55 lines
10 KiB
Markdown
55 lines
10 KiB
Markdown
# ಯಜ್ಞ, ಯಜ್ಞ ಅರ್ಪಣೆಗಳು, ಕಾಣಿಕೆ
|
||
|
||
## ಪದದ ಅರ್ಥವಿವರಣೆ:
|
||
|
||
ಸತ್ಯವೇದದಲ್ಲಿ “ಅರ್ಪಿಸು” ಮತ್ತು “ಕಾಣಿಕೆ” ಎನ್ನುವ ಪದಗಳು ದೇವರನ್ನು ಆರಾಧಿಸುವ ಕಾರ್ಯವನ್ನಾಗಿ ಆತನಿಗೆ ಕೊಡುವ ವಿಶೇಷವಾದ ಬಹುಮಾನಗಳನ್ನು ಕೊಡುವುದನ್ನು ಸೂಚಿಸುತ್ತದೆ. ಜನರು ಸುಳ್ಳು ದೇವರುಗಳಿಗೂ ಸಹ ಅರ್ಪಣೆಗಳನ್ನು ಕೊಡುತ್ತಾರೆ.
|
||
|
||
### ಯಜ್ಞ
|
||
|
||
* ದೇವರಿಗೆ ಕೊಡುವ ಅರ್ಪಣೆಗಳಲ್ಲಿ ಅನೇಕಬಾರಿ ಪ್ರಾಣಿಯನ್ನು ಸಾಯಿಸುವುದೂ ಒಳಗೊಂಡಿರುತ್ತದೆ.
|
||
* ದೇವರ ಪರಿಪೂರ್ಣನಾದ ಪಾಪರಹಿತನಾಗಿರುವ ಆತನ ಮಗನಾಗಿರುವ ಯೇಸುವಿನ ಯಜ್ಞವು ಮಾತ್ರವೇ ಪಾಪಗಳಿಂದ ಮನುಷ್ಯರನ್ನು ಸಂಪೂರ್ಣವಾಗಿ ತೊಳೆಯುತ್ತದೆ, ಪ್ರಾಣಿಗಳ ಯಜ್ಞಗಳು ಪಾಪಗಳನ್ನು ತೊಳೆಯುವುದಕ್ಕೆ ಸಾಧ್ಯವಿಲ್ಲ.
|
||
|
||
### ಕಾಣಿಕೆ
|
||
|
||
* “ಕಾಣಿಕೆ” ಎನ್ನುವ ಪದವನ್ನು ಸಾಧಾರಣವಾಗಿ ಕೊಡಲ್ಪಟ್ಟಿರುವ ಅಥವಾ ಅರ್ಪಿಸಲ್ಪಟ್ಟಿರುವ ಯಾವುದಾದರೊಂದನ್ನು ಸೂಚಿಸುತ್ತದೆ.
|
||
|
||
“ಯಜ್ಞ” ಎನ್ನುವ ಪದವು ಎಲ್ಲವನ್ನು ಒದಗಿಸಿಕೊಡುವವನಿಗೆ ಬೆಲೆಯುಳ್ಳದ್ದನ್ನು ಮಾಡಿದ ಅಥವಾ ಕೊಡಲ್ಪಟ್ಟ ಯಾವುದಾದರೊಂದನ್ನು ಸೂಚಿಸುತ್ತದೆ.
|
||
|
||
* ದೇವರಿಗೆ ಕೊಡಲ್ಪಟ್ಟಿರುವ ಅರ್ಪಣೆಗಳು ವಿಶೇಷವಾದವುಗಳು, ಅವು ದೇವರಿಗೆ ವಿಧೇಯತೆ ಮತ್ತು ಭಕ್ತಿ ಭಾವನೆಯನ್ನು ವ್ಯಕ್ತಪಡಿಸುವ ಕ್ರಮದಲ್ಲಿ ಕೊಡುವುದಕ್ಕೆ ಆತನು ಇಸ್ರಾಯೇಲ್ಯರಿಗೆ ಆಜ್ಞಾಪಿಸಿರುತ್ತಾನೆ.
|
||
* ವಿವಿಧವಾದ ಅರ್ಪಣೆಗಳ ಹೆಸರುಗಳಿವೆ, “ದಹನ ಬಲಿಯರ್ಪಣೆ” ಮತ್ತು ಸಮಾಧಾನ ಅರ್ಪಣೆ” ಎನ್ನುವವುಗಳು ಉದಾಹರಣೆಗೆ ಹೇಳಬಹುದು, ಇವು ಯಾವ ವಿಧವಾದ ಅರ್ಪಣೆಯನ್ನು ಕೊಡುತ್ತಿದ್ದರೆನ್ನುವುದನ್ನು ಸೂಚಿಸುತ್ತವೆ.
|
||
|
||
## ಅನುವಾದ ಸಲಹೆಗಳು:
|
||
|
||
* “ಕಾಣಿಕೆ” ಎನ್ನುವ ಪದವನ್ನು “ದೇವರಿಗೆ ಉಡುಗೊರೆ” ಅಥವಾ “ದೇವರಿಗೆ ಏನಾದರೂ ಕೊಡುವುದು” ಅಥವಾ “ದೇವರಿಗೆ ಕೊಡಲ್ಪಟ್ಟ ಬೆಲೆಯುಳ್ಳ ವಸ್ತುವು” ಎಂದೂ ಅನುವಾದ ಮಾಡಬಹುದು.
|
||
* ಸಂದರ್ಭಾನುಸಾರವಾಗಿ, “ಯಜ್ಞ” ಎನ್ನುವ ಪದವನ್ನು “ಆರಾಧನೆಯಲ್ಲಿ ಕೊಡಲ್ಪಟ್ಟ ಬೆಲೆಯುಳ್ಳದ್ದು” ಅಥವಾ “ದೇವರಿ ಅರ್ಪಿಸಲ್ಪಟ್ಟ ಬಲಿಮಾಡಿದ ವಿಶೇಷವಾದ ಪ್ರಾಣಿ” ಎಂದೂ ಅನುವಾದ ಮಾಡಬಹುದು.
|
||
* “ಯಜ್ಞ” ಎನ್ನುವ ಪದಕ್ಕೆ ಕ್ರಿಯೆಯನ್ನು “ಬೆಲೆಯುಳ್ಳದ್ದನ್ನು ಬಿಟ್ಟುಕೊಡು” ಅಥವಾ “ಪ್ರಾಣಿಯನ್ನು ಕೊಂದು, ದೇವರಿಗೆ ಅರ್ಪಿಸು” ಎಂದೂ ಅನುವಾದ ಮಾಡಬಹುದು.
|
||
* “ಸಜೀವ ಯಜ್ಞವಾಗಿ ನಿನ್ನನ್ನು ನೀನು ಸಮರ್ಪಿಸಿಕೋ” ಎನ್ನುವ ಮಾತನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ನೀನು ನಿನ್ನ ಜೀವನವನ್ನು ಜೀವಿಸುತ್ತಿರುವಾಗ, ಯಜ್ಞವೇದಿ ಮೇಲೆ ಪ್ರಾಣಿಯನ್ನು ದಹಿಸುವ ರೀತಿಯಲ್ಲಿ ಸಂಪೂರ್ಣವಾಗಿ ನಿನ್ನನ್ನು ನೀನು ದೇವರಿಗೆ ಸಮರ್ಪಿಸಿಕೊ” ಎನ್ನುವ ಮಾತು ಒಳಗೊಂಡಿರುತ್ತದೆ.
|
||
|
||
(ಈ ಪದಗಳನ್ನು ಸಹ ನೋಡಿರಿ : [ಯಜ್ಞವೇದಿ](../kt/altar.md), [ಪಾನೀಯ ಅರ್ಪಣೆ](../other/burntoffering.md), [ಸುಳ್ಳು ದೇವರು](../other/drinkoffering.md), [ಸಹವಾಸ ಅರ್ಪಣೆ](../kt/falsegod.md), [ಇಷ್ಟಾಪೂರ್ವಕವಾದ ಅರ್ಪಣೆ](../other/fellowshipoffering.md), [ಸಮಾಧಾನ ಅರ್ಪಣೆ](../other/freewilloffering.md), [ಯಾಜಕ](../other/peaceoffering.md), [ಯಜ್ಞವೇದಿ](../kt/priest.md), [ಪಾಪದ ಅರ್ಪಣೆ](../other/sinoffering.md), [ಆರಾಧನೆ](../kt/worship.md))
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು:
|
||
|
||
* [2 ತಿಮೊಥೆ.04:06](rc://*/tn/help/2ti/04/06)
|
||
* [ಅಪೊ.ಕೃತ್ಯ.07:42](rc://*/tn/help/act/07/42)
|
||
* [ಅಪೊ.ಕೃತ್ಯ.21:25](rc://*/tn/help/act/21/25)
|
||
* [ಆದಿ.04:3-5](rc://*/tn/help/gen/04/03)
|
||
* [ಯಾಕೋಬ.02:21-24](rc://*/tn/help/jas/02/21)
|
||
* [ಮಾರ್ಕ.01:43-44](rc://*/tn/help/mrk/01/43)
|
||
* [ಮಾರ್ಕ.14:12-14](rc://*/tn/help/mrk/14/12)
|
||
* [ಮತ್ತಾಯ.05:23-24](rc://*/tn/help/mat/05/23)
|
||
|
||
## ಸತ್ಯವೇದ ಕತೆಗಳಿಂದ ಉದಾಹರಣೆಗಳು:
|
||
|
||
* __[03:14](rc://*/tn/help/obs/03/14)__ ನೋಹನು ಹಡಗಿನಿಂದ ಇಳಿದು ಬಂದನಂತರ, ಆತನು ಒಂದು ಯಜ್ಞವೇದಿಯನ್ನು ಕಟ್ಟಿದನು ಮತ್ತು __ ಯಜ್ಞಕ್ಕೆ __ ಉಪಯೋಗಿಸಲ್ಪಡುವ ಪ್ರಾಣಿಗಳಲ್ಲಿ ಪ್ರತಿಯೊಂದನ್ನು __ ಅರ್ಪಿಸಿಸಿದನು __. ದೇವರು ಆ __ ಯಜ್ಞದೊಂದಿಗೆ __ ತುಂಬಾ ಸಂತೋಷದಿಂದ ಇದ್ದಿದ್ದರು, ನೋಹನನ್ನು ಮತ್ತು ಆತನ ಕುಟುಂಬವನ್ನು ಆಶೀರ್ವಾದ ಮಾಡಿದನು.
|
||
* __[05:06](rc://*/tn/help/obs/05/06)__ “ನಿನ್ನ ಒಬ್ಬನೇ ಮಗನಾಗಿರುವ ಇಸಾಕನನ್ನು ಕರೆದುಕೊಂಡು ಹೋಗಿ, ನನಗೆ __ ಹೋಮವನ್ನಾಗಿ __ ಅವನನ್ನು ಅರ್ಪಿಸು.” ಮತ್ತೊಮ್ಮೆ ಅಬ್ರಾಹಾಮನು ದೇವರಿಗೆ ವಿಧೇಯನಾದನು ಮತ್ತು ತನ್ನ ಮಗನನ್ನು __ ಹೋಮಕ್ಕೆ __ ಸಿದ್ಧಗೊಳಿಸಿದನು.
|
||
* __[05:09](rc://*/tn/help/obs/05/09)__ ಇಸಾಕನಿಗೆ ಬದಲಾಗಿ __ ಹೋಮವನ್ನು __ ಮಾಡಲು ದೇವರು ಕುರಿಯನ್ನು ಅನುಗ್ರಹಿಸಿದರು.
|
||
* __[13:09](rc://*/tn/help/obs/13/09)__ ದೇವರ ಧರ್ಮಶಾಸ್ತ್ರಕ್ಕೆ ವಿಧೇಯರಾಗುವ ಪ್ರತಿಯೊಬ್ಬರು ದೇವರಿಗೆ __ ಹೋಮವನ್ನು __ ಮಾಡುವುದಕ್ಕೆ ಗುಡಾರದ ಬಳಿಗೆ ಒಂದು ಪ್ರಾಣಿಯನ್ನು ತೆಗೆದುಕೊಂಡು ಬರಬೇಕು. ಅಲ್ಲಿರುವ ಯಾಜಕರು ಆ ಪ್ರಾಣಿಯನ್ನು ಕೊಂದು, ಯಜ್ಞದ ಮೇಲೆ ಇಟ್ಟು ದಹಿಸುವರು. ಆ ಪ್ರಾಣಿಯ ರಕ್ತವು ವ್ಯಕ್ತಿಯ ಪಾಪವನ್ನು ಮುಚ್ಚುವುದು ಮತ್ತು ಆ ವ್ಯಕ್ತಿಯ ಪಾಪಕ್ಕಾಗಿ __ ಹೋಮ __ ಮಾಡಲ್ಪಟ್ಟಿರುವುದು ಮತ್ತು ಆ ವ್ಯಕ್ತಿಯನ್ನು ದೇವರ ದೃಷ್ಟಿಯಲ್ಲಿ ಶುದ್ಧನಾಗುವಂತೆ ಮಾಡುತ್ತದೆ.
|
||
* __[17:06](rc://*/tn/help/obs/17/06)__ ಇಸ್ರಾಯೇಲ್ಯರು ದೇವರನ್ನು ಆರಾಧಿಸಿ, ಆತನಿಗೆ __ ಹೋಮಗಳನ್ನು __ ಅರ್ಪಿಸುವ ಸ್ಥಳದಲ್ಲಿ ಒಂದು ದೇವಾಲಯವನ್ನು ನಿರ್ಮಿಸಬೇಕೆಂದು ದಾವೀದನು ಬಯಸಿದ್ದನು.
|
||
* __[48:06](rc://*/tn/help/obs/48/06)__ ಯೇಸು ಮಹೋನ್ನತ ಯಾಜಕನಾಗಿದ್ದನು. ಇತರ ಯಾಜಕರಂತಲ್ಲದೆ, ಲೋಕದಲ್ಲಿರುವ ಎಲ್ಲಾ ಜನರ ಪಾಪಗಳನ್ನು ತೆಗೆದುಹಾಕುವುದಕ್ಕೆ ಆತನು ತನ್ನನ್ನು ತಾನೇ __ ಹೋಮವನ್ನಾಗಿ __ ಅರ್ಪಿಸಿಕೊಂಡನು.
|
||
* __[48:08](rc://*/tn/help/obs/48/08)__ ಆದರೆ ನಮ್ಮ ಸ್ಥಾನದಲ್ಲಿ ಮರಣಿಸುವುದಕ್ಕೆ __ ಹೋಮವನ್ನಾಗಿ __, ದೇವರು ಯೇಸುವನ್ನು ದೇವರ ಕುರಿಮರಿಯನ್ನಾಗಿ ಅನುಗ್ರಹಿಸಿದನು.
|
||
* __[49:11](rc://*/tn/help/obs/49/11)__ ಯಾಕಂದರೆ ಯೇಸು ತನ್ನನ್ನು ತಾನು __ ಅರ್ಪಿಸಿಕೊಂಡನು __, ದೇವರು ಎಂಥಹ ಪಾಪವನ್ನಾದರೂ ಕ್ಷಮಿಸುವನು ಮತ್ತು ಅನೇಕ ಭಯಂಕರ ಪಾಪಗಳನ್ನೂ ಕ್ಷಮಿಸುವನು.
|
||
|
||
## ಪದ ಡೇಟಾ:
|
||
|
||
* Strong’s: H801, H817, H819, H1685, H1890, H1974, H2076, H2077, H2281, H2282, H2398, H2401, H2402, H2403, H2409, H3632, H4394, H4503, H4504, H5066, H5068, H5071, H5257, H5258, H5261, H5262, H5927, H5928, H5930, H6453, H6944, H6999, H7133, H7311, H8002, H8426, H8548, H8573, H8641, G266, G334, G1049, G1435, G1494, G2378, G2380, G3646, G4376, G5485
|