kn_ta/translate/figs-rquestion/01.md

20 KiB

ಅಲಂಕಾರಿಕರ ಪ್ರಶ್ನೆಗಳನ್ನು ತೋರಿಸುವ. ವ್ಯಕ್ತಿ ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಕ್ಕಿಂತ ಹೆಚ್ಚಿನ ಆಸಕ್ತಿಯನ್ನು ತನ್ನ ಮನೋದೋರಣೆಯನ್ನು ಅಭಿವ್ಯಕ್ತಿಸುವ ಕಡೆಗೆ ವಹಿಸುತ್ತಾನೆ. ಮಾತನಾಡುವ ವ್ಯಕ್ತಿ ತನ್ನ ಆಳವಾದ ಭಾವನೆಗಳನ್ನು ವ್ಯಕ್ತಪಡಿಸಲು ಅಲಂಕಾರಿಕ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಉಪಯೋಗಿಸುತ್ತಾನೆ ಅಥವಾ ಶ್ರೋತೃಗಳನ್ನು ಆಳವಾಗಿ ಆಲೋಚಿಸಲು ಉತ್ತೇಜಿಸುತ್ತಾನೆ. ಸತ್ಯವೇದದಲ್ಲಿ ಅನೇಕ ಅಲಂಕಾರಿಕ ಪ್ರಶ್ನೆಗಳು ಇವೆ. ಆಶ್ಚರ್ಯವನ್ನು, ತಿದ್ದುಪಡಿಗೆ, ಗದರಿಸಲು ಅಥವಾ ಶ್ರೋತೃಗಳನ್ನುಖಂಡಿಸಲು, ಬೋಧಿಸಲು ಇಂತಹ ಪದಗಳನ್ನು, ಪ್ರಶ್ನೆಗಳನ್ನು ಬಳಸುತ್ತಾರೆ. ಕೆಲವು ಭಾಷೆಯ ಮಾತುಗಾರರು ಇತರ ಉದ್ದೇಶಕ್ಕಾಗಿಯೂ ಇಂತಹ ಪ್ರಶ್ನೆಗಳನ್ನು ಬಳಸುತ್ತಾರೆ.

ವಿವರಣೆ.

ಇಂತಹ ಅಲಂಕಾರಿಕ ಪ್ರಶ್ನೆಗಳನ್ನು ಮಾತನಾಡುವವರು ಕೆಲವು ವಿಷಯಗಳ ಬಗ್ಗೆ ತಮ್ಮ ಮನೋದೋರಣೆ ಯನ್ನು ಆಳವಾಗಿ ವ್ಯಕ್ತಪಡಿಸಲು ಕೇಳುತ್ತಾರೆ. ಮಾತನಾಡುವ ವ್ಯಕ್ತಿ ಮಾಹಿತಿ ಬಗ್ಗೆ ಯೋಚಿಸುವುದಿಲ್ಲ, ಕೇಳಿದರೆ ಸಾಮಾನ್ಯವಾಗಿ ಅದು ಮಾಹಿತಿಯಾಗಿ ಉಳಿಯದೆ, ಪ್ರಶ್ನೆಕೇಳಲು ದಾರಿಯಾಗುತ್ತದೆ. ಮಾಹಿತಿಯನ್ನುಪಡೆಯುವುದಕ್ಕಿಂತ ಹೆಚ್ಚಾಗಿ ಇಲ್ಲಿ ಮಾತನಾಡುತ್ತಿರುವ ವ್ಯಕ್ತಿ ತನ್ನ ಮನೋದೋರಣೆಯನ್ನು ವ್ಯಕ್ತಪಡಿಸುವುದರಲ್ಲೇ ಹೆಚ್ಚಿನ ಆಸಕ್ತಿ ಇರುವುದು ಕಂಡುಬರುತ್ತದೆ

ಅವನ ಹತ್ತಿರ ನಿಂತಿದ್ದವರು ಪೌಲನನ್ನು ಕುರಿತು"ದೇವರು ನೇಮಿಸಿದ ಮಹಾಯಾಜಕನನ್ನು ನೀನು ನಿಂದಿಸುತ್ತೀಯಾ ?" ಎಂದು ಕೇಳಿದರು (ಆ.ಕೃ. 23:4 ULB)

ಪೌಲನನ್ನು ಕುರಿತು ಪ್ರಶ್ನಿಸಿದೆ ಜನರು ಅವನು ಮಹಾಯಾಜಕನನ್ನು ನಿಂದಿಸಿದ ರೀತಿಯ ಬಗ್ಗೆ ಪ್ರಶ್ನಿಸಲಿಲ್ಲ. ಪೌಲನು ಮಹಾಯಾಜಕನನ್ನು ನಿಂದಿಸಿದ್ದಕ್ಕಾಗಿ ಆ ಜನರು ಈ ಪ್ರಶ್ನೆಗಳನ್ನು ಕೇಳಿದರು. ಸತ್ಯವೇದದಲ್ಲಿ ಅನೇಕ ಅಲಂಕಾರಿಕ ಪ್ರಶ್ನೆಗಳು ಇವೆ. ಇಂತಹ ಅಲಂಕಾರಿಕ ಪ್ರಶ್ನೆಗಳನ್ನು ಭಾವನೆಗಳ ಮನೋದೋರಣೆಯನ್ನು ವ್ಯಕ್ತಪಡಿಸಲು, ಜನರಿಗೆ ತಿಳಿದ ವಿಚಾರಗಳನ್ನು ಅಳವಡಿಸಿಕೊಳ್ಳಲು ಮತ್ತು ಮಾತನಾಡಲು ಉದ್ದೇಶಿಸಿರುವ ವಿಚಾರಗಳನ್ನು ಪರಿಚಯಿಸಲು ಬಳಸುವ ಉದ್ದೇಶ ಇವುಗಳಿಗಿದೆ.

ಕಾರಣ ಇದೊಂದು ಭಾಷಾಂತರ ತೊಡಕು.

  • ಕೆಲವು ಭಾಷೆಯಲ್ಲಿ ಇಂತಹ ಅಲಂಕಾರಿಕ ಪ್ರಶ್ನೆಗಳನ್ನು ಬಳಸುವುದಿಲ್ಲ; ಆದರೆ ಇದರಲ್ಲಿ ಯಾವಾಗಲೂ ಮಾಹಿತಿ ಪಡೆಯಲು ಬೇಡಿಕೆ ಇರುತ್ತದೆ.
  • ಕೆಲವು ಭಾಷೆಯಲ್ಲಿ ಇಂತಹ ಅಲಂಕಾರಿಕ ಪ್ರಶ್ನೆಗಳನ್ನು ಬಳಸಲಾಗುತ್ತದೆ. ಆದರೆ ಇದರ ಉದ್ದೇಶ ಅತಿ ಕಡಿಮೆ, ಸತ್ಯವೇದದಲ್ಲಿ ವಿಭಿನ್ನವಾಗಿ ಇರುತ್ತದೆ.
  • ಭಾಷೆಗಳಲ್ಲಿ ಇಂತಹ ವಿಭಿನ್ನತೆಗಳು ಇರುವುದರಿಂದ ಕೆಲವು ಓದುಗರು ಸತ್ಯವೇದದಲ್ಲಿನ ಪ್ರಶ್ನೆಗಳನ್ನು ತಪ್ಪಾಗಿ ತಿಳಿದುಕೊಳ್ಳುವ ಸಂಭವವಿರುತ್ತದೆ.

ಸತ್ಯವೇದದಲ್ಲಿನ ಉದಾಹರಣೆಗಳು

ನೀನು ಇನ್ನು ಇಸ್ರಾಯೇಲರ ಅರಸನಲ್ಲವೇ? (1 ಅರಸು 21:7 ULB)

ರಾಜನಾದ ಆಹಬನ ಹೆಂಡತಿ ಈಜೆಬೆಲಳು ರಾಜನಿಗೆ ಈಗಾಗಲೇ ತಿಳಿದಿರುವ ವಿಷಯವನ್ನು ನೆನಪು ಮಾಡಲು ಈ ಮಾತನ್ನು ಹೇಳಿದಳು, ಏಕೆಂದರೆ ಅವನು ಇನ್ನು ಇಸ್ರಾಯೇಲರ ರಾಜನಾಗಿದ್ದನು. ಅವಳ ಅಲಂಕಾರಿಕ ಪ್ರಶ್ನೆ ಅವಳ ಉದ್ದೇಶವನ್ನು ವಿಶೇಷ ಒತ್ತು ನೀಡಿ ಅವಳು ಹೇಳಬೇಕಾದ ವಿಷಯವನ್ನು ರಾಜನಾದ ಆಹಬನು ಗಣನೀಯವಾಗಿ ಪರಿಗಣಿಸುವಂತೆ ಮಾಡಿತು. ಬಡವನಾದ ನಾಬೋತನ ದ್ರಾಕ್ಷೆತೋಟವನ್ನು ಪಡೆಯಲು ಮನಸ್ಸಿಲ್ಲದ್ದರಿಂದ ಅವನನ್ನು ಖಂಡಿಸಿ ಒಪ್ಪಿಸಲು ಈ ಮಾತುಗಳನ್ನು ಹೇಳಿದಳು. ಅವನು ಇಸ್ರಾಯೇಲಿನ ರಾಜನಾದುದರಿಂದ ಅವನಿಗೆ ಆ ಆಸ್ತಿಯನ್ನು ಪಡೆಯಲು ಎಲ್ಲಾ ರೀತಿಯ ಅಧಿಕಾರವಿದೆ.ಎಂದು ತಿಳಿಸಲು ಅವಳು ಪ್ರಯತ್ನಿಸುತ್ತಿದ್ದಳು.

ಯುವತಿಯುತನ್ನ ಆಭರಣಗಳನ್ನು, ವಧುವು ತನ್ನ ಮುಸುಕನ್ನು ಮರೆಯಲು ಸಾಧ್ಯವೇ ? ಆದರೆ ನನ್ನ ಜನರು ಲೆಕ್ಕವಿಲ್ಲದಷ್ಟು ದಿನ ನನ್ನನ್ನು ಮರೆತಿದ್ದಾರೆ! (ಯೆರೇಮಿಯ 2:32 ULB)

ದೇವರು ತನ್ನ ಜನರು ಈಗಾಗಲೇ ಅದರ ಬಗ್ಗೆ ತಿಳಿದಿದ್ದರೂ ಮರೆತಿರುವ ಬಗ್ಗೆ ಹೇಳಿ ನೆನಪಿಸಲು ಈ ಪ್ರಶ್ನೆ ಕೇಳುತ್ತಿದ್ದಾನೆ. ಯುವತಿಯುತನ್ನ ಆಭರಣಗಳನ್ನು, ವಧುವು ತನ್ನ ಮುಸುಕನ್ನು ಮರೆಯಲು ಸಾಧ್ಯವೇ ? ಎಂದು. ಇವೆಲ್ಲಕ್ಕಿಂತಲೂ ಹೆಚ್ಚಾದ ತನ್ನನ್ನು ಮರೆತ ತನ್ನ ಜನರನ್ನು ಖಂಡಿಸಲು ಈ ಮಾತುಗಳನ್ನು ಹೇಳಿದ್ದಾನೆ.

ನಾನು ಗರ್ಭದಿಂದ ಹುಟ್ಟಿಹೊರಬರುವಾಗಲೇ ಏಕೆ ಸಾಯಲಿಲ್ಲ? (ಯೋಬ 3:11 ULB)

ಯೋಬನು ತನ್ನ ಆಳವಾದ ದುಃಖವನ್ನು ವ್ಯಕ್ತಪಡಿಸಲು ಈ ಮಾತುಗಳನ್ನು ಹೇಳಿದ್ದಾನೆ. ತಾನು ಹುಟ್ಟುತ್ತಿದ್ದಂತೆ ಏಕೆ ಸಾಯಲಿಲ್ಲ ಎಂದು ಈ ಅಲಂಕಾರಿಕ ಪ್ರಶ್ನೆಯ ಮೂಲಕ ಅವನು ಎಷ್ಟು ದುಃಖಿತನಾಗಿದ್ದಾನೆ ಎಂಬುದನ್ನು ಸೂಚಿಸಿದ್ದಾನೆ. ತಾನು ಬದುಕಲೇ ಬಾರದಿತ್ತು ಎಂಬುದು ಅವನ ಬಯಕೆ.

ನನ್ನ ಸ್ವಾಮಿಯ ತಾಯಿಯು ನನ್ನ ಬಳಿಗೆ ಬರುವಷ್ಟು ಭಾಗ್ಯ ನನಗೆ ಎಲ್ಲಿಂದಾಯಿತು? (ಲೂಕ 1:43 ULB)

ಯೇಸುವಿನ ತಾಯಿ ಮರಿಯಳು ತನ್ನ ಬಳಿಗೆ ಬಂದಾಗ ಎಲಿಜಿಬೇತಳು ಆಶ್ಚರ್ಯದಿಂದಲೂ ಸಂತೋಷದಿಂದ ಪ್ರಶ್ನೆಯನ್ನು ಕೇಳುತ್ತಾಳೆ.

ನಿಮ್ಮಲ್ಲಿ ಯಾರಾದರೂ ರೊಟ್ಟಿ ಕೇಳುವ ಮಗನಿಗೆ ಕಲ್ಲನ್ನು ಕೊಡುವರೇ ? (ಮತ್ತಾಯ 7:9 ULB)

ಜನರು ಈಗಾಗಲೇ ತಿಳಿದಿರುವ ವಿಷಯವನ್ನೇ ಬಳಸಿ ಯೇಸು ಅವರನ್ನು ಪ್ರಶ್ನಿಸುತ್ತಾನೆ.ಒಬ್ಬ ಒಳ್ಳೆಯ ತಂದೆ ತನ್ನ ಮಗನಿಗೆ ಒಳ್ಳೆಯದನ್ನೇ ತಿನ್ನಲು ಕೊಡುವನೇ ಹೊರತು ಕೆಟ್ಟದ್ದನ್ನಲ್ಲ. ಈ ವಾಕ್ಯವನ್ನು ಪರಿಚಯಿಸುವ ಮೂಲಕ ಯೇಸು ತನ್ನ ಜನರಿಗೆ ದೇವರು ಏನೇನು ಮಾಡಬಲ್ಲ ಎಂಬುದನ್ನು ತಿಳಿಸಲು ಬಳಸಿದ್ದಾನೆ.ಹಾಗೆಯೇ ಮುಂದೆ ಅಲಂಕಾರಿಕ ಪ್ರಶ್ನೆಗಳ ಮೂಲಕವೂ ತಿಳಿಸುತ್ತಾನೆ.

ಹಾಗಾದರೆ ಕೆಟ್ಟವರಾದ ನೀವು ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾದ ವರಗಳನ್ನು ಕೊಡುವನಲ್ಲವೇ ? (ಮತ್ತಾಯ 7:11 ULB)

ಯೇಸು ಈ ಪ್ರಶ್ನೆಯನ್ನು ಉಪಯೋಗಿಸುವ ಕಾರಣವೆಂದರೆ ತನ್ನ ಜನರು ತನ್ನ ಬೋಧನೆಗಳನ್ನು ಒತ್ತಿ ಹೇಳಲು ಹಾಗೂ ತನ್ನ ಬಳಿ ಬೇಡಿಕೇಳುವ ಜನರಿಗೆ ಒಳ್ಳೆಯದನ್ನೇ ನೀಡುವನು ಎಂದು ತಿಳಿಸಲು ಬಳಸಿದ್ದಾನೆ.

ದೇವರ ರಾಜ್ಯವು ಯಾವುದಕ್ಕೆ ಹೋಲಿಕೆಯಾಗಿದೆ ? ಅದನ್ನು ನಾನು ಯಾವುದಕ್ಕೆ ಹೋಲಿಸಲಿ ? ಅದು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ, ಒಬ್ಬ ಮನುಷ್ಯನು ಅದನ್ನು ತನ್ನ ಹೊಲದಲ್ಲಿ ಹಾಕಿದನು... (ಲೂಕ 13:18-19 ULB)

ಯೇಸು ಈ ಪ್ರಶ್ನೆಯನ್ನು ತಾನು ಹೇಳಲು ಉದ್ದೇಶಿಸಿರುವ ವಿಷಯವನ್ನು ತಿಳಿಸಲು ಪ್ರಯತ್ನಿಸಿದ್ದಾನೆ. ಆತನು ದೇವರ ರಾಜ್ಯವನ್ನು ಹೋಲಿಸಲು ಇದನ್ನು ಬಳಸಿದ್ದಾನೆ.

ಭಾಷಾಂತರ ಕೌಶಲ್ಯಗಳು

ನೀವು ಈ ಅಲಂಕಾರಿಕ ಪ್ರಶ್ನೆಗಳನ್ನು ಭಾಷಾಂತರಿಸುವ ಮೊದಲು ಈ ಪ್ರಶ್ನೆ ನಿಜವಾಗಲೂ ಅಲಂಕಾರಿಕ ಪ್ರಶ್ನೆ ಎಂಬುದನ್ನು ಖಚಿತಪಡಿಸಿಕೊಳ್ಳಿ ಏಕೆಂದರೆ ಕೆಲವೊಮ್ಮೆ ಇವು ಮಾಹಿತಿ ಕೇಳುವ ಪ್ರಶ್ನೆಗಳಾಗಿರುವ ಸಾಧ್ಯತೆ ಇರುತ್ತದೆ. ಪ್ರಶ್ನೆ ಕೇಳುವ ವ್ಯಕ್ತಿಗೆ ಈಗಾಗಲೇ ಉತ್ತರ ತಿಳಿದಿದೆಯೇ ಎಂಬುದರ ಬಗ್ಗೆ ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಬೇಕು.

ಹಾಗಾದರೆ ಇದು ಅಲಂಕಾರಿಕ ಪ್ರಶ್ನೆಯೇ ? ಇದಕ್ಕೆ ಯಾರೂ ಉತ್ತರಿಸದಿದ್ದರೆ ಯಾರು ಪ್ರಶ್ನೆ ಕೇಳಿದರೋ ಅವರಿಗೆ ಉತ್ತರ ತಿಳಿದಿದೆಯೇ ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಇದೊಂದು ಅಲಂಕಾರಿಕ ಪ್ರಶ್ನೆ. ನಿಮಗೆ ಪ್ರಶ್ನೆ ಅಲಂಕಾರಿಕ ಪ್ರಶ್ನೆ ಎಂದು ತಿಳಿದರೆ ಅದರ ಉದ್ದೇಶ ಏನು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಈ ಪ್ರಶ್ನೆಯನ್ನು ಉತ್ತೇಜಿಸಲು ಬಳಸಿದೆಯೇ ?ಅಥವಾ ಖಂಡಿಸಲು ಬಳಸಿದೆಯೇ ? ಅಥವಾ ಕೇಳಿಸಿಕೊಳ್ಳುವ ವ್ಯಕ್ತಿಯನ್ನು ಅಪಮಾನಗೊಳಿಸಲು ಬಳಸಿದೆಯೇ ? ತಿಳಿಯಬೇಕು. ಇದು ಹೊಸ ವಿಷಯವನ್ನು ತರಲು ಬಳಸಿರುವಂತದ್ದೇ ? ಅಥವಾ ಬೇರೆ ಏನಾದರೂ ಮಾಡಲು ಬಳಸಿರುವಂತದ್ದೇ ?

ಇಂತಹ ಅಲಂಕಾರಿಕ ಪ್ರಶ್ನೆಗಳ ಉದ್ದೇಶವನ್ನು ನೀವು ತಿಳಿದುಕೊಂಡಿದ್ದರೆ ಅದನ್ನು ಎಷ್ಟು ಸಾಧ್ಯವೋ ಅಷ್ಟು ಸಹಜವಾಗಿ ಭಾಷಾಂತರ ಮಾಡುವ ಭಾಷೆಯಲ್ಲಿ ವ್ಯಕ್ತಪಡಿಸಲು ಪ್ರಯತ್ನಿಸಿ. ಇದು ಒಂದು ಗಳಿಕೆಯಾಗಿರಬಹುದು, ಪ್ರಶ್ನೆಯಾಗಿರಬಹುದು ಅಥವಾ ಆಶ್ಚರ್ಯಸೂಚಕ ಭಾವನಾಮವಾಗಿರಬಹುದು. ನಿಮ್ಮ ಭಾಷೆಯಲ್ಲಿ ಇಂತಹ ಅಲಂಕಾರಿಕ ಪ್ರಶ್ನೆಗಳನ್ನು ಸಹಜವಾಗಿ ಮತ್ತು ಸರಿಯಾದ ಅರ್ಥನೀಡುವಂತೆ ಬಳಸಲು ಸಾಧ್ಯವಾದರೆ ಪರಿಗಣಿಸಬಹುದು. ಹಾಗಲ್ಲದಿದ್ದರೆ ಇಲ್ಲಿ ಕೆಲವು ಆಯ್ಕೆಗಳನ್ನು ನೀಡಿದೆ.

  1. ಪ್ರಶ್ನೆಯ ನಂತರ ಉತ್ತರವನ್ನು ಸೇರಿಸಿ.
  2. ಅಲಂಕಾರಿಕ ಪ್ರಶ್ನೆಯನ್ನು ಒಂದು ಸರಳವಾಕ್ಯವಾಗಿ ಇಲ್ಲವೇ ಭಾವಸೂಚಕ ವಾಕ್ಯವಾಗಿ ಬದಲಾಯಿಸಿ ಬಳಸಬಹುದು.
  3. ಅಲಂಕಾರಿಕ ಪ್ರಶ್ನೆಯನ್ನು ಒಂದು ಸರಳವಾಕ್ಯವಾಗಿ ಬದಲಾಯಿಸಿ ಅನಂತರ ಒಂದು ಚಿಕ್ಕ ಪ್ರಶ್ನೆಯನ್ನು ಉಪಯೋಗಿಸಬಹುದು.
  4. ಮೂಲಭಾಷೆಯಲ್ಲಿ ಹೇಗೆ ವ್ಯಕ್ತವಾಗಿದೆಯೋ ಹಾಗೆ ನಿಮ್ಮ ಭಾಷೆಯಲ್ಲಿ ತಿಳಿಸಲು ಸಾಧ್ಯವಾಗುವಂತೆ ಪ್ರಶ್ನೆಯ ರೂಪವನ್ನು ಬದಲಾಯಿಸಬಹುದು.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು.

  1. ಪ್ರಶ್ನೆಯ ನಂತರ ಉತ್ತರವನ್ನು ಸೇರಿಸಿ.
  • ಕನ್ಯೆಯಾದ ಯುವತಿಯು ತನ್ನ ಆಭರಣಗಳನ್ನು ವಧುವು ತನ್ನ ಮುಸುಕನ್ನು ಮರೆಯುವುದುಂಟೇ?ಆದರೆ ನನ್ನ ಜನರು ಲೆಕ್ಕವಿಲ್ಲದಷ್ಟು ದಿನ ನನ್ನನ್ನು ಮರೆತಿದ್ದಾರೆ ! (ಯೆರೇಮಿಯ 2:32 ULB)
  • ಕನ್ಯೆಯಾದವಳು ತನ್ನ ಆಭರಣಗಳನ್ನು ವಧುವು ತನ್ನ ಮುಸುಕನ್ನು ಮರೆಯಲು ಸಾಧ್ಯವೇ ? ಖಂಡಿತ ಇಲ್ಲ !ಆದರೆ ನನ್ನ ಜನರು ಲೆಕ್ಕವಿಲ್ಲದಷ್ಟು ದಿನಗಳವರೆಗೆ ನನ್ನನ್ನು ಮರೆತಿದ್ದಾರೆ !
  • ಹಾಗಾದರೆ ನಿಮ್ಮಲ್ಲಿ ಯಾರಾದರೂ ರೊಟ್ಟಿ ಕೇಳುವ ಮಗನಿಗೆ ಕಲ್ಲನ್ನು ಕೊಡುವನೇ ? (ಮತ್ತಾಯ7:9 ULB)
  • ಅಥವಾ ನಿಮ್ಮಲ್ಲಿ ಯಾರಾದರೂ ರೊಟ್ಟಿ ಕೇಳುವ ಮಗನಿಗೆ ಕಲ್ಲು ಕೊಡುವನೇ ? ಯಾರೂ ಹಾಗೆ ಮಾಡಲಾರಿರಿ !
  1. ಅಲಂಕಾರಿಕ ಪ್ರಶ್ನೆಗಳನ್ನು ಸರಳವಾಕ್ಯವನ್ನಾಗಿ ಇಲ್ಲವೇ ಭಾವಸೂಚಕ ವಾಕ್ಯವನ್ನಾಗಿ ಪರಿವರ್ತಿಸಿ.
  • ದೇವರ ರಾಜ್ಯವು ಯಾವುದಕ್ಕೆ ಹೋಲಿಕೆಯಾಗಿದೆ ?ನಾನು ಅದನ್ನು ಯಾವುದಕ್ಕೆ ಹೋಲಿಸಲಿ ?ಅದು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ !.. (ಲೂಕ 13:18-19 ULB)
  • ಹೌದು ದೇವರ ರಾಜ್ಯವುಅದರಂತೆ ಇದೆ !ಅದು ಸಾಸಿವೆ ಕಾಳಿನಂತಿದೆ.."

ಅವನ ಹತ್ತಿರ ನಿಂತಿದ್ದವರು ಪೌಲನನ್ನು ಕುರಿತು"ದೇವರು ನೇಮಿಸಿದ ಮಹಾಯಾಜಕನನ್ನು ನೀನು ನಿಂದಿಸುತ್ತೀಯಾ ?" ಎಂದು ಕೇಳಿದರು (ಆ.ಕೃ. 23:4 ULB)

  • ನೀವು ದೇವರು ನೇಮಿಸಿದ ಮಹಾ ಯಾಜಕನನ್ನು ನಿಂದಿಸಬಾರದು !
  • >ನಾನು ಗರ್ಭದಿಂದ ಹುಟ್ಟಿಹೊರಬರುವಾಗಲೇ ಏಕೆ ಸಾಯಲಿಲ್ಲ? (ಯೋಬ3:11 ULB)
  • ನಾನು ನನ್ನ ತಾಯಿಯ ಗರ್ಭದಿಂದ ಹುಟ್ಟಿಬರುವಾಗಲೇ ಸತ್ತಿದ್ದರೆ ಚೆನ್ನಾಗಿತ್ತು ಎಂದು ಬಯಸುತ್ತೇನೆ !
  • >ನನ್ನ ಸ್ವಾಮಿಯ ತಾಯಿಯು ನನ್ನ ಬಳಿಗೆ ಬರುವಷ್ಟು ಭಾಗ್ಯ ನನಗೆ ಎಲ್ಲಿಂದಾಯಿತು? ? (ಲೂಕ 1:43 ULB)
  • ಇದೇನಾಶ್ಚರ್ಯ ನನ್ನ ಸ್ವಾಮಿಯ ತಾಯಿ ನನ್ನ ಬಳಿಗೆ ಬಂದಿದ್ದಾಳೆ !
  1. ಅಲಂಕಾರಿಕ ಪ್ರಶ್ನೆಯನ್ನು ಒಂದು ಸರಳ ವಾಕ್ಯವಾಗಿ ಬದಲಾಯಿಸಿ ಅನಂತರ ಒಂದು ಚಿಕ್ಕ ಪ್ರಶ್ನೆಯ ಮೂಲಕ ಅನುಸರಿಸಬಹುದು
  • ನೀನು ಇನ್ನು ಇಸ್ರಾಯೇಲ್ ರಾಜ್ಯವನ್ನು ಆಳುತ್ತಿಲ್ಲವೇ ? (1 ಅರಸರ 21:7 ULB)
  • ನೀನು ಇನ್ನು ಇಸ್ರಾಯೇಲ್ ರಾಜ್ಯವನ್ನು ಆಳುತ್ತಿರುವೆ, ಹೌದೋ ಅಲ್ಲವೋ ?
  1. ಮೂಲಭಾಷೆಯಲ್ಲಿ ಹೇಗೆ ವ್ಯಕ್ತವಾಗಿದೆಯೋ ಹಾಗೆ ನಿಮ್ಮ ಭಾಷೆಯಲ್ಲಿ ತಿಳಿಸಲು ಸಾಧ್ಯವಾಗುವಂತೆ ಪ್ರಶ್ನೆಯ ರೂಪವನ್ನು ಬದಲಾಯಿಸಬಹುದು.
  • ನಿಮ್ಮಲ್ಲಿ ಯಾರಾದರೂ ರೊಟ್ಟಿ ಕೇಳುವ , ಮಗನಿಗೆ ಕಲ್ಲನ್ನು ಕೊಡುವರೇ ? (ಮತ್ತಾಯ 7:9 ULB)
  • ನಿಮ್ಮ ಮಗನು ನಿಮ್ಮಿಂದ ರೊಟ್ಟಿ ಬಯಸಿದರೆ ನೀವು ಅವನಿಗೆ ಕಲ್ಲು ಕೊಡುವಿರೇ ?
  • ಕನ್ಯೆಯಾದವಳು ತನ್ನ ಆಭರಣಗಳನ್ನು, ವಧುವು ತನ್ನ ಮುಸುಕನ್ನು ಮರೆಯುವಳೇ? ಆದರೆ ನನ್ನ ಜನರು ನನ್ನನ್ನು ಅನೇಕ ದಿನಗಳವರೆಗೆ ಮರೆತುಬಿಟ್ಟಿದ್ದಾರೆ ! (ಯೆರೇಮಿಯ 2:32 ULB)
  • ಕನ್ಯೆಯಾದವಳು ತನ್ನ ಆಭರಣಗಳನ್ನುಮರೆಯುವುದಿಲ್ಲ ಹಾಗೆಯೇ ವಧುವು ತನ್ನ ಮುಸುಕನ್ನು ಮರೆಯುವುದಿಲ್ಲ ? ಆದರೆ ನನ್ನ ಜನರು ಲೆಕ್ಕವಿಲ್ಲದಷ್ಟು ದಿನ ನನ್ನನ್ನು ಮರೆತುಬಿಟ್ಟರು.