kn_tw/bible/kt/highpriest.md

46 lines
7.1 KiB
Markdown

# ಮಹಾ ಯಾಜಕ
## ಪದದ ಅರ್ಥವಿವರಣೆ:
“ಮಹಾ ಯಾಜಕನು” ಎನ್ನುವ ಮಾತು ಇಸ್ರಾಯೇಲ್ಯರ ಎಲ್ಲಾ ಯಾಜಕರುಗಳಿಗೆ ನಾಯಕನಾಗಿ ವರ್ಷಕ್ಕೊಮ್ಮೆ ಸೇವೆ ಮಾಡುವುದಕ್ಕೆ ನೇಮಿಸಲ್ಪಟ್ಟಿರುವ ಒಬ್ಬ ವಿಶೇಷ ಯಾಜಕನನ್ನು ಸೂಚಿಸುತ್ತದೆ.
* ಮಹಾ ಯಾಜಕನಿಗೆ ವಿಶೇಷವಾದ ಬಾಧ್ಯತೆಗಳಿರುತ್ತವೆ. ವರ್ಷಕ್ಕೊಮ್ಮೆ ವಿಶೇಷವಾದ ಬಲಿಯಾಗವನ್ನು ಅರ್ಪಿಸುವುದಕ್ಕೆ ದೇವಾಲಯದಲ್ಲಿರುವ ಅತೀ ಪರಿಶುದ್ಧವಾದ ಸ್ಥಳದೊಳಗೆ ಹೋಗುವುದಕ್ಕೆ ಅನುಮತಿಸಲ್ಪಟ್ಟ ಏಕೈಕ ವ್ಯಕ್ತಿಯಾಗಿರುತ್ತಾನೆ.
* ಇಸ್ರಾಯೇಲ್ಯರಲ್ಲಿ ಅನೇಕ ಯಾಜಕರು ಇರುತ್ತಾರೆ, ಆದರೆ ಆ ಸಮಯದಲ್ಲಿ ಕೇವಲ ಒಬ್ಬ ಮಹಾ ಯಾಜಕನು ಮಾತ್ರವೇ ಹೋಗಬೇಕು.
* ಯೇಸು ಬಂಧಿಸಲ್ಪಟ್ಟಾಗ, ಕಾಯಫ ಅಧಿಕಾರಿಕ ಪ್ರಧಾನ ಯಾಜಕನಾಗಿದ್ದನು. ಕಾಯಫ ಮಾಮನಾದ ಅನ್ನನು ಕುರಿತಾಗಿಯೂ ದಾಖಲಿಸಲಾಗಿದೆ, ಯಾಕಂದರೆ ಇವನು ಮಾಜಿ ಪ್ರಧಾನ ಯಾಜಕನಾಗಿದ್ದನು, ಬಹುಶಃ ಆ ಸಮಯದಲ್ಲಿ ಜನರ ಮೇಲೆ ಅಧಿಕಾರ ಮತ್ತು ಶಕ್ತಿಯನ್ನು ಹೊಂದಿದವನಾಗಿರಬಹುದು.
## ಅನುವಾದ ಸಲಹೆಗಳು:
* “ಮಹಾ ಯಾಜಕ” ಎನ್ನುವ ಪದವನ್ನು “ಅತಿ ಮುಖ್ಯ ಯಾಜಕ” ಅಥವಾ “ಅತ್ಯುನ್ನತ ಶ್ರೇಣಿ ಹೊಂದಿದ ಯಾಜಕ” ಎಂದೂ ಅನುವಾದ ಮಾಡಬಹುದು.
* ಈ ಮಹಾ ಯಾಜಕ ಎನ್ನುವ ಈ ಪದಕ್ಕಿಂತ “ಪ್ರಧಾನ ಯಾಜಕ” ಎನ್ನುವ ಪದವು ಬೇರೆಯಾಗಿರುತ್ತದೆ. ಇದನ್ನ ಒಂದುಸಲ ನೋಡಿಕೊಳ್ಳಿರಿ.
(ಈ ಪದಗಳನ್ನು ಸಹ ನೋಡಿರಿ : [ಅನ್ನ](../names/annas.md), [ಕಾಯಫ](../names/caiaphas.md), [ಪ್ರಧಾನ ಯಾಜಕ](../other/chiefpriests.md), [ಯಾಜಕ](../kt/priest.md), [ದೇವಾಲಯ](../kt/temple.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.05:26-28](rc://*/tn/help/act/05/26)
* [ಅಪೊ.ಕೃತ್ಯ.07:1-3](rc://*/tn/help/act/07/01)
* [ಅಪೊ.ಕೃತ್ಯ.09:1-2](rc://*/tn/help/act/09/01)
* [ವಿಮೋ.30:10](rc://*/tn/help/exo/30/10)
* [ಇಬ್ರಿ.06:19-20](rc://*/tn/help/heb/06/19)
* [ಯಾಜಕ.16:32-33](rc://*/tn/help/lev/16/32)
* [ಲೂಕ.03:1-2](rc://*/tn/help/luk/03/01)
* [ಮಾರ್ಕ.02:25-26](rc://*/tn/help/mrk/02/25)
* [ಮತ್ತಾಯ.26:3-5](rc://*/tn/help/mat/26/03)
* [ಮತ್ತಾಯ.26:51-54](rc://*/tn/help/mat/26/51)
## ಸತ್ಯವೇದದಿಂದ ಉದಾಹರಣೆಗಳು:
* __[13:08](rc://*/tn/help/obs/13/08)__ __ ಮಹಾ ಯಾಜಕನನ್ನು __ ಬಿಟ್ಟು ಯಾರೂ ಆ ತೆರೆಯ ಆ ಕಡೆಗೆ ಹೋಗಬಾರದು, ಯಾಕಂದರೆ ದೇವರು ಆ ಸ್ಥಳದಲ್ಲಿ ನಿವಾಸವಾಗಿರುತ್ತಾರೆ.
* __[21:07](rc://*/tn/help/obs/21/07)__ ಬರುವ ಮೆಸ್ಸೀಯನು ಪರಿಪೂರ್ಣನಾದ __ ಮಹಾ ಯಾಜಕನಾಗಿರುತ್ತಾನೆ __, ಈತನೇ ದೇವರಿಗೆ ತನ್ನನ್ನು ತಾನೇ ಪರಿಪೂರ್ಣವಾದ ಸರ್ವಾಂಗಹೋಮವನ್ನಾಗಿ ಅರ್ಪಿಸಿಕೊಲ್ಲುತ್ತಾನೆ.
* __[38:03](rc://*/tn/help/obs/38/03)__ ಯೆಹೂದ್ಯ ನಾಯಕರೆಲ್ಲರೂ __ ಪ್ರಧಾನ ಯಾಜನಿಂದ __ ನಡೆಸಲ್ಪಟ್ಟರು, ಯೇಸುವನ್ನು ಹಿಡಿಸಿಕೊಡುವುದಕ್ಕೆ ಯೂದಾನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟರು.
* __[39:01](rc://*/tn/help/obs/39/01)__ ಸೈನಿಕರು ಯೇಸುವನ್ನು __ ಮಹಾ ಯಾಜಕನ __ ಮನೆಗೆ ಕರೆದುಕೊಂಡು ಹೋದರು, ಅಲ್ಲಿ __ ಮಹಾ ಯಾಜಕನಿಂದ __ ಯೇಸುವಿಗೆ ಪ್ರಶ್ನೆ ಹಾಕುವುದಕ್ಕೆ ಕರೆದೊಯ್ದರು.
* __[39:03](rc://*/tn/help/obs/39/03)__ ಕೊನೆಗೆ, __ ಮಹಾ ಯಾಜಕನು __ ಯೇಸುವನ್ನು ನೇರವಾಗಿ ನೋಡಿದನು ಮತ್ತು “ನೀನು ಮೆಸ್ಸೀಯನೋ, ಜೀವಿಸುವ ದೇವರ ಮಗನೋ? ನಮಗೆ ಹೇಳು” ಎಂದು ಕೇಳಿದನು.
* __[44:07](rc://*/tn/help/obs/44/07)__ ಇದಾದನಂತರ ಆ ಮರುದಿನದಂಡು, ಯೆಹೂದ್ಯರ ನಾಯಕರು ಪೇತ್ರನನ್ನು ಮತ್ತು ಯೋಹಾನನನ್ನು __ ಮಹಾ ಯಾಜಕನ __ ಬಳಿಗೆ ಮತ್ತು ಇತರ ನಾಯಕರ ಬಳಿಗೆ ಕರೆದುಕೊಂಡು ಬಂದರು.
* __[45:02](rc://*/tn/help/obs/45/02)__ ಅದಕ್ಕಾಗಿ ಧರ್ಮದ ನಾಯಕರು ಸ್ತೆಫೆನನನ್ನು ಬಂಧಿಸಿ, __ ಮಹಾ ಯಾಜಕನ __ ಬಳಿಗೆ ಕರೆದುಕೊಂಡು ಬಂದರು ಮತ್ತು ಯೆಹೂದ್ಯರ ಇತರ ನಾಯಕರು ಸ್ತೆಫೆನನ ಕುರಿತಾಗಿ ತಪ್ಪಾದ ಸಾಕ್ಷಿಗಳನ್ನು ಹೆಚ್ಚಾಗಿ ಹೊರಿಸಿದರು.
* __[46:01](rc://*/tn/help/obs/46/01)__ ದಮಸ್ಕನಲ್ಲಿರುವ ಕ್ರೈಸ್ತರನ್ನು ಬಂಧಿಸಿ, ಅವರನ್ನು ಯೆರೂಸಲೇಮಿಗೆ ಕರೆದುಕೊಂಡು ಬರುವುದಕ್ಕೆ __ ಮಹಾ ಯಾಜಕನು __ ಸೌಲನಿಗೆ ಅನುಮತಿ ಕೊಟ್ಟನು.
* __[48:06](rc://*/tn/help/obs/48/06)__ ಯೇಸು ದೊಡ್ಡ __ ಮಹಾ ಯಾಜಕನಾಗಿರುತ್ತಾನೆ __ . ಇತರ ಯಾಜಕರಂತಲ್ಲದೆ, ಪ್ರಪಂಚದಲ್ಲಿರುವ ಪ್ರತಿಯೊಬ್ಬರ ಪಾಪಗಳನ್ನು ತೆಗೆದುಹಾಕುವುದಕ್ಕೆ ಒಂದೇ ಸಲ ಬಲಿಯಾಗಿ ತನ್ನನ್ನು ತಾನು ಅರ್ಪಿಸಿಕೊಂಡನು. ಯೇಸು ಪರಿಪೂರ್ಣನಾದ __ ಮಹಾ ಯಾಜಕನಾಗಿದ್ದನು __, ಯಾಕಂದರೆ ಪ್ರತಿಯೊಬ್ಬ ಮನುಷ್ಯನು ಮಾಡಿರುವ ಪ್ರತಿಯೊಂದು ಪಾಪಕ್ಕೆ ಬರಬೇಕಾದ ಶಿಕ್ಷೆಯನ್ನು ಆತನೇ ವಹಿಸಿದ್ದಾನೆ.
## ಪದ ಡೇಟಾ:
* Strong's: H7218, H1419, H3548, G748, G749