3.2 KiB
3.2 KiB
ಪ್ರತಿಜ್ಞೆ, ಪ್ರತಿಜ್ಞೆಗಳು, ಪ್ರತಿಜ್ಞೆ ಮಾಡಿದೆ
ಪದದ ಅರ್ಥವಿವರಣೆ:
ಪ್ರತಿಜ್ಞೆ ಎನ್ನುವುದು ಒಬ್ಬ ವ್ಯಕ್ತಿ ದೇವರೊಂದಿಗೆ ಮಾಡುವ ವಾಗ್ಧಾನವಾಗಿರುತ್ತದೆ. ಒಬ್ಬ ವ್ಯಕ್ತಿ ದೇವರಿಗೆ ಆರಾಧನೆ ಭಾವವನ್ನು ತೋರಿಸುವುದಕ್ಕೆ ಅಥವಾ ವಿಶೇಷವಾಗಿ ದೇವರನ್ನು ಘನಪಡಿಸುವುದಕ್ಕೆ ಒಂದು ನಿರ್ದಿಷ್ಟವಾದ ಕಾರ್ಯವನ್ನು ಮಾಡುವುದಕ್ಕೆ ವಾಗ್ಧಾನ ಮಾಡುವುದು ಆಗಿರುತ್ತದೆ.
- ಒಬ್ಬ ವ್ಯಕ್ತಿ ಪ್ರತಿಜ್ಞೆ ಮಾಡಿದನಂತರ, ಆ ವ್ಯಕ್ತಿ ಆ ಆಣೆಯನ್ನು ನೆರವೇರಿಸುವುದಕ್ಕೆ ಬಾಧ್ಯತೆಯನ್ನು ಪಡೆದಿರುತ್ತಾನೆ.
- ಅವನು ಒಂದುವೇಳೆ ತನ್ನ ಪ್ರತಿಜ್ಞೆಯನ್ನು ನೆರವೇರಿಸದಿದ್ದರೆ ದೇವರು ಅವನಿಗೆ ತೀರ್ಪು ಮಾಡುತ್ತಾನೆಂದು ಸತ್ಯವೇದವು ಬೋಧನೆ ಮಾಡುತ್ತಿದೆ.
- ಕೆಲವೊಂದುಬಾರಿ ಆ ವ್ಯಕ್ತಿ ತನ್ನನ್ನು ರಕ್ಷಿಸುವುದಕ್ಕೆ ದೇವರನ್ನು ಕೇಳಿಕೊಳ್ಳಬಹುದು ಅಥವಾ ಪ್ರತಿಜ್ಞೆಯನ್ನು ನೆರವೇರಿಸುವುದರಲ್ಲಿ ತನಗಾಗಿ ಮಾರ್ಪಾಟು ಕೊಡಬಹುದು.
- ಆದರೆ ಒಬ್ಬ ವ್ಯಕ್ತಿಯ ತನ್ನ ಪ್ರತಿಜ್ಞೆಯ ವಿಷಯವಾಗಿ ಕೇಳಿಕೊಳ್ಳುವ ಮನವಿಯನ್ನು ದೇವರು ನೆರವೇರಿಸಬೇಕಾದ ಅವಶ್ಯಕತೆಯಿರುವುದಿಲ್ಲ.
ಅನುವಾದ ಸಲಹೆಗಳು:
- ಸಂದರ್ಭಾನುಸಾರವಾಗಿ “ಪ್ರತಿಜ್ಞೆ” ಎನ್ನುವ ಪದವನ್ನು “ಗಂಭೀರವಾದ ಭರವಸೆ” ಅಥವಾ “ದೇವರೊಂದಿಗೆ ಮಾಡಿರುವ ವಾಗ್ಧಾನ” ಎಂದೂ ಅನುವಾದ ಮಾಡಬಹುದು.
- ಪ್ರತಿಜ್ಞೆ ಎನ್ನುವುದು ದೇವರೊಂದಿಗೆ ಮಾಡುವ ಒಂದು ವಿಶೇಷವಾದ ಪ್ರಮಾಣ ವಚನವಾಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : ವಾಗ್ಧಾನ, ಆಣೆ)
ಸತ್ಯವೇದದ ಅನುಬಂಧ ವಾಕ್ಯಗಳು :
- 1 ಕೊರಿಂಥ.07:27-28
- ಅಪೊ.ಕೃತ್ಯ.21:22-24
- ಆದಿ.28:20-22
- ಆದಿ.31:12-13
- ಯೋನ.01:14-16
- ಯೋನ.02:9-10
- ಜ್ಞಾನೋ.07:13-15
ಪದ ಡೇಟಾ:
- Strong's: H5087, H5088, G2171