kn_tw/bible/kt/forgive.md

56 lines
8.1 KiB
Markdown

# ಕ್ಷಮಿಸು, ಕ್ಷಮಿಸಲ್ಪಡು, ಕ್ಷಮಾಪಣೆ, ಕ್ಷಮೆ, ಕ್ಷಮಿಸುವಿಕೆ
## ಪದದ ಅರ್ಥವಿವರಣೆ:
ಒಬ್ಬರನ್ನು ಕ್ಷಮಿಸು ಎನ್ನುವುದಕ್ಕೆ ಅವರು ನೋಯಿಸುವಂತಹ ಕೆಲಸ ಮಾಡಿದ್ದರೂ ಆ ವ್ಯಕ್ತಿಯ ಮೇಲೆ ದ್ವೇಷವನ್ನು ಇಟ್ಟುಕೊಳ್ಳಬೇಡ. “ಕ್ಷಮಾಪಣೆ” ಎನ್ನುವುದು ಒಬ್ಬರನ್ನು ಕ್ಷಮಿಸುವ ಕ್ರಿಯೆಯನ್ನು ಸೂಚಿಸುತ್ತದೆ.
* ಒಬ್ಬರನ್ನು ಕ್ಷಮಿಸುವುದು ಎನ್ನುವುದಕ್ಕೆ ಆ ವ್ಯಕ್ತಿ ಮಾಡಿದ ತಪ್ಪು ಕೆಲಸಕ್ಕೆ ಅಥವಾ ಪಾಪಗಳಿಗೆ ಯಾವ ಶಿಕ್ಷೆಯನ್ನು ಕೊಡದೇ ಇರುವುದು ಎಂದರ್ಥ.
* “ಸಾಲವನ್ನು ಕ್ಷಮಿಸು” ಎಂದೆನ್ನುವ ಮಾತಿನ ಅರ್ಥದಂತೆ ಈ ಪದವನ್ನು ಅಲಂಕಾರಿಕವಾಗಿ ಉಪಯೋಗಿಸಿದರೆ, “ರದ್ದುಗೊಳಿಸು” ಎನ್ನುವ ಅರ್ಥ ಬರುತ್ತದೆ,
* ಜನರು ತಮ್ಮ ಪಾಪಗಳನ್ನು ಒಪ್ಪಿಕೊಂಡರೆ, ಯೇಸುವು ಶಿಲುಬೆಯ ಮೇಲೆ ಮಾಡಿದ ತ್ಯಾಗಪೂರಿತವಾದ ಮರಣದ ಆಧಾರದ ಮೇಲೆ ದೇವರು ಅವರನ್ನು ಕ್ಷಮಿಸುವನು.
* ನಾನು ಕ್ಷಮಿಸಿದಂತೆಯೇ ನೀವೂ ಇತರರನ್ನು ಕ್ಷಮಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದ್ದಾನೆ.
“ಕ್ಷಮೆ” ಎನ್ನುವ ಪದಕ್ಕೆ ಕ್ಷಮಿಸುವುದು ಮತ್ತು ಒಬ್ಬರು ಮಾಡಿದ ಪಾಪಕ್ಕೆ ಅವರನ್ನು ಶಿಕ್ಷಿಸದಿರುವುದು ಎನ್ನುವ ಅರ್ಥಗಳು ಇವೆ.
* ಈ ಪದಕ್ಕೆ “ಕ್ಷಮಿಸು” ಎನ್ನುವ ಒಂದೇ ರೀತಿಯ ಅರ್ಥವು ಹೊಂದಿರುತ್ತದೆ, ಆದರೆ ಅಪರಾಧ ಭಾವನೆಗೆ ಒಳಗಾದ ವ್ಯಕ್ತಿಯನ್ನು ಶಿಕ್ಷಿಸಬಾರದೆನ್ನುವ ಸಾಧಾರಣವಾದ ನಿರ್ಣಯವನ್ನು ತೆಗೆದುಕೊಳ್ಳುವ ಅರ್ಥವನ್ನು ಒಳಗೊಂಡಿರುತ್ತದೆ.
* ನ್ಯಾಯಾಲಯದಲ್ಲಿ ನ್ಯಾಯಾಧೀಶರು ಅಪರಾಧ ಮಾಡಿದ ವ್ಯಕ್ತಿಯನ್ನು ಕ್ಷಮಿಸುವ ಅವಕಾಶವಿದೆ.
* ನಾವು ಪಾಪದ ವಿಷಯದಲ್ಲಿ ಅಪರಾಧಕ್ಕೆ ಒಳಗಾಗಿದ್ದರೂ, ಯೇಸುಕ್ರಿಸ್ತ ನಮ್ಮನ್ನು ನರಕಕ್ಕೆ ಕಳುಹಿಸುವ ಶಿಕ್ಷೆಯನ್ನು ಕೊಡದೇ, ಆತನು ಶಿಲುಬೆಯಲ್ಲಿ ಮಾಡಿದ ತ್ಯಾಗಪೂರಿತವಾದ ಮರಣದಿಂದ ನಮ್ಮನ್ನು ಕ್ಷಮಿಸಿದ್ದಾನೆ
## ಅನುವಾದ ಸಲಹೆಗಳು:
* ಸಂದರ್ಭಕ್ಕೆ ಅನುಸಾರವಾಗಿ, “ಕ್ಷಮಿಸು” ಎನ್ನುವ ಪದವನ್ನು “ಕ್ಷಮೆ” ಅಥವ “ರದ್ದುಗೊಳಿಸು” ಅಥವಾ “ಬಿಡುಗಡೆ ಮಾಡು” ಅಥವಾ (ಒಬ್ಬರ ಮೇಲೆ) “ಯಾವ ದ್ವೇಷವನ್ನು ಇಟ್ಟುಕೊಳ್ಳಬೇಡ” ಎಂದೂ ಅನುವಾದ ಮಾಡಬಹುದು.
* “ಕ್ಷಮಾಪಣೆ” ಎನ್ನುವ ಪದವನ್ನು “ಅಸಮಾಧಾನವನ್ನು ಅಭ್ಯಾಸ ಮಾಡಬೇಡ” ಅಥವಾ “ಅಪರಾಧಿ ಎಂದು ಯಾರನ್ನೂ ನಿರ್ಧರಿಸಬೇಡ” ಅಥವಾ “ಕ್ಷಮಿಸುವ ಕ್ರಿಯೆ” ಎಂದೂ ಅರ್ಥ ಬರುವ ಮಾತುಗಳಿಂದ ಅನುವಾದ ಮಾಡಬಹುದು.
* ಕ್ಷಮಿಸುವುದಕ್ಕೆ ಸಾಧಾರಣವಾಗಿ ನಿರ್ಣಯ ತೆಗೆದುಕೊಳ್ಳುವುದಕ್ಕೆ ಬೇರೊಂದು ಪದವು ಭಾಷೆಯಲ್ಲಿ ಇರುವುದಾದರೆ, ಅದನ್ನು “ಕ್ಷಮೆ” ಎನ್ನುವ ಪದಕ್ಕೆ ಬದಲಾಗಿ ಉಪಯೋಗಿಸಬಹುದು.
(ಈ ಪದಗಳನ್ನು ಸಹ ನೋಡಿರಿ : [ಅಪರಾಧ](../kt/guilt.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಆದಿ.50:17](rc://*/tn/help/gen/50/17)
* [ಅರಣ್ಯ.14:17-19](rc://*/tn/help/num/14/17)
* [ಧರ್ಮೋ.29:20-21](rc://*/tn/help/deu/29/20)
* [ಯೆಹೋ.24:19-20](rc://*/tn/help/jos/24/19)
* [2 ಅರಸ.05:17-19](rc://*/tn/help/2ki/05/17)
* [ಕೀರ್ತನೆ.025:11](rc://*/tn/help/psa/025/011)
* [ಕೀರ್ತನೆ.025:17-19](rc://*/tn/help/psa/025/017)
* [ಯೆಶಯಾ.55:6-7](rc://*/tn/help/isa/55/06)
* [ಯೆಶಯಾ.40:02](rc://*/tn/help/isa/40/02)
* [ಲೂಕ.05:21](rc://*/tn/help/luk/05/21)
* [ಅಪೊ.ಕೃತ್ಯ.08:22](rc://*/tn/help/act/08/22)
* [ಎಫೆಸ.04:31-32](rc://*/tn/help/eph/04/31)
* [ಕೊಲೊಸ್ಸೆ.03:12-14](rc://*/tn/help/col/03/12)
* [1 ಯೋಹಾನ.02:12-14](rc://*/tn/help/1jn/02/12)
## ಸತ್ಯವೇದ ಕತೆಗಳಿಂದ ಉದಾಹರೆಣೆಗಳು:
* __[07:10](rc://*/tn/help/obs/07/10)__ ಆದರೆ ಏಸಾವನು ಯಾಕೋಬನನ್ನು __ ಕ್ಷಮಿಸಿದ್ದನು __ ಮತ್ತು ಅವರು ಒಬ್ಬರನ್ನೊಬ್ಬರು ನೋಡಿಕೊಳ್ಳುವುದಕ್ಕೆ ಸಂತೋಷಪಟ್ಟರು.
* __[13:15](rc://*/tn/help/obs/13/15)__ ಆದನಂತರ ಮೋಶೆ ಮತ್ತೊಮ್ಮೆ ಪರ್ವತವನ್ನು ಏರಿದನು ಮತ್ತು ದೇವರೇ ಈ ಜನರನ್ನು __ ಕ್ಷಮಿಸು __ ಎಂದು ಪ್ರಾರ್ಥನೆ ಮಾಡಿದನು. ದೇವರು ಮೋಶೆಯ ಪ್ರಾರ್ಥನೆಯನ್ನು ಕೇಳಿ, ಅವರನ್ನು __ ಕ್ಷಮಿಸಿದನು __.
* __[17:13](rc://*/tn/help/obs/17/13)__ ದಾವೀದನು ತನ್ನ ಪಾಪಕ್ಕಾಗಿ ಪಶ್ಚಾತ್ತಾಪಪಟ್ಟನು ಮತ್ತು ದೇವರು ಅವನನ್ನು __ ಕ್ಷಮಿಸಿದನು __.
* __[21:05](rc://*/tn/help/obs/21/05)__ ಹೊಸ ಒಡಂಬಡಿಕೆಯಲ್ಲಿ ದೇವರು ತನ್ನ ಧರ್ಮಶಾಸ್ತ್ರವನ್ನು ತನ್ನ ಜನರ ಮೇಲೆ ಬರೆಯುತ್ತಾನೆ, ಜನರು ದೇವರನ್ನು ವೈಯುಕ್ತಿಕವಾಗಿ ತಿಳಿದುಕೊಳ್ಳುತ್ತಾರೆ, ಅವರು ಆತನ ಪ್ರಜೆಯಾಗಿರುವರು, ಮತ್ತು ದೇವರು ಆವರ ಪಾಪಗಳನ್ನು __ ಕ್ಷಮಿಸುವನು __.
* __[29:01](rc://*/tn/help/obs/29/01)__ “ಬೋಧಕನೆ, ನನ್ನ ಸಹೋದರನು ನನಗೆ ವಿರುದ್ಧವಾಗಿ ಪಾಪಗಳನ್ನು ಮಾಡಿದಾಗ, ನಾನು ಎಷ್ಟುಸಲ __ ಕ್ಷಮಿಸಬೇಕು __?” ಎಂದು ಒಂದು ದಿನ ಪೇತ್ರನು ಯೇಸುವನ್ನು ಕೇಳಿದನು,
* __[29:08](rc://*/tn/help/obs/29/08)__ ನೀನು ನನ್ನನ್ನು ಬೇಡಿಕೊಂಡಿದ್ದರಿಂದ ನಾನು ನಿನ್ನನ್ನು __ ಕ್ಷಮಿಸುತ್ತಿದ್ದೇನೆ __.
* __[38:05](rc://*/tn/help/obs/38/05)__ ಆದನಂತರ ಯೇಸು ಪಾತ್ರೆಯನ್ನು ತೆಗೆದುಕೊಂಡು, “ಇದನ್ನು ಕುಡಿಯಿರಿ. ಇದು ಪಾಪಗಳನ್ನು __ ಕ್ಷಮಿಸುವುದಕ್ಕೆ __ ಸುರಿಸಲ್ಪಡುವ ನನ್ನ ಹೊಸ ಒಡಂಬಡಿಕೆಯ ರಕ್ತ” ಎಂದು ಹೇಳಿದನು.
## ಪದ ಡೇಟಾ:
* H5546, H5547, H3722, H5375, H5545, H5547, H7521, G859, G863, G5483