kn_tw/bible/kt/atonementlid.md

31 lines
3.7 KiB
Markdown

# ಪ್ರಾಯಶ್ಚಿತ್ತ ಮುಚ್ಚಳ
## ಪದದ ಅರ್ಥವಿವರಣೆ:
“ಪ್ರಾಯಶ್ಚಿತ್ತ ಮುಚ್ಚಳ” ಎನ್ನುವದನ್ನು ಒಡಂಬಡಿಕೆಯ ಮಂಜೂಷದ ಮೇಲೆ ಮುಚ್ಚುವುದಕ್ಕೆ ಉಪಯೋಗಿಸುವ ಬಂಗಾರದ ಹಲಗೆಯಾಗಿರುತ್ತದೆ. ಅನೇಕ ಆಂಗ್ಲ ಅನುವಾದಗಳಲ್ಲಿ “ಪ್ರಾಯಶ್ಚಿತ್ತ ಹಲಗೆ” ಎಂದೂ ಸೂಚಿಸಿದ್ದಾರೆ.
* ಪ್ರಾಯಶ್ಚಿತ್ತ ಮುಚ್ಚಳ ಸುಮಾರು 115 ಸೆಂಟಿ ಮೀಟರ್ ಉದ್ದ ಮತ್ತು 70 ಸೆಂಟಿ ಮೀಟರ್ ಅಗಲ ಇರುತ್ತದೆ.
* ಪ್ರಾಯಶ್ಚಿತ್ತ ಮುಚ್ಚಳದ ಮೇಲೆ ಎರಡು ಬಂಗಾರದ ಕೆರೂಬಿಗಳನ್ನು ಇಟ್ಟು, ಅವುಗಳ ರೆಕ್ಕೆಗಳು ಅದಕ್ಕೆ ಅಂಟಿಕೊಂಡಿರುವಂತೆ ಮಾಡಿರುತ್ತಾರೆ.
* ಯೆಹೋವನು ಪ್ರಾಯಶ್ಚಿತ್ತ ಮುಚ್ಚಳ ಮೇಲೆ ಇರುವ ಕೆರೂಬಿಗಳ ರೆಕ್ಕೆಗಳ ಮಧ್ಯೆದಲ್ಲಿ ಇಸ್ರಾಯೇಲ್ಯರೊಂದಿಗೆ ಭೇಟಿಯಾಗುತ್ತಾನೆಂದು ಹೇಳಿದನು, ಜನರ ಪ್ರತಿನಿಧಿಯಾಗಿ ಯೆಹೋವನನ್ನು ಭೇಟಿಯಾಗುವುದಕ್ಕೆ ಕೇವಲ ಪ್ರಧಾನ ಯಾಜಕನಿಗೆ ಮಾತ್ರ ಅನುಮತಿ ಇದ್ದಿತ್ತು.
* ಕೆಲವೊಂದುಸಲ ಈ ಪ್ರಾಯಶ್ಚಿತ್ತ ಮುಚ್ಚಳವನ್ನು “ಕೃಪಾಸನ” ಎಂದು ಸೂಚಿಸಿದ್ದಾರೆ. ಯಾಕಂದರೆ ಪಾಪ ಸ್ವಭಾವಿಗಳಾದ ಜನರನ್ನು ವಿಮೋಚಿಸುವುದಕ್ಕೆ ದೇವರ ಕೃಪೆಯು/ಕರುಣೆಯು ಕೆಳಗೆ ಇಳಿದು ಬರುತ್ತಿತ್ತು.
## ಅನುವಾದ ಸಲಹೆಗಳು:
* ಈ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ವಿಮೋಚಿಸುತ್ತೇನೆಂದು ದೇವರು ವಾಗ್ಧಾನ ಮಾಡಿದ ಮಂಜೂಷದ ಮುಚ್ಚಳ” ಅಥವಾ “ದೇವರು ವಿಮೋಚಿಸುವ ಸ್ಥಳ” ಅಥವಾ “ದೇವರು ಕ್ಷಮಿಸುವ ಮತ್ತು ಸಮಾಧಾನಪಡಿಸುವ ಮಂಜೂಷದ ಮುಚ್ಚಳ” ಎನ್ನುವ ಮಾತುಗಳೂ ಒಳಗೊಂಡಿರುತ್ತವೆ.
* “ತ್ಯಾಗದ ಸ್ಥಳ” ಎಂದೂ ಅರ್ಥ ಬರುತ್ತದೋ.
* ಈ ಪದದೊಂದಿಗೆ “ಪ್ರಾಯಶ್ಚಿತ್ತ”, “ತ್ಯಾಗ” ಮತ್ತು “ವಿಮೋಚನೆ” ಎನ್ನುವ ಪದಗಳನ್ನು ಅನುವಾದನೆ ಮಾಡುತ್ತಿರುವ ಪದಗಳನ್ನು ಹೋಲಿಸಿ ನೋಡಿರಿ.
(ಈ ಪದಗಳನ್ನು ಸಹ ನೋಡಿರಿ : [ಒಡಂಬಡಿಕೆಯ ಮಂಜೂಷ](../kt/arkofthecovenant.md), [ಪ್ರಾಯಶ್ಚಿತ್ತ](../kt/atonement.md), [ಕೆರೂಬಿ](../other/cherubim.md), [ತ್ಯಾಗ](../kt/propitiation.md), [ವಿಮೋಚನೆ](../kt/redeem.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ವಿಮೋ.25:15-18](rc://*/tn/help/exo/25/15)
* [ವಿಮೋ.30:5-6](rc://*/tn/help/exo/30/05)
* [ವಿಮೋ.40:17-20](rc://*/tn/help/exo/40/17)
* [ಯಾಜಕ.16:1-2](rc://*/tn/help/lev/16/01)
* [ಅರಣ್ಯ.07:89](rc://*/tn/help/num/07/89)
## ಪದ ಡೇಟಾ:
* Strong's: H3727, G2435