6.1 KiB
6.1 KiB
ವಾಗ್ಧಾನ, ವಾಗ್ಧಾನಗಳು, ವಾಗ್ಧಾನ ಮಾಡಲಾಗಿದೆ
ಪದದ ಅರ್ಥವಿವರಣೆ:
ಕ್ರಿಯಾಪದವಾಗಿ ಬಳಸಲಾದಾಗ, ’ವಾಗ್ದಾನ’ ಎಂಬ ಪದವು ತಾನು ಹೇಳಿದ್ದನ್ನು ಪೂರೈಸಲು ತನ್ನನ್ನು ತಾನು ಬಾಧ್ಯತೆ ಮಾಡಿಕೊಳ್ಳುವ ರೀತಿಯಲ್ಲಿ ಏನನ್ನಾದರೂ ಮಾಡುತ್ತೇನೆ ಎಂದು ಹೇಳುವ ವ್ಯಕ್ತಿಯ ಕ್ರಿಯೆಯನ್ನು ಸೂಚುಸುತ್ತದೆ.
- ದೇವರು ತನ್ನ ಜನರೊಂದಿಗೆ ಮಾಡಿದ ಅನೇಕ ವಾಗ್ಧಾನಗಳನ್ನು ಸತ್ಯವೇದದಲ್ಲಿ ದಾಖಲಿಸಲಾಗಿರುತ್ತದೆ.
- ಒಡಂಬಡಿಕೆಗಳಂತೆ ಸಾಂಪ್ರದಾಯಿಕವಾದ ಒಪ್ಪಂದಗಳ ಪ್ರಾಮುಖ್ಯವಾದ ಭಾಗವೇ ವಾಗ್ಧಾನವಾಗಿರುತ್ತದೆ.
- ವಾಗ್ಧಾನ ಎನ್ನುವುದು ಯಾವಾಗಲೂ ಮಾಡಿದ ವಾಗ್ಧಾನ ನಡೆಯುತ್ತದೆಯೆಂದು ನಿಶ್ಚಯಿಸುವುದಕ್ಕೆ ಒಂದು ಪ್ರಮಾಣ ವಚನವಾಗಿರುತ್ತದೆ.
ಅನುವಾದ ಸಲಹೆಗಳು:
- “ವಾಗ್ಧಾನ” ಎನ್ನುವ ಪದವನ್ನು “ನಿಬದ್ಧತೆ” ಅಥವಾ “ಭರವಸೆ” ಅಥವಾ “ಖಾತರಿ” ಎಂದೂ ಅನುವಾದ ಮಾಡಬಹುದು.
- “ಏನಾದರೊಂದು ಮಾಡುವುದಕ್ಕೆ ವಾಗ್ಧಾನ ಮಾಡುವುದು” ಎನ್ನುವ ಮಾತು “ನೀನು ಏನಾದರೊಂದು ಮಾಡಲು ಯಾರಾದರೊಬ್ಬರಿಗೆ ಖಾತರಿ ಕೊಡು” ಅಥವಾ “ಏನಾದರೊಂದನ್ನು ಮಾಡುವುದಕ್ಕೆ ಬದ್ಧನಾಗಿರುವುದು” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಒಡಂಬಡಿಕೆ, ಪ್ರಮಾಣ ವಚನ, ಆಣೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಸತ್ಯವೇದದಿಂದ ಉದಾಹರಣೆಗಳು:
- 03:15 “ಜನರು ಚಿಕ್ಕ ವಯಸ್ಸಿನಲ್ಲಿರುವ ಸಮಯದಿಂದ ಜನರು ಪಾಪ ಸ್ವಭಾವವುಳ್ಳವರಾಗಿದ್ದರೂ ಪ್ರಳಯವನ್ನು ಬರಮಾಡುವುದರ ಮೂಲಕ ಪ್ರಪಂಚವನ್ನು ನಾಶಗೊಳಿಸುವುದಾಗಲಿ ಅಥವಾ ಜನರು ದುಷ್ಟ ಕಾರ್ಯಗಳನ್ನು ಮಾಡುವುದರಿಂದಾಗಲಿ ನಾನು ಭೂಮಿವನ್ನು ಎಂದಿಗೂ ಶಪಿಸುವುದಿಲ್ಲ ಎಂದು ನಾನು ___ ವಾಗ್ಧಾನ ___ ಮಾಡುತ್ತಿದ್ದೇನೆ” ಎಂದು ದೇವರು ಹೇಳಿದರು.
- 03:16 ದೇವರು ತನ್ನ ___ ವಾಗ್ಧಾನಕ್ಕೆ ___ ಗುರುತಾಗಿ ಮೊಟ್ಟ ಮೊದಲನೇ ಮುಗಿಲುಬಿಲ್ಲನ್ನು ಉಂಟು ಮಾಡಿದನು. ಆಕಾಶದಲ್ಲಿ ಮುಗಿಲುಬಿಲ್ಲು ಕಾಣಿಸಿಕೊಳ್ಳುವ ಪ್ರತಿಯೊಂದುಬಾರಿ, ದೇವರು ತಾನು ಮಾಡಿದ ___ ವಾಗ್ಧಾನವನ್ನು ___ ಮತ್ತು ತನ್ನ ಜನರನ್ನು ಜ್ಞಾಪಿಸಿಕೊಳ್ಳುವರು.
- 04:08 ದೇವರು ಅಬ್ರಾಮನೊಂದಿಗೆ ಮಾತನಾಡಿದನು ಮತ್ತು ಮತ್ತೊಮ್ಮೆ ತನಗೆ ಮಗನು ಹುಟ್ಟುವನೆಂದು ಮತ್ತು ತನ್ನ ಸಂತಾನವು ಆಕಾಶದಲ್ಲಿ ನಕ್ಷತ್ರಗಳಂತೆ ಆಗುವರೆಂದು ___ ವಾಗ್ಧಾನ ___ ಮಾಡಿದನು. ಅಬ್ರಾಮನು ದೇವರ ___ ವಾಗ್ಧಾನವನ್ನು ___ ನಂಬಿದನು.
- 05:04 “ನಿನ್ನ ಹೆಂಡತಿ ಸಾರಾಯಳು ಮಗನನ್ನು ಹಡೆಯುವಳು, ಇವನು ___ ವಾಗ್ಧಾನ ___ ಪುತ್ರನಾಗಿ ಇರುವನು.”
- 08:15 ದೇವರು ಅಬ್ರಾಹಾಮನಿಗೆ ಕೊಟ್ಟಿರುವುದು ತನ್ನ ಮಕ್ಕಳಾಗಿರುವ ಇಸಾಕ, ಯಾಕೋಬ, ಮತ್ತು ಯಾಕೋಬನ ಹನ್ನೆರಡು ಮಂದಿ ಮಕ್ಕಳಿಗೆ ಮತ್ತು ಅವರ ಕುಟುಂಬಗಳಿಗೆ ಅನ್ವಯವಾಗುತ್ತದೆಯೆಂದು ಒಡಂಬಡಿಕೆ ___ ವಾಗ್ಧಾನಗಳಲ್ಲಿ ___ ಇರುತ್ತದೆ.
- 17:14 ದಾವೀದನು ದೇವರಿಗೆ ಅಪನಂಬಿಗಸ್ತನಾಗಿದ್ದರೂ, ದೇವರು ತನ್ನ ___ ವಾಗ್ಧಾನಗಳಲ್ಲಿ ___ ನಂಬಿಗಸ್ತನಾಗಿದ್ದಾನೆ.
- 50:01 ಯೇಸು ಲೋಕದ ಅಂತ್ಯದಲ್ಲಿ ಹಿಂದುರಿಗಿ ಬರುತ್ತಾನೆಂದು ಆತನು ___ ವಾಗ್ಧಾನ ___ ಮಾಡಿದನು. ಆತನು ಇಂದಿಗೂ ಬರದೇ ಇದ್ದರೂ, ಆತನು ತಪ್ಪದೇ ತನ್ನ ___ ವಾಗ್ಧಾನದ ___ ಪ್ರಕಾರ ಮಾಡುವವನಾಗಿದ್ದಾನೆ.
ಪದ ಡೇಟಾ:
- Strong's: H559, H562, H1696, H8569, G1843, G1860, G1861, G1862, G3670, G4279