2.4 KiB
2.4 KiB
ಸರ್ವಾಂಗಹೋಮ, ದಹನ ಬಲಿ, ಅಗ್ನಿಯಿಂದ ಯಜ್ಞ ಅರ್ಪಿಸುವುದು
ಪದದ ಅರ್ಥವಿವರಣೆ:
"ಸರ್ವಾಂಗಹೋಮ" ಅಥವಾ “ದಹನ ಬಲಿ” ಎನ್ನುವುದು ದೇವರಿಗೆ ಮಾಡುವ ಒಂದು ವಿಧವಾದ ಹೋಮ, ಇದನ್ನು ಯಜ್ಞವೇದಿಯ ಮೇಲೆ ದೇವರಿಗೆ ಸಮರ್ಪಿಸುವುದನ್ನು ಇಟ್ಟು ಬೆಂಕಿಯಿಂದ ಸುಡುತ್ತಾರೆ. ಜನರ ಪಾಪಗಳಿಗೆ ಪ್ರಾಯಶ್ಚಿತ್ತವನ್ನು ಮಾಡುವುದಕ್ಕೆ ಇದನ್ನು ಸಮರ್ಪಿಸಲಾಗುತ್ತಿತ್ತು. ಇದನ್ನು “ಅಗ್ನಿಯಿಂದ ಅರ್ಪಿಸುವ ಹೋಮ” ಎಂದೂ ಕರೆಯುತ್ತಾರೆ.
- ಈ ಹೋಮವನ್ನು ಮಾಡುವುದಕ್ಕೆ ಸಹಜವಾಗಿ ಕುರಿ ಅಥವಾ ಮೇಕೆಗಳಂತಹ ಪ್ರಾಣಿಗಳನ್ನು ಉಪಯೋಗಿಸುತ್ತಾರೆ, ಆದರೆ ಎತ್ತುಗಳನ್ನು, ಪಕ್ಷಿಗಳನ್ನೂ ಉಪಯೋಗಿಸುತ್ತಾರೆ.
- ಈ ದಹನ ಬಲಿಯಲ್ಲಿ ಪ್ರಾಣಿ ಚರ್ಮವನ್ನು ಬಿಟ್ಟು ಉಳಿದ ಮಾಂಸವನ್ನೆಲ್ಲಾ ಸುಡಬೇಕಾಗಿರುತ್ತದೆ. ಚರ್ಮವನ್ನು ಅಥವಾ ತೊಗಲನ್ನು ಯಾಜಕನಿಗೆ ಕೊಡುತ್ತಾರೆ.
- ಪ್ರತಿದಿನ ಎರಡು ಸಲ ದಹನ ಬಲಿಗಳನ್ನು ಅರ್ಪಿಸಬೇಕೆಂದು ಯೆಹೂದ್ಯರಿಗೆ ದೇವರು ಆಜ್ಞಾಪಿಸಿದ್ದರು.
(ಈ ಪದಗಳನ್ನು ಸಹ ನೋಡಿರಿ : ಯಜ್ನವೇದಿ, ಪ್ರಾಯಶ್ಚಿತ್ತ, ಎತ್ತು, ಯಾಜಕ, ತ್ಯಾಗ )
ಸತ್ಯವೇದದ ಅನುಬಂಧ ವಾಕ್ಯಗಳು:
ಪದದ ದತ್ತಾಂಶ:
- Strong's: H801, H5930, H7133, H8548, G3646