kn_tw/bible/other/sacrifice.md

10 KiB
Raw Permalink Blame History

ಯಜ್ಞ, ಯಜ್ಞ ಅರ್ಪಣೆಗಳು, ಕಾಣಿಕೆ

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ಅರ್ಪಿಸು” ಮತ್ತು “ಕಾಣಿಕೆ” ಎನ್ನುವ ಪದಗಳು ದೇವರನ್ನು ಆರಾಧಿಸುವ ಕಾರ್ಯವನ್ನಾಗಿ ಆತನಿಗೆ ಕೊಡುವ ವಿಶೇಷವಾದ ಬಹುಮಾನಗಳನ್ನು ಕೊಡುವುದನ್ನು ಸೂಚಿಸುತ್ತದೆ. ಜನರು ಸುಳ್ಳು ದೇವರುಗಳಿಗೂ ಸಹ ಅರ್ಪಣೆಗಳನ್ನು ಕೊಡುತ್ತಾರೆ.

ಯಜ್ಞ

  • ದೇವರಿಗೆ ಕೊಡುವ ಅರ್ಪಣೆಗಳಲ್ಲಿ ಅನೇಕಬಾರಿ ಪ್ರಾಣಿಯನ್ನು ಸಾಯಿಸುವುದೂ ಒಳಗೊಂಡಿರುತ್ತದೆ.
  • ದೇವರ ಪರಿಪೂರ್ಣನಾದ ಪಾಪರಹಿತನಾಗಿರುವ ಆತನ ಮಗನಾಗಿರುವ ಯೇಸುವಿನ ಯಜ್ಞವು ಮಾತ್ರವೇ ಪಾಪಗಳಿಂದ ಮನುಷ್ಯರನ್ನು ಸಂಪೂರ್ಣವಾಗಿ ತೊಳೆಯುತ್ತದೆ, ಪ್ರಾಣಿಗಳ ಯಜ್ಞಗಳು ಪಾಪಗಳನ್ನು ತೊಳೆಯುವುದಕ್ಕೆ ಸಾಧ್ಯವಿಲ್ಲ.

ಕಾಣಿಕೆ

  • “ಕಾಣಿಕೆ” ಎನ್ನುವ ಪದವನ್ನು ಸಾಧಾರಣವಾಗಿ ಕೊಡಲ್ಪಟ್ಟಿರುವ ಅಥವಾ ಅರ್ಪಿಸಲ್ಪಟ್ಟಿರುವ ಯಾವುದಾದರೊಂದನ್ನು ಸೂಚಿಸುತ್ತದೆ.

“ಯಜ್ಞ” ಎನ್ನುವ ಪದವು ಎಲ್ಲವನ್ನು ಒದಗಿಸಿಕೊಡುವವನಿಗೆ ಬೆಲೆಯುಳ್ಳದ್ದನ್ನು ಮಾಡಿದ ಅಥವಾ ಕೊಡಲ್ಪಟ್ಟ ಯಾವುದಾದರೊಂದನ್ನು ಸೂಚಿಸುತ್ತದೆ.

  • ದೇವರಿಗೆ ಕೊಡಲ್ಪಟ್ಟಿರುವ ಅರ್ಪಣೆಗಳು ವಿಶೇಷವಾದವುಗಳು, ಅವು ದೇವರಿಗೆ ವಿಧೇಯತೆ ಮತ್ತು ಭಕ್ತಿ ಭಾವನೆಯನ್ನು ವ್ಯಕ್ತಪಡಿಸುವ ಕ್ರಮದಲ್ಲಿ ಕೊಡುವುದಕ್ಕೆ ಆತನು ಇಸ್ರಾಯೇಲ್ಯರಿಗೆ ಆಜ್ಞಾಪಿಸಿರುತ್ತಾನೆ.
  • ವಿವಿಧವಾದ ಅರ್ಪಣೆಗಳ ಹೆಸರುಗಳಿವೆ, “ದಹನ ಬಲಿಯರ್ಪಣೆ” ಮತ್ತು ಸಮಾಧಾನ ಅರ್ಪಣೆ” ಎನ್ನುವವುಗಳು ಉದಾಹರಣೆಗೆ ಹೇಳಬಹುದು, ಇವು ಯಾವ ವಿಧವಾದ ಅರ್ಪಣೆಯನ್ನು ಕೊಡುತ್ತಿದ್ದರೆನ್ನುವುದನ್ನು ಸೂಚಿಸುತ್ತವೆ.

ಅನುವಾದ ಸಲಹೆಗಳು:

  • “ಕಾಣಿಕೆ” ಎನ್ನುವ ಪದವನ್ನು “ದೇವರಿಗೆ ಉಡುಗೊರೆ” ಅಥವಾ “ದೇವರಿಗೆ ಏನಾದರೂ ಕೊಡುವುದು” ಅಥವಾ “ದೇವರಿಗೆ ಕೊಡಲ್ಪಟ್ಟ ಬೆಲೆಯುಳ್ಳ ವಸ್ತುವು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ, “ಯಜ್ಞ” ಎನ್ನುವ ಪದವನ್ನು “ಆರಾಧನೆಯಲ್ಲಿ ಕೊಡಲ್ಪಟ್ಟ ಬೆಲೆಯುಳ್ಳದ್ದು” ಅಥವಾ “ದೇವರಿ ಅರ್ಪಿಸಲ್ಪಟ್ಟ ಬಲಿಮಾಡಿದ ವಿಶೇಷವಾದ ಪ್ರಾಣಿ” ಎಂದೂ ಅನುವಾದ ಮಾಡಬಹುದು.
  • “ಯಜ್ಞ” ಎನ್ನುವ ಪದಕ್ಕೆ ಕ್ರಿಯೆಯನ್ನು “ಬೆಲೆಯುಳ್ಳದ್ದನ್ನು ಬಿಟ್ಟುಕೊಡು” ಅಥವಾ “ಪ್ರಾಣಿಯನ್ನು ಕೊಂದು, ದೇವರಿಗೆ ಅರ್ಪಿಸು” ಎಂದೂ ಅನುವಾದ ಮಾಡಬಹುದು.
  • “ಸಜೀವ ಯಜ್ಞವಾಗಿ ನಿನ್ನನ್ನು ನೀನು ಸಮರ್ಪಿಸಿಕೋ” ಎನ್ನುವ ಮಾತನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ನೀನು ನಿನ್ನ ಜೀವನವನ್ನು ಜೀವಿಸುತ್ತಿರುವಾಗ, ಯಜ್ಞವೇದಿ ಮೇಲೆ ಪ್ರಾಣಿಯನ್ನು ದಹಿಸುವ ರೀತಿಯಲ್ಲಿ ಸಂಪೂರ್ಣವಾಗಿ ನಿನ್ನನ್ನು ನೀನು ದೇವರಿಗೆ ಸಮರ್ಪಿಸಿಕೊ” ಎನ್ನುವ ಮಾತು ಒಳಗೊಂಡಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಯಜ್ಞವೇದಿ, ಪಾನೀಯ ಅರ್ಪಣೆ, ಸುಳ್ಳು ದೇವರು, ಸಹವಾಸ ಅರ್ಪಣೆ, ಇಷ್ಟಾಪೂರ್ವಕವಾದ ಅರ್ಪಣೆ, ಸಮಾಧಾನ ಅರ್ಪಣೆ, ಯಾಜಕ, ಯಜ್ಞವೇದಿ, ಪಾಪದ ಅರ್ಪಣೆ, ಆರಾಧನೆ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದ ಕತೆಗಳಿಂದ ಉದಾಹರಣೆಗಳು:

  • 03:14 ನೋಹನು ಹಡಗಿನಿಂದ ಇಳಿದು ಬಂದನಂತರ, ಆತನು ಒಂದು ಯಜ್ಞವೇದಿಯನ್ನು ಕಟ್ಟಿದನು ಮತ್ತು __ ಯಜ್ಞಕ್ಕೆ __ ಉಪಯೋಗಿಸಲ್ಪಡುವ ಪ್ರಾಣಿಗಳಲ್ಲಿ ಪ್ರತಿಯೊಂದನ್ನು __ ಅರ್ಪಿಸಿಸಿದನು __. ದೇವರು ಆ __ ಯಜ್ಞದೊಂದಿಗೆ __ ತುಂಬಾ ಸಂತೋಷದಿಂದ ಇದ್ದಿದ್ದರು, ನೋಹನನ್ನು ಮತ್ತು ಆತನ ಕುಟುಂಬವನ್ನು ಆಶೀರ್ವಾದ ಮಾಡಿದನು.
  • 05:06 “ನಿನ್ನ ಒಬ್ಬನೇ ಮಗನಾಗಿರುವ ಇಸಾಕನನ್ನು ಕರೆದುಕೊಂಡು ಹೋಗಿ, ನನಗೆ __ ಹೋಮವನ್ನಾಗಿ __ ಅವನನ್ನು ಅರ್ಪಿಸು.” ಮತ್ತೊಮ್ಮೆ ಅಬ್ರಾಹಾಮನು ದೇವರಿಗೆ ವಿಧೇಯನಾದನು ಮತ್ತು ತನ್ನ ಮಗನನ್ನು __ ಹೋಮಕ್ಕೆ __ ಸಿದ್ಧಗೊಳಿಸಿದನು.
  • 05:09 ಇಸಾಕನಿಗೆ ಬದಲಾಗಿ __ ಹೋಮವನ್ನು __ ಮಾಡಲು ದೇವರು ಕುರಿಯನ್ನು ಅನುಗ್ರಹಿಸಿದರು.
  • 13:09 ದೇವರ ಧರ್ಮಶಾಸ್ತ್ರಕ್ಕೆ ವಿಧೇಯರಾಗುವ ಪ್ರತಿಯೊಬ್ಬರು ದೇವರಿಗೆ __ ಹೋಮವನ್ನು __ ಮಾಡುವುದಕ್ಕೆ ಗುಡಾರದ ಬಳಿಗೆ ಒಂದು ಪ್ರಾಣಿಯನ್ನು ತೆಗೆದುಕೊಂಡು ಬರಬೇಕು. ಅಲ್ಲಿರುವ ಯಾಜಕರು ಆ ಪ್ರಾಣಿಯನ್ನು ಕೊಂದು, ಯಜ್ಞದ ಮೇಲೆ ಇಟ್ಟು ದಹಿಸುವರು. ಆ ಪ್ರಾಣಿಯ ರಕ್ತವು ವ್ಯಕ್ತಿಯ ಪಾಪವನ್ನು ಮುಚ್ಚುವುದು ಮತ್ತು ಆ ವ್ಯಕ್ತಿಯ ಪಾಪಕ್ಕಾಗಿ __ ಹೋಮ __ ಮಾಡಲ್ಪಟ್ಟಿರುವುದು ಮತ್ತು ಆ ವ್ಯಕ್ತಿಯನ್ನು ದೇವರ ದೃಷ್ಟಿಯಲ್ಲಿ ಶುದ್ಧನಾಗುವಂತೆ ಮಾಡುತ್ತದೆ.
  • 17:06 ಇಸ್ರಾಯೇಲ್ಯರು ದೇವರನ್ನು ಆರಾಧಿಸಿ, ಆತನಿಗೆ __ ಹೋಮಗಳನ್ನು __ ಅರ್ಪಿಸುವ ಸ್ಥಳದಲ್ಲಿ ಒಂದು ದೇವಾಲಯವನ್ನು ನಿರ್ಮಿಸಬೇಕೆಂದು ದಾವೀದನು ಬಯಸಿದ್ದನು.
  • 48:06 ಯೇಸು ಮಹೋನ್ನತ ಯಾಜಕನಾಗಿದ್ದನು. ಇತರ ಯಾಜಕರಂತಲ್ಲದೆ, ಲೋಕದಲ್ಲಿರುವ ಎಲ್ಲಾ ಜನರ ಪಾಪಗಳನ್ನು ತೆಗೆದುಹಾಕುವುದಕ್ಕೆ ಆತನು ತನ್ನನ್ನು ತಾನೇ __ ಹೋಮವನ್ನಾಗಿ __ ಅರ್ಪಿಸಿಕೊಂಡನು.
  • 48:08 ಆದರೆ ನಮ್ಮ ಸ್ಥಾನದಲ್ಲಿ ಮರಣಿಸುವುದಕ್ಕೆ __ ಹೋಮವನ್ನಾಗಿ __, ದೇವರು ಯೇಸುವನ್ನು ದೇವರ ಕುರಿಮರಿಯನ್ನಾಗಿ ಅನುಗ್ರಹಿಸಿದನು.
  • 49:11 ಯಾಕಂದರೆ ಯೇಸು ತನ್ನನ್ನು ತಾನು __ ಅರ್ಪಿಸಿಕೊಂಡನು __, ದೇವರು ಎಂಥಹ ಪಾಪವನ್ನಾದರೂ ಕ್ಷಮಿಸುವನು ಮತ್ತು ಅನೇಕ ಭಯಂಕರ ಪಾಪಗಳನ್ನೂ ಕ್ಷಮಿಸುವನು.

ಪದ ಡೇಟಾ:

  • Strongs: H801, H817, H819, H1685, H1890, H1974, H2076, H2077, H2281, H2282, H2398, H2401, H2402, H2403, H2409, H3632, H4394, H4503, H4504, H5066, H5068, H5071, H5257, H5258, H5261, H5262, H5927, H5928, H5930, H6453, H6944, H6999, H7133, H7311, H8002, H8426, H8548, H8573, H8641, G266, G334, G1049, G1435, G1494, G2378, G2380, G3646, G4376, G5485