kn_ta/translate/figs-personification/01.md

9.7 KiB
Raw Permalink Blame History

ವಿವರಣೆಗಳು

ವ್ಯಕ್ತೀಕರಣ ಎಂಬುದು ಒಂದು ಅಲಂಕಾರವಾಗಿದೆ, ಇದರಲ್ಲಿ ಒಬ್ಬನು ಯಾವುದಾದರೊಂದು ವಿಷಯದ ಬಗ್ಗೆ ಮಾತನಾಡುವಾಗ ಅದು ಪ್ರಾಣಿಗಳು ಅಥವಾ ಜನರು ಮಾಡುವಂಥ ಕಾರ್ಯಗಳನ್ನು ಮಾಡುತ್ತದೆಯೋ ಎಂಬಂತೆ ಮಾತನಾಡುತ್ತಾನೆ. ನಾವು ನೋಡಲಾಗದ ವಿಷಯಗಳ ಬಗ್ಗೆ ಮಾತನಾಡುವುದನ್ನು ಇದು ಸುಲಭಗೊಳಿಸುತ್ತದೆ ಆದ್ದರಿಂದ ಜನರು ಇದನ್ನು ಹೆಚ್ಚಾಗಿ ಬಳಸುತ್ತಾರೆ.

ಉದಾಹರಣೆಗೆ ಜ್ಞಾನ:

ಜ್ಞಾನವೆಂಬಾಕೆ ಕರೆಯುವುದಿಲ್ಲವೇ? (ಜ್ಞಾನೋಕ್ತಿಗಳು 8:1 ULT)

ಅಥವಾ ಪಾಪ:

ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಿಲಲ್ಲಿ ಹೊಂಚಿಕೊಂಡಿರುವುದು (ಆದಿಕಾಂಡ 4:7 ULT)

ಸಂಪತ್ತಿನಂತಹ ಮಾನವ ಜಾತಿಗೆ ಸೇರದ ವಿಷಯಗಳೊಂದಿಗಿರುವ ಜನರ ಸಂಬಂಧಗಳ ಬಗ್ಗೆ ಮಾತನಾಡುವಾಗ ಅವುಗಳಿಗೂ ಜನರಿಗೂ ಸಂಬಂಧವುಂಟೋ ಎಂಬಂತೆ ಮಾತನಾಡುವುದನ್ನು ಇದು ಕೆಲವೊಮ್ಮೆ ಸುಲಭವಾಗಿಸುತ್ತದೆ ಆದ್ದರಿಂದ ಜನರು ಇದನ್ನು ಮಾಡುತ್ತಾರೆ

ನೀವು ದೇವರನ್ನು ಮತ್ತು ಐಶ್ವರ್ಯವನ್ನು ಒಟ್ಟಿಗೆ ಸೇವಿಸಲಾರಿರಿ. (ಮತ್ತಾಯ 6:24 ULT)

ಪ್ರತಿಯೊಂದು ಸಂಗತಿಯಲ್ಲೂ, ಮಾನವ ಜಾತಿಗೆ ಸೇರದ ವಸ್ತುವಿನ ಒಂದು ನಿರ್ದಿಷ್ಟ ಲಕ್ಷಣವನ್ನು ಎತ್ತಿ ತೋರಿಸುವುದು ವ್ಯಕ್ತೀಕರಣದ ಉದ್ದೇಶವಾಗಿದೆ. ರೂಪಕ ಅಲಂಕಾರದಲ್ಲಿರುವಂತೆಯೇ, ವಸ್ತುವು ಒಂದು ನಿರ್ದಿಷ್ಟ ರೀತಿಯಲ್ಲಿ ವ್ಯಕ್ತಿಯಂತೆ ಇದೆ ಎಂದು ಓದುಗನು ಯೋಚಿಸಬೇಕು.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

  • ಕೆಲವು ಭಾಷೆಗಳಲ್ಲಿ ವ್ಯಕ್ತೀಕರಣ ಎಂಬ ಅಲಂಕಾರವನ್ನು ಬಳಸುವುದಿಲ್ಲ.
  • ಕೆಲವು ಭಾಷೆಗಳಲ್ಲಿ ವ್ಯಕ್ತೀಕರಣ ಎಂಬ ಅಲಂಕಾರವನ್ನು ಕೆಲವು ಸನ್ನಿವೇಶಗಳಲ್ಲಿ ಮಾತ್ರ ಬಳಸುತ್ತಾರೆ.

ಸತ್ಯವೇದದಲ್ಲಿನ ಉದಾಹರಣೆಗಳು

ನೀವು ದೇವರನ್ನು ಮತ್ತು ಐಶ್ವರ್ಯವನ್ನು ಒಟ್ಟಿಗೆ ಸೇವಿಸಲಾರಿರಿ. (ಮತ್ತಾಯ 6:24 ULT)

ಯೇಸು ಇಲ್ಲಿ ಐಶ್ವರ್ಯದ ಕುರಿತು ಜನರು ಸೇವಿಸಬೇಕಾದ ಯಜಮಾನನೋ ಎಂಬಂತೆ ಹೇಳಿದ್ದಾನೆ. ಹಣವನ್ನು ಪ್ರೀತಿಸುವವನು ಮತ್ತು ಅದಕ್ಕೆ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಳುವವನು ಅದು ತನ್ನ ಯಜಮಾನನೋ ಎಂಬಂತೆ ಸೇವಿಸುವವನಿಗೆ ಸಮಾನ.

ಜ್ಞಾನವೆಂಬಾಕೆ ಕರೆಯುವುದಿಲ್ಲವೇ? ವಿವೇಕವೆಂಬಾಕೆ ಧ್ವನಿಗೈಯ್ಯುವುದಿಲ್ಲವೇ? (ಜ್ಞಾನೋಕ್ತಿಗಳು 8:1 ULT)

ಇಲ್ಲಿ ಲೇಖಕನು ಜ್ಞಾನದ ಮತ್ತು ವಿವೇಕದ ಬಗ್ಗೆಯೂ ಹೇಳುವಾಗ ಸ್ತ್ರೀಯು ಜನರಿಗೆ ಬೋಧಿಸಲು ಅವರನ್ನು ಕರೆಯುತ್ತಿದ್ದಾಳೆಯೋ ಎಂಬಂತೆ ಹೇಳುತ್ತಿದ್ದಾನೆ. ಇದರ ಅರ್ಥ ಇವೆರಡಕ್ಕೂ ಗೂಡಾರ್ಥಗಳಿಲ್ಲ ಆದರೆ ಜನರು ಇವುಗಳ ಬಗ್ಗೆ ಗಮನಕೊಡಲೇ ಬೇಕಾದ ಅಂಶಗಳು

ಭಾಷಾಂತರದ ಕಾರ್ಯತಂತ್ರಗಳು

ವ್ಯಕ್ತೀಕರಣ ಅಲಂಕಾರ ಬಳಕೆ ಸ್ಪಷ್ಟವಾಗಿ ಅರ್ಥವಾಗುವಂತದ್ದಾದರೆ ಅದನ್ನು ಬಳಸಲು ಪರಿಗಣಿಸಬಹುದು. ಅದು ಅರ್ಥವಾಗದಿದ್ದರೆ ಭಾಷಾಂತರ ಮಾಡುವಾಗ ಅನುಸರಿಸಬೇಕಾದ ಕೆಲವಾರು ಸೂಚನೆಗಳನ್ನು ಇಲ್ಲಿ ನೀಡಲಾಗಿದೆ.

  1. ಮನುಷ್ಯ (ಅಥವಾ ಪ್ರಾಣಿಗಳ) ಗುಣಲಕ್ಷಣವನ್ನು ಸ್ಪಷ್ಟಪಡಿಸುವಂಥ ಪದಗಳನ್ನು ಅಥವಾ ನುಡಿಗಟ್ಟುಗಳನ್ನು ಸೇರಿಸಿರಿ.
  2. (1) ರ ಕಾರ್ಯತಂತ್ರಕ್ಕೆ ಹೆಚ್ಚುವರಿಯಾಗಿ "ಅದರಂತೆ" ಅಥವಾ "ಹಾಗೆ" ಎಂಬ ಪದಗಳನ್ನು ಬಳಸಿ ವಾಕ್ಯಗಳನ್ನು ವ್ಯಾಚಾರ್ಥವಾಗಿ ಅರ್ಥಮಾಡಿಕೊಳ್ಳಬಾರದು ಎಂಬುದನ್ನು ತೋರಿಸಿರಿ.
  3. ವ್ಯಕ್ತೀಕರಣ ಅಲಂಕಾರ ಇಲ್ಲದೆ ಭಾಷಾಂತರಿಸುವ ಮಾರ್ಗವನ್ನು ಕಂಡುಕೊಳ್ಳಿರಿ.

ಭಾಷಾಂತರದ ತಂತ್ರಗಳನ್ನು ಅಳವಡಿಸಿರುವ ಉದಾಹರಣೆಗಳು.

(1) ಮನುಷ್ಯ (ಅಥವಾ ಪ್ರಾಣಿಗಳ) ಗುಣಲಕ್ಷಣವನ್ನು ಸ್ಪಷ್ಟಪಡಿಸುವಂಥ ಪದಗಳನ್ನು ಅಥವಾ ನುಡಿಗಟ್ಟುಗಳನ್ನು ಸೇರಿಸಿರಿ.

ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಿಲಲ್ಲಿ ಹೊಂಚಿಕೊಂಡಿರುವುದು (ಆದಿಕಾಂಡ 4:7 ULT) - ಕಾಡುಮೃಗವು ದಾಳಿಮಾಡಲು ಹೊಂಚುಹಾಕುವಂತೆ ಪಾಪವೂ ಸಹ ನಮ್ಮನ್ನು ಆಕ್ರಮಿಸಲು ಕಾಯುತ್ತಿದೆ ಎಂಬಂತೆ ದೇವರು ಹೇಳಿದ್ದಾನೆ. ಇದರಿಂದ ಪಾಪ ಎಷ್ಟು ಅಪಾಯಕಾರಿ ಎಂದು ತಿಳಿಯುತ್ತದೆ. ಈ ವಾಕ್ಯದಲ್ಲಿ ಇನ್ನೊಂದು ನುಡಿಗಟ್ಟನ್ನು ಸೇರಿಸುವ ಮೂಲಕ ಇನ್ನೂ ಸ್ಪಷ್ಟಪಡಿಸಬಹುದು.

ಪಾಪವು ನಿಮ್ಮ ಬಾಗಿಲಿನ ಬಳಿಯಿದೆ ನಿಮ್ಮ ಮೇಲೆ ದಾಳಿ ಮಾಡಲು ಕಾಯುತ್ತಿದೆ

  1. (1) ರ ಕಾರ್ಯತಂತ್ರಕ್ಕೆ ಹೆಚ್ಚುವರಿಯಾಗಿ "ಅದರಂತೆ" ಅಥವಾ "ಹಾಗೆ" ಎಂಬ ಪದಗಳನ್ನು ಬಳಸಿ ವಾಕ್ಯಗಳನ್ನು ವ್ಯಾಚಾರ್ಥವಾಗಿ ಅರ್ಥಮಾಡಿಕೊಳ್ಳಬಾರದು ಎಂಬುದನ್ನು ತೋರಿಸಿರಿ.

...ಪಾಪವು ಬಾಗಿಲಿನ ಬಳಿ ಹೊಂಚುಹಾಕುತ್ತಿದೆ (ಆದಿಕಾಂಡ 4:7 ULT) ಇದನ್ನು "ಅಂತೆ" ಎಂಬ ಪದವನ್ನು ಸೇರಿಸಿ ಭಾಷಾಂತರಿಸಬಹುದು.

...ಪಾಪವು ಬಾಗಿಲಿನ ಬಳಿಯಲ್ಲಿ ಕಾಡುಮೃಗದಂತೆ ನಿಮ್ಮ ಮೇಲೆ ಆಕ್ರಮಣ ಮಾಡಲು ಕಾಯುತ್ತಿದೆ.

(3) ವ್ಯಕ್ತೀಕರಣ ಅಲಂಕಾರ ಇಲ್ಲದೆ ಭಾಷಾಂತರಿಸುವ ಮಾರ್ಗವನ್ನು ಕಂಡುಕೊಳ್ಳಿರಿ.

...ಗಾಳಿಯು ಸಮುದ್ರವೂ ಸಹ ಆತನು ಹೇಳಿದಂತೆ ಕೇಳುತ್ತದೆ (ಮತ್ತಾಯ 8:27 ULT) ಜನರ ಹಾಗೆಯೇ, "ಗಾಳಿ ಮತ್ತು ಸಮುದ್ರಗಳು" ಯೇಸುವಿನ ಮಾತು ಕೇಳಿ ಅದಕ್ಕೆ ವಿಧೇಯವಾಗುವ ಸಾಮರ್ಥ್ಯವುಳ್ಳಗಳಾಗಿವೆಯೋ ಎಂಬಂತೆ ಮಾತನಾಡಿದರು. ಇಲ್ಲಿ ವಿಧೇಯತೆ ಎಂಬ ಪದವನ್ನು ಬಿಟ್ಟು ಯೇಸು ಹೇಗೆ ಗಾಳಿ ಮತ್ತು ಸಮುದ್ರವನ್ನು ನಿಯಂತ್ರಿಸಿದನು ಎಂದು ಹೇಳಬಹುದು.

ಆತನು ಗಾಳಿ ಮತ್ತು ಸಮುದ್ರವನ್ನು ಸಹ ನಿಯಂತ್ರಿಸಬಲ್ಲನು.

** ಗಮನಿಸಿ**: ನಾವು ಇಲ್ಲಿ "ವ್ಯಕ್ತೀಕರಣ" ಅಲಂಕಾರದ ವ್ಯಾಖ್ಯೆಯನ್ನು ವಿಸ್ತರಿಸಿ ಅದಕ್ಕೆ “ಮೃಗಾಲಂಕಾರ ಚಿತ್ರಣವನ್ನು” (ಯಾವುದಾದರೂ ಒಂದು ವಿಷಯವನ್ನು ಪ್ರಾಣಿಯ ಲಕ್ಷಣಗಳನ್ನು ನೀಡಿ ಮಾತನಾಡುವುದು), “ಮನುಷ್ಯತ್ವಾರೋಪಣೆಯನ್ನು” (ನಿರ್ಜೀವ ವಸ್ತುಗಳಿಗೆ ಮಾನವ ಲಕ್ಷಣಗಳನ್ನು ನೀಡಿ ಮಾತನಾಡುವುದು) ಸೇರಿಸಿದ್ದೇವೆ ಏಕೆಂದರೆ ಅವುಗಳಿಗೂ ಸಹ ಇದೇ ರೀತಿಯಾದ ಭಾಷಾಂತರದ ಕಾರ್ಯತಂತ್ರಗಳಿವೆ.