4.4 KiB
4.4 KiB
ಅಧಿಕಾರ
ಅರ್ಥವಿವರಣೆ:
“ಅಧಿಕಾರ” ಎನ್ನುವ ಪದವು ಒಬ್ಬರ ಮೇಲೆ ಮತ್ತೊಬ್ಬರು ನಿಯಂತ್ರಣ ಮಾಡುವ ಮತ್ತು ಪ್ರಭಾವಕ್ಕೆ ಒಳಗಾಗುವಂತೆ ಮಾಡುವ ಶಕ್ತಿಗೆ ಸೂಚನೆಯಾಗಿರುತ್ತದೆ.
- ಅರಸರು ಮತ್ತು ಇತರ ಪಾಲನೆ ಮಾಡುವ ಪಾಲಕರು ಅವರು ಆಳುತ್ತಿರುವ ಜನರ ಮೇಲೆ ಅಧಿಕಾರವನ್ನು ಹೊಂದಿರುತ್ತಾರೆ.
- “ಅಧಿಕಾರಗಳು” ಎನ್ನುವ ಪದವು ಜನರಿಗೆ, ಪ್ರಭುತ್ವಗಳಿಗೆ ಅಥವಾ ಇತರರ ಮೇಲೆ ಅಧಿಕಾರವನ್ನು ಹೊಂದಿರುವ ಸಂಸ್ಥೆಗಳಿಗೆ ಕೂಡ ಸೂಚಿಸುತ್ತದೆ.
- “ಅಧಿಕಾರಗಳು” ಎನ್ನುವ ಪದವು ದೇವರ ಅಧಿಕಾರಕ್ಕೆ ತಮ್ಮನ್ನು ತಾವು ಒಪ್ಪಿಸಿಕೊಳ್ಳದ ಜನರ ಮೇಲೆ ಅಧಿಕಾರವನ್ನು ಹೊಂದಿರುವ ಆತ್ಮ ಸಂಬಂಧಿಗಳನ್ನು ಕೂಡ ಸೂಚಿಸುತ್ತದೆ.
- ಯಜಮಾನರು ತಮ್ಮ ಆಳುಗಳ ಮೇಲೆ ಅಥವಾ ದಾಸದಾಸಿಯರ ಮೇಲೆ ಅಧಿಕಾರವನ್ನು ಹೊಂದಿರುತ್ತಾರೆ. ತಂದೆತಾಯಿಗಳು ತಮ್ಮ ಮಕ್ಕಳ ಮೇಲೆ ಅಧಿಕಾರವನ್ನು ಹೊಂದಿರುತ್ತಾರೆ.
- ಸರ್ಕಾರಗಳು ತಮ್ಮ ಪೌರರನ್ನು ಆಳುವದಕ್ಕೆ ಕಾನೂನುಗಳನ್ನು ಮಾಡುವ ಅಧಿಕಾರವನ್ನು ಅಥವಾ ಹಕ್ಕನ್ನು ಹೊಂದಿರುತ್ತಾರೆ.
ಅನುವಾದ ಸಲಹೆಗಳು:
“ಅಧಿಕಾರ” ಎನ್ನುವ ಪದವನ್ನು “ನಿಯಂತ್ರಣ” ಅಥವಾ “ಹಕ್ಕು” ಅಥವಾ “ಅರ್ಹತೆಗಳು” ಎಂದೂ ಅನುವಾದ ಮಾಡಬಹುದು.
- ಕೆಲವೊಂದು ಬಾರಿ “ಅಧಿಕಾರ” ಎನ್ನುವುದು “ಶಕ್ತಿ” ಎಂದು ಅರ್ಥ ಕೊಡುವ ಪದವನ್ನು ಬಳಸಲು ಉಪಯೋಗಿಸಲ್ಪಡುತ್ತದೆ.
- “ಅಧಿಕಾರಗಳು” ಎನ್ನುವ ಪದವನ್ನು ಜನರು ಅಥವಾ ಜನರನ್ನು ಆಳುವ ಸಂಸ್ಥೆಗಳಿಗೆ ಸೂಚಿಸಿ ಉಪಯೋಗಿಸಿದಾಗ, ಅದನ್ನು “ನಾಯಕರು” ಅಥವಾ “ಪಾಲಕರು” ಅಥವಾ “ಶಕ್ತಿಗಳು” ಎಂದೂ ಅನುವಾದ ಮಾಡಬಹುದು.
- “ಈತನ ಸ್ವಂತ ಅಧಿಕಾರದಿಂದ” ಎನ್ನುವ ಮಾತನ್ನು ಕೂಡ “ಪಾಲಿಸುವದಕ್ಕೆ ತನ್ನ ಸ್ವಂತ ಹಕ್ಕಿನಿಂದ” ಅಥವಾ “ತನ್ನ ಸ್ವಂತ ಅರ್ಹತೆಗಳ ಆಧಾರದಿಂದ” ಎನ್ನುವ ಮಾತಗಳನ್ನು ಉಪಯೋಗಿಸಿ ಅನುವಾದ ಮಾಡಬಹುದು.
- “ಅಧಿಕಾರದ ಕೆಳಗೆ” ಎನ್ನುವ ಭಾವವ್ಯಕ್ತೀಕರಣವನ್ನು “ವಿಧೇಯರಾಗಲು ಬಾಧ್ಯತೆ” ಅಥವಾ “ಇತರರ ಆಜ್ಞೆಗಳಿಗೆ ವಿಧೇಯರಾಗಿರುವುದು” ಎಂದೂ ಅನುವಾದ ಮಾಡಬಹುದು.
(ಇವುಗಳನ್ನು ಸಹ ನೋಡಿರಿ : ಆದಿಪತ್ಯ, ರಾಜ, ಅಧಿಕಾರಿ, ಶಕ್ತಿ)
ಸತ್ಯವೇದದ ಉಲ್ಲೇಖಗಳು:
- ಕೊಲೊಸ್ಸೆ 2:10
- ಎಸ್ತೇರಳು 9:29
- ಆದಿಕಾಂಡ 41:35
- ಯೋನ 3:6-7
- ಲೂಕ 12:5
- ಲೂಕ 20:1-2
- ಮಾರ್ಕ 1:22
- ಮತ್ತಾಯ 8:9
- ಮತ್ತಾಯ 28:19
- ತೀತ 3:1
ಪದದ ಡೇಟಾ:
- Strong's: H8633, G08310, G14130, G18490, G18500, G20030, G27150, G52470