kn_tw/bible/other/disobey.md

4.9 KiB

ಅವಿಧೇಯತೆ, ಅವಿಧೇಯನಾಗುವಂತೆ ಮಾಡುವುದು, ಅವಿಧೇಯತೆ ತೋರಿಸಿದೆ, ದಂಗೆ ಏಳು

ಪದದ ಅರ್ಥವಿವರಣೆ:

“ಅವಿಧೇಯನಾಗು” ಎನ್ನುವದಕ್ಕೆ ಆಧಿಕಾರದಲ್ಲಿದ್ದ ವ್ಯಕ್ತಿ ಆಜ್ಞಾಪಿಸಿದ ಅಥವಾ ಅದೇಶಿಸಿದ ವಿಷಯಗಳಿಗೆ ವಿಧೇಯತೆಯತೆಯನ್ನು ತೋರಿಸದಿರುವುದು ಎಂದರ್ಥ. ಈ ರೀತಿ ನಡೆದುಕೊಳ್ಳುವ ವ್ಯಕ್ತಿಯನ್ನು “ಅವಿಧೇಯನು” ಎಂದು ಕರೆಯುತ್ತಾರೆ.

  • ಅದನ್ನು ಮಾಡಬೇಡವೆಂದು ಹೇಳಿದ ವಿಷಯಗಳನ್ನು ಮಾಡುವವನು ಕೂಡ ಅವಿಧೇಯನಾಗುತ್ತಿದ್ದಾನೆ ಎಂದರ್ಥ.
  • ಅವಿಧೇಯನಾಗು ಎನ್ನುವುದಕ್ಕೆ ಕೂಡ ಆಜ್ಞಾಪಿಸಲ್ಪಟ್ಟ ವಿಷಯಗಳನ್ನು ಮಾಡದೇ ತಿರಸ್ಕರಿಸು ಎಂದರ್ಥ.
  • “ಅವಿಧೇಯನು” ಎನ್ನುವ ಪದವನ್ನು ಸಹಜವಾಗಿ ಅವಿಧೇಯನಾಗುವ ಅಥವಾ ತಿರಸ್ಕಾರ ಮಾಡುವ ಒಬ್ಬ ವ್ಯಕ್ತಿಯ ಗುಣಲಕ್ಷಣವನ್ನು ವಿವರಿಸುವುದಕ್ಕೆ ಕೂಡ ಉಪಯೋಗಿಸುತ್ತಾರೆ. ಈ ಮಾತಿಗೆ ಅವರು ಪಾಪಾತ್ಮರು ಅಥವಾ ದುಷ್ಟರು ಎಂದರ್ಥ.
  • “ಅವಿಧೇಯತೆ” ಎನ್ನುವ ಪದಕ್ಕೆ “ವಿಧೇಯತೆ ತೋರಿಸಿದ ಕ್ರಿಯೆ” ಅಥವಾ “ದೇವರು ಬಯಸುವ ಕಾರ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದು” ಎಂದರ್ಥ.
  • “ಅವಿಧೇಯ ಜನರು” ಎನ್ನುವ ಮಾತನ್ನು “ಯಾವಾಗಲೂ ಅವಿಧೇಯತೆಯನ್ನು ತೋರಿಸುವ ಜನರು” ಅಥವಾ “ದೇವರ ಆಜ್ಞೆಗಳ ಪ್ರಕಾರ ನಡೆದುಕೊಳ್ಳದ ಜನರು” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ಅಧಿಕಾರ, ದುಷ್ಟತನ, ಪಾಪ, ವಿಧೇಯನಾಗು)

ಸತ್ಯವೇದದ ಅನುಬಂಧ ವಾಕ್ಯಗಳು:

ಸತ್ಯವೇದದಿಂದ ಉದಾಹರಣೆಗಳು:

  • 02:11 “ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ, ನನಗೆ __ ಅವಿಧೇಯನಾದೆ __” ಎಂದು ದೇವರು ಆ ಮನುಷ್ಯನೊಂದಿಗೆ ಮಾತನಾಡಿದರು.
  • 13:07 ಈ ಆಜ್ಞೆಗಳಿಗೆ ಜನರು ವಿಧೇಯರಾದರೆ, ದೇವರು ಅವರನ್ನು ಆಶೀರ್ವಾದ ಮಾಡುವನೆಂದು ಮತ್ತು ಅವರನ್ನು ಸಂರಕ್ಷಿಸುವನೆಂದು ದೇವರು ವಾಗ್ಧಾನ ಮಾಡಿದ್ದಾರೆ. ಅವರು ಆ ಆಜ್ಞೆಗಳಿಗೆ __ ಅವಿಧೇಯರಾದರೆ __, ದೇವರು ಅವರನ್ನು ಶಿಕ್ಷಿಸುವನು.
  • 16:02 ಇಸ್ರಾಯೇಲ್ಯರು ದೇವರಿಗೆ __ಅವಿಧೇಯತೆಯನ್ನು __ ತೋರಿಸಿರುವದರಿಂದ, ಅವರನ್ನು ಸೋಲಿಸುವುದಕ್ಕೆ ತಮ್ಮ ಶತ್ರುಗಳನ್ನು ಅನುಮತಿಸುವುದರ ಮೂಲಕ ಆತನು ಅವರನ್ನು ಶಿಕ್ಷಿಸಿದನು.
  • 35:12 “ಈ ಎಲ್ಲಾ ವರ್ಷಗಳು ನಾನು ನಿಮಗೆ ತುಂಬಾ ನಂಬಿಕೆಯಿಂದ ಕೆಲಸಮಾಡಿದ್ದೇನೆ” ಎಂದು ದೊಡ್ಡ ಮಗ ತನ್ನ ತಂದೆಗೆ ಹೇಳಿದನು. ನಿಮಗೆ ನಾನು ಎಂದಿಗೂ __ ಅವಿಧೇಯನಾಗಲಿಲ್ಲ __, ನೀನು ನನಗೆ ಒಂದು ಚಿಕ್ಕ ಮೇಕೆಯನ್ನು ಕೊಡದಿದ್ದರೂ, ನಾನು ನನ್ನ ಸ್ನೇಹಿತರೊಂದಿಗೆ ಸಂತೋಷವನ್ನು ಹಂಚಿಕೊಳ್ಳುತ್ತೇನೆ.'''

ಪದ ಡೇಟಾ:

  • Strong's: H4784, H5674, G506, G543, G544, G545, G3847, G3876