kn_tw/bible/other/burntoffering.md

24 lines
2.4 KiB
Markdown

# ಸರ್ವಾಂಗಹೋಮ, ದಹನ ಬಲಿ, ಅಗ್ನಿಯಿಂದ ಯಜ್ಞ ಅರ್ಪಿಸುವುದು
## ಪದದ ಅರ್ಥವಿವರಣೆ:
"ಸರ್ವಾಂಗಹೋಮ" ಅಥವಾ “ದಹನ ಬಲಿ” ಎನ್ನುವುದು ದೇವರಿಗೆ ಮಾಡುವ ಒಂದು ವಿಧವಾದ ಹೋಮ, ಇದನ್ನು ಯಜ್ಞವೇದಿಯ ಮೇಲೆ ದೇವರಿಗೆ ಸಮರ್ಪಿಸುವುದನ್ನು ಇಟ್ಟು ಬೆಂಕಿಯಿಂದ ಸುಡುತ್ತಾರೆ. ಜನರ ಪಾಪಗಳಿಗೆ ಪ್ರಾಯಶ್ಚಿತ್ತವನ್ನು ಮಾಡುವುದಕ್ಕೆ ಇದನ್ನು ಸಮರ್ಪಿಸಲಾಗುತ್ತಿತ್ತು. ಇದನ್ನು “ಅಗ್ನಿಯಿಂದ ಅರ್ಪಿಸುವ ಹೋಮ” ಎಂದೂ ಕರೆಯುತ್ತಾರೆ.
* ಈ ಹೋಮವನ್ನು ಮಾಡುವುದಕ್ಕೆ ಸಹಜವಾಗಿ ಕುರಿ ಅಥವಾ ಮೇಕೆಗಳಂತಹ ಪ್ರಾಣಿಗಳನ್ನು ಉಪಯೋಗಿಸುತ್ತಾರೆ, ಆದರೆ ಎತ್ತುಗಳನ್ನು, ಪಕ್ಷಿಗಳನ್ನೂ ಉಪಯೋಗಿಸುತ್ತಾರೆ.
* ಈ ದಹನ ಬಲಿಯಲ್ಲಿ ಪ್ರಾಣಿ ಚರ್ಮವನ್ನು ಬಿಟ್ಟು ಉಳಿದ ಮಾಂಸವನ್ನೆಲ್ಲಾ ಸುಡಬೇಕಾಗಿರುತ್ತದೆ. ಚರ್ಮವನ್ನು ಅಥವಾ ತೊಗಲನ್ನು ಯಾಜಕನಿಗೆ ಕೊಡುತ್ತಾರೆ.
* ಪ್ರತಿದಿನ ಎರಡು ಸಲ ದಹನ ಬಲಿಗಳನ್ನು ಅರ್ಪಿಸಬೇಕೆಂದು ಯೆಹೂದ್ಯರಿಗೆ ದೇವರು ಆಜ್ಞಾಪಿಸಿದ್ದರು.
(ಈ ಪದಗಳನ್ನು ಸಹ ನೋಡಿರಿ : [ಯಜ್ನವೇದಿ](../kt/altar.md), [ಪ್ರಾಯಶ್ಚಿತ್ತ](../kt/atonement.md), [ಎತ್ತು](../other/cow.md), [ಯಾಜಕ](../kt/priest.md), [ತ್ಯಾಗ](../other/sacrifice.md) )
## ಸತ್ಯವೇದದ ಅನುಬಂಧ ವಾಕ್ಯಗಳು:
* [ವಿಮೋ. 40:5-7](rc://*/tn/help/exo/40/05)
* [ಆದಿ. 08:20-22](rc://*/tn/help/gen/08/20)
* [ಆದಿ. 22:1-3](rc://*/tn/help/gen/22/01)
* [ಯಾಜಕ. 03:3-5](rc://*/tn/help/lev/03/03)
* [ಮಾರ್ಕ. 12:32-34](rc://*/tn/help/mrk/12/32)
## ಪದದ ದತ್ತಾಂಶ:
* Strong's: H801, H5930, H7133, H8548, G3646