kn_tw/bible/other/law.md

2.5 KiB

ಕಾನೂನು, ನಿಯಮ

ಪದದ ಅರ್ಥವಿವರಣೆ:

“ಕಾನೂನು” ಎನ್ನುವುದು ನ್ಯಾಯವಾದ ನಿಯಮವಾಗಿರುತ್ತದೆ, ಇದು ಸಹಜವಾಗಿ ಅಧಿಕಾರದಲ್ಲಿರುವ ಒಬ್ಬ ವ್ಯಕ್ತಿಯಿಂದ ಬರೆಯಲ್ಪಟ್ಟಿರುತ್ತದೆ ಮತ್ತು ಜಾರಿಗೆ ಮಾಡಲಾಗಿರುತ್ತದೆ. “ಕಾನೂನು” ಎನ್ನುವುದು ಒಂದು ನಡತೆಗೆ ಮತ್ತು ಒಂದು ನಿರ್ಣಯವನ್ನು ತೆಗೆದುಕೊಳ್ಳುವುದಕ್ಕೆ ಮಾರ್ಗದರ್ಶನವಾಗಿರುತ್ತದೆ.

  • “ಕಾನೂನು” ಮತ್ತು “ನಿಯಮ” ಎನ್ನುವ ಎರಡು ಪದಗಳು ಒಬ್ಬ ವ್ಯಕ್ತಿಯ ನಡತೆಗೆ ಮಾರ್ಗದರ್ಶನ ಮಾಡುವ ಒಂದು ಸಾಧಾರಣವಾದ ನಿಬಂಧನೆ ಅಥವಾ ನಂಬಿಕೆಯನ್ನು ಸೂಚಿಸುತ್ತವೆ.
  • “ಕಾನೂನು” ಎನ್ನುವ ಪದದ ಅರ್ಥಕ್ಕು ಮತ್ತು “ಮೋಶೆ ಧರ್ಮಶಾಸ್ತ್ರ” ಎನ್ನುವುದಕ್ಕೂ ತುಂಬಾ ವ್ಯತ್ಯಾಸವಿರುತ್ತದೆ, ಮೋಶೆ ಧರ್ಮಶಾಸ್ತ್ರವು ದೇವರು ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆಗಳನ್ನು ಮತ್ತು ಕಟ್ಟಳೆಗಳನ್ನು ಸೂಚಿಸುತ್ತದೆ.
  • ಸಾಧಾರಣವಾದ ಕಾನೂನನ್ನು ಸೂಚಿಸಿದಾಗ, “ಕಾನೂನು” ಎನ್ನುವ ಪದವನ್ನು “ನಿಯಮ” ಅಥವಾ “ಸಾಧಾರಣವಾದ ನಿಬಂಧನೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಕಾನೂನು, ಕಾನೂನು)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H1285, H1881, H1882, H2706, H2708, H2710, H4687, H4941, H6310, H7560, H8451, G1785, G3548, G3551, G4747