kn_tw/bible/kt/angel.md

52 lines
8.9 KiB
Markdown
Raw Permalink Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

# ದೇವದೂತ, ಪ್ರಧಾನದೂತ
## ಅರ್ಥವಿವರಣೆ:
ದೇವದೂತ ಎಂದರೆ ದೇವರು ಉಂಟುಮಾಡಿದ ಅತ್ಯಂತ ಶಕ್ತಿಯುಳ್ಳ ಆತ್ಮೀಕ ಜೀವಿ. ದೇವದೂತರು ದೇವರು ಹೇಳಿದ ಪ್ರತಿಯೊಂದನ್ನು ಮಾಡುವುದರ ಮೂಲಕ ದೇವರಿಗೆ ಸೇವೆ ಮಾಡುವುದಕ್ಕಾಗಿ ಉಂಟುಮಾಡಿದವರಾಗಿದ್ದಾರೆ. “ಪ್ರಧಾನದೂತ” ಎನ್ನುವ ಪದವು ಇತರ ದೂತರನ್ನು ನಡೆಸುವುದಕ್ಕೆ ಅಥವಾ ಪಾಲಿಸುವುದಕ್ಕೆ ನೇಮಿಸಲ್ಪಟ್ಟ ವಿಶೇಷವಾದ ದೂತನಾಗಿರುತ್ತಾನೆ.
* “ದೇವದೂತ” ಎಂಬ ಪದಕ್ಕೆ ಅಕ್ಷರಶಃ “ಸಂದೇಶಕ” ಎಂದರ್ಥ.
* “ಪ್ರಧಾನದೂತ” ಎಂಬ ಪದಕ್ಕೆ “ಮುಖ್ಯ ಸಂದೇಶಕ” ಎಂದರ್ಥ. “ಪ್ರಧಾನ ದೂತ” ಎಂದು ಸತ್ಯವೇದದಲ್ಲಿ ಒಬ್ಬ ದೂತನನ್ನು ಮಾತ್ರವೇ ಉಲ್ಲೇಖಿಸಲಾಗಿದೆ ಅವನೇ ಮೀಕಾಯೇಲನು.
* ಸತ್ಯವೇದದಲ್ಲಿ, ದೇವದೂತರು ದೇವರಿಂದ ಪಡೆದ ಸಂದೇಶಗಳನ್ನು ಜನರಿಗೆ ಕೊಟ್ಟರು. ದೇವರು ಬಯಸಿದ್ದನ್ನು ಜನರು ಮಾಡಬೇಕೆನ್ನುವುದರ ಕುರಿತಾಗಿ ಇರುವ ಆಜ್ಞೆಗಳು ಕೂಡ ಈ ಸಂದೇಶಗಳಲ್ಲಿ ಒಳಪಟ್ಟಿರುತ್ತವೆ.
* ಭವಿಷ್ಯತ್ತಿನಲ್ಲಿ ನಡೆಯುವ ಘಟನೆಗಳ ಕುರಿತಾಗಿ ಅಥವಾ ಈಗಾಗಲೇ ನಡೆದ ಘಟನೆಗಳ ಕುರಿತಾಗಿ ಕೂಡ ದೂತರು ಜನರಿಗೆ ತಿಳಿಸಿದ್ದಾರೆ.
* ದೇವದೂತರು ದೇವರ ಪ್ರತಿನಿಧಿಗಳಾಗಿ ದೇವರು ಕೊಟ್ಟ ಅಧಿಕಾರವನ್ನು ಪಡೆದಿರುತ್ತಾರೆ ಮತ್ತು ಸತ್ಯವೇದದಲ್ಲಿ ಕೆಲವು ಬಾರಿ ದೇವರೇ ಮಾತನಾಡಿದ ಹಾಗೆಯೇ ಅವರು ಮಾತನಾಡುತ್ತಿದ್ದರು.
* ದೇವ ದೂತರು ದೇವರಿಗೆ ಸೇವೆ ಮಾಡುವ ಇನ್ನೊಂದು ವಿಧಗಳು ಜನರನ್ನು ಸಂರಕ್ಷಿಸುವ ಮತ್ತು ಬಲಪಡಿಸುವ ಮೂಲಕ.
* “ಯೆಹೋವನ ದೂತರು,” ಎನ್ನುವ ವಿಶೇಷವಾದ ನುಡಿಗಟ್ಟು, ಒಂದು ಅರ್ಥಕ್ಕಿಂತ ಹೆಚ್ಚಾದ ಅರ್ಥಗಳನ್ನು ಹೊಂದಿರುತ್ತದೆ: (1) “ಯೆಹೋವನಿಗೆ ಪ್ರತಿನಿಧಿಯಾಗಿರುವ ದೇವದೂತ” ಅಥವಾ “ಯೆಹೋವನನ್ನು ಸೇವಿಸುವ ಸಂದೇಶಕ” ಎನ್ನುವ ಅರ್ಥಗಳಿರಬಹುದು. (2) ಆತನು ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವಾಗ ದೂತನಂತೆ ಕಾಣಿಸಿಕೊಳ್ಳುವ, ಯೆಹೋವನನ್ನೇ ಇದು ಸೂಚಿಸಬಹುದು. ಈ ಅರ್ಥಗಳಲ್ಲಿ ಯಾವುದಾದರೊಂದು ಯೆಹೋವನೇ ವೈಯುಕ್ತಿಕವಾಗಿ ಮಾತನಾಡುತ್ತಿರುವಂತೆ “ನಾನೇ” ಎಂದು ದೂತ ಉಪಯೋಗಿಸುವುದನ್ನು ವಿವರಿಸಬಹುದು.
## ಅನುವಾದ ಸಲಹೆಗಳು:
* “ದೇವ ದೂತ” ಎನ್ನುವ ಪದವನ್ನು ಅನುವಾದಿಸುವ ವಿಧಾನಗಳಲ್ಲಿ “ದೇವರಿಂದ ಬಂದ ಸಂದೇಶಕರು” ಅಥವಾ “ದೇವರ ಪರಲೋಕದ ಸೇವಕನು” ಅಥವಾ “ದೇವರ ಆತ್ಮ ಸಂದೇಶಕರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* “ಪ್ರಧಾನದೂತ” ಎನ್ನುವ ಪದವು “ಮುಖ್ಯ ದೇವದೂತ” ಅಥವಾ "ದ್ದೇವ ದೂತರ ಆಡಳಿತ ಮುಖ್ಯಸ್ಥ" ಅಥವಾ “ದ್ದೇವ ದೂತರ ನಾಯಕ” ಎಂದು ಕೂಡ ಅನುವಾದ ಮಾಡುತ್ತಾರೆ.
* ಈ ಪದಗಳನ್ನು ರಾಷ್ಟ್ರೀಯ ಭಾಷೆಯಲ್ಲಿ ಅಥವಾ ಇನ್ನೊಂದು ಸ್ಥಳೀಯ ಭಾಷೆಯಲ್ಲಿ ಯಾವ ರೀತಿ ಅನುವಾದ ಮಾಡಿದ್ದಾರೆಂಬುದನ್ನು ಪರಿಗಣಿಸಿರಿ.
* “ಯೆಹೋವನ ದೂತ” ಎನ್ನುವ ನುಡಿಗಟ್ಟನ್ನು “ದೂತ” ಮತ್ತು “ಯೆಹೋವ” ಎನ್ನುವ ಪದಗಳನ್ನು ಉಪಯೋಗಿಸಿ ಅನುವಾದ ಮಾಡಬೇಕು. ಆ ನುಡಿಗಟ್ಟು ವಿವಿಧ ವ್ಯಾಖ್ಯಾನಗಳಿಗೆ ಅನುಮತಿ ಕೊಡುತ್ತದೆ. ಸಾಧ್ಯವಾದಷ್ಟು ಅನುವಾದಗಳು “ಯೆಹೋವನಿಂದ ಬಂದ ದೂತ” ಅಥವಾ “ಯೆಹೋವನಿಂದ ಕಳುಹಿಸಲ್ಪಟ್ಟ ದೂತ” ಅಥವಾ “ದೂತನಂತೆ ಕಾಣುವ, ಯೆಹೋವ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
(ಇವುಗಳನ್ನು ಸಹ ನೋಡಿರಿ: /[ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಇವುಗಳನ್ನು ಸಹ ನೋಡಿರಿ : [ಮುಖ್ಯ](../other/chief.md), [ಪ್ರಧಾನ](../other/head.md), [ಸಂದೇಶಕ](../other/messenger.md), [ಮೀಕಾಯೇಲ](../names/michael.md), [ಮುಖ್ಯಸ್ಥ](../other/ruler.md), [ಸೇವಕ](../other/servant.md))
## ಸತ್ಯವೇದದ ಉಲ್ಲೇಖಗಳು:
* [2 ಸಮುವೆಲ. 24:16](rc://*/tn/help/2sa/24/16)
* [ಅಪೊ.ಕೃತ್ಯ. 10:3-6](rc://*/tn/help/act/10/03)
* [ಅಪೊ.ಕೃತ್ಯ. 12:23](rc://*/tn/help/act/12/23)
* [ಕೊಲೊಸ್ಸೆ 2:18-19](rc://*/tn/help/col/02/18)
* [ಆದಿಕಾಂಡ 48:16](rc://*/tn/help/gen/48/16)
* [ಲೂಕ 2:13](rc://*/tn/help/luk/02/13)
* [ಮಾರ್ಕ 8:38](rc://*/tn/help/mrk/08/38)
* [ಮತ್ತಾಯ 13:50](rc://*/tn/help/mat/13/50)
* [ಪ್ರಕಟನೆ 1:20](rc://*/tn/help/rev/01/20)
* [ಜೆಕರ್ಯ 1:09](rc://*/tn/help/zec/01/09)
## ಸತ್ಯವೇದದ ಕಥೆಗಳಿಂದ ಉದಾಹರಣೆಗಳು:
* __[2:12](rc://*/tn/help/obs/02/12)__ ಜೀವ ವೃಕ್ಷದ ಹಣ್ಣನ್ನು ಯಾರೂ ತಿನ್ನದಂತೆ ದೇವರು ಆ ತೋಟದ ಪ್ರವೇಶ ದ್ವಾರದಲ್ಲಿ ದೊಡ್ಡ ದೊಡ್ಡ, ಶಕ್ತಿಯುಳ್ಳ __ದೂತರನ್ನು__ ಇಟ್ಟಿದ್ದಾನೆ.
* __[22:03](rc://*/tn/help/obs/22/03)__ ದೂತನು ಜೆಕರ್ಯನಿಗೆ ಪ್ರತ್ಯುತ್ತರವಾಗಿ, “ನಿಮಗೆ ಶುಭವಾರ್ತೆಯನ್ನು ತರುವುದಕ್ಕೆ ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ.”
* __[23:06](rc://*/tn/help/obs/23/06)__ ಕೂಡಲೇ, ಪ್ರಕಾಶಮಾನವಾದ __ದೂತ__ ಅವರಿಗೆ (ಕುರುಬರಿಗೆ) ಪ್ರತ್ಯಕ್ಷ್ಯನಾದನು , ಮತ್ತು ಅವರು ಭಯಪಟ್ಟರು. “ನೀವು ಹೆದರಬೇಡಿರಿ, ಯಾಕಂದರೆ ನಿಮಗೆ ಹೇಳುವುದಕ್ಕೆ ನನ್ನ ಬಳಿ ಶುಭವಾರ್ತೆ ಇದೆ” ಎಂದು __ದೂತನು__ ಹೇಳಿದನು.
* __[23:07](rc://*/tn/help/obs/23/07)__ ಕೂಡಲೇ, ದೇವರನ್ನು ಸ್ತುತಿಸುವ __ದೂತರೊದಿಗೆ__ ಆಕಾಶವೆಲ್ಲಾ ತುಂಬಿತು.
* __[25:08](rc://*/tn/help/obs/25/08)__ ಆದನಂತರ, __ದೂತರು__ ಬಂದು ಯೇಸುವಿಗೆ ಪರಿಚಾರ ಮಾಡಿದರು.
* __[38:12](rc://*/tn/help/obs/38/12)__ ಯೇಸು ತುಂಬಾ ಮನೋವ್ಯಥೆಪಟ್ಟನು, ಆತನ ಬೆವರು ರಕ್ತದ ಹನಿಗಳಾಗಿ ಮಾರ್ಪಟ್ಟಿತು. ಆತನನ್ನು ಬಲಪಡಿಸುವುದಕ್ಕೆ ದೇವರು __ದೂತನನ್ನು__ ಕಳುಹಿಸಿಕೊಟ್ಟನು.
* __[38:15](rc://*/tn/help/obs/38/15)__ “ನನ್ನನ್ನು ರಕ್ಷಿಸುವುದಕ್ಕೆ __ದೂತರ__ ಸೈನ್ಯವನ್ನು ಕಳುಹಿಸು ಎಂದು ನಾನು ತಂದೆಯನ್ನು ಬೇಡಿಕೊಳ್ಳಬಹುದು".
## ಪದದ ದತ್ತಾಂಶ:
* Strong's: H0047, H0430, H4397, H4398, H8136, G00320, G07430, G24650