kn_tw/bible/kt/wordofgod.md

11 KiB

ದೇವರ ವಾಕ್ಯ, ದೇವರ ವಾಕ್ಯಗಳು, ಯೆಹೋವನ ವಾಕ್ಯ, ಕರ್ತನ ವಾಕ್ಯ, ಸತ್ಯ ವಾಕ್ಯ, ಲೇಖನ, ಲೇಖನಗಳು

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ದೇವರ ವಾಕ್ಯ” ಎನ್ನುವ ಮಾತು ದೇವರು ಜನರೊಂದಿಗೆ ಸಂಭಾಷಿಸಿದ ಪ್ರತಿಯೊಂದು ಮಾತನ್ನು ಸೂಚಿಸುತ್ತದೆ. ಇದರಲ್ಲಿ ಹೇಳಲ್ಪಟ್ಟ ಮತ್ತು ಬರೆಯಲ್ಪಟ್ಟ ಸಂದೇಶಗಳು ಒಳಗೊಂಡಿರುತ್ತವೆ. ಯೇಸುವನ್ನು ಕೂಡ “ದೇವರ ವಾಕ್ಯ’ ಎಂದು ಕರೆಯಲ್ಪಟ್ಟಿದ್ದಾನೆ.

  • “ಲೇಖನಗಳು” ಎಂದರೆ “ಬರವಣಿಗೆಗಳು” ಎಂದರ್ಥ. ಹಳೇ ಒಡಂಬಡಿಕೆಯಲ್ಲಿರುವ ಇಬ್ರಿ ಲೇಖನಗಳನ್ನು ಸೂಚಿಸುವವು ಮತ್ತು ಇವುಗಳನ್ನು ಹೊಸ ಒಡಂಬಡಿಕೆಯಲ್ಲಿ ಮಾತ್ರವೇ ಉಪಯೋಗಿಸಿರುತ್ತಾರೆ. ಈ ಬರವಣಿಗೆಗಳು ದೇವರು ತನ್ನ ಜನರು ಬರೆಯಬೇಕೆಂದು ಹೇಳಿರುವ ಆತನ ಸಂದೇಶಗಳಾಗಿರುತ್ತವೆ, ಇದರಿಂದ ಭವಿಷ್ಯತ್ತಿನಲ್ಲಿ ಅನೇಕ ವರ್ಷಗಳ ಕಾಲ ಜನರು ಈ ಲೇಖನಗಳನ್ನು ಓದುತ್ತಾರೆ.
  • “ಯೆಹೋವನ ವಾಕ್ಯ” ಮತ್ತು “ಕರ್ತನ ಮಾತು” ಎನ್ನುವ ಮಾತುಗಳು ಅನೇಕಬಾರಿ ಸತ್ಯವೇದದಲ್ಲಿ ದೇವರು ಒಬ್ಬ ಪ್ರವಾದಿಗೆ ಅಥವಾ ಇತರ ವ್ಯಕ್ತಿಗಳಿಗೆ ಕೊಡಲ್ಪಟ್ಟಿರುವ ವಿಶೇಷವಾದ ಸಂದೇಶವನ್ನು ಸೂಚಿಸುತ್ತವೆ.
  • ಕೆಲವೊಂದುಬಾರಿ ಈ ಮಾತು “ವಾಕ್ಯ” ಅಥವಾ “ನನ್ನ ಮಾತು” ಅಥವಾ “ನಿನ್ನ ಮಾತು” ಎಂಬುದಾಗಿ ಕಾಣಿಸಿಕೊಳ್ಳುತ್ತದೆ (ಇದು ದೇವರ ವಾಕ್ಯದ ಕುರಿತಾಗಿ ಮಾತನಾಡುವಾಗ ಮಾತ್ರ ಅನ್ವಯವಾಗುತ್ತವೆ).
  • ಹೊಸ ಒಡಂಬಡಿಕೆಯಲ್ಲಿ ಯೇಸುವನ್ನು “ವಾಕ್ಯ” ಮತ್ತು “ದೇವರ ವಾಕ್ಯ” ಎಂದು ಕರೆದಿದ್ದಾರೆ. ಈ ಬಿರುದುಗಳಿಗೆ ಅರ್ಥವೇನೆಂದರೆ ಯೇಸು ಸಂಪೂರ್ಣವಾಗಿ ದೇವರು ಯಾರೆಂದು ತೋರಿಸಿದ್ದಾರೆ, ಯಾಕಂದರೆ ಈತನು ದೇವರಾಗಿದ್ದಾನೆ.

“ಸತ್ಯದ ವಾಕ್ಯ” ಎನ್ನುವ ಮಾತನ್ನು ಇನ್ನೊಂದು ರೀತಿಯಲ್ಲಿ “ದೇವರ ವಾಕ್ಯ” ಎಂದು ಸೂಚಿಸಬಹುದು, ಇದು ಆತನ ಸಂದೇಶವು ಅಥವಾ ಬೋಧನೆಯು ಆಗಿರುತ್ತದೆ. ಇದು ಕೇವಲ ಒಂದು ವಾಕ್ಯವನ್ನು ಮಾತ್ರವೇ ಸೂಚಿಸುವುದಿಲ್ಲ.

  • ದೇವರ ಸತ್ಯವಾಕ್ಯದಲ್ಲಿ ದೇವರು ತನ್ನ ಕುರಿತಾಗಿ ಜನರಿಗೆ ಪ್ರತಿಯೊಂದನ್ನು ಹೇಳಿಕೊಂಡಿರುವ ವಿಷಯಗಳು, ಆತನ ಸೃಷ್ಟಿ, ಮತ್ತು ಯೇಸುವಿನ ಮೂಲಕ ರಕ್ಷಣೆಯ ಪ್ರಣಾಳಿಕೆಯು ಒಳಗೊಂಡಿರುತ್ತವೆ.
  • ಈ ಮಾತು ದೇವರು ನಮಗೆ ಹೇಳಿರುವ ಪ್ರತಿಯೊಂದೂ ಮಾತು ಸತ್ಯ, ವಿಶ್ವಾಸಾರ್ಹ ಮತ್ತು ನೈಜವಾಗಿದೆ ಎಂಬ ಅಂಶವನ್ನು ಒತ್ತಿ ಹೇಳುತ್ತದೆ.

ಅನುವಾದ ಸಲಹೆಗಳು:

  • ಸಂದರ್ಭಾನುಸಾರವಾಗಿ ಈ ಮಾತನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಯೆಹೋವನ ಸಂದೇಶ” ಅಥವಾ “ದೇವರ ಸಂದೇಶ” ಅಥವಾ “ದೇವರಿಂದ ಬಂದಿರುವ ಬೋಧನೆಗಳು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
  • ಕೆಲವೊಂದು ಭಾಷೆಗಳಲ್ಲಿ ಈ ಪದವನ್ನು ಬಹುವಚನ ಪದವನ್ನಾಗಿ ಉಪಯೋಗಿಸುವುದು ಸಹಜ, “ದೇವರ ವಾಕ್ಯಗಳು” ಅಥವಾ “ಯೆಹೋವನ ವಾಕ್ಯಗಳು” ಎಂದೂ ಉಪಯೋಗಿಸುತ್ತಾರೆ.
  • “ಯೆಹೋವನ ವಾಕ್ಯ ಬಂದಿದೆ” ಎನ್ನುವ ಮಾತು ದೇವರು ತನ್ನ ಪ್ರವಾದಿಗಳಿಗೆ ಅಥವಾ ತನ್ನ ಜನರಿಗೆ ಹೇಳಿರುವವುಗಳನ್ನು ಪರಿಚಯ ಮಾಡುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತವೆ. ಈ ಮಾತನ್ನು “ಯೆಹೋವನು ಈ ಸಂದೇಶವನ್ನು ಹೇಳಿದ್ದಾನೆ” ಅಥವಾ “ಯೆಹೋವನು ಈ ಮಾತುಗಳನ್ನು ನುಡಿದಿದ್ದಾನೆ” ಎಂದೂ ಅನುವಾದ ಮಾಡಬಹುದು.
  • “ಲೇಖನ” ಅಥವಾ “ಲೇಖನಗಳು” ಎನ್ನುವ ಪದವನ್ನು “ಬರವಣಿಗೆಗಳು” ಅಥವಾ “ದೇವರಿಂದ ಬಂದಿರುವ ಸಂದೇಶವು ಬರೆಯಲ್ಪಟ್ಟಿದೆ” ಎಂದೂ ಅನುವಾದ ಮಾಡಬಹುದು. ಈ ಪದವು ಅಥವಾ ಮಾತನ್ನು “ಮಾತು” ಎನ್ನುವ ಪದದ ಅನುವಾದಕ್ಕೆ ವಿಭಿನ್ನವಾಗಿ ಅನುವಾದ ಮಾಡಬೇಕಾಗಿರುತ್ತದೆ.
  • “ವಾಕ್ಯ” ಎನ್ನುವ ಪದವು ಮಾತ್ರವೇ ಕಂಡುಬಂದಾಗ, ಅದು ದೇವರ ವಾಕ್ಯವನ್ನು ಸೂಚಿಸುತ್ತದೆ, ಇದನ್ನು “ಸಂದೇಶ” ಅಥವಾ “ದೇವರ ವಾಕ್ಯ” ಅಥವಾ “ಬೋಧನೆಗಳು” ಎಂದೂ ಅನುವಾದ ಮಾಡಬಹುದು. ಮೇಲೆ ಹೇಳಲ್ಪಟ್ಟಿರುವ ಅನುವಾದಗಳನ್ನೂ ಪರಿಗಣಿಸಿರಿ.
  • ಸತ್ಯವೇದವು ಯೇಸುವನ್ನು “ವಾಕ್ಯ” ಎಂದು ಸೂಚಿಸಿದಾಗ, ಈ ಮಾತನ್ನು ಅಥವಾ ಪದವನ್ನು “ಸಂದೇಶ” ಅಥವಾ “ಸತ್ಯ” ಎಂದೂ ಅನುವಾದ ಮಾಡಬಹುದು.
  • ಸತ್ಯವಾಕ್ಯ” ಎನ್ನುವ ಮಾತನ್ನು “ದೇವರು ನಿಜವಾದ ಸಂದೇಶ” ಅಥವಾ “ದೇವರ ವಾಕ್ಯ, ಇದು ನಿಜ” ಎಂದೂ ಅನುವಾದ ಮಾಡಬಹುದು.
  • ಈ ಪದವನ್ನು ಅನುವಾದ ಮಾಡುವಾಗ ನಿಜವಾಗಿ ಎನ್ನುವ ಪದವನ್ನು ಸೇರಿಸಿ ಅನುವಾದ ಮಾಡುವುದು ತುಂಬಾ ಪ್ರಾಮುಖ್ಯವಾದ ವಿಷಯ.

(ಈ ಪದಗಳನ್ನು ಸಹ ನೋಡಿರಿ : ಪ್ರವಾದಿ, ನಿಜ, ವಾಕ್ಯ, ಯೆಹೋವ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 25:07 “ನಿಮ್ಮ ದೇವರಾದ ಕರ್ತನನ್ನು ಮಾತ್ರವೇ ಆರಾಧನೆ ಮಾಡಿರಿ ಮತ್ತು ಆತನನ್ನು ಮಾತ್ರವೇ ಸೇವಿಸಿರಿ” ಎಂದು __ ದೇವರ ವಾಕ್ಯದಲ್ಲಿ __ ಆತನು ತನ್ನ ಜನರಿಗೆ ಆಜ್ಞಾಪಿಸಿದ್ದಾರೆ.
  • 33:06 “ಬೀಜವು ___ ದೇವರ ವಾಕ್ಯವೇ ___ “ ಎಂದು ಯೇಸು ವಿವರಿಸಿ ಹೇಳಿದನು.
  • 42:03 ಮೆಸ್ಸೀಯನ ಕುರಿತಾಗಿ ___ ದೇವರ ವಾಕ್ಯ ___ ಏನು ಹೇಳುತ್ತಿದೆಯೆಂದೆನ್ನುವುದರ ಕುರಿತಾಗಿ ಯೇಸು ಅವರಿಗೆ ವಿವರಿಸಿ ಹೇಳಿದನು.
  • 42:07 “___ ದೇವರ ವಾಕ್ಯದಲ್ಲಿ ___ ನನ್ನ ಕುರಿತಾಗಿ ಬರೆಯಲ್ಪಟ್ಟಿರುವ ಪ್ರತಿಯೊಂದು ನೆರವೇರಿಸಲ್ಪಡಬೇಕೆಂದು ನಾನು ನಿಮಗೆ ಹೇಳುತ್ತಿದೇನೆ” ಎಂದು ಯೇಸು ಹೇಳಿದರು. ಆದನಂತರ ಆತನು ತಮ್ಮ ಮನಗಳನ್ನು ತೆರೆದನು, ಇದರಿಂದ ಅವರು ___ ದೇವರ ವಾಕ್ಯವನ್ನು ___ ಅರ್ಥಮಾಡಿಕೊಳ್ಳುವರು.
  • 45:10 ಯೇಸುವಿನ ಕುರಿತಾದ ಶುಭವಾರ್ತೆಯನ್ನು ಅವನಿಗೆ ಹೇಳುವುದಕ್ಕೆ ಫಿಲಿಪ್ಪನು ಕೂಡ ಇತರ ___ ಲೇಖನ ಭಾಗಗಳನ್ನು ___ ಉಪಯೋಗಿಸಿದನು.
  • 48:12 ಆದರೆ ಯೇಸುವು ಎಲ್ಲಾ ಪ್ರವಾದಿಗಳಿಗಿಂತ ದೊಡ್ಡವನು. ಆತನೇ ___ ದೇವರ ವಾಕ್ಯ ___ ಆಗಿದ್ದಾನೆ.
  • 49:18 ನೀವು ಇತರ ಕ್ರೈಸ್ತರೊಂದಿಗೆ ಸೇರಿ ಆತನನ್ನು ಆರಾಧನೆ ಮಾಡಬೇಕೆಂದು, ಆತನ __ ವಾಕ್ಯವನ್ನು __ ಅಧ್ಯಯನ ಮಾಡಬೇಕೆಂದು, ಪ್ರಾರ್ಥನೆ ಮಾಡಬೇಕೆಂದು ಮತ್ತು ನಿಮಗೆ ಮಾಡಿದ ಪ್ರತಿಯೊಂದು ಕಾರ್ಯವನ್ನು ಇತರರಿಗೆ ಹೇಳಬೇಕೆಂದು ದೇವರು ನಿಮಗೆ ಹೇಳುತ್ತಿದ್ದಾನೆ.

ಪದ ಡೇಟಾ:

  • Strong's: H561, H565, H1697, H3068, G3056, G4487