kn_tw/bible/other/free.md

4.3 KiB
Raw Permalink Blame History

ಬಿಡುಗಡೆ, ಬಿಡುಗಡೆಯಾಗುತ್ತದೆ, ಸ್ವಾತಂತ್ಯ್ರ, ಬಿಡುಗಡೆ ಆದವನು, ಸ್ವಚಿತ್ತ, ಸ್ವತಂತ್ರ

ಪದದ ಅರ್ಥವಿವರಣೆ:

“ಬಿಡುಗಡೆ” ಅಥವಾ “ಸ್ವಾತಂತ್ಯ್ರ" ಎನ್ನುವ ಪದಗಳು ಗುಲಾಮಗಿರಿಯಲ್ಲಿ ಇಲ್ಲದವರು ಅಥವಾ ಬೇರೆ ಯಾವ ವಿಧವಾದ ಬಂಧನಯಲ್ಲಿ ಇಲ್ಲದವರು ಎಂದರ್ಥ. “ಸ್ವಾತಂತ್ರ್ಯ” ಎನ್ನುವ ಪದಕ್ಕೆ “ಸ್ವತಂತ್ರ” ಎನ್ನುವುದು ಸಮಾನಾರ್ಥಕ ಪದವಾಗಿದೆ.

  • “ಯಾರನ್ನಾದರೂ ಬಿಡುಗಡೆ ಮಾಡುವುದು” ಅಥವಾ “ಯಾರನ್ನಾದರೂ ಸ್ವತಂತ್ರನಾಗಿ ಮಾಡುವುದು” ಎನ್ನುವ ಭಾವನೆಗಳಿಗೆ ಬಂಧನದಿಂದ ಅಥವಾ ಗುಲಾಮಗಿರಿಯಿಂದ ಯಾರನ್ನಾದರೂ ಬಿಡಿಸುವುದು ಎಂದರ್ಥ.
  • ಸತ್ಯವೇದದಲ್ಲಿ, ಯೇಸುವಿನಲ್ಲಿ ನಂಬಿಕೆಯಿಟ್ಟವರು ಪಾಪದ ಶಕ್ತಿಗೆ ಗುಲಾಮರಾಗಿರುವದಿಲ್ಲ ಎಂದು ಹೇಳಲು ಈ ಭಾವನೆಗಳನ್ನು ಅಲಂಕಾರಿಕ ರೂಪದಲ್ಲಿ ಉಪಯೋಗಿಸಿದ್ದಾರೆ.
  • “ಸ್ವಾತಂತ್ಯ್ರ” ಎನ್ನುವ ಪದಕ್ಕೆ ಮೋಶೆ ಧರ್ಮಶಾಸ್ತ್ರಕ್ಕೆ ವಿಧೇಯರಾಗಿರಲು ಇನ್ನು ಅವಶ್ಯಕತೆಯಿಲ್ಲವೆಂದು ಸೂಚಿಸುತ್ತದೆ, ಆದರೆ ಪವಿತ್ರಾತ್ಮನ ನಾಯಕತ್ವದಲ್ಲಿ ಮತ್ತು ಆತನ ಬೋಧನೆಗಳಲ್ಲಿ ಸ್ವತಂತ್ರರಾಗಿ ಜೀವಿಸಬೇಕು.

ಅನುವಾದ ಸಲಹೆಗಳು:

  • “ಬಿಡುಗಡೆ” ಎನ್ನುವ ಪದವನ್ನು “ಬಂದಿಯಾಗಿಲ್ಲ” ಅಥವಾ “ಗುಲಾಮನಲ್ಲ” ಅಥವಾ “ಗುಲಾಮಗಿರಿಯಲ್ಲಿ ಇಲ್ಲ” ಅಥವಾ “ಬಂಧನೆಯಲ್ಲಿ ಇಲ್ಲ” ಎಂದು ಅರ್ಥಕೊಂಡುವಂತೆ ಅನುವಾದ ಮಾಡಬಹುದು.
  • “ಸ್ವಾತಂತ್ಯ್ರ” ಅಥವಾ “ಸ್ವತಂತ್ರ” ಎನ್ನುವ ಪದಗಳನ್ನು “ಬಿಡುಗಡೆ ಹೊಂದಿದವನು” ಅಥವಾ “ಗುಲಾಮಗಿರಿಯಿಲ್ಲದವನು” ಅಥವಾ “ಬಂಧನೆದಲ್ಲಿ ಇಲ್ಲದವನು” ಎಂದು ಅನುವಾದ ಮಾಡಬಹುದು.
  • “ಸ್ವಾತಂತ್ಯ್ರ ಕೊಡು” ಎನ್ನುವ ಪದವನ್ನು “ಬಿಡುಗಡೆಗೆ ಕಾರಣ” ಅಥವಾ “ಗುಲಾಮಗಿರಿಯಿಂದ ಬಿಡಿಸುವುದು” ಅಥವಾ “ಬಂಧನೆಯಿಂದ ಬಿಡಿಸುವುದು” ಎಂದು ಅನುವಾದ ಮಾಡಬಹುದು.
  • ಒಬ್ಬ ವ್ಯಕ್ತಿ “ಸ್ವಾತಂತ್ಯ್ರಹೊಂದಿದ್ದರೆ” ಅವನು “ಬಿಡುಗಡೆಹೊಂದಿದ್ದಾನೆ” ಅಥವಾ ಬಂಧನೆ ಅಥವಾ ಗುಲಾಮಗಿರಿಯಿಂದ “ಹೊರಗೆ ಕಳುಹಿಸಲ್ಪಟ್ಟಿದ್ದಾನೆ” ಎಂದರ್ಥ.

(ಈ ಪದಗಳನ್ನು ಸಹ ನೋಡಿರಿ : ಬಂಧಿಸು, ಅಧೀನಪಡಿಸು, ಗುಲಾಮ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strongs: H1865, H2600, H2666, H2668, H2670, H3318, H4800, H5068, H5069, H5071, H5337, H5352, H5355, H5425, H5674, H5800, H6299, H6362, H7342, H7971, G425, G525, G558, G629, G630, G859, G1344, G1432, G1657, G1658, G1659, G1849, G3089, G3955, G4506, G5483