2.9 KiB
2.9 KiB
ಸಭಾಮಂದಿರ
ಪದದ ಅರ್ಥವಿವರಣೆ:
ಸಭಾಮಂದಿರ ಎನ್ನುವುದು ದೇವರನ್ನು ಆರಾಧಿಸುವುದಕ್ಕೆ ಯೆಹೂದ್ಯರೆಲ್ಲರು ಒಂದು ಸ್ಥಳದಲ್ಲಿ ಭೇಟಿಯಾಗುವ ಭವನವಾಗಿರುತ್ತದೆ.
- ಪುರಾತನ ಕಾಲಗಳಲ್ಲಿ, ಸಭಾಮಂದಿರ ಸೇವೆಗಳಲ್ಲಿ ಪ್ರಾರ್ಥನೆಯ ಕಾಲಗಳು, ಲೇಖನಗಳನ್ನು ಓದುವುದು, ಮತ್ತು ಲೇಖನಗಳ ಕುರಿತಾಗಿ ಬೋಧನೆಯನ್ನು ಒಳಗೊಂಡಿರುತ್ತದೆ.
- ಯೆಹೂದ್ಯರು ವಾಸ್ತವಿಕವಾಗಿ ಸಭಾಮಂದಿರಗಳನ್ನು ತಮ್ಮ ಸ್ವಂತ ಪಟ್ಟಣಗಳಲ್ಲಿ ದೇವರನ್ನು ಆರಾಧಿಸುವುದಕ್ಕೆ ಮತ್ತು ಪ್ರಾರ್ಥನೆ ಮಾಡುವುದಕ್ಕೆ ಉಪಯೋಗಿಸುವ ಸ್ಥಳಗಳಾಗಿ ಉಪಯೋಗಿಸುತ್ತಿದ್ದರು, ಯಾಕಂದರೆ ಅವರೆಲ್ಲರು ಅನೇಕರು ಯೆರೂಸಲೇಮಿನಲ್ಲಿರುವ ದೇವಾಲಯದಿಂದ ತುಂಬಾ ದೂರದಲ್ಲಿ ನಿವಾಸ ಮಾಡುತ್ತಿದ್ದರು.
- ಯೇಸು ಅನೇಕಬಾರಿ ಸಭಾಮಂದಿರಗಳಲ್ಲಿ ಬೋಧನೆ ಮಾಡಿದ್ದನು ಮತ್ತು ಅನೇಕ ಜನರನ್ನು ಆ ಸ್ಥಳಗಳಲಿಯೇ ಗುಣಪಡಿಸಿದ್ದನು.
- “ಸಭಾಮಂದಿರ” ಎನ್ನುವ ಪದವು ಅಲ್ಲಿ ಕೂಡುವ ಜನರ ಗುಂಪನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : ಗುಣಪಡಿಸು, ಯೆರೂಸಲೇಮ್, ಯೆಹೂದ್ಯ, ಪ್ರಾರ್ಥನೆ, ದೇವಾಲಯ, ದೇವರ ವಾಕ್ಯ, ಆರಾಧನೆ)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.06:8-9
- ಅಪೊ.ಕೃತ್ಯ.14:1-2
- ಅಪೊ.ಕೃತ್ಯ.15:19-21
- ಅಪೊ.ಕೃತ್ಯ.24:10-13
- ಯೋಹಾನ.06:57-59
- ಲೂಕ.04:14-15
- ಮತ್ತಾಯ.06:1-2
- ಮತ್ತಾಯ.09:35-36
- ಮತ್ತಾಯ.13:54-56
ಪದ ಡೇಟಾ:
- Strong's: H4150, G656, G752, G4864