3.4 KiB
3.4 KiB
ಸಂಧಾನ, ಸಂಧಾನ ಮಾಡುವುದು, ಸಂಧಾನ ಮಾಡಲ್ಪಟ್ಟಿದೆ
ಪದದ ಅರ್ಥವಿವರಣೆ:
“ಸಂಧಾನ” ಮಾಡುವುದು ಮತ್ತು “ಸಂಧಾನ” ಎನ್ನುವ ಪದಗಳು ಒಬ್ಬರಿಗೊಬ್ಬರು ಶತ್ರುಗಳಾಗಿರುವ ಜನರ ಮಧ್ಯದಲ್ಲಿ “ಸಮಾಧಾನವನ್ನುಂಟು ಮಾಡು” ಎನ್ನುವದನ್ನು ಸೂಚಿಸುತ್ತದೆ. “ಸಂಧಾನ” ಎನ್ನುವುದು ಸಮಾಧಾನವನ್ನುಂಟು ಮಾಡುವ ಕ್ರಿಯೆಯಾಗಿರುತ್ತದೆ.
- ಸತ್ಯವೇದದಲ್ಲಿ ಈ ಪದವು ಸಾಧಾರಣವಾಗಿ ದೇವರು ತನ್ನ ಒಬ್ಬನೇ ಮಗನಾದ ಯೇಸುಕ್ರಿಸ್ತನನ್ನು ಯಜ್ಞದ ಬಲಿಯನ್ನಾಗಿ ಮಾಡುವದರಿಂದ ತನ್ನನ್ನು ತಾನು ಜನರೊಂದಿಗೆ ಸಮಾಧಾನ ಮಾಡಿಕೊಂಡಿದ್ದಾರೆ.
- ಪಾಪ ಮಾಡಿದ ಕಾರಣದಿಂದ, ಮನುಷ್ಯರೆಲ್ಲರೂ ದೇವರ ಶತ್ರುಗಳಾಗಿರುತ್ತಾರೆ. ಆದರೆ ಆತನ ಕರುಣೆ ಪ್ರೀತಿಗಳಿಂದ, ದೇವರು ಯೇಸುವಿನ ಮೂಲಕ ತನ್ನೊಂದಿಗೆ ಸಮಾಧಾನ ಮಾಡಿಕೊಳ್ಳುವುದಕ್ಕೆ ಜನರಿಗೆ ಒಂದು ಮಾರ್ಗವನ್ನು ಉಂಟು ಮಾಡಿದ್ದಾನೆ.
- ಜನರು ತಮ್ಮ ಪಾಪಗಳಿಗಾಗಿ ಕ್ರಯಧನವನ್ನಾಗಿ ಮಾಡಿದ ಯೇಸುವಿನ ಯಜ್ಞದಲ್ಲಿ ಭರವಸೆವಿಡುವುದರ ಮೂಲಕ, ಜನರು ಕ್ಷಮೆಯನ್ನು ಹೊಂದುವರು ಮತ್ತು ದೇವರೊಂದಿಗೆ ಸಮಾಧಾನವನ್ನು ಪಡೆದುಕೊಳ್ಳುವರು.
ಅನುವಾದ ಸಲಹೆಗಳು:
- “ಸಂಧಾನ ಮಾಡು” ಎನ್ನುವ ಮಾತನ್ನು “ಸಮಾಧಾನವನ್ನುಂಟು ಮಾಡು” ಅಥವಾ “ಒಳ್ಳೇಯ ಸಂಬಂಧಗಳನ್ನು ಪುನಃ ಸ್ಥಾಪಿಸು” ಅಥವಾ “ಸ್ನೇಹಿತರಾಗುವಂತೆ ಮಾಡು” ಎಂದೂ ಅನುವಾದ ಮಾಡಬಹುದು.
- “ಸಂಧಾನ” ಎನ್ನುವ ಪದವನ್ನು “ಒಳ್ಳೇಯ ಸಂಬಂಧಗಳನ್ನು ಪುನಃ ಸ್ಥಾಪನೆ ಮಾಡುವುದು” ಅಥವಾ “ಸಮಾಧಾನವನ್ನುಂಟು ಮಾಡುವುದು” ಅಥವಾ ‘ಸಮಾಧಾನಕರವಾದ ಸಂಬಂಧಗಳನ್ನುಂಟು ಮಾಡುವುದು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಸಮಾಧಾನ, ಸರ್ವಾಂಗ ಹೋಮ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದ ಡೇಟಾ:
- Strong's: H2398 , H3722 , G604 , G1259 , G2433 , G2643, G2644