3.1 KiB
3.1 KiB
ಮನಃಪೂರ್ವಕವಾಗಿ ಕೊಡುವ ಕಾಣಿಕೆ
ಪದದ ಅರ್ಥವಿವರಣೆ
ಮನಃಪೂರ್ವಕವಾಗಿ ಕೊಡುವ ಕಾಣಿಕೆ ಅಂದರೆ ಯೆಹೋವನಿಗೆ ಕೊಡುವ ಒಂದು ರೀತಿಯದ ಕಾಣಿಕೆಯಾಗಿತ್ತು ಅದು ಮೋಶೆಯ ಧರ್ಮಶಾಸ್ತ್ರದಲ್ಲಿ ಅವಶ್ಯಕತೆಯಿದ್ದಲ್ಲ. ಅದು ಒಬ್ಬ ವ್ಯಕ್ತಿಯ ವೈಯಕ್ತಿಕ ಇಚ್ಛೆಯಿಂದ ಕೊಡುವ ಅರ್ಪಣೆಯಾಗಿತ್ತು.
- ಮನಃಪೂರ್ವಕವಾಗಿ ಕೊಡುವ ಕಾಣಿಕೆಯಲ್ಲಿ ಒಂದು ಪ್ರಾಣಿಯನ್ನು ಕೊಡಬೇಕೆಂದು ಬಯಸಿ ಅದರಲ್ಲಿ ಸ್ವಲ್ಪ ಕೊರತೆಗಳಿದ್ದರು ಅದು ವೈಯಕ್ತಿಕ ಇಚ್ಛೆಯಿಂದ ಕೊಡುವ ಕಾಣಿಕೆಯಾದಕಾರಣ ಅದು ಅಂಗೀಕರಿಸಲ್ಪಟ್ಟಿತು.
- ಇಸ್ರಾಯೇಲ್ ಜನರು ಕೊಂಡಾಟದ ಔತಣವಾಗಿ ಬಲಿಯರ್ಪಿಸಿದ ಪ್ರಾಣಿಯ ಮಾಂಸವನ್ನು ತಿನ್ನುತ್ತಿದ್ದರು.
- ಮನಃಪೂರ್ವಕವಾಗಿ ಕಾಣಿಕೆ ಕೊಟ್ಟಾಗ ಅದು ಇಸ್ರಾಯೇಲ್ ಜನರಿಗೆ ಸಂಬ್ರಮದ ಕಾರಣವಾಗಿತ್ತು ಯಾಕಂದರೆ ಕೊಯ್ಲು ಅಧಿಕವಾಗಿದ್ದು ಅವರಿಗೆ ಬೇಕಾದಷ್ಟು ಆಹಾರ ಬೆಳೆಯಿತೆಂದು ತೋರಿಸುತ್ತದೆ.
- ಎಜ್ರನು ಬರೆದ ಪುಸ್ತಕದಲ್ಲಿ ದೇವಾಲಯವನ್ನು ಪುನಃ ನಿರ್ಮಿಸಲು ಮನಃಪೂರ್ವಕವಾಗಿ ಕೊಡುವ ಕಾಣಿಕೆಯ ಬೇರೊಂದು ರೂಪವನ್ನು ಕುರಿತು ಬರೆಯಲ್ಪಟ್ಟಿದೆ. ಈ ಕಾಣಿಕೆಯಲ್ಲಿ ಬೆಳ್ಳಿ, ಬಂಗಾರದ ಕಾಸುಗಳು, ಬಟ್ಟಲುಗಳು ಮತ್ತು ಬೆಳ್ಳಿ ಬಂಗಾರದಿಂದ ಮಾಡಲ್ಪಟ್ಟ ಅನೇಕ ವಸ್ತುಗಳನ್ನು ಕಾಣಿಕೆಗಳಾಗಿ ಕೊಟ್ಟರು.
(ಈ ಪದಗಳನ್ನು ಸಹ ನೋಡಿರಿ : ದಹನ ಬಲಿ, ಎಜ್ರ, ಔತಣ, ದಾನ್ಯಾರ್ಪಣೆ, ಅಪರಾದ ಪರಿಹಾರಾರ್ಥ ಬಲಿ, ಧರ್ಮಶಾಸ್ತ್ರ, ದೋಷಪರಿಹಾರಕ ಬಲಿ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5068, H5071