kn_tw/bible/other/ruler.md

3.8 KiB

ಆಡಳಿತ, ಆಡಳಿತಗಾರ, ಪ್ರಾಧ್ಯಾಪಕ, ಅಧಿಕೃತ, ನಾಯಕ

ಪದದ ಅರ್ಥವಿವರಣೆ:

“ಆಡಳಿತಗಾರ” ಎನ್ನುವ ಪದವು ಸಾಧಾರಣವಾಗಿ ಇತರ ಜನರ ಮೇಲೆ ಅಧಿಕಾರವನ್ನು ನಡೆಸುವ ವ್ಯಕ್ತಿಯನ್ನು ಸೂಚಿಸುತ್ತದೆ, ಉದಾಹರಣೆಗೆ, ದೇಶದ, ರಾಜ್ಯದ ಅಥವಾ ಭಕ್ತಿಯ ಗುಂಪಿನ ನಾಯಕನನ್ನು ಸೂಚಿಸುತ್ತದೆ. ಆಡಳಿತಗಾರ ಎಂದರೆ “ಆಡಳಿತ ಮಾಡುವ” ವ್ಯಕ್ತಿಯಾಗಿರುತ್ತಾನೆ, ಮತ್ತು ತನ್ನ ಅಧಿಕಾರವು ತನ್ನ “ಆಡಳಿತ”ವಾಗಿರುತ್ತದೆ.

  • ಹಳೇ ಒಡಂಬಡಿಕೆಯಲ್ಲಿ ಅರಸನು ಕೆಲವೊಮ್ಮೆ “ಆಡಳಿತಗಾರನಾಗಿ” ಸೂಚಿಸಲ್ಪಟ್ಟಿರುತ್ತಾನೆ, ಉದಾಹರಣೆಗೆ, “ಇಸ್ರಾಯೇಲಿನ ಮೇಲೆ ಇವನನ್ನು ಆಳುವವನಾಗಿ ನೇಮಿಸುತ್ತಿದ್ದೇನೆ” ಎನ್ನುವ ಮಾತಿನಲ್ಲಿರುವುದನ್ನು ನೋಡಬಹುದು.
  • ದೇವರು ಅಂತಿಮ ಪಾಲಕನೆಂದು ಸೂಚಿಸಲ್ಪಟ್ಟಿದ್ದಾನೆ, ಈತನು ಪಾಲಕರಾಗಿರುವ ಎಲ್ಲರನ್ನು ಪಾಲಿಸುವವನಾಗಿರುತ್ತಾನೆ.
  • ಹೊಸ ಒಡಂಬಡಿಕೆಯಲ್ಲಿ ಸಮಾಜ ಮಂದಿರದ ನಾಯಕನನ್ನು “ಪಾಲಕ” ಎಂದು ಕರೆಯುತ್ತಿದ್ದರು.
  • ಹೊಸ ಒಡಂಬಡಿಕೆಯಲ್ಲಿ ಇನ್ನೊಬ್ಬ ರೀತಿಯ ಪಾಲಕನು “ರಾಜ್ಯಪಾಲರು” ಆಗಿರುತ್ತಾರೆ.
  • ಸಂದರ್ಭಾನುಸಾರವಾಗಿ, “ಪಾಲಕ” ಎನ್ನುವ ಪದವನ್ನು “ನಾಯಕ” ಅಥವಾ “ಎಲ್ಲದರ ಮೇಲೆ ಅಧಿಕಾರವನ್ನು ಪಡೆದ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
  • “ಆಡಳಿತಕ್ಕೆ” ಕ್ರಿಯೆ ಏನೆಂದರೆ “ಎಲ್ಲದರ ಮೇಲೆ ಅಧಿಕಾರವನ್ನು ಪಡೆಯುವುದಕ್ಕೆ” “ನಡಿಸು” ಎಂದರ್ಥ. ಅರಸನ ಪಾಲನೆಯನ್ನು ಸೂಚಿಸುವ “ಆಳ್ವಿಕೆ”ಯನ್ನು ಸೂಚಿಸುವ ಅರ್ಥವಾಗಿರುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ರಾಜ್ಯಪಾಲರು, ಅರಸ, ಸಮಾಜ ಮಂದಿರ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H995, H1166, H1167, H1404, H2708, H2710, H3027, H3548, H3920, H4043, H4410, H4427, H4428, H4438, H4467, H4474, H4475, H4623, H4910, H4941, H5057, H5065, H5387, H5401, H5461, H5715, H6113, H6213, H6485, H6957, H7101, H7218, H7287, H7300, H7336, H7786, H7860, H7980, H7981, H7985, H7989, H7990, H8199, H8269, H8323, H8451, G746, G752, G755, G757, G758, G932, G936, G1018, G1203, G1299, G1778, G1785, G1849, G2232, G2233, G2525, G2583, G2888, G2961, G3545, G3841, G4165, G4173, G4291