kn_tw/bible/kt/atonement.md

30 lines
3.8 KiB
Markdown

# ಪ್ರಾಯಶ್ಚಿತ್ತ, ವಿಮೋಚನೆ, ಬಿಡುಗಡೆಗಳು
## ಪದದ ಅರ್ಥವಿವರಣೆ:
“ವಿಮೋಚನೆ” ಮತ್ತು “ಪ್ರಾಯಶ್ಚಿತ್ತ” ಎನ್ನುವ ಪದಗಳು ಜನರ ಪಾಪಗಳಿಗೋಸ್ಕರ ದೇವರು ಯಾವರೀತಿ ತ್ಯಾಗವನ್ನು ಮಾಡಿದ್ದಾರೆಂದು ಮತ್ತು ಪಾಪಕ್ಕಾಗಿ ತನ್ನ ಕೋಪಾಗ್ನಿಯನ್ನು ಯಾವರೀತಿ ಶಮನಗೊಳಿಸಿಕೊಂಡಿದ್ದಾರೆಂದು ಸೂಚಿಸುತ್ತದೆ.
* ಹಳೇ ಒಡಂಬಡಿಕೆಯಲ್ಲಿ, ಇಸ್ರಾಯೇಲ್ಯರು ತಾವು ಮಾಡಿದ ಪಾಪಗಳಿಗೋಸ್ಕರ ಒಂದು ಪ್ರಾಣಿಯನ್ನು ಬಲಿ ಕೊಟ್ಟು ರಕ್ತದ ಬಲಿದಾನವನ್ನು ಅರ್ಪಿಸುವುದರ ಮೂಲಕ ತಾತ್ಕಾಲಿಕವಾದ ಪ್ರಾಯಶ್ಚಿತ್ತವನ್ನು ದೇವರು ಅನುಮತಿಸಿದ್ದರು.
* ಹೊಸ ಒಡಂಬಡಿಕೆಯಲ್ಲಿ ದಾಖಲಿಸಿದಂತೆ, ಶಿಲುಬೆಯ ಮೇಲೆ ಕ್ರಿಸ್ತನ ಮರಣವು ಸತ್ಯ ಮತ್ತು ಅದೇ ಪಾಪಕ್ಕಾಗಿ ಮಾಡಿದ ಶಾಶ್ವತವಾದ ಪ್ರಾಯಶ್ಚಿತ್ತವಾಗಿರುತ್ತದೆ.
* ಯೇಸು ಮರಣ ಹೊಂದಿದಾಗ, ಜನರ ಹೊಂದಬೇಕಾದ ಶಿಕ್ಷೆಯನ್ನು ಆವರು ತನ್ನ ಮೇಲೆ ಹಾಕಿಕೊಂಡಿದ್ದಾರೆ ಯಾಕಂದರೆ ಜನರ ಪಾಪಗಳಿಂದ ಬಿಡಿಸುವುದಕ್ಕೋಸ್ಕರ ಆ ತ್ಯಾಗವನ್ನು ಮಾಡಿದ್ದರು. ಆತನು ತನ್ನ ತ್ಯಾಗಪೂರಿತವಾದ ಮರಣದಿಂದ ಪ್ರಾಯಶ್ಚಿತ್ತವಾದ ಬೆಲೆಯನ್ನು ಸಲ್ಲಿಸಿದ್ದಾರೆ.
## ಅನುವಾದ ಸಲಹೆಗಳು:
* “ವಿಮೋಚನೆ” ಎನ್ನುವ ಪದವನ್ನು “ಬೆಲೆಯನ್ನು ಸಲ್ಲಿಸು” ಅಥವಾ “ಕ್ರಯಧನವನ್ನು ಕೊಡು” ಅಥವಾ “ಒಬ್ಬರ ಪಾಪಗಳು ಕ್ಷಮಿಸಲ್ಪಡುವಂತೆ ಮಾಡು” ಅಥವಾ “ಮಾಡಿದ ಅಪರಾಧಕ್ಕೆ ಪರಿಹಾರ ಸಲ್ಲಿಸು” ಎಂದೂ ಅನುವಾದ ಮಾಡಬಹುದು.
* “ಪ್ರಾಯಶ್ಚಿತ್ತ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನದಲ್ಲಿ “ಕ್ರಯಧನ” ಅಥವಾ “ಪಾಪಕ್ಕಾಗಿ ಸಲ್ಲಿಸಬೇಕಾದ ತ್ಯಾಗ” ಅಥವಾ “ಕ್ಷಮಾಪಣೆಯನ್ನು ಅನುಗ್ರಹಿಸುವುದು” ಎನ್ನುವ ಮಾತುಗಳೂ ಒಳಗೊಂಡಿರುತ್ತವೆ.
* ಈ ಪದವನ್ನು ಅನುವಾದ ಮಾಡುವಾಗ ಹಣವನ್ನು ಪಾವತಿಸುವ ಅರ್ಥವು ಬರದಂತೆ ನೋಡಿಕೊಳ್ಳಿರಿ.
(ಈ ಪದಗಳನ್ನು ಸಹ ನೋಡಿರಿ : [ಪ್ರಾಯಶ್ಚಿತ್ತ ಮುಚ್ಚಳ](../kt/atonementlid.md), [ಕ್ಷಮಿಸು](../kt/forgive.md), [ತ್ಯಾಗ](../kt/propitiation.md), [ಸಮಾಧಾನಪಡು](../kt/reconcile.md), [ವಿಮೋಚಿಸು](../kt/redeem.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಯೆಹೆ.43:25-27](rc://*/tn/help/ezk/43/25)
* [ಯೆಹೆ.45:18-20](rc://*/tn/help/ezk/45/18)
* [ಯೆಹೆ.04:20-21](rc://*/tn/help/lev/04/20)
* [ಯೆಹೆ.05:8-10](rc://*/tn/help/num/05/08)
* [ಯೆಹೆ.28:19-22](rc://*/tn/help/num/28/19)
## ಪದ ಡೇಟಾ:
* Strong's: H3722, H3725, G2643