kn_tw/bible/other/governor.md

4.3 KiB

ಪಾಲಿಸು, ಪ್ರಭುತ್ವ, ಪ್ರಭುತ್ವಗಳು, ರಾಜ್ಯಪಾಲ, ರಾಜ್ಯಪಾಲಕರು, ಆಡಳಿತಾಧಿಕಾರಿ, ಆಡಳಿತಾಧಿಕಾರಿಗಳು

ಪದದ ಅರ್ಥವಿವರಣೆ:

“ರಾಜ್ಯಪಾಲ” ಎನ್ನುವ ಪದವು ಒಂದು ರಾಜ್ಯವನ್ನು, ಒಂದು ಪ್ರಾಂತ್ಯವನ್ನು ಅಥವಾ ಒಂದು ಕ್ಷೇತ್ರವನ್ನು ಪಾಲಿಸುತ್ತಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. “ಪಾಲಿಸು” ಎನ್ನುವದಕ್ಕೆ ನಡೆಸು, ಸಲಹೆಕೊಡು, ಅಥವಾ ಅವರನ್ನು ನಿರ್ವಹಿಸು ಎಂದರ್ಥ.

  • ಹೊಸ ಒಡಂಬಡಿಕೆಯಲ್ಲಿ, “ರಾಜ್ಯಪಾಲಕರು” (ಪ್ರೊಕನ್ಸಲ್) ಎನ್ನುವ ಪದವು ರೋಮಾ ಸೀಮೆಯನ್ನು ಆಳುತ್ತಿರುವ ಒಬ್ಬ ಪಾಲಕನಿಗೆ ಕೊಡುವ ಒಂದು ವಿಶೇಷವಾದ ಬಿರುದಾಗಿರುತ್ತದೆ.
  • ಹಳೆ ಒದಾಂಬಡಿಕೆಯಲ್ಲಿ, "ಆಡಳಿತಾಧಿಕಾರಿ" ಎನ್ನುವ ಪದವು ಪರಾಸಿಯ ರಾಜ್ಯಪಾಲರಿಗೆ ನಿರ್ದಿಷ್ಟವಾದ ಶೀರ್ಷಿಕೆಯಾಗಿದೆ..
  • “ಪ್ರಭುತ್ವ” ಎನ್ನುವುದು ಒಂದು ದೇಶವನ್ನು ಅಥವಾ ಒಂದು ಸಾಮ್ರಾಜ್ಯವನ್ನು ಆಳುವ ಪಾಲಕರನ್ನು ಸೂಚಿಸುತ್ತದೆ. ಪಾಲಕರು ತಾವು ಪಾಲಿಸುವ ಜನರ ನಡತೆಯನ್ನು ನಿರ್ದೇಶಿಸಲು ಕಾನೂನುಗಳನ್ನು ಮಾಡುತ್ತಾರೆ, ಇದರಿಂದ ದೇಶದಲ್ಲಿರುವ್ ಎಲ್ಲಾ ಜನರಿಗೆ ಸಮಾಧಾನ, ಭದ್ರತೆ ಮತ್ತು ಸಂರಕ್ಷಣೆ ಇರುತ್ತದೆ.

ಅನುವಾದ ಸಲಹೆಗಳು:

  • “ರಾಜ್ಯಪಾಲ” ಎನ್ನುವ ಪದವನ್ನು “ಪಾಲಕ” ಅಥವಾ “ಮೇಲ್ವಿಚಾರಕ” ಅಥವಾ “ಪ್ರಾಂತ್ಯದ ನಾಯಕ” ಅಥವಾ “ಒಂದು ಚಿಕ್ಕ ಕ್ಷೇತ್ರವನ್ನು ಪಾಲಿಸುವಾತನು” ಎಂದೂ ಅನುವಾದ ಮಾಡಬಹುದು.
  • ಸಂದರ್ಭಾನುಸಾರವಾಗಿ “ಪಾಲಿಸು” ಎನ್ನುವ ಪದವನ್ನು “ಆಳು” ಅಥವಾ “ನಡೆಸು” ಅಥವಾ “ನಿರ್ವಹಿಸು” ಅಥವಾ “ಮೇಲ್ವಿಚಾರಣೆ ಮಾಡು” ಎಂದೂ ಅನುವಾದ ಮಾಡಬಹುದು.
  • “ರಾಜ್ಯಪಾಲ” ಪದವು “ಅರಸ” ಅಥವಾ “ಚಕ್ರವರ್ತಿ” ಎನ್ನುವ ಪದಗಳಿಗೆ ಭಿನ್ನವಾಗಿ ಇರುವಂತೆ ನೋಡಿಕೊಳ್ಳಬೇಕು, ಯಾಕಂದರೆ ರಾಜ್ಯಪಾಲರು ಆವರ ಅಧಿಕಾರದ ಕೆಳಗೆ ಇರುವ ಅತೀ ಕಡಿಮೆ ಶಕ್ತಿಯ ಹೊಂದಿದ ಪಾಲಕರಾಗಿರುತ್ತಾರೆ.
  • “ಆಡಳಿತಾಧಿಕಾರಿ” ಎನ್ನುವ ಪದವನ್ನು “ರೋಮಾ ಚಕ್ರವರ್ತಿ” ಅಥವಾ “ರೋಮಾ ಸೀಮೆಯ ಪಾಲಕ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ಅರಸ, ಶಕ್ತಿ, ಸೀಮೆ, ರೋಮಾ, ಪಾಲಕ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H324, H1777, H2280, H4951, H5148, H5460, H6346, H6347, H6486, H7989, H8269, H8660, G445, G446, G746, G1481, G2232, G2233, G2230, G4232