಿರಬೇಕು.

ಸತ್ಯವೇದದಲ್ಲಿನ ಉದಾಹರಣೆಗಳು

ಕರ್ತನಾದ ದೇವರು ಆತನ ಮೂಲ ಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. (ಲೂಕ 1:32 ULT)

ಸಿಂಹಾಸನ ಎಂಬುದು ರಾಜನ ಆಧಿಕಾರವನ್ನು ಪ್ರತಿನಿಧಿಸುತ್ತದೆ. "ಸಿಂಹಾಸನ" ಎಂಬುದು "ರಾಜನ ಆಧಿಕಾರ," "ರಾಜತ್ವ" ಅಥವಾ "ಆಳ್ವಿಕೆ" ಎಂಬ ಪದಗಳಿಗಾಗಿ ಬಳಸಿದ ಲಕ್ಷಣಾಲಂಕಾರವಾಗಿದೆ. ಇದರ ಅರ್ಥ ದಾವೀದನು ರಾಜನಾಗಿದ್ದಂತೆ ಈತನನ್ನು ರಾಜನನ್ನಾಗಿ ಮಾಡುತ್ತಾನೆ ಎಂದಾಗಿದೆ.

ತಕ್ಷಣವೇ ಅವನ ಬಾಯಿ ತೆರೆಯಿತು (ಲೂಕ 1:64 ULT)

ಇಲ್ಲಿ “ಬಾಯಿ“ ಎಂಬುದು ಮಾತನಾಡುವ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಇದರ ಅರ್ಥ ಮಾತನಾಡಲು ಪುನಃ ಅವನಿಗೆ ಸಾಧ್ಯವಾಯಿತು.

.. ಮುಂದೆ ಕಾಣಬರುವ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಉಪದೇಶ ಮಾಡಿದವರು ಯಾರು? (ಲೂಕ 3:7 ULT)

ಇಲ್ಲಿ "ಕೋಪ" ಅಥವಾ "ಸಿಟ್ಟು" ಎಂಬ ಪದವು "ಶಿಕ್ಷೆ" ಎಂಬ ಪದಕ್ಕೆ ಲಕ್ಷಣಾಲಂಕಾರವಾಗಿದೆ. ದೇವರು ಜನರ ಬಗ್ಗೆ ತುಂಬಾ ಕೋಪಗೊಂಡಿದ್ದನು ಅದರ ಪರಿಣಾಮವಾಗಿ ಆತನು ಅವರನ್ನು ಶಿಕ್ಷಿಸುವನು.

ಭಾಷಾಂತರದ ಕಾರ್ಯತಂತ್ರಗಳು

ಜನರು ಲಕ್ಷಣಾಲಂಕಾರವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದಾದರೆ ಅದನ್ನೇ ಬಳಸಬಹುದು. ಇಲ್ಲದಿದ್ದರೆ, ಇಲ್ಲಿ ಕೆಲವು ಆಯ್ಕೆಗಳಿವೆ.

  1. ಲಕ್ಷಣಾಲಂಕಾರವನ್ನು ಬಳಸುವಾಗ ಅದು ಯಾವ ವಸ್ತುವನ್ನು ಪ್ರತಿನಿಧಿಸುತ್ತಿದೆಯೋ ಅದರ ಹೆಸರಿನೊಂದಿಗೆ ಬಳಸಬಹುದು.
  2. ಲಕ್ಷಣಾಲಂಕಾರವನ್ನು ಪ್ರತಿನಿಧಿಸುವ ವಸ್ತುವಿನ ಹೆಸರನ್ನು ಮಾತ್ರ ಬಳಸಬಹುದು.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

  1. ಲಕ್ಷಣಾಲಂಕಾರವನ್ನು ಬಳಸುವಾಗ ಅದು ಯಾವ ವಸ್ತುವನ್ನು ಪ್ರತಿನಿಧಿಸುತ್ತಿದೆಯೋ ಅದರ ಹೆಸರಿನೊಂದಿಗೆ ಬಳಸಬಹುದು.

ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯಾಗಿದೆ ಎಂದು ಹೇಳಿದನು. (ಲೂಕ 22:20 ULT)

"ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು ಈ ಪಾತ್ರೆಯಲ್ಲಿರುವ ದ್ರಾಕ್ಷಾರಸವು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯಾಗಿದೆ ಎಂದು ಹೇಳಿದನು."

(2) ಲಕ್ಷಣಾಲಂಕಾರವನ್ನು ಪ್ರತಿನಿಧಿಸುವ ವಸ್ತುವಿನ ಹೆಸರನ್ನು ಮಾತ್ರ ಬಳಸಬಹುದು.

ಕರ್ತನಾದ ದೇವರು ಆತನ ಮೂಲ ಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. (ಲೂಕ 1:32 ULT)

"ಕರ್ತನಾದ ದೇವರು ಆತನಿಗೆ ಅವನ ತಂದೆಯಾದ ದಾವೀದನ ರಾಜತ್ವ ಆಧಿಕಾರವನ್ನು ಕೊಡುವನು." ಅಥವಾ: "ಕರ್ತನಾದ ದೇವರು ಆತನ ಪೂರ್ವಿಕನಾದ ದಾವೀದನಂತೆ ಆತನನ್ನು ರಾಜನನ್ನಾಗಿ ಮಾಡುವನು.

ಮುಂದೆ ಕಾಣಬರುವ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಎಚ್ಚರಿಕೆ ಕೊಟ್ಟವರು ಯಾರು? (ಲೂಕ 3:7 ULT)

  • ಬರಲಿರುವ ದೇವರ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಎಚ್ಚರಿಕೆ ಕೊಟ್ಟವರು ಯಾರು?"

ಕೆಲವು ಸಾಮಾನ್ಯ ಲಕ್ಷಣಾಲಂಕಾರಗಳ ಬಗ್ಗೆ ಕಲಿಯಲು, ಇದನ್ನು ನೋಡಿರಿ Biblical Imagery-Common Metonymies.