3.8 KiB
3.8 KiB
ಪ್ರಾಯಶ್ಚಿತ್ತ, ವಿಮೋಚನೆ, ಬಿಡುಗಡೆಗಳು
ಪದದ ಅರ್ಥವಿವರಣೆ:
“ವಿಮೋಚನೆ” ಮತ್ತು “ಪ್ರಾಯಶ್ಚಿತ್ತ” ಎನ್ನುವ ಪದಗಳು ಜನರ ಪಾಪಗಳಿಗೋಸ್ಕರ ದೇವರು ಯಾವರೀತಿ ತ್ಯಾಗವನ್ನು ಮಾಡಿದ್ದಾರೆಂದು ಮತ್ತು ಪಾಪಕ್ಕಾಗಿ ತನ್ನ ಕೋಪಾಗ್ನಿಯನ್ನು ಯಾವರೀತಿ ಶಮನಗೊಳಿಸಿಕೊಂಡಿದ್ದಾರೆಂದು ಸೂಚಿಸುತ್ತದೆ.
- ಹಳೇ ಒಡಂಬಡಿಕೆಯಲ್ಲಿ, ಇಸ್ರಾಯೇಲ್ಯರು ತಾವು ಮಾಡಿದ ಪಾಪಗಳಿಗೋಸ್ಕರ ಒಂದು ಪ್ರಾಣಿಯನ್ನು ಬಲಿ ಕೊಟ್ಟು ರಕ್ತದ ಬಲಿದಾನವನ್ನು ಅರ್ಪಿಸುವುದರ ಮೂಲಕ ತಾತ್ಕಾಲಿಕವಾದ ಪ್ರಾಯಶ್ಚಿತ್ತವನ್ನು ದೇವರು ಅನುಮತಿಸಿದ್ದರು.
- ಹೊಸ ಒಡಂಬಡಿಕೆಯಲ್ಲಿ ದಾಖಲಿಸಿದಂತೆ, ಶಿಲುಬೆಯ ಮೇಲೆ ಕ್ರಿಸ್ತನ ಮರಣವು ಸತ್ಯ ಮತ್ತು ಅದೇ ಪಾಪಕ್ಕಾಗಿ ಮಾಡಿದ ಶಾಶ್ವತವಾದ ಪ್ರಾಯಶ್ಚಿತ್ತವಾಗಿರುತ್ತದೆ.
- ಯೇಸು ಮರಣ ಹೊಂದಿದಾಗ, ಜನರ ಹೊಂದಬೇಕಾದ ಶಿಕ್ಷೆಯನ್ನು ಆವರು ತನ್ನ ಮೇಲೆ ಹಾಕಿಕೊಂಡಿದ್ದಾರೆ ಯಾಕಂದರೆ ಜನರ ಪಾಪಗಳಿಂದ ಬಿಡಿಸುವುದಕ್ಕೋಸ್ಕರ ಆ ತ್ಯಾಗವನ್ನು ಮಾಡಿದ್ದರು. ಆತನು ತನ್ನ ತ್ಯಾಗಪೂರಿತವಾದ ಮರಣದಿಂದ ಪ್ರಾಯಶ್ಚಿತ್ತವಾದ ಬೆಲೆಯನ್ನು ಸಲ್ಲಿಸಿದ್ದಾರೆ.
ಅನುವಾದ ಸಲಹೆಗಳು:
- “ವಿಮೋಚನೆ” ಎನ್ನುವ ಪದವನ್ನು “ಬೆಲೆಯನ್ನು ಸಲ್ಲಿಸು” ಅಥವಾ “ಕ್ರಯಧನವನ್ನು ಕೊಡು” ಅಥವಾ “ಒಬ್ಬರ ಪಾಪಗಳು ಕ್ಷಮಿಸಲ್ಪಡುವಂತೆ ಮಾಡು” ಅಥವಾ “ಮಾಡಿದ ಅಪರಾಧಕ್ಕೆ ಪರಿಹಾರ ಸಲ್ಲಿಸು” ಎಂದೂ ಅನುವಾದ ಮಾಡಬಹುದು.
- “ಪ್ರಾಯಶ್ಚಿತ್ತ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಕ್ರಯಧನ” ಅಥವಾ “ಪಾಪಕ್ಕಾಗಿ ಸಲ್ಲಿಸಬೇಕಾದ ತ್ಯಾಗ” ಅಥವಾ “ಕ್ಷಮಾಪಣೆಯನ್ನು ಅನುಗ್ರಹಿಸುವುದು” ಎನ್ನುವ ಮಾತುಗಳೂ ಒಳಗೊಂಡಿರುತ್ತವೆ.
- ಈ ಪದವನ್ನು ಅನುವಾದ ಮಾಡುವಾಗ ಹಣವನ್ನು ಪಾವತಿಸುವ ಅರ್ಥವು ಬರದಂತೆ ನೋಡಿಕೊಳ್ಳಿರಿ.
(ಈ ಪದಗಳನ್ನು ಸಹ ನೋಡಿರಿ : ಪ್ರಾಯಶ್ಚಿತ್ತ ಮುಚ್ಚಳ, ಕ್ಷಮಿಸು, ತ್ಯಾಗ, ಸಮಾಧಾನಪಡು, ವಿಮೋಚಿಸು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3722, H3725, G2643