kn_tw/bible/kt/authority.md

40 lines
4.4 KiB
Markdown

# ಅಧಿಕಾರ
## ಅರ್ಥವಿವರಣೆ:
“ಅಧಿಕಾರ” ಎನ್ನುವ ಪದವು ಒಬ್ಬರ ಮೇಲೆ ಮತ್ತೊಬ್ಬರು ನಿಯಂತ್ರಣ ಮಾಡುವ ಮತ್ತು ಪ್ರಭಾವಕ್ಕೆ ಒಳಗಾಗುವಂತೆ ಮಾಡುವ ಶಕ್ತಿಗೆ ಸೂಚನೆಯಾಗಿರುತ್ತದೆ.
* ಅರಸರು ಮತ್ತು ಇತರ ಪಾಲನೆ ಮಾಡುವ ಪಾಲಕರು ಅವರು ಆಳುತ್ತಿರುವ ಜನರ ಮೇಲೆ ಅಧಿಕಾರವನ್ನು ಹೊಂದಿರುತ್ತಾರೆ.
* “ಅಧಿಕಾರಗಳು” ಎನ್ನುವ ಪದವು ಜನರಿಗೆ, ಪ್ರಭುತ್ವಗಳಿಗೆ ಅಥವಾ ಇತರರ ಮೇಲೆ ಅಧಿಕಾರವನ್ನು ಹೊಂದಿರುವ ಸಂಸ್ಥೆಗಳಿಗೆ ಕೂಡ ಸೂಚಿಸುತ್ತದೆ.
* “ಅಧಿಕಾರಗಳು” ಎನ್ನುವ ಪದವು ದೇವರ ಅಧಿಕಾರಕ್ಕೆ ತಮ್ಮನ್ನು ತಾವು ಒಪ್ಪಿಸಿಕೊಳ್ಳದ ಜನರ ಮೇಲೆ ಅಧಿಕಾರವನ್ನು ಹೊಂದಿರುವ ಆತ್ಮ ಸಂಬಂಧಿಗಳನ್ನು ಕೂಡ ಸೂಚಿಸುತ್ತದೆ.
* ಯಜಮಾನರು ತಮ್ಮ ಆಳುಗಳ ಮೇಲೆ ಅಥವಾ ದಾಸದಾಸಿಯರ ಮೇಲೆ ಅಧಿಕಾರವನ್ನು ಹೊಂದಿರುತ್ತಾರೆ. ತಂದೆತಾಯಿಗಳು ತಮ್ಮ ಮಕ್ಕಳ ಮೇಲೆ ಅಧಿಕಾರವನ್ನು ಹೊಂದಿರುತ್ತಾರೆ.
* ಸರ್ಕಾರಗಳು ತಮ್ಮ ಪೌರರನ್ನು ಆಳುವದಕ್ಕೆ ಕಾನೂನುಗಳನ್ನು ಮಾಡುವ ಅಧಿಕಾರವನ್ನು ಅಥವಾ ಹಕ್ಕನ್ನು ಹೊಂದಿರುತ್ತಾರೆ.
## ಅನುವಾದ ಸಲಹೆಗಳು:
“ಅಧಿಕಾರ” ಎನ್ನುವ ಪದವನ್ನು “ನಿಯಂತ್ರಣ” ಅಥವಾ “ಹಕ್ಕು” ಅಥವಾ “ಅರ್ಹತೆಗಳು” ಎಂದೂ ಅನುವಾದ ಮಾಡಬಹುದು.
* ಕೆಲವೊಂದು ಬಾರಿ “ಅಧಿಕಾರ” ಎನ್ನುವುದು “ಶಕ್ತಿ” ಎಂದು ಅರ್ಥ ಕೊಡುವ ಪದವನ್ನು ಬಳಸಲು ಉಪಯೋಗಿಸಲ್ಪಡುತ್ತದೆ.
* “ಅಧಿಕಾರಗಳು” ಎನ್ನುವ ಪದವನ್ನು ಜನರು ಅಥವಾ ಜನರನ್ನು ಆಳುವ ಸಂಸ್ಥೆಗಳಿಗೆ ಸೂಚಿಸಿ ಉಪಯೋಗಿಸಿದಾಗ, ಅದನ್ನು “ನಾಯಕರು” ಅಥವಾ “ಪಾಲಕರು” ಅಥವಾ “ಶಕ್ತಿಗಳು” ಎಂದೂ ಅನುವಾದ ಮಾಡಬಹುದು.
* “ಈತನ ಸ್ವಂತ ಅಧಿಕಾರದಿಂದ” ಎನ್ನುವ ಮಾತನ್ನು ಕೂಡ “ಪಾಲಿಸುವದಕ್ಕೆ ತನ್ನ ಸ್ವಂತ ಹಕ್ಕಿನಿಂದ” ಅಥವಾ “ತನ್ನ ಸ್ವಂತ ಅರ್ಹತೆಗಳ ಆಧಾರದಿಂದ” ಎನ್ನುವ ಮಾತಗಳನ್ನು ಉಪಯೋಗಿಸಿ ಅನುವಾದ ಮಾಡಬಹುದು.
* “ಅಧಿಕಾರದ ಕೆಳಗೆ” ಎನ್ನುವ ಭಾವವ್ಯಕ್ತೀಕರಣವನ್ನು “ವಿಧೇಯರಾಗಲು ಬಾಧ್ಯತೆ” ಅಥವಾ “ಇತರರ ಆಜ್ಞೆಗಳಿಗೆ ವಿಧೇಯರಾಗಿರುವುದು” ಎಂದೂ ಅನುವಾದ ಮಾಡಬಹುದು.
(ಇವುಗಳನ್ನು ಸಹ ನೋಡಿರಿ : [ಆದಿಪತ್ಯ](../kt/dominion.md), [ರಾಜ](../other/king.md), [ಅಧಿಕಾರಿ](../other/ruler.md), [ಶಕ್ತಿ](../kt/power.md))
## ಸತ್ಯವೇದದ ಉಲ್ಲೇಖಗಳು:
* [ಕೊಲೊಸ್ಸೆ 2:10](rc://*/tn/help/col/02/10)
* [ಎಸ್ತೇರಳು 9:29](rc://*/tn/help/est/09/29)
* [ಆದಿಕಾಂಡ 41:35](rc://*/tn/help/gen/41/35)
* [ಯೋನ 3:6-7](rc://*/tn/help/jon/03/06)
* [ಲೂಕ 12:5](rc://*/tn/help/luk/12/05 )
* [ಲೂಕ 20:1-2](rc://*/tn/help/luk/20/01)
* [ಮಾರ್ಕ 1:22](rc://*/tn/help/mrk/01/22)
* [ಮತ್ತಾಯ 8:9](rc://*/tn/help/mat/08/09 )
* [ಮತ್ತಾಯ 28:19](rc://*/tn/help/mat/28/19 )
* [ತೀತ 3:1](rc://*/tn/help/tit/03/01)
## ಪದದ ಡೇಟಾ:
* Strong's: H8633, G08310, G14130, G18490, G18500, G20030, G27150, G52470