kn_tw/bible/kt/angel.md

8.9 KiB

ದೇವದೂತ, ಪ್ರಧಾನದೂತ

ಅರ್ಥವಿವರಣೆ:

ದೇವದೂತ ಎಂದರೆ ದೇವರು ಉಂಟುಮಾಡಿದ ಅತ್ಯಂತ ಶಕ್ತಿಯುಳ್ಳ ಆತ್ಮೀಕ ಜೀವಿ. ದೇವದೂತರು ದೇವರು ಹೇಳಿದ ಪ್ರತಿಯೊಂದನ್ನು ಮಾಡುವುದರ ಮೂಲಕ ದೇವರಿಗೆ ಸೇವೆ ಮಾಡುವುದಕ್ಕಾಗಿ ಉಂಟುಮಾಡಿದವರಾಗಿದ್ದಾರೆ. “ಪ್ರಧಾನದೂತ” ಎನ್ನುವ ಪದವು ಇತರ ದೂತರನ್ನು ನಡೆಸುವುದಕ್ಕೆ ಅಥವಾ ಪಾಲಿಸುವುದಕ್ಕೆ ನೇಮಿಸಲ್ಪಟ್ಟ ವಿಶೇಷವಾದ ದೂತನಾಗಿರುತ್ತಾನೆ.

  • “ದೇವದೂತ” ಎಂಬ ಪದಕ್ಕೆ ಅಕ್ಷರಶಃ “ಸಂದೇಶಕ” ಎಂದರ್ಥ.
  • “ಪ್ರಧಾನದೂತ” ಎಂಬ ಪದಕ್ಕೆ “ಮುಖ್ಯ ಸಂದೇಶಕ” ಎಂದರ್ಥ. “ಪ್ರಧಾನ ದೂತ” ಎಂದು ಸತ್ಯವೇದದಲ್ಲಿ ಒಬ್ಬ ದೂತನನ್ನು ಮಾತ್ರವೇ ಉಲ್ಲೇಖಿಸಲಾಗಿದೆ ಅವನೇ ಮೀಕಾಯೇಲನು.
  • ಸತ್ಯವೇದದಲ್ಲಿ, ದೇವದೂತರು ದೇವರಿಂದ ಪಡೆದ ಸಂದೇಶಗಳನ್ನು ಜನರಿಗೆ ಕೊಟ್ಟರು. ದೇವರು ಬಯಸಿದ್ದನ್ನು ಜನರು ಮಾಡಬೇಕೆನ್ನುವುದರ ಕುರಿತಾಗಿ ಇರುವ ಆಜ್ಞೆಗಳು ಕೂಡ ಈ ಸಂದೇಶಗಳಲ್ಲಿ ಒಳಪಟ್ಟಿರುತ್ತವೆ.
  • ಭವಿಷ್ಯತ್ತಿನಲ್ಲಿ ನಡೆಯುವ ಘಟನೆಗಳ ಕುರಿತಾಗಿ ಅಥವಾ ಈಗಾಗಲೇ ನಡೆದ ಘಟನೆಗಳ ಕುರಿತಾಗಿ ಕೂಡ ದೂತರು ಜನರಿಗೆ ತಿಳಿಸಿದ್ದಾರೆ.
  • ದೇವದೂತರು ದೇವರ ಪ್ರತಿನಿಧಿಗಳಾಗಿ ದೇವರು ಕೊಟ್ಟ ಅಧಿಕಾರವನ್ನು ಪಡೆದಿರುತ್ತಾರೆ ಮತ್ತು ಸತ್ಯವೇದದಲ್ಲಿ ಕೆಲವು ಬಾರಿ ದೇವರೇ ಮಾತನಾಡಿದ ಹಾಗೆಯೇ ಅವರು ಮಾತನಾಡುತ್ತಿದ್ದರು.
  • ದೇವ ದೂತರು ದೇವರಿಗೆ ಸೇವೆ ಮಾಡುವ ಇನ್ನೊಂದು ವಿಧಗಳು ಜನರನ್ನು ಸಂರಕ್ಷಿಸುವ ಮತ್ತು ಬಲಪಡಿಸುವ ಮೂಲಕ.
  • “ಯೆಹೋವನ ದೂತರು,” ಎನ್ನುವ ವಿಶೇಷವಾದ ನುಡಿಗಟ್ಟು, ಒಂದು ಅರ್ಥಕ್ಕಿಂತ ಹೆಚ್ಚಾದ ಅರ್ಥಗಳನ್ನು ಹೊಂದಿರುತ್ತದೆ: (1) “ಯೆಹೋವನಿಗೆ ಪ್ರತಿನಿಧಿಯಾಗಿರುವ ದೇವದೂತ” ಅಥವಾ “ಯೆಹೋವನನ್ನು ಸೇವಿಸುವ ಸಂದೇಶಕ” ಎನ್ನುವ ಅರ್ಥಗಳಿರಬಹುದು. (2) ಆತನು ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವಾಗ ದೂತನಂತೆ ಕಾಣಿಸಿಕೊಳ್ಳುವ, ಯೆಹೋವನನ್ನೇ ಇದು ಸೂಚಿಸಬಹುದು. ಈ ಅರ್ಥಗಳಲ್ಲಿ ಯಾವುದಾದರೊಂದು ಯೆಹೋವನೇ ವೈಯುಕ್ತಿಕವಾಗಿ ಮಾತನಾಡುತ್ತಿರುವಂತೆ “ನಾನೇ” ಎಂದು ದೂತ ಉಪಯೋಗಿಸುವುದನ್ನು ವಿವರಿಸಬಹುದು.

ಅನುವಾದ ಸಲಹೆಗಳು:

  • “ದೇವ ದೂತ” ಎನ್ನುವ ಪದವನ್ನು ಅನುವಾದಿಸುವ ವಿಧಾನಗಳಲ್ಲಿ “ದೇವರಿಂದ ಬಂದ ಸಂದೇಶಕರು” ಅಥವಾ “ದೇವರ ಪರಲೋಕದ ಸೇವಕನು” ಅಥವಾ “ದೇವರ ಆತ್ಮ ಸಂದೇಶಕರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • “ಪ್ರಧಾನದೂತ” ಎನ್ನುವ ಪದವು “ಮುಖ್ಯ ದೇವದೂತ” ಅಥವಾ "ದ್ದೇವ ದೂತರ ಆಡಳಿತ ಮುಖ್ಯಸ್ಥ" ಅಥವಾ “ದ್ದೇವ ದೂತರ ನಾಯಕ” ಎಂದು ಕೂಡ ಅನುವಾದ ಮಾಡುತ್ತಾರೆ.
  • ಈ ಪದಗಳನ್ನು ರಾಷ್ಟ್ರೀಯ ಭಾಷೆಯಲ್ಲಿ ಅಥವಾ ಇನ್ನೊಂದು ಸ್ಥಳೀಯ ಭಾಷೆಯಲ್ಲಿ ಯಾವ ರೀತಿ ಅನುವಾದ ಮಾಡಿದ್ದಾರೆಂಬುದನ್ನು ಪರಿಗಣಿಸಿರಿ.
  • “ಯೆಹೋವನ ದೂತ” ಎನ್ನುವ ನುಡಿಗಟ್ಟನ್ನು “ದೂತ” ಮತ್ತು “ಯೆಹೋವ” ಎನ್ನುವ ಪದಗಳನ್ನು ಉಪಯೋಗಿಸಿ ಅನುವಾದ ಮಾಡಬೇಕು. ಆ ನುಡಿಗಟ್ಟು ವಿವಿಧ ವ್ಯಾಖ್ಯಾನಗಳಿಗೆ ಅನುಮತಿ ಕೊಡುತ್ತದೆ. ಸಾಧ್ಯವಾದಷ್ಟು ಅನುವಾದಗಳು “ಯೆಹೋವನಿಂದ ಬಂದ ದೂತ” ಅಥವಾ “ಯೆಹೋವನಿಂದ ಕಳುಹಿಸಲ್ಪಟ್ಟ ದೂತ” ಅಥವಾ “ದೂತನಂತೆ ಕಾಣುವ, ಯೆಹೋವ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.

(ಇವುಗಳನ್ನು ಸಹ ನೋಡಿರಿ: /ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು)

(ಇವುಗಳನ್ನು ಸಹ ನೋಡಿರಿ : ಮುಖ್ಯ, ಪ್ರಧಾನ, ಸಂದೇಶಕ, ಮೀಕಾಯೇಲ, ಮುಖ್ಯಸ್ಥ, ಸೇವಕ)

ಸತ್ಯವೇದದ ಉಲ್ಲೇಖಗಳು:

ಸತ್ಯವೇದದ ಕಥೆಗಳಿಂದ ಉದಾಹರಣೆಗಳು:

  • 2:12 ಜೀವ ವೃಕ್ಷದ ಹಣ್ಣನ್ನು ಯಾರೂ ತಿನ್ನದಂತೆ ದೇವರು ಆ ತೋಟದ ಪ್ರವೇಶ ದ್ವಾರದಲ್ಲಿ ದೊಡ್ಡ ದೊಡ್ಡ, ಶಕ್ತಿಯುಳ್ಳ ದೂತರನ್ನು ಇಟ್ಟಿದ್ದಾನೆ.
  • 22:03 ದೂತನು ಜೆಕರ್ಯನಿಗೆ ಪ್ರತ್ಯುತ್ತರವಾಗಿ, “ನಿಮಗೆ ಶುಭವಾರ್ತೆಯನ್ನು ತರುವುದಕ್ಕೆ ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ.”
  • 23:06 ಕೂಡಲೇ, ಪ್ರಕಾಶಮಾನವಾದ ದೂತ ಅವರಿಗೆ (ಕುರುಬರಿಗೆ) ಪ್ರತ್ಯಕ್ಷ್ಯನಾದನು , ಮತ್ತು ಅವರು ಭಯಪಟ್ಟರು. “ನೀವು ಹೆದರಬೇಡಿರಿ, ಯಾಕಂದರೆ ನಿಮಗೆ ಹೇಳುವುದಕ್ಕೆ ನನ್ನ ಬಳಿ ಶುಭವಾರ್ತೆ ಇದೆ” ಎಂದು ದೂತನು ಹೇಳಿದನು.
  • 23:07 ಕೂಡಲೇ, ದೇವರನ್ನು ಸ್ತುತಿಸುವ ದೂತರೊಂದಿಗೆ ಆಕಾಶವೆಲ್ಲಾ ತುಂಬಿತು.
  • 25:08 ಆದನಂತರ, ದೂತರು ಬಂದು ಯೇಸುವಿಗೆ ಪರಿಚಾರ ಮಾಡಿದರು.
  • 38:12 ಯೇಸು ತುಂಬಾ ಮನೋವ್ಯಥೆಪಟ್ಟನು, ಆತನ ಬೆವರು ರಕ್ತದ ಹನಿಗಳಾಗಿ ಮಾರ್ಪಟ್ಟಿತು. ಆತನನ್ನು ಬಲಪಡಿಸುವುದಕ್ಕೆ ದೇವರು ದೂತನನ್ನು ಕಳುಹಿಸಿಕೊಟ್ಟನು.
  • 38:15 “ನನ್ನನ್ನು ರಕ್ಷಿಸುವುದಕ್ಕೆ ದೂತರ ಸೈನ್ಯವನ್ನು ಕಳುಹಿಸು ಎಂದು ನಾನು ತಂದೆಯನ್ನು ಬೇಡಿಕೊಳ್ಳಬಹುದು".

ಪದದ ದತ್ತಾಂಶ:

  • Strong's: H0047, H0430, H4397, H4398, H8136, G00320, G07430, G24650