kn_tw/bible/kt/covenant.md

14 KiB
Raw Permalink Blame History

ಒಡಂಬಡಿಕೆ

ಪದದ ಅರ್ಥವಿವರಣೆ

"ಒಡಂಬಡಿಕೆ" ಎನ್ನುವ ಪದವು ಒಂದು ಅಥವಾ ಎರಡು ಪಕ್ಷದವರು ನೆರವೇರಿಸಬೇಕಾಗಿದ್ದು, ಯಾವುದಾದರು ಒಂದು ಕಾರ್ಯವನ್ನು ಮಾಡಬೇಕೆಂದು ಎರಡು ಪಕ್ಷದವರ ನಡುವೆ ನಿರ್ಣಯಿಸಿ ಸಾಂಪ್ರದಾಯಕವಾಗಿ ಮಾಡಿಕೊಳ್ಳುವ ಒಪ್ಪಂದವನ್ನು ಸೂಚಿಸುತ್ತದೆ.

  • ವ್ಯಕ್ತಿಗಳ ನಡುವೆ, ಜನರ ಗುಂಪಿಗಳ ನಡುವೆ ಅಥವಾ ದೇವರು ಮತ್ತು ಮನುಷ್ಯರ ನಡುವೆ ಈ ಒಪ್ಪಂದ ಮಾಡಿಕೊಳ್ಳಬಹುದು.
  • ಇಬ್ಬರು ವ್ಯಕ್ತಿಗಳು ಒಡಂಬಡಿಕೆಯನ್ನು ಮಾಡಿಕೊಂಡಾಗ, ಅವರು ಏನಾದರು ಮಾಡುತ್ತೇವೆ ಎಂದು ವಾಗ್ಧಾನ ಮಾಡುತ್ತಾರೆ ಮತ್ತು ಅವರು ಆ ವಾಗ್ಧಾನ ನೆರವೇರಿಸಬೇಕು.
  • ವಿವಾಹ ಒಡಂಬಡಿಕೆ, ವ್ಯಾಪಾರ ನಿಬಂಧನೆ, ಮತ್ತು ದೇಶಗಳ ನಡುವೆ ಒಪ್ಪಂದಗಳು, ಮಾನವ ಒಡಂಬಡಿಕೆ ಉದಾಹರಣೆಗಳಾಗಿವೆ.
  • ಸತ್ಯವೇದದುದ್ದಕ್ಕು ದೇವರು ತನ್ನ ಜನರೊಂದಿಗೆ ಅನೇಕ ಒಡಂಬಡಿಕೆಗಳನ್ನು ಮಾಡಿದ್ದಾನೆ.
  • ಕೆಲವೊಂದು ಒಡಂಬಡಿಕೆಗಳಲ್ಲಿ, ದೇವರು ತನ್ನ ಕೆಲಸವನ್ನು ಯಾವುದೇ ಷರತ್ತುಗಳಿಲ್ಲದೆ ಮಾಡಲು ವಾಗ್ಧಾನ ಮಾಡಿದ್ದಾನೆ. ಉದಾಹರಣೆಗೆ, ವಿಶ್ವಾದ್ಯಂತ ಪ್ರವಾಹದಿಂದ ಭುಲೋಕವನ್ನು ಎಂದಿಗೂ ನಾಶ ಮಾಡುವದಿಲ್ಲವೆಂದು ಎಲ್ಲಾ ಮಾನವ ಜಾತಿಯೊಂದಿಗೆ ದೇವರು ವಾಗ್ದಾನ ಮಾಡಿ ಒಡಂಬಡಿಕೆಯನ್ನು ಸ್ಥಿರಪಡಿಸಿದಾಗ, ಈ ವಾಗ್ದಾನವನ್ನು ನೆರವೇರಿಸುವದರಲ್ಲಿ ಮನುಷ್ಯರು ಮಾಡಬೇಕದ ಕೆಲಸ ಒಂದು ಇರುವದಿಲ್ಲ.
  • ಬೇರೆ ಒಡಂಬಡಿಕೆಗಳಲ್ಲಿ, ಮನುಷ್ಯರು ತಮ್ಮ ಕೆಲಸವನ್ನು ಮಾಡಿದ್ದರೆ ಮತ್ತು ಆತನಿಗೆ ವಿಧೇಯರಾಗಿದ್ದರೆ ಮಾತ್ರ ತನ್ನ ಪಕ್ಷದ ಕಾರ್ಯವನ್ನು ಮಾಡುವೆನೆಂದು ದೇವರು ವಾಗ್ದಾನ ಮಾಡಿದನು.

“ಹೊಸ ಒಡಂಬಡಿಕೆ” ಎನ್ನುವ ಪದವು ತನ್ನ ಮಗನಾದ, ಯೇಸು ಕ್ರಿಸ್ತನ ಮುಕಾಂತರ ದೇವರು ತನ್ನ ಜನರೊಂದಿಗೆ ಮಾಡಿದ ಒಪ್ಪಂದ ಅಥವಾ ಬಾಧ್ಯತೆಯನ್ನು ಸೂಚಿಸುತ್ತದೆ.

  • ಸತ್ಯವೇದದಲ್ಲಿ “ಹೊಸ ಒಡಂಬಡಿಕೆ” ಎನ್ನುವ ಭಾಗದಲ್ಲಿ ದೇವರ “ನೂತನ ನಿಬಂಧನೆಯ” ಕುರಿತಾಗಿ ವಿವರಿಸಲ್ಪಟ್ಟಿದೆ.
  • ಈ ನೂತನ ನಿಬಂಧನವು ಹಳೆ ಒಡಂಬಡಿಕೆಯ ಕಾಲದಲ್ಲಿ ದೇವರು ಇಸ್ರಾಯೇಲರ ಸಂಗಡ ಮಾಡಿದ “ಹಳೆ” ನಿಬಂಧನಕ್ಕೆ ವಿರುದ್ಧವಾಗಿದೆ.
  • ಹಳೆಯ ಒಡಂಬಡಿಕೆಯಗಿಂತ ಹೊಸ ಒಡಂಬಡಿಕೆ ತುಂಬಾ ಉತ್ತಮವಾಗಿದೆ ಯಾಕಂದರೆ ಅದು ಮನುಷ್ಯರ ಪಾಪಗಳನ್ನು ಶಾಶ್ವತವಾಗಿ ಪರಿಹಾರಮಾಡಿರುವ ಯೇಸು ಕ್ರಿಸ್ತನ ಬಲಿಯಾಗದ ಮೇಲೆ ಆಧಾರವಾಗಿದೆ. ಹಳೆ ಒಡಂಬಡಿಕೆಯ ಬಲಿಯಗದಲ್ಲಿ ಇದು ಮಾಡಿರಲಿಲ್ಲ.
  • ಯೇಸುವಿನ ವಿಶ್ವಾಸಿಗಳು ಆಗಿರುವವರ ಹೃದಯಗಳ ಮೇಲೆ ದೇವರು ಈ ನೂತನ ಒಡಂಬಡಿಕೆಯನ್ನು ಬರೆದಿದ್ದಾರೆ. ದೇವರಿಗೆ ವಿಧೇಯರಾಗಿರಲು ಮತ್ತು ಪರಿಶುದ್ಧ ಜೀವಿತವನ್ನು ಹೊಂದಿರಲು ಪ್ರಾರಂಭಿಸುವಂತೆ ಅದು ಅವರನ್ನು ಪ್ರೇರೇಪಿಸುತ್ತದೆ.
  • ಅಂತ್ಯ ಕಾಲದಲ್ಲಿ ದೇವರು ತನ್ನ ರಾಜ್ಯವನ್ನು ಭೂಲೋಕದಲ್ಲಿ ಸ್ಥಿರಪಡಿಸಿದಾಗ ಹೊಸ ಒಡಂಬಡಿಕೆ ಸಂಪೂರ್ಣವಾಗಿ ನೆರವೇರುತ್ತದೆ. ದೇವರು ಪ್ರಪಂಚವನ್ನು ಸೃಷ್ಟಿಸಿದಾಗ ಹೇಗಿತ್ತೋ ಅದೇರೀತಿರಲ್ಲಿ ಮತ್ತೋಮ್ಮೆ ಎಲ್ಲವು ಒಳ್ಳೆಯದಾಗಿರುತ್ತದೆ.

ಅನುವಾದ ಸಲಹೆಗಳು:

  • ಸಂಧರ್ಭಕ್ಕೆ ತಕ್ಕಹಾಗೆ, ಈ ಪದವನ್ನು “ಬಂಧನದ ಒಪ್ಪಂದ” ಅಥವಾ “ಸಂಪ್ರದಾಯಕ ಒಪ್ಪಂದ” ಅಥವಾ “ವಾಗ್ದಾನ” ಅಥವಾ “ಒಪ್ಪಂದ” ಎಂದು ಅನುವಾದ ಮಾಡಬಹುದು.
  • ಒಂದು ಅಥವಾ ಎರಡು ಪಕ್ಷದವರು ನೆರವೇರಿಸಬೇಕಾದ ಕಾರ್ಯದ ವಿಷಯವಾಗಿ ಮಾಡಿರುವ ಒಪ್ಪಂದದ ಪ್ರಕಾರ ಬೇರೆ ಭಾಷೆಗಳಲ್ಲಿ ನಿಬಂಧನ ಎನ್ನುವ ಪದಕ್ಕೆ ಬೇರೆ ಪದಗಳನ್ನು ಉಪಯೋಗಿಸಿರ ಬಹುದು. ಒಡಂಬಡಿಕೆ ಒಂದು ಪಕ್ಷಕ್ಕೆ ಸೇರಿದ್ದು ಆಗಿದ್ದರೆ, ಅದನ್ನು “ವಾಗ್ದಾನ” ಅಥವಾ “ಪ್ರತಿಜ್ಞೆ” ಎಂದು ಅನುವಾದ ಮಾಡಬಹುದು.
  • ಜನರು ಒಡಂಬಡಿಕೆ ಮಾಡಲು ಪ್ರಸ್ತಾಪಿಸಿದ್ದಾರೆ ಎಂದು ಅರ್ಥಕೊಡದಂತೆ ನೋಡಿಕೊಳ್ಳಿರಿ. ದೇವರು ಮತ್ತು ಮನುಷ್ಯರ ನಡುವೆ ಮಾಡಿರುವ ಎಲ್ಲಾ ನಿಬಂಧನೆಗಳು, ದೇವರೇ ಆ ನಿಬಂಧನಗಳನ್ನು ಪ್ರಾರಂಭಿಸಿದ್ದಾರೆ.
  • “ನೂತನ ಒಡಂಬಡಿಕೆ ” ಎನ್ನುವ ಪದವನ್ನು “ಹೊಸ ಸಂಪ್ರದಾಯಕ ಒಪ್ಪಂದ” ಅಥವಾ “ಹೊಸ ಒಪ್ಪಂದ” ಅಥವಾ “ಹೊಸ ಕರಾರು” ಎಂದು ಅನುವಾದ ಮಾಡಬಹುದು.
  • ಈ ಪದವಿನ್ಯಾಸಗಳಲ್ಲಿ “ಹೊಸ” ಎನ್ನುವ ಪದಕ್ಕೆ “ತಾಜಾ” ಅಥವಾ “ಹೊಸ ವಿಧಾನ” ಅಥವಾ “ಇನ್ನೊಂದು” ಎಂದು ಅರ್ಥ ಕೊಡುತ್ತದೆ.

(ಈ ಪದಗಳನ್ನು ಸಹ ನೋಡಿರಿ : ಒಡಂಬಡಿಕೆ, ವಾಗ್ದಾನ)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದ ಕತೆಗಳಿಂದ ಕೆಲವು ಉದಾಹರಣೆಗಳು:

  • 04:09 ದೇವರು ಅಬ್ರಹಾಮನೊಂದಿಗೆ __ಒಡಬಡಿಕೆ __ ಮಾಡಿದನು. __ಒಡಬಡಿಕೆ __ ಎಂದರೆ ಎರಡು ಪಕ್ಷದವರು ಮಾಡುವ ಒಪ್ಪಂದವಾಗಿದೆ.
  • 05:04 “ಇಷ್ಮಾಯೇಲನನ್ನು ಆಶೀರ್ವದಿಸಿ, ಅವನನ್ನು ಅಭಿವೃದ್ದಿಮಾಡಿ ಅವನಿಗೆ ಅತ್ಯಧಿಕವಾದ ಸಂತಾನವನ್ನು ಕೊಡುವೆನು. ಆದರೆ ಆ ನನ್ನ ಒಡಂಬಡಿಕೆಯನ್ನು ಇಸಾಕನೊಂದಿಗೆ ಸ್ಥಾಪಿಸಿಕೊಳ್ಳುತ್ತೇನೆ.”
  • 06:04 ಬಹು ಕಾಲದ ನಂತರ, ಅಬ್ರಹಾಮನು ತೀರಿಹೊದನು ಮತ್ತು ದೇವರು ಅವನೊಂದಿಗೆ ಮಾಡಿದ __ಒಡಬಡಿಕೆ __ ಅವನ ಮಗನಾದ ಇಸಾಕನ ಮೇಲೂ ಉಂಟಾಯಿತು.
  • 07:10 ದೇವರು ಅಬ್ರಹಾಮನಿಗೆ ಮತ್ತು ಇಸಾಕನಿಗೆ ಮಾಡಿದ __ಒಡಬಡಿಕೆ __ ಯಾಕೋಬನ ಮೇಲೂ ಉಂಟಾಯಿತು.”
  • 13:02 “ನೀವು ನನ್ನ ಮಾತುಗಳನ್ನು ಶ್ರದ್ದೆಯಿಂದ ಕೇಳಿ, ನನ್ನ ಒಡಂಬಡಿಕೆಯನ್ನು ಕಾಪಾಡಿಕೊಂಡರೆ, ನೀವು ನನಗೆ ಶ್ರೇಷ್ಠ ಯಾಜಕರೂ, ಪರಿಶುದ್ದ ಜನರೂ ಆಗಿರುವಿರಿ” ಎಂದು ದೇವರು ಮೋಶೆ ಮತ್ತು ಇಸ್ರಯೇಲ್ ಜನರೊಂದಿಗೆ ಹೇಳಿದನು.
  • 13:04 “ಐಗುಪ್ತ್ಯರು ಮಾಡಿಸುವ ಬಿಟ್ಟೀ ಸೇವೆಯನ್ನು ನಾನು ನಿಮಗೆ ತಪ್ಪಿಸಿದಾಗ ಯೆಹೋವನೆಂಬ ನಾನೇ ನಿಮ್ಮ ದೇವರಗಿದ್ದೇನೆ” ಎಂದು ದೇವರು ಅವರಿಗೆ ಒಡಂಬಡಿಕೆ ಮಾಡಿದರು. ಬೇರೆ ಯಾವ ದೇವರನ್ನು ನೀವು ಸೇವಿಸಬಾರದು.”
  • 15:13 ಸಿನಾಯ್ ಬೆಟ್ಟದಲ್ಲಿ ಯೆಹೋವ ದೇವರು ಇಸ್ರಾಯೇಲ್ಯರೊಂದಿಗೆ ಮಾಡಿದ __ಒಡಬಡಿಕೆ __ ವಿಧೇಯರಾಗಬೇಕೆನ್ನುವ ಕರ್ತವ್ಯವನ್ನು ಯೆಹೋಶುವ ಜನರಿಗೆ ನೆನಪು ಮಾಡಿದನು.
  • 21:05 ಪ್ರವಾದಿಯಾದ ಯೆರೆಮೀಯನ ಮುಖಾಂತರ, ದೇವರು ಒಂದು ಹೊಸ ಒಡಂಬಡಿಕೆಯನ್ನು ಮಾಡುವೆನೆಂದು ವಾಗ್ದಾನ ಮಾಡಿದನು, ಆದರೆ ಆ ಒಡಂಬಡಿಕೆ ದೇವರು ಇಸ್ರಾಯೇಲರೊಂದಿಗೆ ಮಾಡಿದಂತೆ ಇರುವದ್ದಿಲ್ಲ. ಹೊಸ ಒಡಂಬಡಿಕೆಯಲ್ಲಿ, ದೇವರು ತನ್ನ ಆಜ್ಞೆಗಳನ್ನು ಜನರ ಹೃದಯಗಳ ಮೇಲೆ ಬರೆಯುವನು, ಜನರು ತಮ್ಮ ದೇವರನ್ನು ವ್ಯಕ್ತಿಗತವಾಗಿ ತಿಳಿದಿರುವರು, ಅವರು ಆತನ ಪ್ರಜೆಯಾಗಿರುವರು, ಮತ್ತು ದೇವರು ಅವರ ಪಾಪಗಳನ್ನು ಕ್ಷಮಿಸುವನು. ಮೆಸ್ಸಿಯ ಆ ಹೊಸಒಡಂಬಡಿಕೆ ಯನ್ನು ಪ್ರಾರಂಭಿಸುವನು.
  • 21:14 ಮೆಸ್ಸಿಯನ ಮರಣ ಮತ್ತು ಪುನರುತ್ಥಾನದ ಮೂಲಕ, ದೇವರು ಪಾಪಿಗಳನ್ನು ರಕ್ಷಿಸುವ ತನ್ನ ಪ್ರಣಾಳಿಕೆಯನ್ನು ನೆರವೇರಿಸುವನು ಮತ್ತು ಹೊಸ ಒಡಂಬಡಿಕೆಯನ್ನು ಪ್ರಾರಂಭಿಸುವನು.
  • 38:05 ಆ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಸಲ್ಲಿಸಿ ಅವರಿಗೆ ಕೊಟ್ಟು, “ಇದರಲ್ಲಿರುವುದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ. ಇದು ಬಹುಜನರ ಪಾಪಗಳ ಕ್ಷಮಾಪಣೆಗಾಗಿ ಸುರಿಸಲ್ಪಡುವ ಹೊಸ ಒಡಂಬಡಿಕೆಯ ರಕ್ತ. ಇದನ್ನು ಪಾನ ಮಾಡುವಾಗೆಲ್ಲ ನನ್ನನ್ನು ನೆನಪು ಮಾಡಿಕೊಳ್ಳಿರಿ.”
  • 48:11 ಆದರೆ ದೇವರು ಈಗ ಹೊಸ ಒಡಂಬಡಿಕೆಯನ್ನು ಮಾಡಿದ್ದಾರೆ, ಅದು ಎಲ್ಲರಿಗೂ ಸಿಗುತ್ತದೆ. ಯಾಕಂದರೆ ಈ ಹೊಸ ಒಡಂಬಡಿಕೆಯ ಮೂಲಕ, ಯಾರಾದರು ಯೇಸು ಕ್ರಿಸ್ತನನ್ನು ನಂಬಿದರೆ ಅವರು ದೇವರ ಮಕ್ಕಳಾಗಬಹುದು.

ಪದ ಡೇಟಾ:

  • Strong's: H1285, H2319, H3772, G802, G1242, G4934