kn_tw/bible/kt/priest.md

9.1 KiB

ಯಾಜಕ, ಯಾಜಕರು, ಯಾಜಕತ್ವ

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ ಯಾಜಕ ಎಂದರೆ ದೇವ ಜನರ ಪ್ರತಿನಿಧಿಯಾಗಿ ದೇವರಿಗೆ ಅರ್ಪಣೆಗಳನ್ನು ಅರ್ಪಿಸಲು ಆಯ್ಕೆ ಮಾಡಿಕೊಂಡಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. “ಯಾಜಕತ್ವ” ಎನ್ನುವ ಪದವು ಯಾಜಕನಾಗಿರುವ ಸ್ಥಿತಿ ಅಥವಾ ಯಾಜಕನ ಕರ್ತ್ಯವ್ಯವನ್ನು ಸೂಚಿಸುವ ಹೆಸರಾಗಿರುತ್ತದೆ.

  • ಹಳೇ ಒಡಂಬಡಿಕೆಯಲ್ಲಿ ಇಸ್ರಾಯೇಲ್ ಜನರ ಪಕ್ಷವಾಗಿ ದೇವರಿಗೆ ಯಾಜಕರಾಗಿರಲು ದೇವರು ಆರೋನನನ್ನು ಮತ್ತು ತನ್ನ ಸಂತಾನದವರನ್ನು ಆದುಕೊಂಡಿದ್ದನು.
  • “ಯಾಜಕತ್ವ” ಎನ್ನುವುದು ಲೇವಿಯರ ವಂಶದಲ್ಲಿ ತಂದೆಯಿಂದ ಮಗನಿಗೆ ಹೋಗುವ ಬಾಧ್ಯತೆಯು ಮತ್ತು ಹಕ್ಕು ಆಗಿರುತ್ತದೆ.
  • ಇಸ್ರಾಯೇಲ್ ಯಾಜಕರು ಜನರ ಹೋಮಗಳನ್ನು ದೇವರಿಗೆ ಅರ್ಪಿಸುವ ಬಾಧ್ಯತೆಯನ್ನು ಮತ್ತು ದೇವಾಲಯದಲ್ಲಿ ಮಾಡುವ ಕೆಲಸಗಳ ಬಾಧ್ಯತೆಗಳನ್ನು ಪಡೆದುಕೊಂಡಿದ್ದರು.
  • ಯಾಜಕರು ಕೂಡ ಇತರ ಧರ್ಮ ಕಾರ್ಯಗಳನ್ನು ಮಾಡುವುದರ ಜೊತೆಗೆ ದೇವ ಜನರ ಪಕ್ಷವಾಗಿ ದೇವರಿಗೆ ಪ್ರಾರ್ಥನೆಗಳನ್ನು ನಿರಂತರವಾಗಿ ಮಾಡುತ್ತಿದ್ದರು.
  • ಯಾಜಕರು ಜನರ ಮೇಲೆ ಸಾಂಪ್ರದಾಯಿಕವಾದ ಆಶೀರ್ವಾದಗಳನ್ನು ನುಡಿಯುತ್ತಿದ್ದರು ಮತ್ತು ದೇವರ ಆಜ್ಞೆಗಳನ್ನು ಆವರಿಗೆ ಬೋಧನೆ ಮಾಡುತ್ತಿದ್ದರು.
  • ಯೇಸುವಿನ ಕಾಲದಲ್ಲಿ ಯಾಜಕರಲ್ಲಿ ಅನೇಕ ರೀತಿಯಾದ ಹಂತಗಳು ಇದ್ದಿದ್ದವು, ಅದರಲ್ಲಿ ಪ್ರಧಾನ ಯಾಜಕರಿದ್ದರು ಮತ್ತು ಮಹಾ ಯಾಜಕನು ಇದ್ದಿದ್ದನು.
  • ದೇವರ ಸನ್ನಿಧಿಯಲ್ಲಿ ನಮಗಾಗಿ ವಿಜ್ಞಾಪನೆ ಮಾಡುವ “ಮಹೋನ್ನತನಾದ ಯಾಜಕನು” ಯೇಸುವಾಗಿದ್ದಾನೆ. ಪಾಪಗಳಿಗಾಗಿ ಅಂತಿಮ ಯಜ್ಞವನ್ನಾಗಿ ಆತನು ತನ್ನನ್ನು ತಾನೇ ಅರ್ಪಿಸಿಕೊಂಡನು. ಇದಕ್ಕೆ ಮನುಷ್ಯರ ಯಾಜಕರಿಂದ ಮಾಡುವ ಯಜ್ಞಗಳೆಲ್ಲವು ಬೇಕಾದ ಅವಶ್ಯಕತೆಯಿರುವುದಿಲ್ಲವೆಂದು ಇದರ ಅರ್ಥವಾಗಿರುತ್ತದೆ.
  • ಹೊಸ ಒಡಂಬಡಿಕೆಯಲ್ಲಿ ಯೇಸುವಿನಲ್ಲಿರುವ ಪ್ರತಿಯೊಬ್ಬ ವಿಶ್ವಾಸಿ “ಯಾಜಕ”ನಾಗಿರುತ್ತಾನೆ, ಈ ವಿಶ್ವಾಸಿಯು ತನಗಾಗಿ ಮತ್ತು ತನ್ನ ಇತರ ಜನರಿಗಾಗಿ ವಿಜ್ಞಾಪನೆ ಮಾಡುವುದಕ್ಕೆ ಪ್ರಾರ್ಥನೆಯಲ್ಲಿ ದೇವರಿಗೆ ನೇರವಾಗಿ ಬರುವ ಅವಕಾಶವನ್ನು ಹೊಂದಿರುತ್ತಾನೆ.
  • ಪುರಾತನ ಕಾಲಗಳಲ್ಲಿ ಬಾಳ್ ಎನ್ನುವಂತಹ ಸುಳ್ಳು ದೇವರುಗಳಿಗೆ ಅರ್ಪಣೆಗಳನ್ನು ಅರ್ಪಿಸಿದ ಅನ್ಯ ಯಾಜಕರೂ ಇದ್ದಿದ್ದರು.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ “ಯಾಜಕ” ಎನ್ನುವ ಪದವನ್ನು “ತ್ಯಾಗ ಮಾಡಿಕೊಂಡ ವ್ಯಕ್ತಿ” ಅಥವಾ “ದೇವರ ಪ್ರತಿನಿಧಿ” ಅಥವಾ “ತ್ಯಾಗ ಮಾಡಿಕೊಂಡಿರುವ ಮಧ್ಯಸ್ಥ” ಅಥವಾ “ದೇವರನ್ನು ಪ್ರತಿನಿಧಿಸುವುದಕ್ಕೆ ಆತನು ಆಯ್ಕೆ ಮಾಡಿಕೊಂಡಿರುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • ಅನುವಾದ ಮಾಡಿದ “ಯಾಜಕ” ಎನ್ನುವ ಪದವು “ಮಧ್ಯಸ್ಥ” ಎನ್ನುವ ಪದಕ್ಕೆ ವಿಭಿನ್ನವಾಗಿರಬೇಕು.
  • ಕೆಲವೊಂದು ಅನುವಾದಗಳಲ್ಲಿ “ಇಸ್ರಾಯೇಲ್ ಯಾಜಕ” ಅಥವಾ “ಯೆಹೂದ್ಯ ಯಾಜಕ” ಅಥವಾ “ಯೆಹೋವನ ಯಾಜಕ” ಅಥವಾ “ಬಾಳ್ ಯಾಜಕ” ಎಂದು ಸ್ಪಷ್ಟತೆಗಾಗಿ ವಿವರಿಸಿ ಹೇಳುವುದಕ್ಕೆ ಪ್ರಾಧಾನ್ಯತೆ ಕೊಡುತ್ತಾರೆ. ಇದರಿಂದ ಇದು ಈಗಿನ ಕಾಲದ ಯಾಜಕನನ್ನು ತೋರಿಸುವುದಿಲ್ಲ.
  • ಅನುವಾದ ಮಾಡಲ್ಪಟ್ಟಿರುವ “ಯಾಜಕ” ಎನ್ನುವ ಪದವು “ಪ್ರಧಾನ ಯಾಜಕ” ಮತ್ತು “ಮಹಾ ಯಾಜಕ” ಮತ್ತು “ಲೇವಿ” ಮತ್ತು “ಪ್ರವಾದಿ” ಎನ್ನುವ ಪದಗಳಿಗೆ ವಿಭಿನ್ನ ವಾಗಿರಬೇಕು.

(ಈ ಪದಗಳನ್ನು ಸಹ ನೋಡಿರಿ : ಆರೋನ, ಪ್ರಧಾನ ಯಾಜಕರು, ಮಹಾ ಯಾಜಕ, ಮಧ್ಯಸ್ಥ, ಹೋಮ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 04:07 “ಮೆಲ್ಕಿಚೆದೆಕನು ಮಹೋನ್ನತನ ದೇವರ __ ಯಾಜಕನಾಗಿದ್ದನು __”
  • 13:09 ಯಾರಾದರೂ ದೇವರ ನ್ಯಾಯಪ್ರಮಾಣಕ್ಕೆ ಅವಿಧೇಯತೆಯನ್ನು ತೋರಿಸಿದ್ದರೆ, ಅವರು ದೇವರಿಗೆ ಹೋಮ ಮಾಡುವುದಕ್ಕಾಗಿ ಗುಡಾರದ ಮುಂದಿರುವ ಯಜ್ಞವೇದಿಯ ಬಳಿಗೆ ಒಂದು ಪ್ರಾಣಿಯನ್ನು ತೆಗೆದುಕೊಂಡುಬರಬೇಕು. __ ಯಾಜಕನು __ ಆ ಪ್ರಾಣಿಯನ್ನು ಕೊಂದು, ಅದನ್ನು ಯಜ್ಞವೇದಿಯ ಮೇಲಿಟ್ಟು ದಹಿಸುತ್ತಾನೆ. ಪ್ರಾಣಿಯ ರಕ್ತವು ಆ ವ್ಯಕ್ತಿಯು ಮಾಡಿದ ಪಾಪವನ್ನು ಮುಚ್ಚುತ್ತದೆ, ಮತ್ತು ಅವನನ್ನು ದೇವರ ದೃಷ್ಟಿಯಲ್ಲಿ ಶುದ್ಧನಾದ ವ್ಯಕ್ತಿಯನ್ನಾಗಿಟ್ಟಿರುತ್ತದೆ. ದೇವರು ಮೋಶೆಯ ಅಣ್ಣನಾಗಿರುವ ಆರೋನನನ್ನು ಆಯ್ಕೆ ಮಾಡಿಕೊಂಡನು ಮತ್ತು ಆರೋನನ ಸಂತತಿಯವರು ಆತನಿಗೆ __ ಯಾಜಕರಾಗಿದ್ದರು __.
  • 19:07 ಆದ್ದರಿಂದ ಬಾಳ್ __ ಯಾಜಕರು __ ಹೋಮವನ್ನು ಸಿದ್ಧಗೊಳಿಸಿದರು, ಆದರೆ ಅವರು ಅದನ್ನು ಬೆಂಕಿಯಿಂದ ಹಚ್ಚುವುದಕ್ಕೆ ಸಾಧ್ಯವಾಗಲಿಲ್ಲ.
  • 21:07 ಇಸ್ರಾಯೇಲ್ __ ಯಾಜಕನು __ ಜನರ ಪಾಪಗಳ ಶಿಕ್ಷೆಗೆ ಬದಲಾಗಿ ಜನರ ಪಕ್ಷವಾಗಿ ದೇವರಿಗೆ ಹೋಮಗಳನ್ನು ಮಾಡುವ ವ್ಯಕ್ತಿಯಾಗಿರುತ್ತಾನೆ. __ ಯಾಜಕರು __ ಜನರಿಗೋಸ್ಕರ ದೇವರ ಬಳಿ ಪ್ರಾರ್ಥನೆಯೂ ಮಾಡುತ್ತಿದ್ದರು.

ಪದ ಡೇಟಾ:

  • Strong's: H3547, H3548, H3549, H3550, G748, G749, G2405, G2406, G2407, G2409, G2420