kn_tw/bible/other/obey.md

5.9 KiB

ವಿದೇಯತೆ, ಇಟ್ಟುಕೋ

ಪದದ ಅರ್ಥವಿವರಣೆ:

“ವಿದೇಯನಾಗು” ಎನ್ನುವ ಪದಕ್ಕೆ ಆದೇಶಿಸಲ್ಪಟ್ಟಿದ್ದನ್ನು ಅಥವಾ ಬೇಕಾಗಿರುವುದನ್ನು ಮಾಡುವುದು ಎಂದರ್ಥ. “ವಿಧೇಯನು” ಎನ್ನುವ ಪದವು ಒಳಗಾಗುವ ಒಬ್ಬ ವ್ಯಕ್ತಿಯನ್ನು ವಿವರಿಸುತ್ತದೆ. “ವಿಧೇಯತೆ” ಎನ್ನುವುದು ವಿಧೇಯನಾಗಿರುವ ಒಬ್ಬ ವ್ಯಕ್ತಿಯ ಗುಣಲಕ್ಷಣವಾಗಿರುತ್ತದೆ, ಕೆಲವೊಂದು ಬಾರಿ “ಕದಿಯಬಾರದು” ಎನ್ನುವ ಮಾತಿನಲ್ಲಿರುವಂತೆ ಯಾವುದಾದರೊಂದನ್ನು ಮಾಡಬಾರದು ಎನ್ನುವುದರ ಕುರಿತಾದ ಆಜ್ಞೆಯೂ ಆಗಿರುತ್ತದೆ.

  • ಸಹಜವಾಗಿ “ಒಳಗಾಗು” ಎನ್ನುವ ಪದವನ್ನು ಅಧಿಕಾರದಲ್ಲಿರುವ ಒಬ್ಬ ವ್ಯಕ್ತಿಯ ಕಾನೂನುಗಳಿಗೆ ಅಥವಾ ಆಜ್ಞೆಗಳಿಗೆ ವಿಧೇಯನಾಗುವ ಸಂದರ್ಭದಲ್ಲಿ ಉಪಯೋಗಿಸಲಾಗಿರುತ್ತದೆ.
  • ಉದಾಹರಣೆಗೆ, ಒಂದು ಸಂಸ್ಥೆಯ, ಒಂದು ರಾಜ್ಯದ ಅಥವಾ ಒಂದು ದೇಶದ ನಾಯಕರಿಂದ ತಯಾರಿಸಲ್ಪಟ್ಟ ನಿಯಮಗಳಿಗೆ ಜನರು ಒಳಗಾಗುತ್ತಾರೆ.
  • ಮಕ್ಕಳು ತಮ್ಮ ತಂದೆತಾಯಿಗಳಿಗೆ ಒಳಗಾಗುತ್ತಾರೆ, ಗುಲಾಮರು ತಮ್ಮ ಯಜಮಾನಿಗಳಿಗೆ ಒಳಗಾಗುತ್ತಾರೆ, ಜನರು ದೇವರಿಗೆ ಒಳಗಾಗುತ್ತಾರೆ, ಮತ್ತು ಪೌರರು ತಮ್ಮ ದೇಶದ ಕಾನೂನುಗಳಿಗೆ ಒಳಗಾಗುತ್ತಾರೆ.
  • ಅಧಿಕಾರದಲ್ಲಿದ್ದ ಒಬ್ಬ ವ್ಯಕ್ತಿ ಏನಾದರೊಂದನ್ನು ಮಾಡಬಾರದೆಂದು ಜನರಿಗೆ ಆಜ್ಞಾಪಿಸಿದಾಗ, ಅದನ್ನು ಮಾಡದಂತೆ ಅವರು ಆಜ್ಞೆಗೆ ಒಳಗಾಗುತ್ತಾರೆ.
  • ಒಳಗಾಗು ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಆಜ್ಞಾಪಿಸಲ್ಪಟ್ಟದ್ದನ್ನು ಮಾಡು” ಅಥವಾ “ಆಜ್ಞೆಗಳನ್ನು ಅನುಸರಿಸು” ಅಥವಾ “ದೇವರು ಏನು ಮಾಡಬೇಕೆಂದು ಹೇಳಿದ್ದಾರೋ ಅದನ್ನು ಮಾಡು” ಎಂದು ಅರ್ಥ ಅಬ್ರುವ ಮಾತುಗಳು ಅಥವಾ ಪದಗಳು ಒಳಗೊಂಡಿರುತ್ತವೆ.
  • “ವಿಧೇಯನು” ಎನ್ನುವ ಪದವನ್ನು “ಆದೇಶಿಸಲ್ಪಟ್ಟದ್ದನ್ನು ಮಾಡುವುದು” ಅಥವಾ “ನಿಯಮಗಳನ್ನು ಅನುಸರಿಸುವುದು” ಅಥವಾ “ದೇವರು ಆಜ್ಞಾಪಿಸಿದ್ದನ್ನು ಮಾಡುವುದು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಪೌರ, ಆಜ್ಞೆ, ಅವಿಧೇಯತೆ, ರಾಜ್ಯ, ಕಾನೂನು)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದದಿಂದ ಉದಾಹರಣೆಗಳು:

  • 03:04 ನೋಹನು ದೇವರಿಗೆ __ ವಿಧೇಯನಾದನು __ . ಈತನು ಮತ್ತು ತನ್ನ ಮೂವರು ಗಂಡು ಮಕ್ಕಳು ದೇವರು ಹೇಳಿದ ಪ್ರಕಾರ ನಾವೆಯನ್ನು ನಿರ್ಮಿಸಿದನು.
  • 05:06 ಮತ್ತೊಮ್ಮೆ ಅಬ್ರಾಹಾಮನು ದೇವರಿಗೆ __ ವಿಧೇಯನಾದನು __ ಮತ್ತು ತನ್ನ ಮಗನನ್ನು ಸರ್ವಾಂಗ ಹೋಮ ಮಾಡುವುದಕ್ಕೆ (ಬಲಿ ಕೊಡುವುದಕ್ಕೆ) ಸಿದ್ಧ ಮಾಡಿದನು.
  • 05:10 “ನೀನು (ಅಬ್ರಾಹಾಮನು) ನನಗೆ __ ವಿಧೇಯನಾಗಿದ್ದರಿಂದ __, ಲೋಕದಲ್ಲಿರುವ ಎಲ್ಲಾ ಕುಟುಂಬಗಳು ನಿನ್ನ ಕುಟುಂಬದ ಮೂಲಕ ಆಶೀರ್ವಾದ ಹೊಂದುತ್ತವೆ.
  • 05:10 ಆದರೆ ಐಗುಪ್ತರು ದೇವರಲ್ಲಿ ನಂಬಿಕೆಯನ್ನಿಡಲಿಲ್ಲ ಅಥವಾ ಆತನ ಆಜ್ಞೆಗಳಿಗೆ __ ಒಳಗಾಗಲಿಲ್ಲ __.
  • 13:07 ಈ ಎಲ್ಲಾ ಆಜ್ಞೆಗಳಿಗೆ ಜನರು __ ವಿಧೇಯರಾಗುವುದಾದರೆ __ , ದೇವರು ಅವರನ್ನು ಸಂರಕ್ಷಿಸಿ, ಆಶೀರ್ವಾದ ಮಾಡುವನೆಂದು ದೇವರು ವಾಗ್ಧಾನ ಮಾಡಿದ್ದಾರೆ.

ಪದ ಡೇಟಾ:

  • Strong's: H1697, H2388, H3349, H4928, H6213, H7181, H8085, H8086, H8104, G191, G3980, G3982, , G5083, G5084, G5218, G5219, G5255, G5292, G5293, G5442