3.7 KiB
3.7 KiB
ಪ್ರಾಯಶ್ಚಿತ್ತ ಮುಚ್ಚಳ
ಪದದ ಅರ್ಥವಿವರಣೆ:
“ಪ್ರಾಯಶ್ಚಿತ್ತ ಮುಚ್ಚಳ” ಎನ್ನುವದನ್ನು ಒಡಂಬಡಿಕೆಯ ಮಂಜೂಷದ ಮೇಲೆ ಮುಚ್ಚುವುದಕ್ಕೆ ಉಪಯೋಗಿಸುವ ಬಂಗಾರದ ಹಲಗೆಯಾಗಿರುತ್ತದೆ. ಅನೇಕ ಆಂಗ್ಲ ಅನುವಾದಗಳಲ್ಲಿ “ಪ್ರಾಯಶ್ಚಿತ್ತ ಹಲಗೆ” ಎಂದೂ ಸೂಚಿಸಿದ್ದಾರೆ.
- ಪ್ರಾಯಶ್ಚಿತ್ತ ಮುಚ್ಚಳ ಸುಮಾರು 115 ಸೆಂಟಿ ಮೀಟರ್ ಉದ್ದ ಮತ್ತು 70 ಸೆಂಟಿ ಮೀಟರ್ ಅಗಲ ಇರುತ್ತದೆ.
- ಪ್ರಾಯಶ್ಚಿತ್ತ ಮುಚ್ಚಳದ ಮೇಲೆ ಎರಡು ಬಂಗಾರದ ಕೆರೂಬಿಗಳನ್ನು ಇಟ್ಟು, ಅವುಗಳ ರೆಕ್ಕೆಗಳು ಅದಕ್ಕೆ ಅಂಟಿಕೊಂಡಿರುವಂತೆ ಮಾಡಿರುತ್ತಾರೆ.
- ಯೆಹೋವನು ಪ್ರಾಯಶ್ಚಿತ್ತ ಮುಚ್ಚಳ ಮೇಲೆ ಇರುವ ಕೆರೂಬಿಗಳ ರೆಕ್ಕೆಗಳ ಮಧ್ಯೆದಲ್ಲಿ ಇಸ್ರಾಯೇಲ್ಯರೊಂದಿಗೆ ಭೇಟಿಯಾಗುತ್ತಾನೆಂದು ಹೇಳಿದನು, ಜನರ ಪ್ರತಿನಿಧಿಯಾಗಿ ಯೆಹೋವನನ್ನು ಭೇಟಿಯಾಗುವುದಕ್ಕೆ ಕೇವಲ ಪ್ರಧಾನ ಯಾಜಕನಿಗೆ ಮಾತ್ರ ಅನುಮತಿ ಇದ್ದಿತ್ತು.
- ಕೆಲವೊಂದುಸಲ ಈ ಪ್ರಾಯಶ್ಚಿತ್ತ ಮುಚ್ಚಳವನ್ನು “ಕೃಪಾಸನ” ಎಂದು ಸೂಚಿಸಿದ್ದಾರೆ. ಯಾಕಂದರೆ ಪಾಪ ಸ್ವಭಾವಿಗಳಾದ ಜನರನ್ನು ವಿಮೋಚಿಸುವುದಕ್ಕೆ ದೇವರ ಕೃಪೆಯು/ಕರುಣೆಯು ಕೆಳಗೆ ಇಳಿದು ಬರುತ್ತಿತ್ತು.
ಅನುವಾದ ಸಲಹೆಗಳು:
- ಈ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ವಿಮೋಚಿಸುತ್ತೇನೆಂದು ದೇವರು ವಾಗ್ಧಾನ ಮಾಡಿದ ಮಂಜೂಷದ ಮುಚ್ಚಳ” ಅಥವಾ “ದೇವರು ವಿಮೋಚಿಸುವ ಸ್ಥಳ” ಅಥವಾ “ದೇವರು ಕ್ಷಮಿಸುವ ಮತ್ತು ಸಮಾಧಾನಪಡಿಸುವ ಮಂಜೂಷದ ಮುಚ್ಚಳ” ಎನ್ನುವ ಮಾತುಗಳೂ ಒಳಗೊಂಡಿರುತ್ತವೆ.
- “ತ್ಯಾಗದ ಸ್ಥಳ” ಎಂದೂ ಅರ್ಥ ಬರುತ್ತದೋ.
- ಈ ಪದದೊಂದಿಗೆ “ಪ್ರಾಯಶ್ಚಿತ್ತ”, “ತ್ಯಾಗ” ಮತ್ತು “ವಿಮೋಚನೆ” ಎನ್ನುವ ಪದಗಳನ್ನು ಅನುವಾದನೆ ಮಾಡುತ್ತಿರುವ ಪದಗಳನ್ನು ಹೋಲಿಸಿ ನೋಡಿರಿ.
(ಈ ಪದಗಳನ್ನು ಸಹ ನೋಡಿರಿ : ಒಡಂಬಡಿಕೆಯ ಮಂಜೂಷ, ಪ್ರಾಯಶ್ಚಿತ್ತ, ಕೆರೂಬಿ, ತ್ಯಾಗ, ವಿಮೋಚನೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3727, G2435