5.1 KiB
5.1 KiB
ಕೆರೂಬಿ, ಕೆರೂಬಿಗಳು, ಕೆರೂಬಿಯರು
ಪದದ ಅರ್ಥವಿವರಣೆ:
“ಕೆರೂಬಿ” ಎನ್ನುವ ಪದವು ಮತ್ತು ಇದರ ಬಹುವಚನ ಪದವಾದ “ಕೆರೂಬಿಗಳು” ಎನ್ನುವವು ದೇವರು ಉಂಟು ಮಾಡಿದ ಒಂದು ವಿಶೇಷವಾದ ಪರಲೋಕದ ಜೀವಿಗಳಾಗಿರುತ್ತವೆ. ಕೆರೂಬಿಗಳು ರೆಕ್ಕೆಗಳನ್ನು ಮತ್ತು ಬೆಂಕಿ ಜ್ವಾಲೆಗಳನ್ನು ಹೊಂದಿರುತ್ತವೆಯೆಂದು ಸತ್ಯವೇದವು ವಿವರಿಸುತ್ತಿದೆ.
- ಕೆರೂಬಿಗಳು ದೇವರು ಶಕ್ತಿಯನ್ನು ಮತ್ತು ಆತನ ಮಹಿಮೆಯನ್ನು ತೋರಿಸುತ್ತವೆ, ಪರಿಶುದ್ಧವಾದ ವಿಷಯಗಳಿಗೆ ಅಥವಾ ಜನರಿಗೆ ಅಂಗರಕ್ಷಕರಾಗಿದ್ದಂತೆ ಕಾಣಿಸಿಕೊಳ್ಳುತ್ತವೆ.
- ಆದಾಮ ಮತ್ತು ಹವ್ವಳು ಪಾಪ ಮಾಡಿದನಂತರ, ಏದೆನ್ ವನದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನು ಎಲ್ಲಾ ಕಡೆ ಧಗಿಧಗಿಸುತ್ತಾ ಉರಿಯುವ ಜ್ವಾಲೆಯ ಕತ್ತಿಯನ್ನು ಇರಿಸಿದನು. ಇದರಿಂದ ಜನರು ಯಾರೂ ಒಳಗಡೆಗೆ ಹೋಗಿ ಜೀವವೃಕ್ಷವನ್ನು ತಿನ್ನದಂತೆ ಮಾಡಿದನು.
- ಎದುರುಬದುರಾಗಿರುವ ಕೆರೂಬಿಯರನ್ನು ಕೆತ್ತಬೇಕೆಂದು, ಅವುಗಳ ರೆಕ್ಕೆಗಳು ಒಡಂಬಡಿಕೆಯ ಮಂಜೂಷದ ಕೃಪಾಸನದ ಮುಚ್ಚಳದ ಮೇಲೆ ಅಂಟಿಕೊಂಡು ಇರುವಂತೆ ಮಾಡಬೇಕೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದನು.
- ಗುಡಾರದ ತೆರೆಗಳ ಒಳಗೆ ಕೆರೂಬಿಗಳ ಚಿತ್ರಗಳನ್ನು ನೇಯಬೇಕೆಂದು ಕೂಡ ಆತನು ಅವರಿಗೆ ಹೇಳಿದನು.
- ಕೆಲವೊಂದು ವಾಕ್ಯಭಾಗಗಳಲ್ಲಿ ಈ ಜೀವಿಗಳು ನಾಲ್ಕು ಮುಖಗಳನ್ನು ಹೊಂದಿಕೊಂಡಿದ ಹಾಗೆ ವಿವರಿಸಲ್ಪಟ್ಟಿದೆ: ಆ ಮುಖಗಳು ಯಾವುವೆಂದರೆ, ಮನುಷ್ಯ, ಸಿಂಹ, ಎತ್ತು ಮತ್ತು ಹದ್ದು.
- ಕೆರೂಬಿಗಳು ಕೆಲವೊಂದುಬಾರಿ ದೂತರೆಂದು ತಿಳಿದುಕೊಳ್ಳುತ್ತೇವೆ, ಆದರೆ ಸತ್ಯವೇದದಲ್ಲಿ ಅದಕ್ಕೆ ಸ್ಪಷ್ಟವಾದ ಆಧಾರಗಳಿಲ್ಲ.
ಅನುವಾದ ಸಲಹೆಗಳು:
- “ಕೆರೂಬಿಗಳು” ಎನ್ನುವ ಪದವನ್ನು “ರೆಕ್ಕೆಗಳಿರುವ ಜೀವಿಗಳು” ಅಥವಾ “ರೆಕ್ಕೆಗಳೊಂದಿಗಿರುವ ಅಂಗರಕ್ಷಕರು” ಅಥವಾ “ರೆಕ್ಕೆಗಳಿರುವ ಆತ್ಮೀಯಕ ಅಂಗರಕ್ಷಕರು” ಅಥವಾ “ರಕ್ಕೆಗಳಿರುವ ಪರಿಶುದ್ಧ ಅಂಗರಕ್ಷಕರು” ಎಂದೂ ಅನುವಾದ ಮಾಡಬಹುದು.
- “ಕೆರೂಬಿ” ಎನ್ನುವ ಪದವು ಕೆರೂಬಿಗಳು ಎನ್ನುವ ಬಹುವಚನ ಪದಕ್ಕೆ ಏಕವಚನವಾಗಿರುತ್ತದೆ, “ರೆಕ್ಕೆಗಳಿರುವ ಜೀವಿ” ಅಥವಾ “ರೆಕ್ಕೆಗಳಿರುವ ಆತ್ಮೀಯಕ ಅಂಗರಕ್ಷಕ” ಎಂದು ಉದಾಹರಣೆಗೆ ಹೇಳಿಕೊಳ್ಳಬಹುದು.
- ಈ ಪದಕ್ಕೆ ಅನುವಾದವು “ದೂತ” ಎನ್ನುವ ಪದಕ್ಕೆ ಹೇಳುವ ಅನುವಾದಕ್ಕೆ ಬೇರೆಯಾಗಿರುತ್ತದೆಯೆಂದು ತಿಳಿದುಕೊಂಡಿರಿ.
- ಜಾತೀಯ ಭಾಷೆಯಲ್ಲಿ ಅಥವಾ ಸ್ಥಳೀಯ ಭಾಷೆಯಲ್ಲಿರುವ ಸತ್ಯವೇದದಲ್ಲಿ ಈ ಪದವನ್ನು ಯಾವರೀತಿ ಬರೆದಿದ್ದಾರೋ ಅಥವಾ ಅನುವಾದ ಮಾಡಿದ್ದಾರೋ ಎಂದು ನೋಡಿಕೊಳ್ಳಿರಿ. (ಅನುವಾದ ಸಲಹೆಗಳು: /ತಿಳಿಯದವುಗಳನ್ನು ಯಾವರೀತಿ ಅನುವಾದ ಮಾಡಬೇಕು)
(ಈ ಪದಗಳನ್ನು ಸಹ ನೋಡಿರಿ : ದೂತ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3742, G5502