kn_tw/bible/other/cherubim.md

34 lines
5.1 KiB
Markdown

# ಕೆರೂಬಿ, ಕೆರೂಬಿಗಳು, ಕೆರೂಬಿಯರು
## ಪದದ ಅರ್ಥವಿವರಣೆ:
“ಕೆರೂಬಿ” ಎನ್ನುವ ಪದವು ಮತ್ತು ಇದರ ಬಹುವಚನ ಪದವಾದ “ಕೆರೂಬಿಗಳು” ಎನ್ನುವವು ದೇವರು ಉಂಟು ಮಾಡಿದ ಒಂದು ವಿಶೇಷವಾದ ಪರಲೋಕದ ಜೀವಿಗಳಾಗಿರುತ್ತವೆ. ಕೆರೂಬಿಗಳು ರೆಕ್ಕೆಗಳನ್ನು ಮತ್ತು ಬೆಂಕಿ ಜ್ವಾಲೆಗಳನ್ನು ಹೊಂದಿರುತ್ತವೆಯೆಂದು ಸತ್ಯವೇದವು ವಿವರಿಸುತ್ತಿದೆ.
* ಕೆರೂಬಿಗಳು ದೇವರು ಶಕ್ತಿಯನ್ನು ಮತ್ತು ಆತನ ಮಹಿಮೆಯನ್ನು ತೋರಿಸುತ್ತವೆ, ಪರಿಶುದ್ಧವಾದ ವಿಷಯಗಳಿಗೆ ಅಥವಾ ಜನರಿಗೆ ಅಂಗರಕ್ಷಕರಾಗಿದ್ದಂತೆ ಕಾಣಿಸಿಕೊಳ್ಳುತ್ತವೆ.
* ಆದಾಮ ಮತ್ತು ಹವ್ವಳು ಪಾಪ ಮಾಡಿದನಂತರ, ಏದೆನ್ ವನದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನು ಎಲ್ಲಾ ಕಡೆ ಧಗಿಧಗಿಸುತ್ತಾ ಉರಿಯುವ ಜ್ವಾಲೆಯ ಕತ್ತಿಯನ್ನು ಇರಿಸಿದನು. ಇದರಿಂದ ಜನರು ಯಾರೂ ಒಳಗಡೆಗೆ ಹೋಗಿ ಜೀವವೃಕ್ಷವನ್ನು ತಿನ್ನದಂತೆ ಮಾಡಿದನು.
* ಎದುರುಬದುರಾಗಿರುವ ಕೆರೂಬಿಯರನ್ನು ಕೆತ್ತಬೇಕೆಂದು, ಅವುಗಳ ರೆಕ್ಕೆಗಳು ಒಡಂಬಡಿಕೆಯ ಮಂಜೂಷದ ಕೃಪಾಸನದ ಮುಚ್ಚಳದ ಮೇಲೆ ಅಂಟಿಕೊಂಡು ಇರುವಂತೆ ಮಾಡಬೇಕೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದನು.
* ಗುಡಾರದ ತೆರೆಗಳ ಒಳಗೆ ಕೆರೂಬಿಗಳ ಚಿತ್ರಗಳನ್ನು ನೇಯಬೇಕೆಂದು ಕೂಡ ಆತನು ಅವರಿಗೆ ಹೇಳಿದನು.
* ಕೆಲವೊಂದು ವಾಕ್ಯಭಾಗಗಳಲ್ಲಿ ಈ ಜೀವಿಗಳು ನಾಲ್ಕು ಮುಖಗಳನ್ನು ಹೊಂದಿಕೊಂಡಿದ ಹಾಗೆ ವಿವರಿಸಲ್ಪಟ್ಟಿದೆ: ಆ ಮುಖಗಳು ಯಾವುವೆಂದರೆ, ಮನುಷ್ಯ, ಸಿಂಹ, ಎತ್ತು ಮತ್ತು ಹದ್ದು.
* ಕೆರೂಬಿಗಳು ಕೆಲವೊಂದುಬಾರಿ ದೂತರೆಂದು ತಿಳಿದುಕೊಳ್ಳುತ್ತೇವೆ, ಆದರೆ ಸತ್ಯವೇದದಲ್ಲಿ ಅದಕ್ಕೆ ಸ್ಪಷ್ಟವಾದ ಆಧಾರಗಳಿಲ್ಲ.
## ಅನುವಾದ ಸಲಹೆಗಳು:
* “ಕೆರೂಬಿಗಳು” ಎನ್ನುವ ಪದವನ್ನು “ರೆಕ್ಕೆಗಳಿರುವ ಜೀವಿಗಳು” ಅಥವಾ “ರೆಕ್ಕೆಗಳೊಂದಿಗಿರುವ ಅಂಗರಕ್ಷಕರು” ಅಥವಾ “ರೆಕ್ಕೆಗಳಿರುವ ಆತ್ಮೀಯಕ ಅಂಗರಕ್ಷಕರು” ಅಥವಾ “ರಕ್ಕೆಗಳಿರುವ ಪರಿಶುದ್ಧ ಅಂಗರಕ್ಷಕರು” ಎಂದೂ ಅನುವಾದ ಮಾಡಬಹುದು.
* “ಕೆರೂಬಿ” ಎನ್ನುವ ಪದವು ಕೆರೂಬಿಗಳು ಎನ್ನುವ ಬಹುವಚನ ಪದಕ್ಕೆ ಏಕವಚನವಾಗಿರುತ್ತದೆ, “ರೆಕ್ಕೆಗಳಿರುವ ಜೀವಿ” ಅಥವಾ “ರೆಕ್ಕೆಗಳಿರುವ ಆತ್ಮೀಯಕ ಅಂಗರಕ್ಷಕ” ಎಂದು ಉದಾಹರಣೆಗೆ ಹೇಳಿಕೊಳ್ಳಬಹುದು.
* ಈ ಪದಕ್ಕೆ ಅನುವಾದವು “ದೂತ” ಎನ್ನುವ ಪದಕ್ಕೆ ಹೇಳುವ ಅನುವಾದಕ್ಕೆ ಬೇರೆಯಾಗಿರುತ್ತದೆಯೆಂದು ತಿಳಿದುಕೊಂಡಿರಿ.
* ಜಾತೀಯ ಭಾಷೆಯಲ್ಲಿ ಅಥವಾ ಸ್ಥಳೀಯ ಭಾಷೆಯಲ್ಲಿರುವ ಸತ್ಯವೇದದಲ್ಲಿ ಈ ಪದವನ್ನು ಯಾವರೀತಿ ಬರೆದಿದ್ದಾರೋ ಅಥವಾ ಅನುವಾದ ಮಾಡಿದ್ದಾರೋ ಎಂದು ನೋಡಿಕೊಳ್ಳಿರಿ. (ಅನುವಾದ ಸಲಹೆಗಳು: /[ತಿಳಿಯದವುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಈ ಪದಗಳನ್ನು ಸಹ ನೋಡಿರಿ : [ದೂತ](../kt/angel.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.13:5-6](rc://*/tn/help/1ch/13/05)
* [1 ಅರಸ .06:23-26](rc://*/tn/help/1ki/06/23)
* [ವಿಮೋ.25:15-18](rc://*/tn/help/exo/25/15)
* [ವಿಮೋ.09:3-4](rc://*/tn/help/ezk/09/03)
* [ಆದಿ.03:22-24](rc://*/tn/help/gen/03/22)
## ಪದ ಡೇಟಾ:
* Strong's: H3742, G5502