kn_tw/bible/other/heal.md

7.8 KiB

ಗುಣಪಡಿಸು, ಗುಣವಾಗಿದೆ, ಸ್ವಸ್ಥಪಡಿಸು, ಸ್ವಸ್ಥಪಡಿಸುವುದು, ಸ್ವಸ್ಥತೆ, ಸ್ವಸ್ಥತೆಗಳು, ಗುಣಪಡಿಸುವಾತನು, ಆರೋಗ್ಯ, ಅರೋಗ್ಯಕರವಾದ, ಅನಾರೋಗ್ಯ

ಪದದ ಅರ್ಥವಿವರಣೆ:

“ಸ್ವಸ್ಥಪಡಿಸು” ಮತ್ತು “ಗುಣಪಡಿಸು” ಎನ್ನುವ ಪದಗಳೆರಡು ರೋಗ, ಗಾಯ, ಅಥವಾ ಅಂಗವಿಕಲತೆಗಳಿಂದ ನರಳುತ್ತಿರುವ ಒಬ್ಬ ವ್ಯಕ್ತಿ ತಿರುಗಿ ಆರೋಗ್ಯವನ್ನು ಪಡೆಯುವುದನ್ನು ಸೂಚಿಸುತ್ತವೆ.

  • “ಗುಣವನ್ನು” ಅಥವಾ “ಸ್ವಸ್ಥತೆಯನ್ನು” ಪಡೆದ ವ್ಯಕ್ತಿ “ಚೆನ್ನಾಗಿ ಮಾಡಲ್ಪಟ್ಟಿದ್ದಾನೆ” ಅಥವಾ “ಆರೋಗ್ಯವನ್ನು ಹೊಂದಿಕೊಂಡಿದ್ದಾನೆ”.
  • ಸ್ವಸ್ಥತೆ ಎನ್ನುವುದು ಸ್ವಾಭಾವಿಕವಾಗಿ ನಡೆಯುತ್ತದೆ, ಯಾಕಂದರೆ ದೇವರು ನಮ್ಮ ಶರೀರಗಳಿಗೆ ಅನೇಕವಾದ ಗಾಯಗಳಿಂದ ಮತ್ತು ರೋಗಗಳಿಂದ ತಿರುಗಿ ಗುಣವಾಗುವ ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ಈ ರೀತಿಯ ಸ್ವಸ್ಥತೆ ಸಹಜವಾಗಿ ನಿದಾನವಾಗಿ ನಡೆಯುತ್ತದೆ.
  • ಆದರೆ ಕೆಲವೊಂದು ಪರಿಸ್ಥಿತಿಗಳಾಗಿರುವ ಕುರುಡುತನ ಅಥವಾ ಪಾರ್ಶ್ವವಾಯು ಮತ್ತು ಕೆಲವೊಂದು ತೀವ್ರ ರೋಗಗಳಾಗಿರುವ ಕುಷ್ಟುತನ ಎನ್ನುವವುಗಳು ತಮ್ಮಷ್ಟಕ್ಕೆ ಅವೇ ಗುಣವಾಗುವುದಿಲ್ಲ. ಒಂದು ವೇಳೆ ಜನರು ಇಂಥಹ ರೋಗಗಳಿಂದ ಗುಣವಾದರೆ, ಅದು ಸಹಜವಾಗಿ ಆಕಸ್ಮಿಕವಾದ ರೀತಿಯಲ್ಲಿ ಉಂಟಾಗುವ ಅದ್ಭುತವೆಂದು ಹೇಳಬಹುದು.
  • ಉದಾಹರಣೆಗೆ, ಯೇಸು ಅನೇಕಮಂದಿ ಕುರುಡರನ್ನು ಅಥವಾ ಕುಂಟರನ್ನು ಅಥವಾ ರೋಗಿಗಳನ್ನು ಗುಣಪಡಿಸಿದರು ಮತ್ತು ಅವರು ಚೆನ್ನಾಗಿ ಸ್ವಸ್ಥತೆಯನ್ನು ಪಡೆದುಕೊಂಡವರಾದರು.
  • ಅಪೊಸ್ತಲರು ಕೂಡ ಅದ್ಭುತ ರೀತಿಯಾಗಿ ಜನರನ್ನು ಗುಣಪಡಿಸಿದರು, ಪೇತ್ರನು ಹುಟ್ಟು ಕುಂಟನನ್ನು ಇದ್ದಕ್ಕಿದ್ದಂತೆ ಚೆನ್ನಾಗಿ ನಡೆಯುವವನಾಗಿ ಮಾಡಿದನು.

(ಈ ಪದಗಳನ್ನು ಸಹ ನೋಡಿರಿ : ಅದ್ಭುತ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದದಿಂದ ಉದಾಹರಣೆಗಳು:

  • 19:14 ಭಯಂಕರವಾದ ಚರ್ಮ ರೋಗವನ್ನು ಹೊಂದಿಕೊಂಡ ಶತ್ರುವಿನ ಸೈನ್ಯಾಧಿಕಾರಿಯಾದ ನಾಮಾನನಿಗೆ ಅದ್ಭುತಗಳಲ್ಲಿ ಒಂದು ಅದ್ಭುತ ನಡೆಯಿತು. ಇವನು ಎಲೀಷನ ಕುರಿತಾಗಿ ಕೇಳಿಸಿಕೊಂಡಿದ್ದನು, ಅದ್ದರಿಂದ ಇವನು ಎಲೀಷನ ಬಳಿಗೆ ಹೋಗಿ ನನ್ನನ್ನು __ ಗುಣಪಡಿಸು __ ಎಂದು ಕೇಳಿಕೊಂಡನು.
  • 21:10 ಮೆಸ್ಸೀಯನು ಕಿವುಡರನ್ನು, ಕುರುಡರನ್ನು, ಮೂಕರನ್ನು ಅಥವಾ ಕುಂಟರನ್ನು ಮತ್ತು ರೋಗಿಗಳನ್ನು __ ಗುಣಪಡಿಸುವನೆಂದು __ ಇವನೂ (ಯೆಶಯಾ) ಪ್ರವಾದಿಸಿದ್ದನು.
  • 26:06 “ಪ್ರವಾದಿಯಾದ ಎಲೀಷನ ಕಾಲದಲ್ಲಿ ಇಸ್ರಾಯೇಲಲ್ಲಿ ಅನೇಕಮಂದಿ ಚರ್ಮ ರೋಗಿಗಳು ಇದ್ದಿದ್ದರು. ಆದರೆ ಎಲೀಷನು ಅವರಲ್ಲಿ ಯಾರನ್ನೂ __ ಗುಣಪಡಿಸಲಿಲ್ಲ __. ಇವನು ಕೇವಲ ಇಸ್ರಾಯೇಲ್ ಶತ್ರುಗಳ ಸೈನ್ಯಾಧಿಪತಿಯಾದ ನಾಮಾನನ ಚರ್ಮ ರೋಗವನ್ನು ಮಾತ್ರ __ ಗುಣಪಡಿಸಿದ್ದನು __ .
  • 26:08 ಅವರು ರೋಗಿಗಲನ್ನು ಅಥವಾ ಅಂಗವಿಕಲರನ್ನು, ಕುರುಡರನ್ನು, ಕುಂಟರನ್ನು, ಕಿವುಡರನ್ನು, ಮೂಕರನ್ನು ತೆಗೆದುಕೊಂಡು ಬಂದಿದ್ದರು, ಆಗ ಯೇಸು ಅವೆರಲ್ಲರನ್ನು __ ಗುಣಪಡಿಸಿದನು __ .
  • 32:14 ಯೇಸು ಅನೇಕಮಂದಿ ರೋಗಿಗಳನ್ನು __ ಸ್ವಸ್ಥಪಡಿಸಿದ್ದನೆಂದು __ ಆಕೆ ಕೇಳಿದ್ದಳು, ಇದರಿಂದ “ಯೇಸುವಿನ ವಸ್ತ್ರಗಳನ್ನು ಮುಟ್ಟಿದರೆ ಸಾಕು, ನಾನು __ ಸ್ವಸ್ಥತೆಯನ್ನು __ ಹೊಂದುತ್ತೇನೆಂದು ಆಕೆ ಯೋಚನೆ ಮಾಡಿದ್ದಳು!”
  • 44:03 ಆಕಸ್ಮಿಕವಾಗಿ, ದೇವರು ಕುಂಟ ಮನುಷ್ಯನನ್ನು __ಗುಣಪಡಿಸಿದನು __ . ಆಗ ಅವನು ನಡೆಯುವುದಕ್ಕೆ ಮತ್ತು ಜಿಗಿಯುವುದಕ್ಕೆ ಆರಂಭಿಸಿ, ದೇವರನ್ನು ಮಹಿಮೆಪಡಿಸಿದನು
  • 44:08 “ನಿಮ್ಮ ಮುಂದೆ ನಿಂತಿರುವ ಈ ಮನುಷ್ಯನು ಮೆಸ್ಸೀಯನಾದ ಯೇಸುವಿನ ಶಕ್ತಿಯಿಂದ __ ಸ್ವಸ್ಥತೆ __ ಹೊಂದಿಕೊಂಡಿದ್ದಾನೆ” ಎಂದು ಪೇತ್ರನು ಅವರಿಗೆ ಉತ್ತರವನ್ನು ಕೊಟ್ಟನು.
  • 49:02 ಯೇಸು ದೇವರೆಂದು ನಿರೂಪಿಸಿಕೊಳ್ಳಲು ಅನೇಕ ಅದ್ಭುತಗಳನ್ನು ಮಾಡಿದನು. ಆತನು ನೀರಿನ ಮೇಲೆ ನಡೆದನು, ಬಿರುಗಾಳಿಗಳನ್ನು ಶಾಂತಗೊಳಿಸಿದನು, ಅನೇಕ ರೋಗಿಗಳನ್ನು __ ಗುಣಪಡಿಸಿದನು __, ದೆವ್ವಗಳನ್ನು ಹೋಗಲಾಡಿಸಿದನು, ಸತ್ತವರನ್ನು ಎಬ್ಬಿಸಿದನು, ಮತ್ತು ಐದು ರೊಟ್ಟಿಗಳನ್ನು, ಎರಡು ಚಿಕ್ಕ ಮೀನುಗಳನ್ನು 5,000 ಜನರಿಗೆ ಬೇಕಾದಷ್ಟು ಆಹಾರವನ್ನು ಹಂಚಿದನು.

ಪದ ಡೇಟಾ:

  • Strong's: H724, H1369, H1455, H2280, H2421, H2896, H3545, H4832, H4974, H7495, H7499, H7500, H7725, H7965, H8549, H8585, H8644, H622, G1295, G1743, G2322, G2323, G2386, G2390, G2392, G2511, G3647, G4982, G5198, G5199