kn_tw/bible/other/peace.md

6.5 KiB

ಸಮಾಧಾನ, ಸಮಾಧಾನಭರಿತ, ಸಮಾದಾನಪಡಿಸುವವರು

ಪದದ ಅರ್ಥವಿವರಣೆ:

“ಸಮಾಧಾನ” ಎನ್ನುವ ಪದವು ಯಾವ ಭಯವಿಲ್ಲದ, ಯಾವ ಕಳವಳವಿಲ್ಲದ, ಯಾವ ಹೋರಾಟವಿಲ್ಲದ ಭಾವನೆಯನ್ನು ಅಥವಾ ಸ್ಥಿತಿಯನ್ನು ಸೂಚಿಸುತ್ತದೆ. “ಸಮಾಧಾನಭರಿತ”ನಾಗಿರುವ ಒಬ್ಬ ವ್ಯಕ್ತಿ ಯಾವಾಗಲೂ ಶಾಂತಿಯುತವಾಗಿ, ಸಂರಕ್ಷಿತವಾಗಿ ಮತ್ತು ಭದ್ರತೆಯುಳ್ಳ ವಾತಾವರಣವನ್ನು ಅನುಭವಿಸುತ್ತಾ ಇರುತ್ತಾನೆ.

  • ಹಳೇಯ ಒಡಂಬಡಿಕೆಯಲ್ಲಿ, "ಶಾಂತಿ" ಎಂಬ ಪದವು ಸಾಮಾನ್ಯವಾಗಿ ವ್ಯಕ್ತಿಯ ಯೋಗಾಕ್ಷೇಮ, ಸೌಖ್ಯ ಅಥವಾ ಸಂಪೂರ್ಣತೆಯ ಸಾಮಾನ್ಯ ಅರ್ಥವನ್ನು ಅರ್ಥೈಸುತ್ತದೆ.
  • "ಶಾಂತಿ" ಎಂಬುವುದು ಜನರ ಗುಂಪುಗಳು ಮತ್ತು ದೇಶಗಳು ಪರಸ್ಪರ ಯುದ್ಧವಿಲ್ಲದಿರುವುದನ್ನು ಉಲ್ಲೇಖಿಸಬಹುದು. ಈ ಜನರು "ಶಾಂತಿಯುತ ಸಂಬಂಧ" ಹೊಂದಿದ್ದಾರೆಂದು ಹೇಳಲಾಗುತ್ತದೆ.
  • ಯಾರಾದರೊಬ್ಬರೊಂದಿಗೆ ಅಥವಾ ಜನರ ಗುಂಪಿನೊಂದಿಗೆ “ಸಮಾಧಾನವನ್ನುಂಟು ಮಾಡು” ಎನ್ನುವ ಮಾತಿಗೆ ಯುದ್ಧವನ್ನು ನಿಲ್ಲಿಸುವುದಕ್ಕೆ ಕಾರ್ಯಗಳನ್ನು ಕೈಗೊಳ್ಳು ಎಂದರ್ಥ.
  • “ಸಮಾಧಾನವನ್ನುಂಟು ಮಾಡುವವನು” ಎನ್ನುವ ಮಾತು ಒಬ್ಬರೊಂದಿಗೆ ಒಬ್ಬರು ಸಮಾಧಾನದಿಂದ ಜೀವಿಸಬೇಕೆಂದು ಜನರನ್ನು ಪ್ರಭಾವಗೊಳಿಸುವುದಕ್ಕೆ ಮಾತುಗಳನ್ನು ಹೇಳುವ ಅಥವಾ ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ.
  • ಇತರ ಜನರೊಂದಿಗೆ “ಸಮಾಧಾನದಿಂದಿರುವುದು” ಎನ್ನುವುದಕ್ಕೆ ಆ ಜನರೊಂದಿಗೆ ವಿರುದ್ಧವಾಗಿ ಹೋರಾಟ ಮಾಡದಿರದ ಸ್ಥಿತಿಯಲ್ಲಿರುವುದು ಎಂದರ್ಥ.
  • ದೇವರು ಜನರ ಪಾಪಗಳಿಂದ ಬಿಡಿಸಿದಾಗ ದೇವರು ಮತ್ತು ಜನರ ಮಧ್ಯದಲ್ಲಿ ಒಳ್ಳೇಯ ಅಥವಾ ಸರಿಯಾದ ಸಂಬಂಧವು ಹೊಂದಿಕೊಂಡಿರುತ್ತಾರೆ. ಇದನ್ನೇ “ದೇವರೊಂದಿಗೆ ಸಮಾಧಾನ ಹೊಂದಿಕೊಳ್ಳುವುದು” ಎಂದು ಕರೆಯುತ್ತಾರೆ.
  • “ಕೃಪೆ ಮತ್ತು ಸಮಾಧಾನ” ಶುಭಾಷಯಗಳನ್ನು ಆಶೀರ್ವಾದ ವಚನಗಳಾಗಿ ಅಪೊಸ್ತಲರು ತಮ್ಮ ಸಹ ವಿಶ್ವಾಸಿಗಳಿಗೆ ಬರೆಯುವ ಪತ್ರಿಕೆಗಳಲ್ಲಿ ಉಪಯೋಗಿಸಿದ್ದಾರೆ.
  • “ಸಮಾಧಾನ” ಎನ್ನುವ ಪದವನ್ನು ದೇವರೊಂದಿಗೆ ಅಥವಾ ಇತರ ಜನರೊಂದಿಗೆ ಒಳ್ಳೇಯ ಸಂಬಂಧದಲ್ಲಿ ಇರುವ ಸ್ಥಿತಿಯನ್ನು ಸೂಚಿಸುತ್ತದೆ.

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 15:06 ಕಾನಾನಿನಲ್ಲಿರುವ ಇತರ ಜನಾಂಗಗಳೊಂದಿಗೆ ಯಾವುದೇ ರೀತಿಯ __ ಸಮಾಧಾನವನ್ನು __ ಮಾಡಿಕೊಳ್ಳಬಾರದೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದರು.
  • 15:12 ದೇವರು ಇಸ್ರಾಯೇಲ್ ಗಡಿಗಳೊಳಗೆ ಇರುವ ಜನರೆಲ್ಲರಿಗೆ __ ಸಮಾಧಾನವನ್ನು __ ಕೊಟ್ಟನು.
  • 16:03 ಇಸ್ರಾಯೇಲ್ಯರನ್ನು ತಮ್ಮ ಶತ್ರುಗಳಿಂದ ಬಿಡಿಸುವ ನಾಯಕನನ್ನು ದೇವರು ಅನುಗ್ರಹಿಸಿದರು ಮತ್ತು ಲೋಕಕ್ಕೆ __ ಸಮಾಧಾನವನ್ನು __ ಕೊಟ್ಟರು.
  • 21:13 ಇತರ ಜನರು ಮಾಡಿದ ಪಾಪಗಳಿಗೋಸ್ಕರ ಶಿಕ್ಷೆಯನ್ನು ಪಡೆದುಕೊಳ್ಳುವುದಕ್ಕೆ ಆತನು (ಮೆಸ್ಸೀಯ) ಮರಣ ಹೊಂದಿದನು. ಆತನ ಶಿಕ್ಷೆಯು ದೇವರು ಮತ್ತು ಜನರ ಮಧ್ಯದೊಳಗೆ __ ಸಮಾಧಾನವನ್ನು __ ತಂದಿತ್ತು.
  • 48:14 ದಾವೀದನು ಇಸ್ರಾಯೇಲಿಗೆ ಅರಸನಾಗಿದ್ದನು, ಆದರೆ ಯೇಸು ಸರ್ವ ಸೃಷ್ಟಿಗೆ ಅರಸನಾಗಿದ್ದಾನೆ. ಆತನು ತಿರುಗಿ ಬಂದು, ತನ್ನ ರಾಜ್ಯವನ್ನು ನ್ಯಾಯದಿಂದ ಮತ್ತು __ ಸಮಾಧಾನದಿಂದ __ ಸದಾಕಾಲವೂ ಆಳುತ್ತಾನೆ.
  • 50:17 ಯೇಸು ತನ್ನ ರಾಜ್ಯವನ್ನು ನ್ಯಾಯದಿಂದ ಮತ್ತು __ ಸಮಾಧಾನದಿಂದ __ ಆಳುತ್ತಾನೆ ಮತ್ತು ಆತನು ತನ್ನ ಜನರೊಂದಿಗೆ ಸದಾಕಾಲವೂ ಇರುತ್ತಾನೆ.

ಪದ ಡೇಟಾ:

  • Strong's: H5117, H7961, H7962, H7965, H7999, H8001, H8002, H8003, H8252, G269, G31514, G1515, G1516, G1517, G1518, G2272