kn_tw/bible/other/mediator.md

2.9 KiB

ಮಧ್ಯಸ್ಥ

ಪದದ ಅರ್ಥವಿವರಣೆ:

ಮಧ್ಯಸ್ಥ ಎನ್ನುವುದು ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳ ಮಧ್ಯೆದಲ್ಲಿ ಬಂದಿರುವ ಭಿನ್ನಭಿಪ್ರಾಯಗಳು ಅಥವಾ ಘರ್ಷಣೆಗಳನ್ನು ಪರಿಷ್ಕಾರ ಮಾಡುವುದಕ್ಕೆ ಸಹಾಯ ಮಾಡುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. ಅವರೆಲ್ಲರು ಸಮಾಧಾನ ಹೊಂದುವಂತೆ ಅವನು ಅವರಿಗೆ ಸಹಾಯ ಮಾಡುತ್ತಾನೆ.

  • ಜನರು ಪಾಪ ಮಾಡಿದ್ದದಿಂದ, ಅವರು ದೇವರ ಶತ್ರುಗಳಾಗಿ, ಆತನ ಕ್ರೋಧಕ್ಕೆ ಮತ್ತು ಶಿಕ್ಷೆಗೆ ಗುರಿಯಾಗಿರುತ್ತಾರೆ. ಪಾಪದ ಕಾರಣದಿಂದ ದೇವರು ಮತ್ತು ತನ್ನ ಜನರ ಮಧ್ಯೆದಲ್ಲಿರುವ ಸಂಬಂಧವು ಮುರಿದು ಹೋಗಿದೆ.
  • ತಂದೆಯಾದ ದೇವರಿಗೆ ಮತ್ತು ತನ್ನ ಜನರಿಗೆ ಮಧ್ಯೆದಲ್ಲಿ ಯೇಸುಕ್ರಿಸ್ತ ಮಧ್ಯಸ್ಥನಾಗಿದ್ದನು, ಜನರು ಮಾಡಿದ ಪಾಪಗಳಿಗೋಸ್ಕರ ಕ್ರಯಧನವಾಗಿ ತನ್ನ ಮರಣದ ಮೂಲಕ ಮುರಿದು ಹೋಗಿರುವ ಸಂಬಂಧವನ್ನು ತಿರುಗಿ ಪುನರ್ ಸ್ಥಾಪಿಸುವುದು.

ಅನುವಾದ ಸಲಹೆಗಳು:

  • “ಮಧ್ಯಸ್ಥ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, ‘ಇಬ್ಬರ ನಡುವೆ ಹೋಗುವುದು” ಅಥವಾ “ಸಮಾಧಾನಪಡಿಸುವಾತನು” ಅಥವಾ “ಸಮಾಧಾನವನ್ನು ತೆಗೆದುಕೊಂಡು ಬರುವ ವ್ಯಕ್ತಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಈ ಪದವನ್ನು “ಯಾಜಕ” ಎನ್ನುವ ಪದಕ್ಕೆ ಹೋಲಿಸಿ ನೋಡಿರಿ. “ಮಧ್ಯಸ್ಥ” ಎನ್ನುವ ಪದವನ್ನು ಹೀಗೆಯೇ ಅನುವಾದ ಮಾಡುವುದು ಒಳ್ಳೇಯದು.

(ಈ ಪದಗಳನ್ನು ಸಹ ನೋಡಿರಿ : ಯಾಜಕ, ಸಮಾಧಾನಪಡಿಸುವುದು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3887, G3312, G3316