8.1 KiB
8.1 KiB
ಕ್ಷಮಿಸು, ಕ್ಷಮಿಸಲ್ಪಡು, ಕ್ಷಮಾಪಣೆ, ಕ್ಷಮೆ, ಕ್ಷಮಿಸುವಿಕೆ
ಪದದ ಅರ್ಥವಿವರಣೆ:
ಒಬ್ಬರನ್ನು ಕ್ಷಮಿಸು ಎನ್ನುವುದಕ್ಕೆ ಅವರು ನೋಯಿಸುವಂತಹ ಕೆಲಸ ಮಾಡಿದ್ದರೂ ಆ ವ್ಯಕ್ತಿಯ ಮೇಲೆ ದ್ವೇಷವನ್ನು ಇಟ್ಟುಕೊಳ್ಳಬೇಡ. “ಕ್ಷಮಾಪಣೆ” ಎನ್ನುವುದು ಒಬ್ಬರನ್ನು ಕ್ಷಮಿಸುವ ಕ್ರಿಯೆಯನ್ನು ಸೂಚಿಸುತ್ತದೆ.
- ಒಬ್ಬರನ್ನು ಕ್ಷಮಿಸುವುದು ಎನ್ನುವುದಕ್ಕೆ ಆ ವ್ಯಕ್ತಿ ಮಾಡಿದ ತಪ್ಪು ಕೆಲಸಕ್ಕೆ ಅಥವಾ ಪಾಪಗಳಿಗೆ ಯಾವ ಶಿಕ್ಷೆಯನ್ನು ಕೊಡದೇ ಇರುವುದು ಎಂದರ್ಥ.
- “ಸಾಲವನ್ನು ಕ್ಷಮಿಸು” ಎಂದೆನ್ನುವ ಮಾತಿನ ಅರ್ಥದಂತೆ ಈ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಿದರೆ, “ರದ್ದುಗೊಳಿಸು” ಎನ್ನುವ ಅರ್ಥ ಬರುತ್ತದೆ,
- ಜನರು ತಮ್ಮ ಪಾಪಗಳನ್ನು ಒಪ್ಪಿಕೊಂಡರೆ, ಯೇಸುವು ಶಿಲುಬೆಯ ಮೇಲೆ ಮಾಡಿದ ತ್ಯಾಗಪೂರಿತವಾದ ಮರಣದ ಆಧಾರದ ಮೇಲೆ ದೇವರು ಅವರನ್ನು ಕ್ಷಮಿಸುವನು.
- ನಾನು ಕ್ಷಮಿಸಿದಂತೆಯೇ ನೀವೂ ಇತರರನ್ನು ಕ್ಷಮಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದ್ದಾನೆ.
“ಕ್ಷಮೆ” ಎನ್ನುವ ಪದಕ್ಕೆ ಕ್ಷಮಿಸುವುದು ಮತ್ತು ಒಬ್ಬರು ಮಾಡಿದ ಪಾಪಕ್ಕೆ ಅವರನ್ನು ಶಿಕ್ಷಿಸದಿರುವುದು ಎನ್ನುವ ಅರ್ಥಗಳು ಇವೆ.
- ಈ ಪದಕ್ಕೆ “ಕ್ಷಮಿಸು” ಎನ್ನುವ ಒಂದೇ ರೀತಿಯ ಅರ್ಥವು ಹೊಂದಿರುತ್ತದೆ, ಆದರೆ ಅಪರಾಧ ಭಾವನೆಗೆ ಒಳಗಾದ ವ್ಯಕ್ತಿಯನ್ನು ಶಿಕ್ಷಿಸಬಾರದೆನ್ನುವ ಸಾಧಾರಣವಾದ ನಿರ್ಣಯವನ್ನು ತೆಗೆದುಕೊಳ್ಳುವ ಅರ್ಥವನ್ನು ಒಳಗೊಂಡಿರುತ್ತದೆ.
- ನ್ಯಾಯಾಲಯದಲ್ಲಿ ನ್ಯಾಯಾಧೀಶರು ಅಪರಾಧ ಮಾಡಿದ ವ್ಯಕ್ತಿಯನ್ನು ಕ್ಷಮಿಸುವ ಅವಕಾಶವಿದೆ.
- ನಾವು ಪಾಪದ ವಿಷಯದಲ್ಲಿ ಅಪರಾಧಕ್ಕೆ ಒಳಗಾಗಿದ್ದರೂ, ಯೇಸುಕ್ರಿಸ್ತ ನಮ್ಮನ್ನು ನರಕಕ್ಕೆ ಕಳುಹಿಸುವ ಶಿಕ್ಷೆಯನ್ನು ಕೊಡದೇ, ಆತನು ಶಿಲುಬೆಯಲ್ಲಿ ಮಾಡಿದ ತ್ಯಾಗಪೂರಿತವಾದ ಮರಣದಿಂದ ನಮ್ಮನ್ನು ಕ್ಷಮಿಸಿದ್ದಾನೆ
ಅನುವಾದ ಸಲಹೆಗಳು:
- ಸಂದರ್ಭಕ್ಕೆ ಅನುಸಾರವಾಗಿ, “ಕ್ಷಮಿಸು” ಎನ್ನುವ ಪದವನ್ನು “ಕ್ಷಮೆ” ಅಥವ “ರದ್ದುಗೊಳಿಸು” ಅಥವಾ “ಬಿಡುಗಡೆ ಮಾಡು” ಅಥವಾ (ಒಬ್ಬರ ಮೇಲೆ) “ಯಾವ ದ್ವೇಷವನ್ನು ಇಟ್ಟುಕೊಳ್ಳಬೇಡ” ಎಂದೂ ಅನುವಾದ ಮಾಡಬಹುದು.
- “ಕ್ಷಮಾಪಣೆ” ಎನ್ನುವ ಪದವನ್ನು “ಅಸಮಾಧಾನವನ್ನು ಅಭ್ಯಾಸ ಮಾಡಬೇಡ” ಅಥವಾ “ಅಪರಾಧಿ ಎಂದು ಯಾರನ್ನೂ ನಿರ್ಧರಿಸಬೇಡ” ಅಥವಾ “ಕ್ಷಮಿಸುವ ಕ್ರಿಯೆ” ಎಂದೂ ಅರ್ಥ ಬರುವ ಮಾತುಗಳಿಂದ ಅನುವಾದ ಮಾಡಬಹುದು.
- ಕ್ಷಮಿಸುವುದಕ್ಕೆ ಸಾಧಾರಣವಾಗಿ ನಿರ್ಣಯ ತೆಗೆದುಕೊಳ್ಳುವುದಕ್ಕೆ ಬೇರೊಂದು ಪದವು ಭಾಷೆಯಲ್ಲಿ ಇರುವುದಾದರೆ, ಅದನ್ನು “ಕ್ಷಮೆ” ಎನ್ನುವ ಪದಕ್ಕೆ ಬದಲಾಗಿ ಉಪಯೋಗಿಸಬಹುದು.
(ಈ ಪದಗಳನ್ನು ಸಹ ನೋಡಿರಿ : ಅಪರಾಧ)
ಸತ್ಯವೇದದ ಅನುಬಂಧ ವಾಕ್ಯಗಳು :
- ಆದಿ.50:17
- ಅರಣ್ಯ.14:17-19
- ಧರ್ಮೋ.29:20-21
- ಯೆಹೋ.24:19-20
- 2 ಅರಸ.05:17-19
- ಕೀರ್ತನೆ.025:11
- ಕೀರ್ತನೆ.025:17-19
- ಯೆಶಯಾ.55:6-7
- ಯೆಶಯಾ.40:02
- ಲೂಕ.05:21
- ಅಪೊ.ಕೃತ್ಯ.08:22
- ಎಫೆಸ.04:31-32
- ಕೊಲೊಸ್ಸೆ.03:12-14
- 1 ಯೋಹಾನ.02:12-14
ಸತ್ಯವೇದ ಕತೆಗಳಿಂದ ಉದಾಹರೆಣೆಗಳು:
- 07:10 ಆದರೆ ಏಸಾವನು ಯಾಕೋಬನನ್ನು __ ಕ್ಷಮಿಸಿದ್ದನು __ ಮತ್ತು ಅವರು ಒಬ್ಬರನ್ನೊಬ್ಬರು ನೋಡಿಕೊಳ್ಳುವುದಕ್ಕೆ ಸಂತೋಷಪಟ್ಟರು.
- 13:15 ಆದನಂತರ ಮೋಶೆ ಮತ್ತೊಮ್ಮೆ ಪರ್ವತವನ್ನು ಏರಿದನು ಮತ್ತು ದೇವರೇ ಈ ಜನರನ್ನು __ ಕ್ಷಮಿಸು __ ಎಂದು ಪ್ರಾರ್ಥನೆ ಮಾಡಿದನು. ದೇವರು ಮೋಶೆಯ ಪ್ರಾರ್ಥನೆಯನ್ನು ಕೇಳಿ, ಅವರನ್ನು __ ಕ್ಷಮಿಸಿದನು __.
- 17:13 ದಾವೀದನು ತನ್ನ ಪಾಪಕ್ಕಾಗಿ ಪಶ್ಚಾತ್ತಾಪಪಟ್ಟನು ಮತ್ತು ದೇವರು ಅವನನ್ನು __ ಕ್ಷಮಿಸಿದನು __.
- 21:05 ಹೊಸ ಒಡಂಬಡಿಕೆಯಲ್ಲಿ ದೇವರು ತನ್ನ ಧರ್ಮಶಾಸ್ತ್ರವನ್ನು ತನ್ನ ಜನರ ಮೇಲೆ ಬರೆಯುತ್ತಾನೆ, ಜನರು ದೇವರನ್ನು ವೈಯುಕ್ತಿಕವಾಗಿ ತಿಳಿದುಕೊಳ್ಳುತ್ತಾರೆ, ಅವರು ಆತನ ಪ್ರಜೆಯಾಗಿರುವರು, ಮತ್ತು ದೇವರು ಆವರ ಪಾಪಗಳನ್ನು __ ಕ್ಷಮಿಸುವನು __.
- 29:01 “ಬೋಧಕನೆ, ನನ್ನ ಸಹೋದರನು ನನಗೆ ವಿರುದ್ಧವಾಗಿ ಪಾಪಗಳನ್ನು ಮಾಡಿದಾಗ, ನಾನು ಎಷ್ಟುಸಲ __ ಕ್ಷಮಿಸಬೇಕು __?” ಎಂದು ಒಂದು ದಿನ ಪೇತ್ರನು ಯೇಸುವನ್ನು ಕೇಳಿದನು,
- 29:08 ನೀನು ನನ್ನನ್ನು ಬೇಡಿಕೊಂಡಿದ್ದರಿಂದ ನಾನು ನಿನ್ನನ್ನು __ ಕ್ಷಮಿಸುತ್ತಿದ್ದೇನೆ __.
- 38:05 ಆದನಂತರ ಯೇಸು ಪಾತ್ರೆಯನ್ನು ತೆಗೆದುಕೊಂಡು, “ಇದನ್ನು ಕುಡಿಯಿರಿ. ಇದು ಪಾಪಗಳನ್ನು __ ಕ್ಷಮಿಸುವುದಕ್ಕೆ __ ಸುರಿಸಲ್ಪಡುವ ನನ್ನ ಹೊಸ ಒಡಂಬಡಿಕೆಯ ರಕ್ತ” ಎಂದು ಹೇಳಿದನು.
ಪದ ಡೇಟಾ:
- H5546, H5547, H3722, H5375, H5545, H5547, H7521, G859, G863, G5483