kn_tw/bible/other/freewilloffering.md

25 lines
3.1 KiB
Markdown

# ಮನಃಪೂರ್ವಕವಾಗಿ ಕೊಡುವ ಕಾಣಿಕೆ
## ಪದದ ಅರ್ಥವಿವರಣೆ
ಮನಃಪೂರ್ವಕವಾಗಿ ಕೊಡುವ ಕಾಣಿಕೆ ಅಂದರೆ ಯೆಹೋವನಿಗೆ ಕೊಡುವ ಒಂದು ರೀತಿಯದ ಕಾಣಿಕೆಯಾಗಿತ್ತು ಅದು ಮೋಶೆಯ ಧರ್ಮಶಾಸ್ತ್ರದಲ್ಲಿ ಅವಶ್ಯಕತೆಯಿದ್ದಲ್ಲ. ಅದು ಒಬ್ಬ ವ್ಯಕ್ತಿಯ ವೈಯಕ್ತಿಕ ಇಚ್ಛೆಯಿಂದ ಕೊಡುವ ಅರ್ಪಣೆಯಾಗಿತ್ತು.
* ಮನಃಪೂರ್ವಕವಾಗಿ ಕೊಡುವ ಕಾಣಿಕೆಯಲ್ಲಿ ಒಂದು ಪ್ರಾಣಿಯನ್ನು ಕೊಡಬೇಕೆಂದು ಬಯಸಿ ಅದರಲ್ಲಿ ಸ್ವಲ್ಪ ಕೊರತೆಗಳಿದ್ದರು ಅದು ವೈಯಕ್ತಿಕ ಇಚ್ಛೆಯಿಂದ ಕೊಡುವ ಕಾಣಿಕೆಯಾದಕಾರಣ ಅದು ಅಂಗೀಕರಿಸಲ್ಪಟ್ಟಿತು.
* ಇಸ್ರಾಯೇಲ್ ಜನರು ಕೊಂಡಾಟದ ಔತಣವಾಗಿ ಬಲಿಯರ್ಪಿಸಿದ ಪ್ರಾಣಿಯ ಮಾಂಸವನ್ನು ತಿನ್ನುತ್ತಿದ್ದರು.
* ಮನಃಪೂರ್ವಕವಾಗಿ ಕಾಣಿಕೆ ಕೊಟ್ಟಾಗ ಅದು ಇಸ್ರಾಯೇಲ್ ಜನರಿಗೆ ಸಂಬ್ರಮದ ಕಾರಣವಾಗಿತ್ತು ಯಾಕಂದರೆ ಕೊಯ್ಲು ಅಧಿಕವಾಗಿದ್ದು ಅವರಿಗೆ ಬೇಕಾದಷ್ಟು ಆಹಾರ ಬೆಳೆಯಿತೆಂದು ತೋರಿಸುತ್ತದೆ.
* ಎಜ್ರನು ಬರೆದ ಪುಸ್ತಕದಲ್ಲಿ ದೇವಾಲಯವನ್ನು ಪುನಃ ನಿರ್ಮಿಸಲು ಮನಃಪೂರ್ವಕವಾಗಿ ಕೊಡುವ ಕಾಣಿಕೆಯ ಬೇರೊಂದು ರೂಪವನ್ನು ಕುರಿತು ಬರೆಯಲ್ಪಟ್ಟಿದೆ. ಈ ಕಾಣಿಕೆಯಲ್ಲಿ ಬೆಳ್ಳಿ, ಬಂಗಾರದ ಕಾಸುಗಳು, ಬಟ್ಟಲುಗಳು ಮತ್ತು ಬೆಳ್ಳಿ ಬಂಗಾರದಿಂದ ಮಾಡಲ್ಪಟ್ಟ ಅನೇಕ ವಸ್ತುಗಳನ್ನು ಕಾಣಿಕೆಗಳಾಗಿ ಕೊಟ್ಟರು.
(ಈ ಪದಗಳನ್ನು ಸಹ ನೋಡಿರಿ : [ದಹನ ಬಲಿ](../other/burntoffering.md), [ಎಜ್ರ](../names/ezra.md), [ಔತಣ](../other/feast.md), [ದಾನ್ಯಾರ್ಪಣೆ](../other/grainoffering.md), [ಅಪರಾದ ಪರಿಹಾರಾರ್ಥ ಬಲಿ](../other/guiltoffering.md), [ಧರ್ಮಶಾಸ್ತ್ರ](../kt/lawofmoses.md), [ದೋಷಪರಿಹಾರಕ ಬಲಿ](../other/sinoffering.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.29:6-7](rc://*/tn/help/1ch/29/06)
* [2 ಪೂರ್ವ.35:7-9](rc://*/tn/help/2ch/35/07)
* [ಧರ್ಮೋ.12:17](rc://*/tn/help/deu/12/17)
* [ವಿಮೋ.36:2-4](rc://*/tn/help/exo/36/02)
* [ಯಾಜಕ.07:15-16](rc://*/tn/help/lev/07/15)
## ಪದ ಡೇಟಾ:
* Strong's: H5068, H5071