kn_ta/translate/figs-apostrophe/01.md

7.5 KiB

ವ್ಯಾಖ್ಯಾನಗಳು

ಅಪಾಸ್ಟ್ರಫಿ (ಷಷ್ಟಿವಿಭಕ್ತಿಯು ಒಂದು ಅಲಂಕಾರವಾಗಿದೇ., ತಾನು ಹೇಳುತ್ತಿರುವ ಬಗ್ಗೆ ಗಮನ ಹರಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಓದುಗರ ಗಮನವನ್ನು ಮಾತನಾಡುವವನು ಬೇರೆಡೆ ಸೆಳೆಯುತ್ತಾನೆ.

ವಿವರಣೆ

ಅವನು ಇದನ್ನು ಮಾಡಲು ಕಾರಣವೇನೆಂದರೆ ಆತನ ಶ್ರೋತೃಗಳು ಅವನ ಸಂದೇಶಗಳನ್ನು ಅಥವಾ ಭಾವನೆಗಳನ್ನು ತಿಳಿಸುವುದರೊಂದಿಗೆ ಹೇಳುತ್ತಿರುವ ವ್ಯಕ್ತಿಯ ಬಗ್ಗೆ ಅಥವಾ ವಸ್ತುವಿನ ಬಗ್ಗೆ ಹೆಚ್ಚು ಪರಿಣಾಮಕಾರಿಯಾಗಿ ಹೇಳಲು ಪ್ರಯತ್ನಿಸುತ್ತಾನೆ.

ಇದಕ್ಕೆ ಭಾಷಾಂತರ ಸಮಸಯೇ ಕಾರಣ.

ಅನೇಕ ಭಾಷೆಯಲ್ಲಿ ಈ (ಅಪೋಸ್ಟಫಿ) ಷಷ್ಟಿ ವಿಭಕ್ತಿ ಪ್ರತ್ಯಯವನ್ನು ಪ್ರಯೋಗಿಸುವುದಿಲ್ಲ.ಇದರಿಂದ ಓದುಗರು ಗೊಂದಲಕ್ಕೀಡಾಗಬಹುದು. ಓದುಗರು ತಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ಯಾರು? ಇಂಥಹ ವಿಷಯಗಳನ್ನು ಮಾತನಾಡುವುದರಿಂದ ಆಗುವ ಉಪಯೋಗವೇನು ? ಅಥವಾ ತಮ್ಮ ಮಾತುಗಳನ್ನು ಕೇಳಿಸಿಕೊಂಡಿದ್ದಾರೆಯೇ? ಎಂಬುದರ ಬಗ್ಗೆ ವಿಸ್ಮಯದಿಂದ ಆಲೋಚಿಸಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು.

ಗಿಲ್ಬೋವಾ ಬೆಟ್ಟಗಳೇ, ನಿಮ್ಮ ಮೇಲೆ ಮಳೆಯಾಗಲಿ ಮಂಜಾಗಲಿ ಬೀಳದಿರಲಿ (2 ಸಮುವೇಲ 1:21 ULB)

ರಾಜನಾದ ಸೌಲನು ಗಿಲ್ಬೋವಾ ಬೆಟ್ಟದ ಮೇಲೆ ಕೊಲ್ಲಲ್ಪಟ್ಟಾಗ ದಾವೀದನು ಒಂದು ಶೋಕಗೀತೆಯನ್ನು ಹಾಡಿದನು. ಈ ರೀತಿ ಆ ಬೆಟ್ಟಗುಡ್ಡಗಳನ್ನು ಕುರಿತು ಅವುಗಳ ಮೇಲೆ ಮಂಜು ಅಥವಾ ಮಳೆ ಬೀಳಬಾರದೆಂದು ಬಯಸುವುದರ ಮೂಲಕ ಅವನಿಗೆ ಎಷ್ಟು ದುಃಖವಾಗಿದೆ ಎಂಬುದನ್ನು ವ್ಯಕ್ತಪಡಿಸಿದ್ದಾನೆ.

ಯೆರುಸೇಲಮೇ, ಯೆರುಸೇಲಮೇ ನಿನ್ನ ಬಳಿಗೆ ಕಳಿಸಿಕೊಟ್ಟ ಪ್ರವಾದಿಗಳನ್ನು ಕಲ್ಲೆಸದು ಕೊಲ್ಲುವವರು ಯಾರು. (ಲೂಕ 13:34 ULB)

ಯೇಸು ತನ್ನ ಅನಿಸಿಕೆಗಳನ್ನು, ಭಾವನೆಗಳನ್ನು ಯೆರುಸಲೇಮಿನ ಜನರ ಮುಂದೆ, ಶಿಷ್ಯರ ಮತ್ತು ಪರಿಸಾಯರ ಮುಂದೆ ವ್ಯಕ್ತಪಡಿಸುತ್ತಾ, ಅವರ ಬಗ್ಗೆ ತಾನು ಎಷ್ಟು ಕಾಳಜಿವಹಿಸುತ್ತೇನೆ ಎಂಬುದನ್ನು ತಿಳಿಸುತ್ತಿದ್ದ. ಯೇಸು ಇಲ್ಲಿ ಯೆರೂಸಲೇಮನ್ನು ಉದ್ದೇಶಿಸಿ ಮಾತನಾಡುತ್ತಾನೆ. ಯೆರುಸಲೆಮಿನ ಜನರು ಆತನ ಮಾತನ್ನು ಕೇಳುತ್ತಿದ್ದಾರೆ ಎಂದು ಅವರ ಬಗ್ಗೆ ತಾನು ಎಷ್ಟು ಕಾಳಜಿವಹಿಸುತ್ತೇನೆ ಎಂಬುದನ್ನು ತಿಳಿಸುತ್ತಾನೆ.

ಆ ಮನುಷ್ಯನು ಯೆಹೋವನ ಅಪ್ಪಣೆಯ ಮೇರೆಗೆ ಯಜ್ಞವೇದಿಯನ್ನು ಕುರಿತು "ವೇದಿಯೇ , ವೇದಿಯೇ ! ಎಂದು ಕೂಗಿದನು. ಇದನ್ನೇ ಯೆಹೋವನು ಹೇಳಿದ್ದು, ಮನುಷ್ಯರ ಎಲುಬುಗಳು ನಿನ್ನ ಮೇಲೆ ಸುಡಲ್ಪಡುವವು (1 ಅರಸುಗಳು 13:2 ULB)

ಯೆಹೋವ ದೇವರು ಈ ಮಾತುಗಳನ್ನು ಆ ಯಜ್ಞವೇದಿಯನ್ನು ಕುರಿತು ಮಾತನಾಡಿದರೂ, ನಿಜವಾಗಲೂ ಆತನು ಅಲ್ಲಿ ನಿಂತಿದ್ದ ರಾಜನು ಅವನ ಮಾತುಗಳನ್ನು ಕೇಳಲಿ ಎಂದು ಹೇಳಿದ ಮಾತುಗಳು.

ಅನುವಾದ /ಭಾಷಾಂತರ ತತ್ವಗಳು.

ಅಪೋಸ್ಟಫಿ /ಷಷ್ಠಿ ವಿಭಕ್ತಿ ಪ್ರತ್ಯಯ ನಿಮ್ಮ ಭಾಷೆಯಲ್ಲಿ ಸಹಜವಾದ, ಸರಿಯಾದ ಅರ್ಥಕೊಡುವುದಾದರೆ ಅವುಗಳನ್ನು ಬಳಸುವುದರಲ್ಲಿ ಅಡ್ಡಿ ಇಲ್ಲ. ಇದು ಆಗದಿದ್ದರೆ ಇನ್ನೊಂದು ಅವಕಾಶ ಇಲ್ಲಿದೆ.

  1. ಈ ರೀತಿ ಮಾತನಾಡುವುದು ನಿಮ್ಮ ಜನರಿಗೆ ಗೊಂದಲ ಉಂಟುಮಾಡುವುದಾದರೆ ಈ ರೀತಿ ಮಾತನಾಡುವವರು ಇದನ್ನು ಮುಂದುವರೆಸಲಿ. ಮಾತನಾಡುವವರು ತನ್ನ ಜನರನ್ನು ಕುರಿತು ತನ್ನ ಸಂದೇಶವನ್ನು ಅಥವಾ ಜನರ ಬಗ್ಗೆ ತನಗಿರುವ ಅಭಿಪ್ರಾಯಗಳನ್ನು ಅಥವಾ ತನ್ನ ಮಾತನ್ನು ಕೇಳಿಸಿಕೊಳ್ಳಲು ಆಗದೆ ಇರುವ ವಸ್ತುಗಳಿಗೂ ತಿಳಿಸುತ್ತಾನೆ.

ಅನುವಾದ /ಭಾಷಾಂತರ ತಂತ್ರಗಳನ್ನು ಅಳವಡಿಸುವ ಉದಾಹರಣೆಗಳು.

  1. ಈ ರೀತಿ ಮಾತನಾಡುವುದು ನಿಮ್ಮ ಜನರಿಗೆ ಗೊಂದಲ ಉಂಟಾಗುವುದಾದರೆ ಮಾತನಾಡುವವನು ಜನರನ್ನು ಉದ್ದೇಶಿಸಿ ಮಾತನಾಡುವುದನ್ನು ಮುಂದುವರೆಸಲಿ, ಆತನ ಮಾತನ್ನು ಆಲಿಸುವವರನ್ನು ಆತನ ಸಂದೇಶ / ಅಭಿಪ್ರಾಯಗಳನ್ನು ಕೇಳಿಸಿಕೊಳ್ಳಲು ಆಗದೇ ಇರುವ ವಸ್ತುಗಳಿಗೂ ತಿಳಿಸುವನು.
  • ಯೆಹೋವನ ಆಜ್ಞೆಯಂತೆ ಯಜ್ಞವೇದಿಯ ವಿರುದ್ಧವಾಗಿ : "ವೇದಿಯೇ, ವೇದಿಯೇ r! ಇದನ್ನೇ ಯೆಹೋವನು ಹೇಳಿದ್ದು.. ನಿನ್ನ ಮೇಲೆ ಮಾನವರ ಎಲುಬುಗಳನ್ನು ಸುಡುವರು " (1 ಅರಸು 13:2 ULB)
  • ಆತನು ಯಜ್ಞವೇದಿಯನ್ನು ಕುರಿತು ಈ ಮಾತನ್ನು ಹೇಳಿದನು. "ಇದನ್ನೇ ಯೆಹೋವನು ಯಜ್ಞವೇದಿಯನ್ನು ಕುರಿತು ಹೇಳಿದ್ದು.ಮನುಷ್ಯರ ಎಲುಬುಗಳನ್ನು ಯಜ್ಞವೇದಿಯ ಮೇಲೆ ಸುಡುವರು ."
  • ಗಿಲ್ಬೋವ ಬೆಟ್ಟಗಳ ಮೇಲೆ , ಮಳೆಯಾಗಲೀ ಮಂಜಾಗಲೀ ಬೀಳದಿರಲಿ (2 ನೇ ಸಮುವೇಲ 1:21 ULB)
  • ಗಿಲ್ಬೋವ ಬೆಟ್ಟಗುಡ್ಡಗಳ ಮೇಲೆ , ಮಳೆಯಾಗಲೀ ಮಂಜಾಗಲೀ ಬೀಳದಿರಲಿ