kn_tw/bible/other/servant.md

14 KiB
Raw Permalink Blame History

ಸೇವಕ, ಸೇವೆ, ಗುಲಾಮ, ಕೆಲಸಗಾರ, ಯುವಕ, ಯುವತಿಯರು

ಪದದ ಅರ್ಥವಿವರಣೆ:

“ಸೇವಕ” ಎನ್ನುವ ಪದಕ್ಕೆ “ಗುಲಾಮ” ಎಂದರ್ಥವೂ ಇದೆ, ಇದು ಒಬ್ಬ ವ್ಯಕ್ತಿಯ ಕೆಳಗೆ ಕೆಲಸ ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ, ಈ ಕೆಲಸವನ್ನು ಇಷ್ಟಪೂರ್ವಕವಾಗಿ ಮಾಡಿದರು ಅಥವಾ ಬಲವಂತಿಕೆಯಿಂದ ಮಾಡಿದರು ಈ ಪದದ ಅರ್ಥದ ಕೆಳಗೆ ಬರುತ್ತದೆ. ಈ ಪದಗಳನ್ನೂಳಗೊಂಡ ವಾಕ್ಯವು ಸಾಧಾರಣವಾಗಿ ಒಬ್ಬ ವ್ಯಕ್ತಿ ಸೇವಕನಾಗಿದ್ದಾನೋ ಅಥವಾ ಗುಲಾಮನಾಗಿದ್ದಾನೋ ಸ್ಪಷ್ಟವಾಗಿ ತಿಳಿಯಪಡಿಸುತ್ತದೆ. “ಸೇವೆ ” ಎನ್ನುವ ಪದಕ್ಕೆ ಇತರ ಜನರಿಗೆ ಸಹಾಯಕವಾಗುವ ಕಾರ್ಯಗಳನ್ನು ಮಾಡುವುದು ಎಂದರ್ಥ. ಇದಕ್ಕೆ “ಆರಾಧನೆ” ಎಂದೂ ಅರ್ಥವುಂಟು. ಸತ್ಯವೇದದ ಕಾಲಗಳಲ್ಲಿ ಸೇವಕ ಮತ್ತು ಗುಲಾಮನು ಎನ್ನುವ ಪದಗಳ ಮಧ್ಯದಲ್ಲಿ ವ್ಯತ್ಯಾಸವು ಪ್ರಸ್ತುತ ದಿನಗಳಲ್ಲಿರುವ ವ್ಯತ್ಯಾಸಕ್ಕಿಂತಲೂ ತುಂಬಾ ಕಡಿಮೆಯಾಗಿರುತ್ತದೆ, ಸೇವಕ ಮತ್ತು ಗುಲಾಮರು ತಮ್ಮ ಯಜಮಾನನ ಮನೆಯಲ್ಲಿ ಪ್ರಾಮುಖ್ಯವಾದ ಭಾಗವನ್ನು ಹೊಂದಿರುತ್ತಾರೆ ಮತ್ತು ಅವರು ಕುಟುಂಬ ಸದಸ್ಯರಂತೆಯೇ ಅವರ ಮಧ್ಯೆದಲ್ಲಿ ಬೆರೆತುಕೊಂಡಿರುತ್ತಾರೆ. ಕೆಲವೊಂದುಬಾರಿ ಸೇವಕ ತನ್ನ ಯಜಮಾನನಿಗೆ ಜೀವಮಾನವೆಲ್ಲಾ ದಾಸನಾಗಿರುತ್ತಾರೆ.

  • ಗುಲಾಮನು ತಾನು ಕೆಲಸ ಮಾಡುತ್ತಿರುವ ಯಜಮಾನನಿಗೆ ಅಸ್ತಿಯಾಗಿರುವ ಒಂದು ವಿಧವಾದ ದಾಸನಾಗಿರುತ್ತಾನೆ. ಗುಲಾಮನನ್ನು ಕೊಂಡುಕೊಂಡು ಬಂದಿರುವ ವ್ಯಕ್ತಿಯನ್ನು “ಮಾಲೀಕ” ಅಥವಾ “ಯಜಮಾನ” ಎಂದು ಕರೆಯುತ್ತಾರೆ. ಕೆಲವೊಂದು ಯಜಮಾನರು ತಮ್ಮ ಗುಲಾಮರಲ್ಲಿ ತುಂಬಾ ಭಯಂಕರವಾಗಿ ನಡೆದುಕೊಂಡಿದ್ದಾರೆ, ಇನ್ನೂ ಕೆಲವರು ತಮ್ಮ ಗುಲಾಮರನ್ನು ಮನೆತನದ ಬೆಲೆಯುಳ್ಳ ದಾಸನಾಗಿರುವಾಗ ಚೆನ್ನಾಗಿ ನೋಡಿಕೊಳ್ಳುತ್ತಾರೆ,
  • ಪುರಾತನ ಕಾಲಗಳಲ್ಲಿ ಒಬ್ಬ ವ್ಯಕ್ತಿಗೆ ಸಾಲವನ್ನು ಕಟ್ಟುವ ಕ್ರಮದಲ್ಲಿ ಹಣವನ್ನು ಕೊಟ್ಟ ವ್ಯಕ್ತಿಗೆ ಕೆಲವೊಂದು ಜನರು ಇಷ್ಟಪೂರ್ವಕವಾಗಿ ಆ ವ್ಯಕ್ತಿಗೆ ಗುಲಾಮರಾಗಿ ಮಾರ್ಪಡುತ್ತಿದ್ದರು,
  • ಒಬ್ಬ ವ್ಯಕ್ತಿ ಅತಿಥಿಗಳಿಗೆ ಸೇವೆ ಮಾಡುವ ಸಂದರ್ಭದಲ್ಲಿ, ಈ ಮಾತಿಗೆ “ಚೆನ್ನಾಗಿ ನೋಡಿಕೋ” ಅಥವಾ “ಆಹಾರವನ್ನು ಬಡಿಸು” ಅಥವಾ “ಆಹಾರವನ್ನು ಒದಗಿಸಿಕೊಡು” ಎಂದರ್ಥಗಳಿರುತ್ತವೆ. ಜನರಿಗೆ ಮೀನುಗಳನ್ನು “ಹಂಚಿರಿ” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದಾಗ, ಇದನ್ನು “ವಿತರಣೆಗೊಳಿಸಿರಿ” ಅಥವಾ “ಕೈಗಳಿಗೆ ಕೊಡಿರಿ” ಅಥವಾ “ಕೊಡಿರಿ” ಎಂದೂ ಅನುವಾದ ಮಾಡಬಹುದು.
  • ಸತ್ಯವೇದದಲ್ಲಿ “ನಾನು ನಿನ್ನ ಸೇವಕನು ಅಥವಾ ದಾಸನು” ಎನ್ನುವ ಮಾತನ್ನು ಅರಸ ಎನ್ನುವಂತವರಿಗೆ ಉನ್ನತ ಶ್ರೇಣಿಯನ್ನು ಪಡೆದವರಿಗೆ ಸೇವೆಯನ್ನು ಮಾಡುವುದಕ್ಕೆ ಮತ್ತು ಗೌರವ ಚಿಹ್ನೆಯಾಗಿ ಉಪಯೋಗಿಸುತ್ತಿದ್ದರು. ಮಾತನಾಡುತ್ತಿರುವ ವ್ಯಕ್ತಿ ಸಾಧಾರಣವಾದ ದಾಸನಾಗಿರುತ್ತಾನೆಂದು ನಾನು ಹೇಳುತ್ತಾಯಿಲ್ಲ.
  • “ಸೇವೆ ಮಾಡು” ಎನ್ನುವ ಮಾತನ್ನು “ಸೇವೆಯನ್ನು ಸಲ್ಲಿಸು” ಅಥವಾ “ಕೆಲಸ ಮಾಡು” ಅಥವಾ “ಚೆನ್ನಾಗಿ ನೋಡಿಕೋ” ಅಥವಾ “ವಿಧೇಯತೆ ತೋರಿಸು” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
  • ಹಳೇ ಒಡಂಬಡಿಕೆಯಲ್ಲಿ ದೇವರ ಪ್ರವಾದಿಗಳನ್ನು ಮತ್ತು ದೇವರನ್ನು ಆರಾಧಿಸುವ ಇತರ ಜನರನ್ನು ಆತನ “ಸೇವಕರು ಅಥವಾ ದಾಸರು” ಎಂಬುದಾಗಿ ಸೂಚಿಸಲ್ಪಟ್ಟಿದ್ದಾರೆ.
  • ದೇವರನ್ನು ಸೇವಿಸುವುದು” ಎನ್ನುವ ಮಾತನ್ನು “ದೇವರನ್ನು ಆರಾಧಿಸಿ, ಆತನಿಗೆ ವಿಧೇಯತೆಯಿಂದ ಇರುವುದು” ಅಥವಾ “ದೇವರು ಆಜ್ಞಾಪಿಸಿದ ಕೆಲಸವನ್ನು ಮಾಡುವುದು” ಎಂದರ್ಥವಾಗಿರುತ್ತದೆ.
  • ಹೊಸ ಒಡಂಬಡಿಕೆಯಲ್ಲಿ, ಕ್ರಿಸ್ತನಲ್ಲಿ ನಂಬಿಕೆ ಇಡುವುದರ ಮೂಲಕ ದೇವರಿಗೆ ವಿಧೇಯರಾಗಿರುವ ಜನರನ್ನು ಅನೇಕಬಾರಿ “ದಾಸರು ಅಥವಾ ಸೇವಕರು” ಎಂದು ಕರೆಯಲ್ಪಟ್ಟಿದ್ದಾರೆ.
  • “ಮೇಜುಗಳ ಬಳಿ ಸೇವೆ ಮಾಡು” ಎನ್ನುವ ಮಾತಿಗೆ ಮೇಜುಗಳ ಬಳಿ ಕುಳಿತಿರುವ ಜನರಿಗೆ ಆಹಾರವನ್ನು ಕೊಡು, ಅಥವಾ ತುಂಬಾ ಸಾಧಾರಣವಾಗಿ “ಆಹಾರವನ್ನು ವಿತರಣೆಗೊಳಿಸು” ಎಂದರ್ಥ.
  • ದೇವರ ಕುರಿತಾಗಿ ಇತರರಿಗೆ ಬೋಧನೆ ಮಾಡುವ ಜನರನ್ನು ದೇವರಿಗೆ ಮತ್ತು ಬೋಧನೆ ಕೇಳುವ ಜನರಿಗೆ ಸೇವೆ ಮಾಡುವವರೆಂದು ಹೇಳಲ್ಪಟ್ಟಿದ್ದಾರೆ.
  • ಅಪೊಸ್ತಲನಾದ ಪೌಲನು ಹಳೇ ಒಡಂಬಡಿಕೆಗೆ ಯಾವ ರೀತಿ ಸೇವೆ ಮಾಡಿದ್ದಾರೆ ಎನ್ನುವುದರ ಕುರಿತಾಗಿ ಕೊರಿಂಥದಲ್ಲಿರುವ ಕ್ರೈಸ್ತರಿಗೆ ಪತ್ರವನ್ನು ಬರೆದಿದ್ದಾರೆ. ಇದು ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯತೆಯನ್ನು ತೋರಿಸುವುದನ್ನು ಸೂಚಿಸುತ್ತದೆ. ಈಗ ಅವರು ಹೊಸ ಒಡಂಬಡಿಕೆಗೆ “ಸೇವೆ ಮಾಡುತ್ತಿದ್ದಾರೆ.” ಅಂದರೆ ಶಿಲುಬೆಯ ಮೇಲೆ ಯೇಸುವಿನ ತ್ಯಾಗದ ಕಾರಣದಿಂದ, ಯೇಸುವನ್ನು ನಂಬಿರುವವರು ಪರಿಶುದ್ಧವಾದ ಜೀವನಗಳನ್ನು ಜೀವಿಸುವುದಕ್ಕೆ ಮತ್ತು ದೇವರನ್ನು ಮೆಚ್ಚಿಸುವುದಕ್ಕೆ ಪವಿತ್ರಾತ್ಮನ ಮೂಲಕ ಬಲವನ್ನು ಹೊಂದಿಕೊಂಡಿದ್ದಾರೆ.
  • ಹಳೇ ಅಥವಾ ಹೊಸ ಒಡಂಬಡಿಕೆಗೆ ತಮ್ಮ “ಸೇವೆಯನ್ನು ಮಾಡುವ” ಪದಗಳಲ್ಲಿಯೇ ಅವರ ಕ್ರಿಯೆಗಳ ಕುರಿತಾಗಿ ಅಪೊಸ್ತಲನಾದ ಪೌಲನು ಮಾತನಾಡುತ್ತಿದ್ದಾನೆ. ಇದನ್ನು “ಸೇವೆ ಮಾಡುವುದು” ಅಥವಾ “ವಿಧೇಯತೆ ತೋರಿಸುವುದು” ಅಥವಾ “ಭಕ್ತಿ ತೋರಿಸುವದು ಎಂದು ಅನುವಾದ ಮಾಡಬಹುದು

(ಈ ಪದಗಳನ್ನು ಸಹ ನೋಡಿರಿ : ಬದ್ಧನಾಗು, ಗುಲಾಮಗಿರಿ, ಮನೆತನ, ಒಡೆಯ, ವಿಧೇಯನಾಗು, ನೀತಿ, ಒಡಂಬಡಿಕೆ, ಧರ್ಮಶಾಸ್ತ್ರ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 06:01 ಅಬ್ರಾಹಾಮನು ತುಂಬಾ ವೃದ್ಧನಾಗಿದ್ದಾಗ, ತನ್ನ ಮಗನಾಗಿರುವ ಇಸಾಕನು ದೊಡ್ಡವನಾದಾಗ, ಅಬ್ರಹಾಮನು ತನ್ನ __ ಸೇವಕರಲ್ಲಿ __ ಒಬ್ಬರನ್ನು ಕರೆದು ತನ್ನ ಮಗನಾಗಿರುವ ಇಸಾಕನಿಗೆ ಹೆಂಡತಿಯನ್ನು ಹುಡುಕಿಕೊಂಡು ಬರುವುದಕ್ಕೆ ತನ್ನ ಬಂಧುಗಳು ಇರುವ ಸ್ಥಳಕ್ಕೆ ಕಳುಹಿಸಿದನು.
  • 08:04 ಗುಲಾಮ ವ್ಯಾಪಾರಿಗಳು ಯೋಸೇಫನನ್ನು ಒಬ್ಬ __ ದಾಸನನ್ನಾಗಿ __ ಶ್ರೀಮಂತ ಪ್ರಭುತ್ವ ಅಧಿಕಾರಿಗೆ ಮಾರಿದರು.
  • 09:13 “ಫರೋಹನ ಬಳಿಗೆ ನಾನು (ದೇವರು) ನಿನ್ನನ್ನು (ಮೋಶೆಯನ್ನು) ಕಳುಹಿಸುತ್ತೇನೆ, ಇದರಿಂದ ಐಗುಪ್ತದಲ್ಲಿ __ ಗುಲಾಮಗಿರಿಯಲ್ಲಿರುವ __ ಇಸ್ರಾಯೇಲ್ಯರನ್ನು ನೀನು ಹೊರಗೆ ಕರೆದುಕೊಂಡು ಬರುವಿ.”
  • 19:10”ಯೆಹೋವನೆ, ಅಬ್ರಾಹಾಮ, ಇಸಾಕ ಮತ್ತು ಯಾಕೋಬ ದೇವರೇ, ಇವತ್ತು ನೀವು ಇಸ್ರಾಯೇಲ್ ದೇವರೆಂದು ಮತ್ತು ನಾನು ನಿನ್ನ __ ಸೇವಕನೆಂದು __ ತೋರಿಸಿಕೋ” ಎಂದು ಎಲೀಯ ಪ್ರಾರ್ಥನೆ ಮಾಡಿದನು.
  • 29:03 ದಾಸನು ಸಾಲವನ್ನು ತೀರಸದೇ ಇರುವಾಗ, “ಈ ಮನುಷ್ಯನನ್ನು ಮತ್ತು ತನ್ನ ಕುಟುಂಬದವರನ್ನು __ ಗುಲಾಮರನ್ನಾಗಿ __ ಮಾರಿ, ಅವನು ಸಲ್ಲಿಸಬೇಕಾದ ಹಣವನ್ನು ಕಟ್ಟಿಸಿಕೋ ಎಂದು ಅರಸನು ಹೇಳಿದನು.”
  • 35:06 “ನನ್ನ ತಂದೆಯ __ ದಾಸರೆಲ್ಲರು __ ತಿನ್ನುವುದಕ್ಕೆ ತುಂಬಾ ಹೆಚ್ಚಾಗಿದೇ, ಆದರೂ ನಾನು ಇಲ್ಲಿ ಹಸಿವಿನಿಂದ ಬಳಲುತ್ತಿದ್ದೇನೆ.”
  • 47:04 ಅವರು ಬರುತ್ತಿರುವಾಗ, ಈ __ ದಾಸಿಯಾದ __ ಹುಡಿಗಿ, “ಈ ಮನುಷ್ಯರು ಮಹೋನ್ನತನಾದ ದೇವರ ಸೇವಕರು ಅಥವಾ ದಾಸರು” ಎಂದೂ ಕೂಗಿದಳು.
  • 50:04 ''ದಾಸನು ತನ್ನ ಯಜಮಾನನಿಗಿಂತ ದೊಡ್ಡವನಲ್ಲ” ಎಂದು ಯೇಸು ಕೂಡ ಹೇಳಿದ್ದಾರೆ.

ಪದ ಡೇಟಾ:

Strongs:

  • (Serve) H5288, H5647, H5649, H5650, H5657, H7916, H8198, H8334, G1249, G1401, G1402, G2324, G3407, G3411, G3610, G3816, G4983, G5257
  • (Serve) H327, H3547, H4929, H4931, H5647, H5656, H5673, H5975, H6213, H6399, H6402, H6440, H6633, H6635, H7272, H8104, H8120, H8199, H8278, H8334, G1247, G1248, G1398, G1402, G1438, G1983, G2064, G2212, G2323, G2999, G3000, G3009, G4337, G4342, G4754, G5087, G5256