kn_tw/bible/other/enslave.md

3.8 KiB

ಗುಲಾಮರನ್ನಾಗಿ ಮಾಡು, ಗುಲಾಮ, ಬಂಧಿತ ಗುಲಾಮ, ಬಂಧಿತ

ಪದದ ಅರ್ಥವಿವರಣೆ:

ಯಾರಾದರೊಬ್ಬರನ್ನು “ಅಧೀನಪಡಿಸು” ಎನ್ನುವ ಮಾತಿಗೆ ಯಜಮಾನನಿಗೆ ಸೇವೆ ಮಾಡುವುದಕ್ಕೆ ಅಥವಾ ದೇಶವನ್ನು ಆಳುವುದಕ್ಕೆ ಒಬ್ಬ ವ್ಯಕ್ತಿಯನ್ನು ಬಲವಂತಿಕೆ ಮಾಡು ಎಂದರ್ಥ. “ಆಧೀನಪಡಿಸು” ಅಥವಾ “ಬಂಧನದಲ್ಲಿ” ಎನ್ನುವ ಪದಕ್ಕೆ ಯಾರಾದರೊಬ್ಬರ ಅಥವಾ ಯಾವುದಾದರೊಂದರ ನಿಯಂತ್ರಣದ ಕೆಳಗೆ ಇರುವುದು ಎಂದರ್ಥ.

  • ಬಂಧನದಲ್ಲಿರುವ ಅಥವ ಗುಲಾಮಗಿರಿಯಲ್ಲಿರುವ ಒಬ್ಬ ವ್ಯಕ್ತಿ ಯಾವ ಸಂಬಳವಿಲ್ಲದೆ ಇತರರಿಗೆ ಸೇವೆ ಮಾಡಬೇಕಾಗಿರುತ್ತದೆ; ಅವನು ಬಯಸಿದ ಕಾರ್ಯಗಳು ಮಾಡುವುದಕ್ಕೆ ಅವನಿಗೆ ಸ್ವಾತಂತ್ರ್ಯವಿರುವುದಿಲ್ಲ.
  • “ಅಧೀನಪಡಿಸು” ಎನ್ನುವ ಪದಕ್ಕೆ ಕೂಡ ಒಬ್ಬ ವ್ಯಕ್ತಿಯ ಸ್ವಾತಂತ್ರ್ಯವನ್ನು ತೆಗೆದುಕೋ ಎನ್ನುವ ಅರ್ಥವೂ ಇದೆ.
  • “ಬಂಧನ” ಎನ್ನುವ ಪದಕ್ಕೆ ಇನ್ನೊಂದು ಪದ “ಗುಲಾಮಗಿರಿ”.
  • ಹೊಸ ಒಡಂಬಡಿಕೆ ಹೇಳುತ್ತದೆ ಮನುಷ್ಯರೆಲ್ಲರೂ ಪಾಪಕ್ಕೆ “ಅಧೀನರಾಗಿರುತ್ತಾರೆ”, ಯೇಸು ಅವರನ್ನು ಆ ಪಾಪದ ಶಕ್ತಿಯಿಂದ ಮತ್ತು ನಿಯಂತ್ರಣದಿಂದ ಬಿಡಿಸುವವರೆಗೂ ಅವರು ಅಧೀನರಾಗಿರುತ್ತಾರೆ.
  • ಒಬ್ಬ ವ್ಯಕ್ತಿ ಯೇಸುವಿನಲ್ಲಿ ಹೊಸ ಜೀವನವನ್ನು ಹೊಂದಿಕೊಂಡಾಗ, ಅವನು ಪಾಪಕ್ಕೆ ಗುಲಾಮನಾಗಿರುವುದನ್ನು ನಿಲ್ಲಿಸುವನು ಮತ್ತು ನೀತಿಗೆ ದಾಸನಾಗುತ್ತಾನೆ.

ಅನುವಾದ ಸಲಹೆಗಳು:

  • “ಅಧೀನಪಡಿಸು” ಎನ್ನುವ ಪದಕ್ಕೆ “ಸ್ವಾತಂತ್ರ್ಯನಾಗುವುದಕ್ಕೆ ಬಿಡಬೇಡ” ಅಥವಾ “ಇತರರಿಗೆ ಸೇವೆ ಮಾಡುವುದಕ್ಕೆ ಬಲವಂತಿಕೆ ಮಾಡು” ಅಥವಾ “ಇತರರ ನಿಯಂತ್ರಣದಲ್ಲಿರಿಸು” ಎಂದೂ ಅನುವಾದ ಮಾಡುತ್ತಾರೆ.
  • “ಅಧೀನಪಡಿಸು” ಅಥವಾ “ಬಂಧನದಲ್ಲಿರಿಸು” ಎನ್ನುವ ಮಾತನ್ನು “ಗುಲಾಮನಾಗುವುದಕ್ಕೆ ಬಲವಂತಿಕೆ ಮಾಡು” ಅಥವಾ “ಸೇವೆ ಮಾಡುವುದಕ್ಕೆ ಬಲವಂತಿಕೆ ಮಾಡು” ಅಥವಾ “ನಿಯಂತ್ರಣದಲ್ಲಿರಿಸು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಸ್ವಾತಂತ್ರ್ಯ, ನೀತಿ, ದಾಸನು)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H3533, H5647, G1398, G1402, G2615