kn_tw/bible/kt/vow.md

32 lines
3.2 KiB
Markdown

# ಪ್ರತಿಜ್ಞೆ, ಪ್ರತಿಜ್ಞೆಗಳು, ಪ್ರತಿಜ್ಞೆ ಮಾಡಿದೆ
## ಪದದ ಅರ್ಥವಿವರಣೆ:
ಪ್ರತಿಜ್ಞೆ ಎನ್ನುವುದು ಒಬ್ಬ ವ್ಯಕ್ತಿ ದೇವರೊಂದಿಗೆ ಮಾಡುವ ವಾಗ್ಧಾನವಾಗಿರುತ್ತದೆ. ಒಬ್ಬ ವ್ಯಕ್ತಿ ದೇವರಿಗೆ ಆರಾಧನೆ ಭಾವವನ್ನು ತೋರಿಸುವುದಕ್ಕೆ ಅಥವಾ ವಿಶೇಷವಾಗಿ ದೇವರನ್ನು ಘನಪಡಿಸುವುದಕ್ಕೆ ಒಂದು ನಿರ್ದಿಷ್ಟವಾದ ಕಾರ್ಯವನ್ನು ಮಾಡುವುದಕ್ಕೆ ವಾಗ್ಧಾನ ಮಾಡುವುದು ಆಗಿರುತ್ತದೆ.
* ಒಬ್ಬ ವ್ಯಕ್ತಿ ಪ್ರತಿಜ್ಞೆ ಮಾಡಿದನಂತರ, ಆ ವ್ಯಕ್ತಿ ಆ ಆಣೆಯನ್ನು ನೆರವೇರಿಸುವುದಕ್ಕೆ ಬಾಧ್ಯತೆಯನ್ನು ಪಡೆದಿರುತ್ತಾನೆ.
* ಅವನು ಒಂದುವೇಳೆ ತನ್ನ ಪ್ರತಿಜ್ಞೆಯನ್ನು ನೆರವೇರಿಸದಿದ್ದರೆ ದೇವರು ಅವನಿಗೆ ತೀರ್ಪು ಮಾಡುತ್ತಾನೆಂದು ಸತ್ಯವೇದವು ಬೋಧನೆ ಮಾಡುತ್ತಿದೆ.
* ಕೆಲವೊಂದುಬಾರಿ ಆ ವ್ಯಕ್ತಿ ತನ್ನನ್ನು ರಕ್ಷಿಸುವುದಕ್ಕೆ ದೇವರನ್ನು ಕೇಳಿಕೊಳ್ಳಬಹುದು ಅಥವಾ ಪ್ರತಿಜ್ಞೆಯನ್ನು ನೆರವೇರಿಸುವುದರಲ್ಲಿ ತನಗಾಗಿ ಮಾರ್ಪಾಟು ಕೊಡಬಹುದು.
* ಆದರೆ ಒಬ್ಬ ವ್ಯಕ್ತಿಯ ತನ್ನ ಪ್ರತಿಜ್ಞೆಯ ವಿಷಯವಾಗಿ ಕೇಳಿಕೊಳ್ಳುವ ಮನವಿಯನ್ನು ದೇವರು ನೆರವೇರಿಸಬೇಕಾದ ಅವಶ್ಯಕತೆಯಿರುವುದಿಲ್ಲ.
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ “ಪ್ರತಿಜ್ಞೆ” ಎನ್ನುವ ಪದವನ್ನು “ಗಂಭೀರವಾದ ಭರವಸೆ” ಅಥವಾ “ದೇವರೊಂದಿಗೆ ಮಾಡಿರುವ ವಾಗ್ಧಾನ” ಎಂದೂ ಅನುವಾದ ಮಾಡಬಹುದು.
* ಪ್ರತಿಜ್ಞೆ ಎನ್ನುವುದು ದೇವರೊಂದಿಗೆ ಮಾಡುವ ಒಂದು ವಿಶೇಷವಾದ ಪ್ರಮಾಣ ವಚನವಾಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ವಾಗ್ಧಾನ](../kt/promise.md), [ಆಣೆ](../other/oath.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಕೊರಿಂಥ.07:27-28](rc://*/tn/help/1co/07/27)
* [ಅಪೊ.ಕೃತ್ಯ.21:22-24](rc://*/tn/help/act/21/22)
* [ಆದಿ.28:20-22](rc://*/tn/help/gen/28/20)
* [ಆದಿ.31:12-13](rc://*/tn/help/gen/31/12)
* [ಯೋನ.01:14-16](rc://*/tn/help/jon/01/14)
* [ಯೋನ.02:9-10](rc://*/tn/help/jon/02/09)
* [ಜ್ಞಾನೋ.07:13-15](rc://*/tn/help/pro/07/13)
## ಪದ ಡೇಟಾ:
* Strong's: H5087, H5088, G2171