7.1 KiB
7.1 KiB
ಮಹಾ ಯಾಜಕ
ಪದದ ಅರ್ಥವಿವರಣೆ:
“ಮಹಾ ಯಾಜಕನು” ಎನ್ನುವ ಮಾತು ಇಸ್ರಾಯೇಲ್ಯರ ಎಲ್ಲಾ ಯಾಜಕರುಗಳಿಗೆ ನಾಯಕನಾಗಿ ವರ್ಷಕ್ಕೊಮ್ಮೆ ಸೇವೆ ಮಾಡುವುದಕ್ಕೆ ನೇಮಿಸಲ್ಪಟ್ಟಿರುವ ಒಬ್ಬ ವಿಶೇಷ ಯಾಜಕನನ್ನು ಸೂಚಿಸುತ್ತದೆ.
- ಮಹಾ ಯಾಜಕನಿಗೆ ವಿಶೇಷವಾದ ಬಾಧ್ಯತೆಗಳಿರುತ್ತವೆ. ವರ್ಷಕ್ಕೊಮ್ಮೆ ವಿಶೇಷವಾದ ಬಲಿಯಾಗವನ್ನು ಅರ್ಪಿಸುವುದಕ್ಕೆ ದೇವಾಲಯದಲ್ಲಿರುವ ಅತೀ ಪರಿಶುದ್ಧವಾದ ಸ್ಥಳದೊಳಗೆ ಹೋಗುವುದಕ್ಕೆ ಅನುಮತಿಸಲ್ಪಟ್ಟ ಏಕೈಕ ವ್ಯಕ್ತಿಯಾಗಿರುತ್ತಾನೆ.
- ಇಸ್ರಾಯೇಲ್ಯರಲ್ಲಿ ಅನೇಕ ಯಾಜಕರು ಇರುತ್ತಾರೆ, ಆದರೆ ಆ ಸಮಯದಲ್ಲಿ ಕೇವಲ ಒಬ್ಬ ಮಹಾ ಯಾಜಕನು ಮಾತ್ರವೇ ಹೋಗಬೇಕು.
- ಯೇಸು ಬಂಧಿಸಲ್ಪಟ್ಟಾಗ, ಕಾಯಫ ಅಧಿಕಾರಿಕ ಪ್ರಧಾನ ಯಾಜಕನಾಗಿದ್ದನು. ಕಾಯಫ ಮಾಮನಾದ ಅನ್ನನು ಕುರಿತಾಗಿಯೂ ದಾಖಲಿಸಲಾಗಿದೆ, ಯಾಕಂದರೆ ಇವನು ಮಾಜಿ ಪ್ರಧಾನ ಯಾಜಕನಾಗಿದ್ದನು, ಬಹುಶಃ ಆ ಸಮಯದಲ್ಲಿ ಜನರ ಮೇಲೆ ಅಧಿಕಾರ ಮತ್ತು ಶಕ್ತಿಯನ್ನು ಹೊಂದಿದವನಾಗಿರಬಹುದು.
ಅನುವಾದ ಸಲಹೆಗಳು:
- “ಮಹಾ ಯಾಜಕ” ಎನ್ನುವ ಪದವನ್ನು “ಅತಿ ಮುಖ್ಯ ಯಾಜಕ” ಅಥವಾ “ಅತ್ಯುನ್ನತ ಶ್ರೇಣಿ ಹೊಂದಿದ ಯಾಜಕ” ಎಂದೂ ಅನುವಾದ ಮಾಡಬಹುದು.
- ಈ ಮಹಾ ಯಾಜಕ ಎನ್ನುವ ಈ ಪದಕ್ಕಿಂತ “ಪ್ರಧಾನ ಯಾಜಕ” ಎನ್ನುವ ಪದವು ಬೇರೆಯಾಗಿರುತ್ತದೆ. ಇದನ್ನ ಒಂದುಸಲ ನೋಡಿಕೊಳ್ಳಿರಿ.
(ಈ ಪದಗಳನ್ನು ಸಹ ನೋಡಿರಿ : ಅನ್ನ, ಕಾಯಫ, ಪ್ರಧಾನ ಯಾಜಕ, ಯಾಜಕ, ದೇವಾಲಯ)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.05:26-28
- ಅಪೊ.ಕೃತ್ಯ.07:1-3
- ಅಪೊ.ಕೃತ್ಯ.09:1-2
- ವಿಮೋ.30:10
- ಇಬ್ರಿ.06:19-20
- ಯಾಜಕ.16:32-33
- ಲೂಕ.03:1-2
- ಮಾರ್ಕ.02:25-26
- ಮತ್ತಾಯ.26:3-5
- ಮತ್ತಾಯ.26:51-54
ಸತ್ಯವೇದದಿಂದ ಉದಾಹರಣೆಗಳು:
- 13:08 __ ಮಹಾ ಯಾಜಕನನ್ನು __ ಬಿಟ್ಟು ಯಾರೂ ಆ ತೆರೆಯ ಆ ಕಡೆಗೆ ಹೋಗಬಾರದು, ಯಾಕಂದರೆ ದೇವರು ಆ ಸ್ಥಳದಲ್ಲಿ ನಿವಾಸವಾಗಿರುತ್ತಾರೆ.
- 21:07 ಬರುವ ಮೆಸ್ಸೀಯನು ಪರಿಪೂರ್ಣನಾದ __ ಮಹಾ ಯಾಜಕನಾಗಿರುತ್ತಾನೆ __, ಈತನೇ ದೇವರಿಗೆ ತನ್ನನ್ನು ತಾನೇ ಪರಿಪೂರ್ಣವಾದ ಸರ್ವಾಂಗಹೋಮವನ್ನಾಗಿ ಅರ್ಪಿಸಿಕೊಲ್ಲುತ್ತಾನೆ.
- 38:03 ಯೆಹೂದ್ಯ ನಾಯಕರೆಲ್ಲರೂ __ ಪ್ರಧಾನ ಯಾಜನಿಂದ __ ನಡೆಸಲ್ಪಟ್ಟರು, ಯೇಸುವನ್ನು ಹಿಡಿಸಿಕೊಡುವುದಕ್ಕೆ ಯೂದಾನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟರು.
- 39:01 ಸೈನಿಕರು ಯೇಸುವನ್ನು __ ಮಹಾ ಯಾಜಕನ __ ಮನೆಗೆ ಕರೆದುಕೊಂಡು ಹೋದರು, ಅಲ್ಲಿ __ ಮಹಾ ಯಾಜಕನಿಂದ __ ಯೇಸುವಿಗೆ ಪ್ರಶ್ನೆ ಹಾಕುವುದಕ್ಕೆ ಕರೆದೊಯ್ದರು.
- 39:03 ಕೊನೆಗೆ, __ ಮಹಾ ಯಾಜಕನು __ ಯೇಸುವನ್ನು ನೇರವಾಗಿ ನೋಡಿದನು ಮತ್ತು “ನೀನು ಮೆಸ್ಸೀಯನೋ, ಜೀವಿಸುವ ದೇವರ ಮಗನೋ? ನಮಗೆ ಹೇಳು” ಎಂದು ಕೇಳಿದನು.
- 44:07 ಇದಾದನಂತರ ಆ ಮರುದಿನದಂಡು, ಯೆಹೂದ್ಯರ ನಾಯಕರು ಪೇತ್ರನನ್ನು ಮತ್ತು ಯೋಹಾನನನ್ನು __ ಮಹಾ ಯಾಜಕನ __ ಬಳಿಗೆ ಮತ್ತು ಇತರ ನಾಯಕರ ಬಳಿಗೆ ಕರೆದುಕೊಂಡು ಬಂದರು.
- 45:02 ಅದಕ್ಕಾಗಿ ಧರ್ಮದ ನಾಯಕರು ಸ್ತೆಫೆನನನ್ನು ಬಂಧಿಸಿ, __ ಮಹಾ ಯಾಜಕನ __ ಬಳಿಗೆ ಕರೆದುಕೊಂಡು ಬಂದರು ಮತ್ತು ಯೆಹೂದ್ಯರ ಇತರ ನಾಯಕರು ಸ್ತೆಫೆನನ ಕುರಿತಾಗಿ ತಪ್ಪಾದ ಸಾಕ್ಷಿಗಳನ್ನು ಹೆಚ್ಚಾಗಿ ಹೊರಿಸಿದರು.
- 46:01 ದಮಸ್ಕನಲ್ಲಿರುವ ಕ್ರೈಸ್ತರನ್ನು ಬಂಧಿಸಿ, ಅವರನ್ನು ಯೆರೂಸಲೇಮಿಗೆ ಕರೆದುಕೊಂಡು ಬರುವುದಕ್ಕೆ __ ಮಹಾ ಯಾಜಕನು __ ಸೌಲನಿಗೆ ಅನುಮತಿ ಕೊಟ್ಟನು.
- 48:06 ಯೇಸು ದೊಡ್ಡ __ ಮಹಾ ಯಾಜಕನಾಗಿರುತ್ತಾನೆ __ . ಇತರ ಯಾಜಕರಂತಲ್ಲದೆ, ಪ್ರಪಂಚದಲ್ಲಿರುವ ಪ್ರತಿಯೊಬ್ಬರ ಪಾಪಗಳನ್ನು ತೆಗೆದುಹಾಕುವುದಕ್ಕೆ ಒಂದೇ ಸಲ ಬಲಿಯಾಗಿ ತನ್ನನ್ನು ತಾನು ಅರ್ಪಿಸಿಕೊಂಡನು. ಯೇಸು ಪರಿಪೂರ್ಣನಾದ __ ಮಹಾ ಯಾಜಕನಾಗಿದ್ದನು __, ಯಾಕಂದರೆ ಪ್ರತಿಯೊಬ್ಬ ಮನುಷ್ಯನು ಮಾಡಿರುವ ಪ್ರತಿಯೊಂದು ಪಾಪಕ್ಕೆ ಬರಬೇಕಾದ ಶಿಕ್ಷೆಯನ್ನು ಆತನೇ ವಹಿಸಿದ್ದಾನೆ.
ಪದ ಡೇಟಾ:
- Strong's: H7218, H1419, H3548, G748, G749